ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಪ್ಸಿಬಾ ರಾಣಿ ಕೊರ್ಲಪಟಿ ಸೇರಿ 5 ಮಂದಿ ಐಎಎಸ್ ವರ್ಗಾವಣೆ

|
Google Oneindia Kannada News

ಬೆಂಗಳೂರು, ಸೆ. 28: ಹೆಪ್ಸಿಬಾ ರಾಣಿ ಕೋರ್ಲಪಟಿ ಸೇರಿದಂತೆ ಅನೇಕ ಐಎಎಸ್ ಅಧಿಕಾರಿಗಳು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರವು ಸೋಮವಾರ ಸಂಜೆ ಆದೇಶ ಹೊರಡಿಸಿದೆ. ಈ ಪೈಕಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶರತ್ ಬಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಶರತ್ ಅವರ ಸ್ಥಾನಕ್ಕೆ ರೋಹಿಣಿ ಸಿಂಧೂರಿ ಅವರನ್ನು ನೇಮಿಸಲಾಗಿದೆ.

ಒಟ್ಟು ಆರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ನೇಮಿಸಲಾಗಿದೆ.

ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ

ಜೊತೆಗೆ ಪಿ. ರಾಜೇಂದ್ರ ಚೋಳನ್-ಎಂಡಿ, ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್, ಜೆ. ಮಂಜುನಾಥ್-ಬಿಬಿಎಂಪಿ ವಿಶೇಷ ಆಯುಕ್ತ, ಹೆಪ್ಸಿಬಾ ರಾಣಿ ಕೊರ್ಲಪಾಟಿ-ಬಿಬಿಎಂಪಿ ವಿಶೇಷ ಆಯುಕ್ತರು(ಎಸ್ಟೇಟ್) ಹಾಗೂ ಪಿ. ಶಿವಶಂಕರ್ ಅವರನ್ನು ಚಿಕ್ಕಬಳ್ಳಾಪುರ ಜಿ.ಪಂ. ಸಿಇಒ ಆಗಿ ಸರ್ಕಾರ ವರ್ಗಾವಣೆ ಮಾಡಿದೆ.

Hepsiba Rani and 5 IAS officers transferred

ಅಧಿಕಾರಿಗಳ ಹೆಸರು ಯಾವ ಇಲಾಖೆಗೆ ವರ್ಗ -ಈ ಹಿಂದಿನ ಇಲಾಖೆ ವಿವರ ಇಲ್ಲಿದೆ:

* ಪಿ ರಾಜೇಂದ್ರ ಚೋಳನ್ (2008 ಬ್ಯಾಚ್) ಎಂಡಿ, ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್, ಇವರು ಆರೋಗ್ಯ ಮತ್ತು ಐಟಿ ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದರು.

* ರೋಹಿಣಿ ಸಿಂಧೂರಿ ದಾಸರಿ (2009 ಬ್ಯಾಚ್) ಮೈಸೂರು ಜಿಲ್ಲಾಧಿಕಾರಿ. ಇವರು ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತರಾಗಿದ್ದರು.

* ಜೆ ಮಂಜುನಾಥ್ (2010 ಬ್ಯಾಚ್) ಬಿಬಿಎಂಪಿ (ಆಡಳಿತ) ವಿಶೇಷ ಅಧಿಕಾರಿಯಾಗಿ ಹೆಚ್ಚುವರಿ ಜವಾಬ್ದಾರಿ(ವಿ ಅನ್ಬುಕುಮಾರ್ ವರ್ಗಾವಣೆಯಾಗಿದೆ). ಇವರು ಬಿಬಿಎಂಪಿ (ಎಸ್ಟೇಟ್ಸ್) ವಿಶೇಷ ಆಯುಕ್ತರಾಗಿದ್ದರು.

ಸರ್ಕಾರಿ ಶಾಲೆಯೇ ಸಾಕು: ಮಾದರಿಯಾದರು ಈ ಮಹಿಳಾ ಜಿಲ್ಲಾಧಿಕಾರಿಸರ್ಕಾರಿ ಶಾಲೆಯೇ ಸಾಕು: ಮಾದರಿಯಾದರು ಈ ಮಹಿಳಾ ಜಿಲ್ಲಾಧಿಕಾರಿ

* ಹೆಪ್ಸಿಬಾ ರಾಣಿ ಕೊರ್ಲಪಾಟಿ (2011 ಬ್ಯಾಚ್) ಬಿಬಿಎಂಪಿ (ಎಸ್ಟೇಟ್ಸ್) ವಿಶೇಷ ಆಯುಕ್ತರು. ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಎಂಡಿಯಾಗಿದ್ದರು.

* ಎಂ.ಆರ್ ರವಿ ಕುಮಾರ್ -ಕೋಲಾರ ಜಿಲ್ಲಾ ಪಂಚಾಯಿತಿ ಸಿಇಒ. ಕರ್ನಾಟಕ ರೇಷ್ಮೆ ಮಾರುಕಟ್ಟೆ ಬೋರ್ಡ್ ಲಿಮೆಟೆಡ್ ನಿರ್ದೇಶಕರಾಗಿದ್ದರು.

Recommended Video

India China ಬಾರ್ಡರ್ ನಲ್ಲಿ ಏನೇನೆಲ್ಲ ಬೆಳವಣಿಗೆ | Oneindia Kannada

* ಪಿ ಶಿವಶಂಕರ್- ಚಿಕ್ಕಬಳ್ಳಾಪುರ ಜಿಲ್ಲಾ ಸಿಇಒ. ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಇಲಾಖೆ ನಿರ್ದೇಶಕರಾಗಿದ್ದರು.

English summary
The Karnataka government on Monday, September 28, 2020 transferred 6 IAS officers including Rohini Sindhuri, Hepsiba Rani K and others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X