ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯರ ಮುಷ್ಕರ : ಸರ್ಕಾರ, ವೈದ್ಯರ ಕಿವಿ ಹಿಂಡಿದ ಕೋರ್ಟ್!

|
Google Oneindia Kannada News

ಬೆಂಗಳೂರು, ನವೆಂಬರ್ 17 : 'ನ್ಯಾಯಾಲಯ ಕೊಟ್ಟ ಸೂಚನೆ ಪರಿಗಣಿಸಿಲ್ಲ. ಮುಷ್ಕರ ನಿಲ್ಲಿಸದಿದ್ದರೆ ನಾವು ಮಧ್ಯ ಪ್ರವೇಶಿಸಬೇಕಾಗುತ್ತದೆ. ಸರ್ಕಾರ ಏನು ಮಾಡುತ್ತಿದೆ?' ಎಂದು ಕರ್ನಾಟಕ ಹೈಕೋರ್ಟ್ ಪ್ರಶ್ನಿಸಿದೆ.

ವೈದ್ಯರು ಮುಷ್ಕರ ನಡೆಸುತ್ತಿರುವುದನ್ನು ಪ್ರಶ್ನಿಸಿ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ವೇಳೆ ಕೋರ್ಟ್ ಸರ್ಕಾರ ಮತ್ತು ವೈದ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.

ವೈದ್ಯರ ಮುಷ್ಕರಕ್ಕೆ ಕಾರಣವಾಯಿತೇ ಈ ಅಂಶಗಳುವೈದ್ಯರ ಮುಷ್ಕರಕ್ಕೆ ಕಾರಣವಾಯಿತೇ ಈ ಅಂಶಗಳು

High Court adjourns hearing on plea against Doctors protest

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್, ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರ ವಿಭಾಗೀಯ ಪೀಠ ಶುಕ್ರವಾರ ವೈದ್ಯರ ಮುಷ್ಕರದ ಹಿನ್ನಲೆಯಲ್ಲಿ ಸರ್ಕಾರದ ನಿಲುವೇನು? ಎಂದು ಅಡ್ವೊಕೇಟ್ ಜನರಲ್‌ ಅವರನ್ನು ಪ್ರಶ್ನಿಸಿದರು.

ವೈದ್ಯರ ಪ್ರತಿಭಟನೆ, ಪ್ರತಿಪಕ್ಷಗಳತ್ತ ಕೈ ತೋರಿಸಿದ ಸಿಎಂವೈದ್ಯರ ಪ್ರತಿಭಟನೆ, ಪ್ರತಿಪಕ್ಷಗಳತ್ತ ಕೈ ತೋರಿಸಿದ ಸಿಎಂ

ನಿಮ್ಮ ಸಮಸ್ಯೆಗಳಿದ್ದರೆ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಿ. ಬೀದಿಗೆ ಬಂದು ಪ್ರತಿಭಟನೆ ನಡೆಸುವುದು ಎಷ್ಟು ಸರಿ?. ಈಗ ಆಗಿರು ಸಾವು-ನೋವುಗಳಿಗೆ ಯಾರು ಹೊಣೆ? ಎಂದು ಕೋರ್ಟ್ ಐಎಂಎ ಪರ ವಕೀಲರನ್ನು ಪ್ರಶ್ನಿಸಿತು.

ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ಎಂದು ಅಡ್ವೊಕೇಟ್ ಜನರಲ್ ಅವರನ್ನು ಪ್ರಶ್ನಿಸಿದ ಕೋರ್ಟ್, ನಿಮ್ಮ ನಿಲುವನ್ನು ತಿಳಿಸಿ ಎಂದು ಅರ್ಜಿಯ ವಿಚಾರಣೆಯನ್ನು 4.30ಕ್ಕೆ ಮುಂದೂಡಿತು.

4.30ಕ್ಕೆ ಎರಡೂ ಕಡೆಯವರು ಅಂತಿಮ ನಿರ್ಧಾರದಿಂದ ಕಲಾಪಕ್ಕೆ ಬನ್ನಿ ಎಂದು ಕೋರ್ಟ್ ಸೂಚಿಸಿದೆ.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ, ಆರೋಗ್ಯ ಸಚಿವರು ವೈದ್ಯರು ಜೊತೆ ಸಭೆ ನಡೆಸುತ್ತಿದ್ದಾರೆ. ಸಭೆಯ ಬಳಿಕ ಮುಷ್ಕರ ವಾಪಸ್ ಪಡೆಯುವ ಬಗ್ಗೆ ವೈದ್ಯರು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

English summary
The High Court of Karnataka on Friday adjourned the hearing of a public interest litigation (PIL) challenging the doctors protest till 4.30 pm. Doctor protesting against proposed amendments to the Karnataka Private Medical Establishments Act 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X