ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುನಿರತ್ನಗೆ ಹೈಕಮಾಂಡ್‌ನಿಂದ ಮಂತ್ರಿಸ್ಥಾನ ನಿರಾಕರಣೆ; ಕಾರಣ ಬಿಚ್ಚಿಟ್ಟ ಸಚಿವ ಉಮೇಶ್ ಕತ್ತಿ!

|
Google Oneindia Kannada News

ಬೆಂಗಳೂರು, ಜ. 15: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದ ಶಾಸಕರೇ ಬಹಿರಂಗವಾಗಿ ವಾಗ್ದಾಳಿ ಮುಂದುವರೆಸಿದ್ದಾರೆ. ಹೀಗಾಗಿ ಸದ್ಯಕ್ಕೆ ಅಸಮಾಧಾನ ತಣಿಯುವಂತೆ ಕಂಡುಬರುತ್ತಿಲ್ಲ. ಈ ಮಧ್ಯೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಹಾಯ ಮಾಡುವ ಮೂಲಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾಗಿದ್ದ ಆರ್.ಆರ್. ನಗರ ಶಾಸಕ ಮುನಿರತ್ನ ಅವರಿಗೆ ಹೈಕಮಾಂಡ್ ಮಂತ್ರಿ ಪದವಿ ನಿರಾಕರಿಸಿದೆ.

ತಮಗೆ ಸಚಿವ ಸ್ಥಾನ ಕೈತಪ್ಪಿರುವ ಕುರಿತು ಶಾಸಕ ಮುನಿರತ್ನ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ. ಆದರೂ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಉಳಿದವರಂತೆ ನೇರವಾಗಿ ವಾಗ್ದಾಳಿ ಮಾಡುತ್ತಿಲ್ಲ. ಈ ಮಧ್ಯೆ ಮುನಿರತ್ನ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವ ಕುರಿತು ನೂತನ ಸಚಿವ ಉಮೇಶ್ ಕತ್ತಿ ಅವರು ಬೆಂಗಳೂರಿನಲ್ಲಿ ಮಹತ್ವದ ಮಾತನ್ನಾಡಿದ್ದಾರೆ. ಮುನಿರತ್ನ ಅವರಿಗೆ ಸಚಿವ ಸ್ಥಾನ 'ಕೈ' ತಪ್ಪಿರುವುದರ ಹಿಂದಿನ ಕಾರಣವನ್ನು ಉಮೇಶ್ ಕತ್ತಿ ಬಹಿರಂಗ ಪಡಿಸಿದ್ದಾರೆ.

ಅಷ್ಟಕ್ಕು ಯಡಿಯೂರಪ್ಪ ವಿರುದ್ಧ ಆಪ್ತರ ಇಷ್ಟೊಂದು ಆಕ್ರೋಶಕ್ಕೆ ಕಾರಣ ಏನು?ಅಷ್ಟಕ್ಕು ಯಡಿಯೂರಪ್ಪ ವಿರುದ್ಧ ಆಪ್ತರ ಇಷ್ಟೊಂದು ಆಕ್ರೋಶಕ್ಕೆ ಕಾರಣ ಏನು?

ಮುನಿರತ್ನ ಅವರಿಗೆ ಮಂತ್ರಿ ಪದವಿ ಕೈತಪ್ಪಿರುವುದರ ಹಿಂದಿನ ಕಾರಣವಾದರೂ ಏನು? ಅವರಿಗೆ ಮಂತ್ರಿ ಸ್ಥಾನ ಸಿಗದಂತೆ ಮಾಡಿದ್ದು ಯಾರು? ಇಲ್ಲಿದೆ ಮಾಹಿತಿ!

ಕಚೇರಿ ಆರಂಭಿಸಿದ ಸಚಿವ ಕತ್ತಿ

ಕಚೇರಿ ಆರಂಭಿಸಿದ ಸಚಿವ ಕತ್ತಿ

ವಿಧಾನಸೌಧದಲ್ಲಿ ತಮ್ಮ ನೂತನ ಕಚೇರಿ ಪೂಜೆಯನ್ನು ಸಚಿವ ಉಮೇಶ್ ಕತ್ತಿ ನೆರವೇರಿಸಿದ್ದಾರೆ. ಆ ಮೂಲಕ 8 ವರ್ಷಗಳ ನಂತರ ಮತ್ತೆ ಸಚಿವರಾಗಿ ಅಧಿಕಾರ ಆಡಳಿತ ಆರಂಭಿಸಿದ್ದಾರೆ. ವಿಧಾನಸೌಧದ ವಿಧಾನಸೌಧದ 329, 329 ಎ ಕೊಠಡಿಗಳಲ್ಲಿ ಪೂಜೆ ಮಾಡುವ ಮೂಲಕ ಕೆಲಸ ಆರಂಭಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಚಿವಸ್ಥಾನ ಕೈತಪ್ಪಿರುವುದರಿಂದ ಬಹಿರಂಗ ಅಸಮಾಧಾನ ವ್ಯಕ್ತಪಡಿಸುತ್ತಿರುವವರ ಕುರಿತು ಉಮೇಶ್ ಕತ್ತಿ ಮಾತನಾಡಿದ್ದಾರೆ. ಅವರ ಮಾತು ಬಿಜೆಪಿಯಲ್ಲಿ ಅಸಮಧಾನ ತಣಿಸುತ್ತದೆಯಾ? ಅಥವಾ ಮತ್ತಷ್ಟು ಹೆಚ್ಚು ಮಾಡುತ್ತದೆಯಾ? ಎಂಬುದು ಕುತೂಹಲ ಮೂಡಿಸಿದೆ.

ಎಲ್ಲ 224 ಶಾಸಕರಿಗೂ ಸಚಿವ ಸ್ಥಾನ?

ಎಲ್ಲ 224 ಶಾಸಕರಿಗೂ ಸಚಿವ ಸ್ಥಾನ?

ಸಚಿವ ಸಂಪುಟ ವಿಸ್ತರಣೆಗೆ ಹಲವರ ಅಸಮಧಾನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ 34 ಜ‌ನರನ್ನು ಮಂತ್ರಿ ಮಾಡಬೇಕು. ಹೀಗಾಗಿ 34 ಜನ ಮಾತ್ರ ಮಂತ್ರಿಗಳಾಗಿದ್ದಾರೆ. ಮುಂದೆ ಉಳಿದವರೂ ಮಂತ್ರಿಗಳಾಗುತ್ತಾರೆ. ನಿಷ್ಟಾವಂತರು, ಅಭಿಮಾನಿಗಳು, ಮಂತ್ರಿ ಆಗುವ ಇಚ್ಚೆ ಇರುವವರು ಮಂತ್ರಿ ಆಗುತ್ತಾರೆ. 224 ಶಾಸಕರಿಗೂ ಮಂತ್ರಿ ಸ್ಥಾನ ಸಿಗುತ್ತದೆ. ಆದರೆ ಕಾಯಬೇಕು. ಕಾಯ್ದರೆ ಮಂತ್ರಿ ಸ್ಥಾನ ಸಿಗುತ್ತದೆ. ನಾನೂ ಒಂದೂವರೆ ವರ್ಷ ಕಾಯ್ದಿದ್ದೇನೆ, ನಂತರವೇ ನನಗೆ ಮಂತ್ರಿಸ್ಥಾನ ಸಿಕ್ಕಿದೆ. ಈಗ ನಾನು ಮಂತ್ರಿಯಾಗಿಲ್ಲವಾ? ಒಂದಲ್ಲ ಒಂದು ದಿನ ಅಧಿಕಾರ ಬಂದೇ ಬರುತ್ತದೆ ಎಂದಿದ್ದಾರೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಸಿಎಂ ಯಡಿಯೂರಪ್ಪ ಸರ್ಕಾರಕ್ಕೆ ಗಂಡಾಂತರ?ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಸಿಎಂ ಯಡಿಯೂರಪ್ಪ ಸರ್ಕಾರಕ್ಕೆ ಗಂಡಾಂತರ?

ಎಲ್ಲ 224 ಶಾಸಕರೂ ಮುಂದೊಂದು ದಿನ ಮಂತ್ರಿಯಾಗ್ತಾರೆ ಎಂಬ ಹೇಳಿಕೆ ಕೊಡುವ ಮೂಲಕ ನೂತನ ಸಚಿವ ಉಮೇಶ್ ಕತ್ತಿ ಕುತೂಹಲ ಮೂಡಿಸಿದ್ದಾರೆ. ಜೊತೆಗೆ ಹೈಕಮಾಂಡ್ ಮುನಿರತ್ನ ಅವರಿಗೆ ಸಚಿವಸ್ಥಾನವನ್ನು ನಿರಾಕರಿಸಿದ್ದರ ಕುರಿತು ಉಮೇಶ್ ಕತ್ತಿ ಹೀಗೆ ಹೇಳಿದ್ದಾರೆ.

ಮುನಿರತ್ನ ಅವರಿಗೆ ಮಂತ್ರಿಸ್ಥಾನ ತಪ್ಪಿದ್ಯಾಕೆ?

ಮುನಿರತ್ನ ಅವರಿಗೆ ಮಂತ್ರಿಸ್ಥಾನ ತಪ್ಪಿದ್ಯಾಕೆ?

ಮುನಿರತ್ನ ಅವರಿಗೆ ಮಂತ್ರಿಸ್ಥಾನ ನಿರಾಕರಣೆ ಹಿಂದೆ ಅವರ ಮೇಲಿನ ಪ್ರಕರಣಗಳು ಕಾರಣ ಎಂದು ನೂತನ ಸಚಿವ ಉಮೇಶ್ ಕತ್ತಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂದಿನ ಕೆಲವೇ ಕೆಲವು ದಿನಗಳಲ್ಲಿ ಶಾಸಕ ಮುನಿರತ್ನ ಅವರೂ ಮಂತ್ರಿಯಾಗುತ್ತಾರೆ. ಅವರ ಮೇಲೆ ನ್ಯಾಯಾಲಯದಲ್ಲಿ ಕೆಲವು ಪ್ರಕರಣಗಳಿವೆ. ಹೀಗಾಗಿ ಅವರಿಗೆ ಮಂತ್ರಿಸ್ಥಾನ ಕೊಟ್ಟಿರಲಿಕ್ಕಿಲ್ಲ. ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹಾಗೂ ಶಾಸಕ ಮುನಿರತ್ನ ಅವರ ಕೋರ್ಟ್ ಪ್ರಕರಣಗಳು ಮುಗಿದ ಕೂಡಲೇ ಅವರಿಬ್ಬರೂ ಮಂತ್ರಿ ಆಗುತ್ತಾರೆ ಎಂದು ಉಮೇಶ್ ಕತ್ತಿ ಹೇಳಿದ್ದಾರೆ.

'ಕೈ' ತಪ್ಪಿದ ಮಂತ್ರಿ ಪದವಿ; ರಾಜ್ಯ ಸರ್ಕಾರದ ಭವಿಷ್ಯ ಹೇಳಿದ ಆರ್‌.ಆರ್. ನಗರ ಶಾಸಕ ಮುನಿರತ್ನ!'ಕೈ' ತಪ್ಪಿದ ಮಂತ್ರಿ ಪದವಿ; ರಾಜ್ಯ ಸರ್ಕಾರದ ಭವಿಷ್ಯ ಹೇಳಿದ ಆರ್‌.ಆರ್. ನಗರ ಶಾಸಕ ಮುನಿರತ್ನ!

Recommended Video

BJP ಸರ್ಕಾರದ ಬಗ್ಗೆ Munirathna ಗೆ ನಂಬಿಕೆ ಇಲ್ವಾ ?? | Oneindia Kannada
ಪ್ರಕರಣಗಳ ಕುರಿತು ಮುನಿರತ್ನ ಹೇಳಿಕೆ

ಪ್ರಕರಣಗಳ ಕುರಿತು ಮುನಿರತ್ನ ಹೇಳಿಕೆ

ತಮ್ಮ ಮೇಲಿನ ನ್ಯಾಯಾಲಯದ ಪ್ರಕರಣಗಳ ಕುರಿತು ಶಾಸಕ ಮುನಿರತ್ನ ಅವರು ಬೆಂಗಳೂರಿನಲ್ಲಿ ಸ್ಪಷ್ಟನೆ ಕೊಟ್ಟಿದ್ದು, ನನ್ನ ಮೇಲೆ ಚುನಾವಣೆ ವಿಚಾರಕ್ಕೆ ಸಂಬಂಧಿಸಿಂದಂತೆ ಎರಡು ಪ್ರಕರಣಗಳು ಇರುವುದು ನಿಜ. ಆದರೆ ನನ್ನ ಮೇಲೆ ಲೋಕಾಯುಕ್ತದಲ್ಲಿ, ಎಸಿಬಿಯಲ್ಲಿ, ಇಟಿ, ಐಟಿ ಬೇರೆಲ್ಲೂ ಪ್ರಕರಣಗಳಿಲ್ಲ ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ.

ನನ್ನ ವಿರುದ್ಧ ಹೈಕಮಾಂಡ್‌ಗೆ ದೂರು ಕೊಡಿ: ಯಡಿಯೂರಪ್ಪ ಖಡಕ್ ಮಾತು!ನನ್ನ ವಿರುದ್ಧ ಹೈಕಮಾಂಡ್‌ಗೆ ದೂರು ಕೊಡಿ: ಯಡಿಯೂರಪ್ಪ ಖಡಕ್ ಮಾತು!

ಆ ಮೂಲಕ ಹೈಕಮಾಂಡ್ ತಮಗೆ ಮಂತ್ರಿಸ್ಥಾನ ನಿರಾಕರಿಸಲು ಕೊಟ್ಟಿರುವ ಕಾರಣವನ್ನು ಮುನಿರತ್ನ ಅವರು ತಳ್ಳಿ ಹಾಕಿದ್ದಾರೆ. ತಮ್ಮೊಂದಿಗೆ ಬಿಜೆಪಿ ಸೇರಿರುವ ಉಳಿದ 16 ಜನರನ್ನು ಸಂಪರ್ಕಿಸುವ ಪ್ರಯತ್ನದಲ್ಲಿ ಮುನಿರತ್ನ ಅವರಿದ್ದಾರೆ. ಮುಂದೆಯೂ ಅವರಿಗೆ ಮಂತ್ರಿಸ್ಥಾನ ನಿರಾಕರಿಸಿದಲ್ಲ, ಬಿಜೆಪಿ ಸರ್ಕಾರದ ಭವಿಷ್ಯಕ್ಕೆ ಕುತ್ತು ಬರಬಹುದು ಎಂಬ ವಿಶ್ಲೇಷಣೆ ಸತ್ಯಕ್ಕೆ ತೀರಾ ಹತ್ತಿರವಾಗಿದೆ ಎನ್ನಬಹುದು!

English summary
RR MLA Munirathna has cases against him. Thus high command may have been denied ministry. New minister Umesh Katti has said that he will be given the ministerial position soon. Know more about Katti statement here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X