ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯ ಸೇವಿಸಿ ತೀರ್ಪು ಬರೆದಿದ್ದಾರೆಯೇ?; ಹೈಕೋರ್ಟ್ ಗರಂ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ನವೆಂಬರ್ 30; ಬಂಟ್ವಾಳ ಭೂ ನ್ಯಾಯಮಂಡಳಿ ಕಾರ್ಯವೈಖರಿಯನ್ನು ಕರ್ನಾಟಕ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ, ಅದರ ಅಕ್ಕಪಕ್ಕ ಮದ್ಯದಂಗಡಿ ಇರಬೇಕು, ಹಾಗಾಗಿಯೇ ಅದರ ಸದಸ್ಯರು ಮದ್ಯ ಸೇವಿಸಿ ತೀರ್ಪು ಬರೆದಿರಬಹುದೇ? ಎಂದು ಪ್ರಶ್ನಿಸಿದೆ.

ಬಂಟ್ವಾಳ ಭೂ ನ್ಯಾಯಮಂಡಳಿ ಸದಸ್ಯರ ತೀರ್ಪು ಪ್ರಶ್ನಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬಂಟ್ವಾಳ ಭೂ ನ್ಯಾಯಮಂಡಳಿ ಸದಸ್ಯರ ಕಾರ್ಯವೈಖರಿಯನ್ನು ಕಟುವಾಗಿ ಟೀಕೆ ಮಾಡಿದೆ.

ಕೋರ್ಟ್‌ನಲ್ಲಿ ಗದ್ದಲ: ವಕೀಲ ಕೆ.ಎನ್.ಜಗದೀಶ್‌ಗೆ 2ಲಕ್ಷ ರೂ ದಂಡ ವಿಧಿಸಿದ ಹೈಕೋರ್ಟ್ಕೋರ್ಟ್‌ನಲ್ಲಿ ಗದ್ದಲ: ವಕೀಲ ಕೆ.ಎನ್.ಜಗದೀಶ್‌ಗೆ 2ಲಕ್ಷ ರೂ ದಂಡ ವಿಧಿಸಿದ ಹೈಕೋರ್ಟ್

ಪ್ರಕರಣದ ಹಿನ್ನೆಲೆ: ಕರೋಪಾಡಿ ಗ್ರಾಮದ ಡಿ. ಮಹಮದ್ ಬ್ಯಾರಿ ನಮೂನೆ 7ರಲ್ಲಿ (ಕರ್ನಾಟಕ ಭೂ ಸುಧಾರಣೆ ಕಾಯ್ದೆ 1974ರ ಅನುಸಾರ ಗೇಣಿದಾರರು ತಮ್ಮ ಹಕ್ಕು ಸ್ಥಾಪಿಸಲು ಕಂದಾಯ ಇಲಾಖೆಗೆ ಸಲ್ಲಿಸುವ ಅರ್ಜಿ ನಮೂನೆ ಫಾರಂ 7) ಅರ್ಜಿ ಸಲ್ಲಿಸಿದ್ದರು.

ಪಿಎಫ್‌ಐ ನಿಷೇಧ: ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್ ಪಿಎಫ್‌ಐ ನಿಷೇಧ: ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್

High Court Of Karnataka Upset With Land Tribunal Bantwal

ಅರ್ಜಿಯಲ್ಲಿ ಒಂದು ಸರ್ವೇ ನಂಬರ್‌ಗೆ ಹಕ್ಕುದಾರಿಕೆ ಕೇಳಿದ್ದರೂ ಸಹ ನ್ಯಾಯಮಂಡಳಿಯು, ಮೂರು ಸರ್ವೇ ನಂಬರ್‌ಗಳಲ್ಲೂ ಹಕ್ಕು ನೀಡಿತ್ತು. ಅದನ್ನು ಪ್ರಶ್ನಿಸಿದ ಕರೋಪಾಡಿ ಗ್ರಾಮದ ಪಿ. ರತ್ನಾ ಜಿ ಭಟ್ ಹಾಗೂ ಪಿ. ಕೃಷ್ಣ ಪ್ರಸಾದ್ ಬಂಟ್ವಾಳ ಭೂ ನ್ಯಾಯ ಮಂಡಳಿಗೆ 2002ರ ಅಕ್ಟೋಬರ್ 31ರಂದು ನೀಡಿರುವ ಆಕ್ಷೇಪಾರ್ಹ ಆದೇಶವನ್ನು ರದ್ದುಪಡಿಸಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಪೀಠ ಈ ರಿಟ್ ಅರ್ಜಿಯನ್ನು ಪುರಸ್ಕರಿಸಿದೆ.

ನೋಟಿಸ್ ನೀಡದೆ ಗೃಹ ರಕ್ಷಕ ಸಿಬ್ಬಂದಿ ಅಮಾನತು ಮಾಡಬಹುದು: ಹೈಕೋರ್ಟ್ ನೋಟಿಸ್ ನೀಡದೆ ಗೃಹ ರಕ್ಷಕ ಸಿಬ್ಬಂದಿ ಅಮಾನತು ಮಾಡಬಹುದು: ಹೈಕೋರ್ಟ್

'ಭೂ ನ್ಯಾಯ ಮಂಡಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡುವಾಗ ಸ್ವಲ್ಪ ತಿಳಿದವರನ್ನು ನೇಮಕ ಮಾಡುವಂತೆ ನಿರ್ದೇಶನ ನೀಡಿದ ನ್ಯಾಯಾಲಯ, ಆದೇಶದ ಪ್ರತಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರವಾನಿಸಬೇಕು' ಎಂದು ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶಿಸಿತು.

ನಿವೃತ್ತ ಅಧಿಕಾರಿ ವಿರುದ್ಧ ತನಿಖೆ ಇಲ್ಲ: ಈ ಮಧ್ಯೆ, ಹೈಕೋರ್ಟ್ ಮತ್ತೊಂದು ಪ್ರಕರಣದಲ್ಲಿ ಕರ್ನಾಟಕ ನಾಗರಿಕ ಸೇವೆಗಳ ಕಾನೂನಿನ ನಿಯಮ 214 (2) (ಬಿ)ರ ಅಡಿ ನಿವೃತ್ತ ಅಧಿಕಾರಿಯ ವಿರುದ್ದ ಯಾವುದೇ ತನಿಖೆ ನಡೆಸುವಂತಿಲ್ಲ ಎಂದು ಆದೇಶಿಸಿದೆ.

ಕರ್ನಾಟಕ ಗೃಹ ಮಂಡಳಿಯಲ್ಲಿ ನಿವೃತ್ತ ಕಾರ್ಯಕಾರಿ ಎಂಜಿನಿರ್‌ಗಳಾಗಿದ್ದ ಬೆಂಗಳೂರಿನ ಅನಿಲ್ ಕುಮಾರ್ ಮತ್ತು ಟಿ ಮಲ್ಲಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಜಿ. ಪಂಡಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ. ಅಲ್ಲದೇ ಆರೋಪ ಮೆಮೊ ಮತ್ತು ತನಿಖಾಧಿಕಾರಿ ನೇಮಕಾತಿಯನ್ನು ವಜಾ ಮಾಡಿದೆ.

'ನಾಲ್ಕು ವರ್ಷಗಳ ಹಿಂದೆ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಅರ್ಜಿದಾರರ ವಿರುದ್ಧ ತನಿಖೆ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ದೋಷಾರೋಪ ಮತ್ತು ತನಿಖಾ ಪ್ರಕ್ರಿಯೆ ಕುರಿತಾದ ಮೆಮೊವನ್ನು 2022ರ ಜೂನ್ 21ರಂದು ಹೊರಡಿಸಲಾಗಿತ್ತು. ಕೆಸಿಎಸ್‌ಆರ್ ನಿಯಮ 214 (2) (ಬಿ) (ii)ರ ಅಡಿ ತನಿಖೆ ಆರಂಭಿಸಲು ದೋಷಾರೋಪ ಮೆಮೊ ನಿರ್ಬಂಧಿಸಲಾಗಿದೆ. ಹೀಗಾಗಿ, ದೋಷಾರೋಪ ಮೆಮೊ ಅಮಾನ್ಯವಾಗುತ್ತದೆ' ಎಂದು ಪೀಠ ಆದೇಶದಲ್ಲಿ ಹೇಳಿದೆ.

ಅರ್ಜಿದಾರರು ಕ್ರಮವಾಗಿ 2018ರ ಜೂನ್ 30 ಮತ್ತು 2020ರ ಆಗಸ್ಟ್ 31ರಂದು ನಿವೃತ್ತರಾಗಿದ್ದರು. ಇದರ ಬೆನ್ನಿಗೇ, 2022ರ ಜೂನ್ 21ರಂದು ದೋಷಾರೋಪ ಮೆಮೊ ಜಾರಿಗೊಳಿಸಲಾಗಿತ್ತು. 2006ರಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಮಾಡಲಾಗಿತ್ತು. ಅದನ್ನು ಅರ್ಜಿದಾರರು ಪ್ರಶ್ನಿಸಿದ್ದರು.

English summary
The high court of Karnataka upset with land tribunal, Bantwal. Petition filed in high court aganist order if land tribunal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X