ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಳೆ ಸಂಪುಟ ಸೇರಲಿರುವ ಜೆಡಿಎಸ್ + ಬಿಎಸ್ಪಿ ಶಾಸಕರ ಸಂಭಾವ್ಯ ಪಟ್ಟಿ

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 5: ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಸಚಿವರಾಗಲಿರುವ ಜೆಡಿಎಸ್ ಪಕ್ಷದ ಪಟ್ಟಿ ಅಂತಿಮಗೊಂಡಿದೆ ಎನ್ನಲಾಗಿದೆ.

ಈ ಪಟ್ಟಿ ಪ್ರಕಾರ ಒಟ್ಟು ಜೆಡಿಎಸ್ ನ 8 ಮತ್ತು ಬಿಎಸ್ಪಿಯ ಎನ್. ಮಹೇಶ್ ಅವರಿಗೆ ಸಚಿವರಾಗುವ ಭಾಗ್ಯ ಒದಗಿ ಬಂದಿದೆ. ಈ ವರದಿಗಳ ಪ್ರಕಾರ ಮೂರು ಸ್ಥಾನಗಳನ್ನು ಖಾಲಿ ಇಟ್ಟುಕೊಳ್ಳಲಾಗಿದೆ.

ಖಾತೆ ಹಂಚಿಕೆ: ಜೆಡಿಎಸ್ ಗೆ ಯಾವ ಖಾತೆ? ಕಾಂಗ್ರೆಸಿಗೆ ಯಾವ ಖಾತೆ?ಖಾತೆ ಹಂಚಿಕೆ: ಜೆಡಿಎಸ್ ಗೆ ಯಾವ ಖಾತೆ? ಕಾಂಗ್ರೆಸಿಗೆ ಯಾವ ಖಾತೆ?

ಬುಧವಾರ ಬದಲಾದ 2.12ರ ಸಮಯದಲ್ಲಿ ಜೆಡಿಎಸ್ ನಿಂದ ಸಂಪುಟ ಸೇರಲಿರುವ ಸಾಂಭಾವ್ಯ ಶಾಸಕರ ಹೆಸರು ಹೀಗಿದೆ. ಡಿ.ಸಿ. ತಮ್ಮಣ್ಣ, ಶ್ರೀನಿವಾಸ್ (ವಾಸು), ಎಂ.ಸಿ. ಮನಗೂಳಿ, ಎಚ್.ಡಿ. ರೇವಣ್ಣ, ಸಿ.ಎಸ್. ಪುಟ್ಟರಾಜು, ಜಿ.ಟಿ. ದೇವೇಗೌಡ, ವೆಂಕಟರಾಮ್ ನಾಡಗೌಡ, ಬಂಡೆಪ್ಪ ಕಾಶೆಂಪುರ್ ಮತ್ತು ಎಚ್.ಕೆ. ಕುಮಾರಸ್ವಾಮಿ. ಬಿಎಸ್ಪಿ ಕಡೆಯಿಂದ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಸಂಪುಟ ಸೇರುವ ಸಾಧ್ಯತೆಗಳಿವೆ.

Here is the list of possible new ministers from JDS + BSP

ಸಂಪುಟದಲ್ಲಿ ಅಚ್ಚರಿ ಎಂಬಂತೆ ಹಿರಿಯ ನಾಯಕ ಎ.ಟಿ. ರಾಮಸ್ವಾಮಿ, ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿಯವರಿಗೆ ಸ್ಥಾನ ನೀಡಿಲ್ಲ. ನೂತನವಾಗಿ ಪರಿಷತ್ ಗೆ ಆಯ್ಕೆಯಾಗಿರುವ ಬಿ.ಎಂ. ಫಾರೂಕ್, ಪರಿಷತ್ ಸದಸ್ಯ ಟಿ.ಎ. ಶರವಣ, ಹುಣಸೂರು ಶಾಸಕ ಎಚ್. ವಿಶ್ವನಾಥ್ ಅವರಿಗೂ ಸಚಿವ ಸ್ಥಾನ ಕೈತಪ್ಪಿದೆ ಎನ್ನಲಾಗುತ್ತಿದೆ.

English summary
The JDS party's list of ministers name is said to have ended. According to this list, 8 JDS and one of the BSP MLA to be included into cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X