ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ದಿನದ ಸಿಎಂ ಯಡಿಯೂರಪ್ಪ: ಕನ್ನಡ ದಿನಪತ್ರಿಕೆಗಳ ಹೆಡ್ಲೈನ್

By Mahesh
|
Google Oneindia Kannada News

ಬೆಂಗಳೂರು, ಮೇ 20: ಮೂರನೇ ಬಾರಿಗೆ ಮುಖ್ಯಮಂತ್ರಿಯಾದ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಮೂರೇ ದಿನಕ್ಕೆ ಪತನವಾಗಿದ್ದರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಆಪರೇಷನ್ ಕಮಲ,ಯಾರು ಈ ಬಾರಿಯ ಚುನಾವಣೆ ಚಾಣಕ್ಯ ಯಾರು? ಬಿಜೆಪಿ ಎಡವಿದ್ದೆಲ್ಲಿ? ಕಾಂಗ್ರೆಸ್- ಜೆಡಿಎಸ್ ಮೈತ್ರಿ ಎಷ್ಟು ಕಾಲ ಉಳಿಯಬಹುದು? ಹೀಗೆ ಎಲ್ಲಾ ರೀತಿಯ ಪ್ರಶ್ನೆಗಳಿಗೂ ವೇದಿಕೆ ಒದಗಿಸಿದೆ.

ವಿಶ್ವಾಸ ಮತ ಯಾಚನೆ: ದಿನದ 14 ಪ್ರಮುಖ ಬೆಳವಣಿಗೆವಿಶ್ವಾಸ ಮತ ಯಾಚನೆ: ದಿನದ 14 ಪ್ರಮುಖ ಬೆಳವಣಿಗೆ

ಮೊದಲ ಬಾರಿಗೆ 7 ದಿನಗಳು, ಎರಡನೇ ಬಾರಿಗೆ 39 ತಿಂಗಳು ಹಾಗೂ ಈಗ 55 ಗಂಟೆಗಳ ಬಳಿಕ ಬಿಜೆಪಿ ಸರ್ಕಾರ ಪತನಗೊಂಡಿದೆ. ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿಯಾಗುತ್ತಿದ್ದಾರೆ.

1996 ರಲ್ಲಿ ವಿಶ್ವಾಸಮತ ಗೆಲ್ಲಲಾಗದೆ ಅಟಲ್ ಬಿಹಾರಿ ವಾಜಪೇಯಿ ಅವರು ರಾಜೀನಾಮೆ ನೀಡಿದಂತೆ ಬಿ.ಎಸ್. ಯಡಿಯೂರಪ್ಪ ಅವರೂ ರಾಜೀನಾಮೆ ನೀಡಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯ ಕರ್ನಾಟಕದ ಶೀರ್ಷಿಕೆ

ವಿಜಯ ಕರ್ನಾಟಕದ ಶೀರ್ಷಿಕೆ

ವಿಜಯ ಕರ್ನಾಟಕ ದಿನಪತ್ರಿಕೆಯ ಶೀರ್ಷಿಕೆ : ಬಿಎಸ್ವೈ ಶಸ್ತ್ರತ್ಯಾಗ, ಎಚ್ಡಿಕೆಗೆ ಯೋಗ

ಉಪ ಶೀರ್ಷಿಕೆ : ಜೆಡಿಎಸ್ -ಕಾಂಗ್ರೆಸ್ ಗೆ ರಾಜ್ಯಪಾಲರ ಆಹ್ವಾನ 23ರಂದು ಪ್ರಮಾಣ ವಚನ , ಖಾತೆ ಹಂಚಿಕೆ ಲೆಕ್ಕಾಚಾರ ಆರಂಭ

ಶೀರ್ಷಿಕೆ ಮೇಲ್ಭಾಗದಲ್ಲಿ : 55 ಗಂಟೆಗಳ ಬಿಜೆಪಿ ಸರಕಾರ ಪತನ | ವಿಶ್ವಾಸಮತ ಯಾಚಿಸದೆ ಯಡಿಯೂರಪ್ಪ ನಿರ್ಗಮನ

ಸುದ್ದಿ ಸಾರಾಂಶಗಳನ್ನು ಘಟನಾವಳಿಗಳ ಮೂಲಕ ನೀಡಲಾಗಿದ್ದು, ಜತೆಗೆ ಪ್ರಮುಖ ನಾಯಕರ ಪ್ರತಿಕ್ರಿಯೆ ಹಾಗೂ ಸಂಪಾದಕರ ಅಭಿಪ್ರಾಯ, ಸಂಭಾವ್ಯ ಪರಿಸ್ಥಿತಿ ಬಗ್ಗೆ ವಿವರಿಸಲಾಗಿದೆ.

ಪ್ರಜಾವಾಣಿ ಪತ್ರಿಕೆಯ ಶೀರ್ಷಿಕೆ

ಪ್ರಜಾವಾಣಿ ಪತ್ರಿಕೆಯ ಶೀರ್ಷಿಕೆ

ಪ್ರಜಾವಾಣಿ ದಿನಪತ್ರಿಕೆಯ ಶೀರ್ಷಿಕೆ : ಸೋತ ಬಿಎಸ್ ವೈ; ಇನ್ನು 'ಕುಮಾರ' ಪಥ

ಉಪ ಶೀರ್ಷಿಕೆ : ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ಕ್ಷಣಗಣನೆ, ನೂತನ ಮುಖ್ಯಮಂತ್ರಿ ಬುಧವಾರ ಪ್ರಮಾಣವಚನ ಸಾಧ್ಯತೆ

ಸದನದಲ್ಲಿ ಯಡಿಯೂರಪ್ಪ ಅವರ ನಿರ್ಗಮನದ ನಂತರ ಕಾಂಗ್ರೆಸ್ಸಿನ ಡಿಕೆ ಶಿವಕುಮಾರ್ ಹಾಗೂ ಜೆಡಿಎಸ್ ನ ಕುಮಾರಸ್ವಾಮಿ ಅವರು ಕೈ ಎತ್ತಿ ಹಿಡಿದುಕೊಂಡು ಮೈತ್ರಿ ಕೂಟದ ಗೆಲುವಿನ ಸೂಚನೆ ನೀಡುವ ಚಿತ್ರ ಬಳಸಲಾಗಿದೆ.

ಪ್ರಮುಖ ನಾಯಕರ ಪ್ರತ್ರಿಕ್ರಿಯೆಗಳು ಬಿಟ್ಟರೆ, ಹೆಚ್ಚಿನ ಕಣ್ಮೆಸೆಳೆಯುವ ಬಾಕ್ಸ್ ಐಟಂಗಳಿಲ್ಲ.

ಕನ್ನಡಪ್ರಭ ದಿನಪತ್ರಿಕೆಯ ಶೀರ್ಷಿಕೆ

ಕನ್ನಡಪ್ರಭ ದಿನಪತ್ರಿಕೆಯ ಶೀರ್ಷಿಕೆ

ಕನ್ನಡಪ್ರಭ ದಿನಪತ್ರಿಕೆಯ ಶೀರ್ಷಿಕೆ : ಇನ್ನೂ ಕುಮಾರ ಪರಮಾಧಿಕಾರ!

ಉಪ ಶೀರ್ಷಿಕೆ : ಸಿಎಂ ಆಗಿ ಬುಧವಾರ ಎಚ್ ಡಿಕೆ ಶಪಥ ಸಾಧ್ಯತೆ ಪರಮೇಶ್ವರ್ ಉಪಮಖ್ಯಮಂತ್ರಿ ಆಗ್ತಾರಾ?

ಇನ್ನೊಂದೆಡೆ 'ಮೂರಕ್ಕೇ ಮುಕ್ತಾಯ' ಎಂದು ಶೀರ್ಷಿಕೆ ನೀಡಲಾಗಿದೆ. ಸಂಖ್ಯೆ ಗಿಟ್ಟಿಸಲು ವಿಫಲ | ಬಹುಮತಕ್ಕೆ ಮುನ್ನ ಬಿಎಸ್ ವೈ ರಾಜೀನಾಮೆ| ಮೂರೇ ದಿನದಲ್ಲಿ ಸರ್ಕಾರ ಪತನ | ಬಿಎಸ್ ವೈ ದಿನ್ ಕಾ ಸುಲ್ತಾನ್

ಉದಯವಾಣಿ ದಿನಪತ್ರಿಕೆಯ ಶೀರ್ಷಿಕೆ

ಉದಯವಾಣಿ ದಿನಪತ್ರಿಕೆಯ ಶೀರ್ಷಿಕೆ

ಉದಯವಾಣಿ ದಿನಪತ್ರಿಕೆಯ ಶೀರ್ಷಿಕೆ : ಉರುಳಿದ ಬಿಜೆಪಿ ಸರಕಾರ : ಬುಧವಾರ ಮೈತ್ರಿ ಸರಕಾರ

ಉಪ ಶೀರ್ಷಿಕೆ : ಬಿಎಸ್ ವೈ ನಿರ್ಗಮನ
ವಿಶ್ವಾಸಮತ ಯಾಚಿಸದೆ ಸಿಎಂ ಸ್ಥಾನಕ್ಕೆ ರಾಜೀನಾಮೆ

ಮತ್ತೊಂದು ಕಡೆ 'ಎಚ್ ಡಿಕೆ ಆಗಮನ'
ಬುಧವಾರ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ


ಸದನದಲ್ಲಿ ನಡೆದ ಘಟನಾವಳಿಗಳವಿವರ, ಯಡಿಯೂರಪ್ಪ ಅವರ ಹೇಳಿಕೆ, ಸದನ ಬಾಗಿಲು ತೆಗೆದು ಯಡಿಯೂರಪ್ಪ ಅವರು ಹೊರಕ್ಕೆ ಹೋಗುತ್ತಿರುವ ಚಿತ್ರ ಸೂಕ್ತವಾಗಿ ಬಳಸಲಾಗಿದೆ.

ವಾರ್ತಾಭಾರತಿ ದಿನಪತ್ರಿಕೆಯ ಶೀರ್ಷಿಕೆ

ವಾರ್ತಾಭಾರತಿ ದಿನಪತ್ರಿಕೆಯ ಶೀರ್ಷಿಕೆ

ವಾರ್ತಾಭಾರತಿ ದಿನಪತ್ರಿಕೆಯ ಶೀರ್ಷಿಕೆ : ಯಡಿಯೂರಪ್ಪ ರಾಜೀನಾಮೆ(ಕೆಂಪು ಬಣ್ಣದಲ್ಲಿ ಮುದ್ರಿತ)

ಉಪ ಶೀರ್ಷಿಕೆ : ವಿಫಲವಾದ ಬಿಜೆಪಿ ಕುದುರೆ ವ್ಯಾಪಾರ, 55 ಗಂಟೆಯ ಮುಖ್ಯಮಂತ್ರಿಯೆಂಬ ದಾಖಲೆ..
ಬುಧವಾರ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣ

ಯಡಿಯೂರಪ್ಪ ಅವರ ಹೇಳಿಕೆ ಜತೆಗೆ ಸದನದಿಂದ ಬಿಎಸ್ ಯಡಿಯೂರಪ್ಪ ಅವರು ನಿರ್ಗಮಿಸುತ್ತಿರುವ ಚಿತ್ರ ಬಳಸಲಾಗಿದೆ.

ಸಂಯುಕ್ತ ಕರ್ನಾಟಕ ಶೀರ್ಷಿಕೆ

ಸಂಯುಕ್ತ ಕರ್ನಾಟಕ ಶೀರ್ಷಿಕೆ

ಸಂಖ್ಯಾಭಾವ ವೈರಾಗ್ಯ ಎಂಬ ಶೀರ್ಷಿಕೆ ಮೂಲಕ ವಿಶ್ವಾಸಮತ ಯಾಚನೆ ಮಾಡದೆ ಯಡಿಯೂರಪ್ಪ ಅವರು ವೈರಾಗ್ಯ ಭಾಷಣ ಮಾಡಿದರು ಎಂದು ಸೂಚಿಸಲಾಗಿದೆ.

ವಿಶ್ವಾಸಮತಕ್ಕೆ ಮೊದಲೆ ವಿಧಾನಸಭೆಯಲ್ಲಿ ಬಿಎಸ್ ವೈ ರಾಜೀನಾಮೆ ಎಂದು ಶೀರ್ಷಿಕೆಯ ಮೇಲ್ಭಾಗದಲ್ಲಿ ಬಳಸಲಾಗಿದೆ.

ವಿಜಯವಾಣಿ ಶೀರ್ಷಿಕೆ

ವಿಜಯವಾಣಿ ಶೀರ್ಷಿಕೆ

ಜನತಾ ಕೋರ್ಟ್ ಗೆ ಯಡಿಯೂರಪ್ಪ -ಶೀರ್ಷಿಕೆ
ಬಿಎಸ್ ವೈ ವಿದಾಯ ಭಾಷಣದ ಮುಖ್ಯಾಂಶಗಳು
ಇಡೀ ದಿನದ ಕ್ಷಣ ಕ್ಷಣ ಆಹಿತಿ
ಇನ್ನೊಂದೆಡೆ 'ಇನ್ನು ಕುಮಾರಪರ್ವ ಎಂಬ ಶೀರ್ಷಿಕೆ ಬಳಸಲಾಗಿದೆ.

ಮೇಲ್ಭಾಗದಲ್ಲಿ ವಿಶ್ವಾಸಾತ ಯಾಚನೆಗೆ ಮೊದಲೇ ರಾಜೀನಾಮೆ | ಬುಧವಾರ ಕೈ ದಳ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ? ಎಂದು ಬಳಸಲಾಗಿದೆ. ಇದಲ್ಲದೆ, ಇದಕ್ಕೂ ಮೇಲ್ಭಾಗದಲ್ಲಿ ನಾಲ್ಕೈದು ವಾಕ್ಯಗಳಲ್ಲಿ ದಿನದ ಸಾರಾಂಶ ಕೊಡಲಾಗಿದೆ.

ಹೊಸ ದಿಗಂತ ಶೀರ್ಷಿಕೆ

ಹೊಸ ದಿಗಂತ ಶೀರ್ಷಿಕೆ

ಕುಮಾರ ಸಂಭವ-ಶೀರ್ಷಿಕೆ

ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಗೆ ರಾಜ್ಯಪಾಲರ ಆಹ್ವಾನ ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಮೇ 23ಕ್ಕೆ ಎಚ್ ಡಿಕೆ ಪ್ರಮಾಣ

ಸಮ್ಮಿಶ್ರ ಸರ್ಕಾರದ ಮುಂದಿರುವ ಸವಾಲುಗಳು, ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆ, ಮಿತ್ರಕೂಟದ ದಿನಚರಿ ನೀಡಲಾಗಿದೆ.

ವಿಶ್ವವಾಣಿಯ ಶೀರ್ಷಿಕೆ

ವಿಶ್ವವಾಣಿಯ ಶೀರ್ಷಿಕೆ

ಹೀಗೆ ಬಂದ್ರು ಹಾಗೆ ಹೋದ್ರು -ಶೀರ್ಷಿಕೆ

ಉಸಿರಿರೋವರೆಗೂ ಹೋರಾಡುವೆ,
ಬುಧವಾರ ಎಚ್ಡಿಕೆ ಪ್ರಮಾಣ
ಫಲಿಸದ ಆಪರೇಷನ್ ಕಮಲ | ವಿಶ್ವಾಸಮತಕ್ಕೆ ಮುನ್ನವೇ ಯಡಿಯೂರಪ್ಪ ರಾಜೀನಾಮೆ 55 ಗಂಟೆಗಳ ಆಲ್ಪಕಾಲಿಕ ಮುಖ್ಯಮಂತ್ರಿ ಹುದ್ದೆಗೆ ತೆರೆ | ನೂತನ ಸಿಎಂ ಆಗಿ ಕುಮಾರಸ್ವಾಮಿ ಬುಧವಾರ ಪ್ರಮಾಣ ? | ಪರಮೇಶ್ವರ್ ಡಿಸಿಎಂ

English summary
Here is what Kannada News Papers say about BJP Floor Test fail and Congress- JDS alliance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X