ಲೋಕಾಯುಕ್ತದಿಂದ ಎಸಿಬಿಗೆ ಕೇಸ್ ವರ್ಗಾಯಿಸಲು ಕೋರ್ಟ್ ತಡೆ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 07 : ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಹಿನ್ನಡೆ ಉಂಟಾಗಿದೆ. ಲೋಕಾಯುಕ್ತದಿಂದ ಎಸಿಬಿಗೆ ಪ್ರಕರಣಗಳನ್ನು ವರ್ಗಾವಣೆ ಮಾಡಲು ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ವಕೀಲ ಚಿದಾನಂದ ಅರಸ್ ಅವರು ಸಲ್ಲಿಸಿರುವ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಗುರುವಾರ ಪ್ರಕರಣಗಳ ವರ್ಗಾವಣೆಗೆ ತಡೆ ನೀಡಿದೆ ಮತ್ತು ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. [ಎಸಿಬಿ : ಯಾವ ಕಚೇರಿ ಎಲ್ಲಿದೆ?]

high court

ಕರ್ನಾಟಕ ಸರ್ಕಾರ ಹೊಸದಾಗಿ ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳವನ್ನು ರಚನೆ ಮಾಡಿದೆ. ಸದ್ಯ, ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿರುವ ಸುಮಾರು 700 ಪ್ರಕರಣಗಳು ಎಸಿಬಿಗೆ ಹಸ್ತಾಂತರವಾಗಬೇಕಿತ್ತು. ಆದರೆ, ಮುಂದಿನ ಆದೇಶದ ತನಕ ಪ್ರಕರಣ ಹಸ್ತಾಂತರಿಸಬಾರದು ಎಂದು ಕೋರ್ಟ್ ಆದೇಶಿಸಿದೆ. [ಎಸಿಬಿ : ಸಿದ್ದರಾಮಯ್ಯ ವಿರುದ್ಧ ಮೊದಲ ದೂರು]

ಎಸಿಬಿ ರಚನೆ ವಿಚಾರದಲ್ಲಿ ಹೈಕೋರ್ಟ್ ಹಲವು ಬಾರಿ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸದ್ಯ, ಪ್ರಕರಣಗಳನ್ನು ವರ್ಗಾವಣೆ ಮಾಡಲು ತಡೆ ನೀಡಿರುವ ಕೋರ್ಟ್ ಆದೇಶದಿಂದ ಸರ್ಕಾರಕ್ಕೆ ಹಿನ್ನಡೆ ಉಂಟಾಗಿದೆ. [ಎಸಿಬಿ ರಚನೆ : ಸಿದ್ದರಾಮಯ್ಯ ಸ್ಪಷ್ಟನೆಗಳು]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A division bench of Karnataka high court on April 7, 2016 stayed the move of cases from lokayutha to newly formed Anti Corruption Bureau (ACB). Nearly 700 cases will move to ACB.
Please Wait while comments are loading...