ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಕೊರ್ಟ್ ಮಧ್ಯಂತರ ಆದೇಶ ಸಿಖ್ಖರ ಟರ್ಬನ್‌ಗೆ ಅನ್ವಯಿಸುವುದಿಲ್ಲ: ಶಿಕ್ಷಣ ಇಲಾಖೆ

|
Google Oneindia Kannada News

ಬೆಂಗಳೂರು, ಫೆ. 25: ರಾಜ್ಯದಲ್ಲಿ ಪೀಕಲಾಟಕ್ಕೆ ಕಾರಣವಾಗಿರುವ ಹಿಜಾಬ್ ವಿವಾದ ಇದೀಗ ಇನ್ನೊಂದು ಸಮಸ್ಯೆ ತಂದಿಟ್ಟಿದೆ. ಹಿಜಾಬ್ ವಿವಾದ ಇದೀಗ ಸಿಖ್ ವಿದ್ಯಾರ್ಥಿಗಳಿಗೆ ಬಿಸಿ ಮುಟ್ಟಿಸಿದೆ. ಸಿಖ್ ಸಮುದಾಯದ ವಿದ್ಯಾರ್ಥಿಗಳು ಧರಿಸುವ "ಟರ್ಬನ್" ಹೊರಗಿಡುವಂತೆ ಒಂದು ಸಮುದಾಯದ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಗೆ ಆಗ್ರಹಿಸಿದ್ದಾರೆ. ಈ ಹಿಜಾಬ್ ವಿವಾದ ಬೆನ್ನಲ್ಲೇ ಇದೀಗ ಸಿಖ್ ಸಮುದಾಯದ ವಿದ್ಯಾರ್ಥಿಗಳು ಟರ್ಬನ್ ಧರಿಸಿ ಶಾಲಾ ಕಾಲೇಜುಗಳಿಗೆ ಹೋಗಬೇಕಾ ಎಂಬ ಪ್ರಶ್ನೆ ಹುಟ್ಟಿದೆ.

ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ವಿವಾದ:

ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳನ್ನು ಹಿಜಾಬ್ ತೆಗೆದು ಬರುವಂತೆ ಕಾಲೇಜು ಆಡಳಿತ ಮಂಡಳಿ ಸೂಚಿಸಿದೆ. ಅದರಂತೆ ಹಿಜಾಬ್ ತೆಗೆದು ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆ ಬರೆದಿದ್ದಾರೆ. ಈ ವೇಳೆ ಸಿಖ್ ಸಮುದಾಯದ ವಿದ್ಯಾರ್ಥಿಗಳು ಟರ್ಬನ್ ಧರಿಸಿ ಕಾಲೇಜಿಗೆ ಬಂದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ಮಧ್ಯಂತರ ಆದೇಶ ಎಲ್ಲಾ ಧರ್ಮಗಳಿಗೂ ಅನ್ವಯಿಸುತ್ತದೆ. ಎಲ್ಲಾ ಧರ್ಮಿಯರು ಪಾಲಿಸಬೇಕು ಎಂದು ಒಂದು ಸಮುದಾಯದ ವಿದ್ಯಾರ್ಥಿಗಳು ಮತ್ತು ಪೋಷಕರು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಟುರ್ಬನ್ ಧರಿಸಿ ಕಾಲೇಜಿಗೆ ಬರುವ ವಿಚಾರ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ.

ಹಿಜಾಬ್ ವಿವಾದ; ಹೈಕೋರ್ಟ್‌ನಲ್ಲಿ 12ನೇ ದಿನದ ವಿಚಾರಣೆ ಪ್ರಾರಂಭಹಿಜಾಬ್ ವಿವಾದ; ಹೈಕೋರ್ಟ್‌ನಲ್ಲಿ 12ನೇ ದಿನದ ವಿಚಾರಣೆ ಪ್ರಾರಂಭ

ಟರ್ಬನ್ ಗೌರವಕ್ಕೆ ಧಕ್ಕೆ ಬೇಡ ಎಂದ ಮುಖಂಡರು:

ಟರ್ಬನ್ ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಪಂಜಾಬ್ ಮಾಜಿ ಉಪ ಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್, ಸಿಖ್ಖರು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. ಆದರೆ, ಸಿಖ್‌ರ ಧರ್ಮ ಸಂಕೇತಕ್ಕೆ ಚ್ಯುತಿ ಬರುವ ಬೆಳವಣಿಗೆಯನ್ನು ಸಹಿಸುವುದಿಲ್ಲ. ಟರ್ಬನ್ ಸಿಖ್ ಧರ್ಮದ ಧಾರ್ಮಿಕ ಸಂಕೇತ. ಈ ಕುರಿತು ಬೆಂಗಳೂರಿನ ಕಾಲೇಜಿನಲ್ಲಿ ಉಂಟಾಗಿರುವ ವಿವಾದವನ್ನು ಕೂಡಲೇ ಇತ್ಯರ್ಥ ಪಡಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ನಡೆದಿರುವ ಟರ್ಬನ್ ವಿವಾದ ಸುದ್ದಿಗಳನ್ನು ಉಲ್ಲೇಖಿಸಿ ಮನವಿ ಮಾಡಿದ್ದಾರೆ.

High Court interim order on Hijab not applicable on turban-wearing students says Minister BC Nagesh

ಶಿಕ್ಷಣ ಸಚಿವ ಸ್ಪಷ್ಟನೆ:

ಹಿಜಾಬ್ ಸೇರಿದಂತೆ ಧರ್ಮ ಪ್ರತಿನಿಧಿಸುವ ಉಡುಪುಗಳನ್ನು ವಿದ್ಯಾರ್ಥಿಗಳು ಧರಿಸುವಂತಿಲ್ಲ ಎಂದು ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಟರ್ಬನ್ ಧರಿಸುವ ಮಕ್ಕಳಿಗೆ ಅನ್ವಯಿಸುವುದಿಲ್ಲ ಎಂದು ಶಿಕ್ಷಣ ಸಚಿವ. ಬಿ.ಸಿ. ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.

ದೆಹಲಿ ಶಾಲೆಯಲ್ಲಿ ಹಿಜಾಬ್ ತೆಗೆಯುವಂತೆ ಒತ್ತಾಯ: ಸರ್ಕಾರ ಹೇಳಿದ್ದೇನು?ದೆಹಲಿ ಶಾಲೆಯಲ್ಲಿ ಹಿಜಾಬ್ ತೆಗೆಯುವಂತೆ ಒತ್ತಾಯ: ಸರ್ಕಾರ ಹೇಳಿದ್ದೇನು?

ಈ ಕುರಿತು ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದ್ದು, ಹಿಜಾಬ್ ವಿವಾದ ಕುರಿತು ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಹಿಜಾಬ್ ಗೆ ಸಂಬಂಧಿಸಿದ್ದು, ಸಿಖ್ ಸಮುದಾಯದ ಟರ್ಬನ್ ಗೆ ಅನ್ವಯಿಸುವುದಿಲ್ಲ ಎಂದಿದೆ. ಹಿಜಾಬ್ ವಿವಾದದ ಬೆನ್ನಲ್ಲೇ ಸಿಖ್ ಸಮುದಾಯದ ಮಕ್ಕಳು ಧರಿಸುವ ಟರ್ಬನ್ ಕುರಿತು ವಿವಾದ ಉಂಟಾಗಿತ್ತು. ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಟುರ್ಬನ್ ತೆಗೆದು ಬರುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ ಪ್ರಸಂಗ ನಡೆದಿತ್ತು. ಇದರ ಬೆನ್ನಲ್ಲೇ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.

'ಟುರ್ಬನ್ ಸಿಖ್ ಸಮುದಾಯದ ಸಾಂವಿಧಾನಿಕ ಹಕ್ಕು. ಆದರೆ ಹೈಕೋರ್ಟ್ ಮಧ್ಯಂತರ ಆದೇಶ ಅನ್ವಯಿಸುವುದು ಹಿಜಾಬ್, ಧರ್ಮದ ಧ್ವಜಗಳಿಗೆ ಮತ್ತು ಕೇಸರಿ ಶಾಲುಗಳಿಗೆ ಅನ್ವಯಿಸುತ್ತದೆ. ಆದರೆ ಸಿಖ್ ಸಮುದಾಯದ ವಿದ್ಯಾರ್ಥಿಗಳಿಗೆ ಮಧ್ಯಂತರ ಆದೇಶ ಅನ್ವಯಿಸುವುದಿಲ್ಲ' ಎಂದು ಸ್ಪಷ್ಟ ಪಡಿಸಿದ್ದಾರೆ.

English summary
Sikh community students wearing Turban in Bengaluru college, Education Minister BC Nagesh clarified that the high court’s interim order while hearing the petitions pertaining to the Hijab is not applicable to the Sikh community students. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X