ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್ 28ರಿಂದ ತಾಲೂಕು ಕೋರ್ಟ್ ಕಾರ್ಯಾರಂಭ; ಮಾರ್ಗಸೂಚಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ಕರ್ನಾಟಕದ ನ್ಯಾಯಾಲಯಗಳಲ್ಲಿ ಹಂತ-ಹಂತವಾಗಿ ಕಲಾಪಗಳು ಪುನಃ ಆರಂಭವಾಗಲಿವೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಪ್ರಕರಣಗಳ ವಿಚಾರಣೆ ಮಾತ್ರ ನಡೆಯುತ್ತಿದೆ.

ನ್ಯಾಯಾಲಯದ ಕಲಾಪ ಆರಂಭಿಸುವ ಕುರಿತು ಕರ್ನಾಟಕ ಹೈಕೋರ್ಟ್ ವಿಶೇಷ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 28ರಿಂದ 55 ತಾಲೂಕು ನ್ಯಾಯಾಲಯಗಳಲ್ಲಿ ಕಲಾಪ ಆರಂಭವಾಗಲಿದೆ.

ವಿದೇಶದಿಂದ ಮಂಗಳೂರಿಗೆ ಆಗಮಿಸುವವರಿಗೆ ಹೊಸ ಮಾರ್ಗಸೂಚಿವಿದೇಶದಿಂದ ಮಂಗಳೂರಿಗೆ ಆಗಮಿಸುವವರಿಗೆ ಹೊಸ ಮಾರ್ಗಸೂಚಿ

ಆರೋಪಿಗಳು ಮತ್ತು ಸಾಕ್ಷ್ಯದಾರರು ಮಾತ್ರ ನ್ಯಾಯಾಲಯಕ್ಕೆ ಆಗಮಿಸಬಹುದು. ದೂರುದಾರರು ಅನಗತ್ಯವಾಗಿ ಕೋರ್ಟ್‌ಗೆ ಆಗಮಿಸದಂತೆ ನಿರ್ಬಂಧ ಹೇರಲಾಗಿದೆ. ಸಾಕ್ಷಿಗಳ ವಿಚಾರಣೆ ಕೋರ್ಟ್‌ನಲ್ಲಿಯೇ ಆರಂಭವಾಗಲಿದೆ.

IMA Scam: ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ವಿರುದ್ಧ ಕಾನೂನು ಕ್ರಮಕ್ಕೆ ಒಪ್ಪಿಗೆ IMA Scam: ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ವಿರುದ್ಧ ಕಾನೂನು ಕ್ರಮಕ್ಕೆ ಒಪ್ಪಿಗೆ

ಸಾಕ್ಷ್ಯ ಹೇಳಲು ಬರುವವರು ಅಂದೇ ನಡೆಸಿದ ಕೋವಿಡ್ ಪರೀಕ್ಷೆ ನೆಗೆಟಿವ್ ವರದಿ ಮತ್ತು ಕೋರ್ಟ್ ನೀಡಿದ ಸಮನ್ಸ್ ಅಥವ ನೋಟಿಸ್ ಜೊತೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಕರ್ನಾಟಕ ಹೈಕೋರ್ಟ್ ಎಸ್‌ಓಪಿಯಲ್ಲಿ ಸ್ಪಷ್ಟಪಡಿಸಿದೆ.

ಶಿರಾ ಉಪ ಚುನಾವಣೆ ಖಚಿತ; ಆರ್. ಆರ್. ನಗರ, ಮಸ್ಕಿಗೆ ಕಾನೂನು ಅಡ್ಡಿ! ಶಿರಾ ಉಪ ಚುನಾವಣೆ ಖಚಿತ; ಆರ್. ಆರ್. ನಗರ, ಮಸ್ಕಿಗೆ ಕಾನೂನು ಅಡ್ಡಿ!

ಎರಡು ಹಂತದಲ್ಲಿ ಕೋರ್ಟ್ ಓಪನ್

ಎರಡು ಹಂತದಲ್ಲಿ ಕೋರ್ಟ್ ಓಪನ್

ಸೆಪ್ಟೆಂಬರ್ 28ರಿಂದ 55 ತಾಲೂಕು ನ್ಯಾಯಾಲಯ ಬಾಗಿಲು ತೆರೆಯಲಿದೆ. ಕರ್ನಾಟಕ ಹೈಕೋರ್ಟ್ ಮಾರ್ಗಸೂಚಿ ಪ್ರಕಾರ ಉಳಿದ ನ್ಯಾಯಾಲಯಗಳಲ್ಲಿ ಸಾಕ್ಷ್ಯಗಳ ವಿಚಾರಣೆ ಅಕ್ಟೋಬರ್ 5 ಮತ್ತು 12ರಿಂದ ಎರಡು ಹಂತದಲ್ಲಿ ಆರಂಭವಾಗಲಿದೆ.

ಮಾರ್ಗಸೂಚಿಗಳನ್ನು ಪಾಲಿಸಿ

ಮಾರ್ಗಸೂಚಿಗಳನ್ನು ಪಾಲಿಸಿ

ಜಿಲ್ಲಾ ಮತ್ತು ತಾಲೂಕು ಕೋರ್ಟ್‌ಗಳು ಕರ್ನಾಟಕ ಹೈಕೋರ್ಟ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸಾಕ್ಷ್ಯಗಳ ವಿಚಾರಣೆ, ಕಲಾಪ ಹೇಗೆ ನಡೆಯಬೇಕು ಎಂದು ಮಾರ್ಗಸೂಚಿಯನ್ನು ಸೂಚನೆಗಳನ್ನು ನೀಡಲಾಗಿದೆ.

5 ಸಾಕ್ಷ್ಯಗಳ ಹೇಳಿಕೆ ದಾಖಲು

5 ಸಾಕ್ಷ್ಯಗಳ ಹೇಳಿಕೆ ದಾಖಲು

ಕೋರ್ಟ್‌ಗಳು ಬೆಳಗಿನ ಪಾಳಿಯಲ್ಲಿ 5 ಸಾಕ್ಷ್ಯಗಳ ಹೇಳಿಕೆಗಳನ್ನು ದಾಖಲು ಮಾಡಲು ಅವಕಾಶ ನೀಡಲಾಗಿದೆ. ಸಾಕ್ಷ್ಯ ಹೇಳಲು ಬರುವವರು ಕೋವಿಡ್ ನೆಗೆಟಿವ್ ವರದಿ ತರುವುದು ಕಡ್ಡಾಯವಾಗಿದೆ. ಅನಗತ್ಯವಾಗಿ ದೂರುದಾರರು ಬರುವಂತಿಲ್ಲ.

Recommended Video

Corona ಲಸಿಕೆ ಭಾರತದಲ್ಲಿ ಉತ್ಪಾದನೆ ಆದ ಬಳಿಕ ಇರುವ ಸವಾಲುಗಳೇನು ? | Oneindia Kannada
ಯಾವ ಕೋರ್ಟ್ ಯಾವಾಗ ಓಪನ್?

ಯಾವ ಕೋರ್ಟ್ ಯಾವಾಗ ಓಪನ್?

ಸೆಪ್ಟೆಂಬರ್ 28ರಿಂದ 55 ತಾಲೂಕು ಕೋರ್ಟ್ ಬಾಗಿಲು ತೆರೆಯಲಿದೆ. ದಾವಣಗೆರೆ, ಹಾವೇರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ರಾಯಚೂರು, ಬೀದರ್, ರಾಮನಗರ, ಉಡುಪಿ, ಗದಗ, ಕೊಡಗು, ಕೊಪ್ಪಳ, ಚಾಮರಾಜನಗರ ಮತ್ತು ಯಾದಗಿರಿ ಜಿಲ್ಲೆಗಳ ತಾಲೂಕು ಕೋರ್ಟ್ ಅಕ್ಟೋಬರ್ 5ರಿಂದ ಆರಂಭವಾಗಲಿವೆ. ಉಳಿದ ಜಿಲ್ಲೆಯ ತಾಲೂಕು ಕೋರ್ಟ್‌ಗಳು ಅಕ್ಟೋಬರ್ 12ರಿಂದ ಆರಂಭವಾಗಲಿವೆ.

English summary
Karnataka high court issued special standard operating procedure to allow court proceedings. Recording of witnesses will also be allowed in 55 taluk courts from September 28, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X