ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲಿದೆ ಪ್ರಮಾಣವಚನ ಸ್ವೀಕರಿಸುವವರ ಅಂತಿಮ ಪಟ್ಟಿ, ಮುನಿರತ್ನ ಬಗ್ಗೆ ಇನ್ನೂ ತೀರ್ಮಾನವಿಲ್ಲ?

|
Google Oneindia Kannada News

ಬೆಂಗಳೂರು, ಜ. 13: ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು (ಜ.13) ಮದ್ಯಾಹ್ನ 3.50ಕ್ಕೆ ರಾಜಭವನದಲ್ಲಿ ನಡೆಯಲಿದೆ. ಈಗಾಗಲೇ 7 ಜನರು ಹೊಸದಾಗಿ ಸಿಎಂ ಯಡಿಯೂರಪ್ಪ ಅವರ ಸಂಪುಟ ಸೇರುವುದು ಖಚಿತವಾಗಿದೆ. ಆದರೆ ಉಪ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಆರ್‌ಆರ್‌ ನಗರ ಶಾಸಕ ಮುನಿರತ್ನ ಅವರು ಸಂಪುಟ ಸೇರಲು ಇನ್ನೂ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ ಎಂಬ ಮಾಹಿತಿ ಬಿಜೆಪಿ ವಲಯದಿಂದಲೇ ಕೇಳಿ ಬರುತ್ತಿದೆ.

ಹೀಗಾಗಿ 8ನೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬೇಕಿದ್ದ ಶಾಸಕ ಮುನಿರತ್ನ ಅವರು ಸಂಪುಟ ಸೇರುವ ಬಗ್ಗೆ ಹೈಕಮಾಂಡ್ ಇನ್ನೂ ಒಪ್ಪಿಗೆ ಕೊಟ್ಟಿಲ್ಲ ಎಂಬ ಮಾಹಿತಿಯಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಬೆಳಗ್ಗೆ 9.30ಕ್ಕೆ ಬೆಂಗಳೂರಿಗೆ ಬರಲಿದ್ದು, ಬಳಿಕ 10 ಗಂಟೆಗೆ ಮುನಿರತ್ನ ಅವರು ಸಂಪುಟ ಸೇರುವ ಬಗ್ಗೆ ಅಂತಿಮ ತೀರ್ಮಾನವಾಗಲಿದೆ ಎನ್ನಲಾಗಿದೆ.

Here is the final list of the 7 ministers who will join CM Yedಇyurappas cabinet

ಉಳಿದಂತೆ 7 ಜನರು ಯಡಿಯೂರಪ್ಪ ಅವರ ಸಂಪುಟ ಸೇರುವುದು ಖಚಿತವಾಗಿದ್ದು ಅವರ ಹೆಸರುಗಳು ಹೀಗಿವೆ!

* ಎಂಟಿಬಿ ನಾಗರಾಜ್-ವಿಧಾನ ಪರಿಷತ್ ಸದಸ್ಯ

* ಆರ್. ಶಂಕರ್-ವಿಧಾನ ಪರಿಷತ್ ಸದಸ್ಯ

* ಸಿ.ಪಿ. ಯೋಗೇಶ್ವರ್-ವಿಧಾನ ಪರಿಷತ್ ಸದಸ್ಯ

* ಉಮೇಶ್ ಕತ್ತಿ-ಹುಕ್ಕೇರಿ ಶಾಸಕ

* ಅರವಿಂದ ಲಿಂಬಾವಳಿ-ಮಹದೇವಪುರ ಶಾಸಕ

* ಮುರುಗೇಶ್ ‌ನಿರಾಣಿ-ಬೀಳಗಿ ಶಾಸಕ

* ಎಸ್. ಅಂಗಾರ-ಸುಳ್ಯ ಶಾಸಕ

* ಮುನಿರತ್ನ ನಾಯ್ಡು-ಆರ್ಆರ್ ನಗರ ಶಾಸಕ (ಹೈಕಮಾಂಡ್ ಒಪ್ಪಿಗೆ ಸೂಚಿಸಿದಲ್ಲಿ)

English summary
Here is the final list of the 7 ministers who will join CM Yedಇyurappa's cabinet. It is not yet certain whether RR Nagar MLA Munirathna will join the cabinet. Know more here about Karnataka cabinet axpansion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X