ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ನಿಲ್ದಾಣಗಳ ಮೇಲೆ ಉಗ್ರರ ನೆರಳು, ರಾಜ್ಯಾದ್ಯಂತ ಹೈ ಅಲರ್ಟ್

|
Google Oneindia Kannada News

ಬೆಂಗಳೂರು, ಮೇ 8: ಶ್ರೀಲಂಕಾದಲ್ಲಿ ಉಗ್ರರು ಆತ್ಮಾಹುತಿ ಬಾಂಬ್ ಸ್ಫೋಟಿಸಿದ ಹಿನ್ನೆಲೆಯಲ್ಲಿ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಅತಿ ಹೆಚ್ಚು ಪ್ರಯಾಣಿಕರಿಂದ ತುಂಬಿರುವ ರೈಲು ನಿಲ್ದಾಣಗಳ ಮೇಲೆ ಉಗ್ರರ ನೆರಳಿರುವ ಕಾರಣ ರೈಲ್ವೆ ಪೊಲೀಸರನ್ನು ನಿಯೋಜಿಸಲಾಗಿದೆ.

ಬ್ರೇಕಿಂಗ್ : ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪಿಸ್ತೂಲ್ ಹಿಡಿದ ವ್ಯಕ್ತಿ ಪತ್ತೆ ಬ್ರೇಕಿಂಗ್ : ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪಿಸ್ತೂಲ್ ಹಿಡಿದ ವ್ಯಕ್ತಿ ಪತ್ತೆ

ರಾಜ್ಯದಲ್ಲಿ 384 ರೈಲು ನಿಲ್ದಾಣಗಳಿವೆ ಅವುಗಳಿಗೆ ಕೇವಲ 758 ರೈಲ್ವೆ ಪೊಲೀಸರನ್ನು ನಿಯೋಜಿಸಲಾಗಿದೆ. ರೈಲ್ವೆ ಪೊಲೀಸ್ ಇಲಾಖೆಯಲ್ಲಿ ಐಜಿಪಿ, ಎಸ್‌ಪಿ ಸೇರಿ ಎಲ್ಲಾ ಶ್ರೇಣಿಯ ಅಧಿಕಾರಿ-ಸಿಬ್ಬಂದಿಯನ್ನು ಸೇರಿದರೂ ಇರುವುದು 738 ಮಂದಿ ಮಾತ್ರ.

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಗನ್ ಹಿಡಿದ ವ್ಯಕ್ತಿ

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಗನ್ ಹಿಡಿದ ವ್ಯಕ್ತಿ

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಎಷ್ಟೇ ಭದ್ರತೆ ಇದ್ದರೂ ಅದನ್ನು ಮೀರಿ ಪಿಸ್ತೂಲ್ ಹಿಡಿದ ವ್ಯಕ್ತಿಯೊಬ್ಬ ನಮ್ಮ ಮೆಟ್ರೋ ನಿಲ್ದಾಣ ಪ್ರವೇಶಿಸಲು ಯತ್ನಿಸಿದ್ದಾನೆ. ನಗರದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿದೆ. ನಿಲ್ದಾಣದಲ್ಲಿರುವ ಮೆಟಲ್ ಡಿಟೆಕ್ಟರ್‌ನಲ್ಲಿ ಪಿಸ್ತೂಲ್ ಇರುವುದು ಪತ್ತೆಯಾಗುತ್ತಿದ್ದಂತೆ ಆತ ಅಲ್ಲಿಂದ ಹೊರಟು ಹೋಗಿದ್ದಾನೆ.

ಮೆಟ್ರೋ ಸೆಕ್ಯುರಿಟಿ ವೈಫಲ್ಯ

ಮೆಟ್ರೋ ಸೆಕ್ಯುರಿಟಿ ವೈಫಲ್ಯ

ಅನುಮಾನಾಸ್ಪದ ವ್ಯಕ್ತಿಯ ಓಡಾಟ ಪ್ರಕರಣದಲ್ಲಿ ನಮ್ಮ ಮೆಟ್ರೋ ಭದ್ರತಾ ವೈಫಲ್ಯ ಎದ್ದು ಕಾಣುತ್ತದೆ. ಅಪರಿಚಿತ ವ್ಯಕ್ತಿಯನ್ನು ತಪಾಸಣೆ ನಡೆಸಿದ ಸೆಕ್ಯುರಿಟಿ ಗಾರ್ಡ್, ಅನುಮಾನ ಬಂದ ಮೇಲೆ ಆತನನ್ನು ಪ್ರತ್ಯೇಕವಾಗಿ ತಪಾಸಣೆ ನಡೆಸಿ ಬಗೆಹರಿಸಿಕೊಳ್ಳಬೇಕಿತ್ತು. ಇಲ್ಲ, ಮೇಲಾಧಿಕಾರಿಗಳ ಗಮನಕ್ಕೆ ತರಬೇಕಿತ್ತು, ಇದ್ಯಾವುದನ್ನೂ ಮಾಡದೆ ಆತ ತಪ್ಪಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾನೆ ಈ ಕುರಿತು ತೀವ್ರ ವಿರೋಧ ವ್ಯಕ್ತವಾಗಿದೆ.

ಶ್ರೀಲಂಕಾ ದಾಳಿ ಉಗ್ರರು ಬೆಂಗಳೂರಿಗೂ ಬಂದಿದ್ದರು: ಆಘಾತಕಾರಿ ವರದಿಶ್ರೀಲಂಕಾ ದಾಳಿ ಉಗ್ರರು ಬೆಂಗಳೂರಿಗೂ ಬಂದಿದ್ದರು: ಆಘಾತಕಾರಿ ವರದಿ

ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ

ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ

ಪ್ರಮುಖ ರೈಲು ನಿಲ್ದಾಣ, ಜಂಕ್ಷನ್‌ಗಳಲ್ಲಿ ಮಫ್ತಿಯಲ್ಲಿ ಸಿಬ್ಬಂದಿ ನಿಯೋಜನೆ, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಹೆಚ್ಚಿನ ನಿಗಾ, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ. ಟ್ರೇನ್ ಪೆಟ್ರೋಲಿಂಗ್ ಹೆಚ್ಚಳ, ಶ್ವಾನದಳದಿಂದ ನಿರಂತರ ತಪಾಸಣೆ ನಡೆಸಲಾಗುತ್ತದೆ.

ರೈಲ್ವೆ ಇಲಾಖೆ ಕೊಟ್ಟಿರುವುದೇ 920 ಹುದ್ದೆ

ರೈಲ್ವೆ ಇಲಾಖೆ ಕೊಟ್ಟಿರುವುದೇ 920 ಹುದ್ದೆ

ರೈಲ್ವೆ ಪೊಲೀಸ್ ಇಲಾಖೆಗೆ ಮಂಜೂರಾಗಿರುವುದೇ 920 ಹುದ್ದೆಗಳು ಇದರಲ್ಲಿ 758 ಹುದ್ದೆಗಳು ಭರ್ತಿಯಾಗಿದ್ದು, 162 ಹುದ್ದೆಗಳು ಖಾಲಿ ಇವೆ. ಹೊಸದಾಗಿ 60 ಸಿಬ್ಬಂದಿ ನೇಮಕವಾಗಿದ್ದು, ಇನ್ನಷ್ಟೇ ಕರ್ತವ್ಯಕ್ಕೆ ಬರಬೇಕಿದೆ. ಆದರೆ ಭದ್ರತೆಗೆ 920 ಹುದ್ದೆಗಳು ಕೂಡ ಸಾಕಾಗುವುದಿಲ್ಲ ಎನ್ನುವುದು ಎಲ್ಲರ ಅಭಿಪ್ರಾಯ.

English summary
After Sri Lanka suicide bomb attack and some suspicious incidence took place in Karnataka, Security tightened and declared high alert in Karnataka's all railway stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X