ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿದರ್, ದೇವದುರ್ಗ, ಹೆಬ್ಬಾಳ ಉಪಚುನಾವಣೆ ಫಲಿತಾಂಶ

|
Google Oneindia Kannada News

ಬೆಂಗಳೂರು, ಫೆಬ್ರವರಿ 15 : ತೀವ್ರ ಕುತೂಹಲ ಕೆರಳಿಸಿರುವ ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಷ್ಠೆಯು ಉಪಚುನಾವಣೆಯಲ್ಲಿ ಅಡಗಿದೆ. ಚುನಾವಣಾ ಆಯೋಗ ಮತ ಎಣಿಕೆಗೆ ಸಕಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಒನ್ ಇಂಡಿಯಾ ಕನ್ನಡದಲ್ಲಿ ಫಲಿತಾಂಶದ ಕ್ಷಣ-ಕ್ಷಣದ ಮಾಹಿತಿ ಲಭ್ಯವಾಗಲಿದೆ. [ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]

ಮಂಗಳವಾ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, 10 ಗಂಟೆಯ ವೇಳೆಗೆ ಯಾರಿಗೆ ಗೆಲುವು? ಎಂಬ ಸೂಚನೆ ಸಿಗಲಿದೆ. ಫೆಬ್ರವರಿ 13ರಂದು ಹೆಬ್ಬಾಳ, ದೇವದುರ್ಗ ಮತ್ತು ಬೀದರ್ ಕ್ಷೇತ್ರದ ಉಪ ಚುನಾವಣೆ ನಡೆದಿತ್ತು. ಹೆಬ್ಬಾಳದಲ್ಲಿ ಶೇ 46ರಷ್ಟು, ದೇವದುರ್ಗದಲ್ಲಿ ಶೇ 61ರಷ್ಟು, ಬೀದರ್‌ ಕ್ಷೇತ್ರದಲ್ಲಿ ಶೇ 56ರಷ್ಟು ಮತದಾನವಾಗಿತ್ತು. [ಹೆಬ್ಬಾಳ 46, ದೇವದುರ್ಗದಲ್ಲಿ 61ರಷ್ಟು ಮತದಾನ]

by poll

ಹೆಬ್ಬಾಳ ಕ್ಷೇತ್ರದ ಮತ ಎಣಿಕೆ ಬಳ್ಳಾರಿ ರಸ್ತೆಯ ಜಿಕೆವಿಕೆ ಕ್ಯಾಂಪಸ್‌ನಲ್ಲಿರುವ ಡೇರಿ ಸೈನ್ಸ್ ಕಾಲೇಜಿನಲ್ಲಿ ನಡೆಯಲಿದೆ. ದೇವದುರ್ಗ ಕ್ಷೇತ್ರದ ಮತ ಎಣಿಕೆ ರಾಯಚೂರಿನ ಇನ್ಫೆಂಟ್ ಜೀಸಸ್ ಪ್ರೌಢಶಾಲಾ ಕಟ್ಟಡದಲ್ಲಿ ನಡೆಯಲಿದೆ. ಬೀದರ್ ಕ್ಷೇತ್ರದ ಮತ ಎಣಿಕೆ ಕೇಂದ್ರವನ್ನು ಬಿ.ವಿ.ಭೂಮರೆಡ್ಡಿ ಕಾಲೇಜಿನಲ್ಲಿ ಸ್ಥಾಪಿಸಲಾಗಿದೆ.

ಹೆಬ್ಬಾಳದ ಶಾಸಕರಾಗಿದ್ದ ಜಗದೀಶ್ ಕುಮಾರ್ (ಬಿಜೆಪಿ), ಬೀದರ್ ಶಾಸಕರಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ (ಕೆಜೆಪಿ) ಮತ್ತು ದೇವದುರ್ಗದ ಶಾಸಕರಾಗಿದ್ದ ವೆಂಕಟೇಶ್ ನಾಯಕ್ ಅವರ ಅಕಾಲಿಕ ಮರಣದಿಂದಾಗಿ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ಎದುರಾಗಿತ್ತು.

ಅಭ್ಯರ್ಥಿಗಳು :

* ಬೀದರ್ ಕ್ಷೇತ್ರ
ಕಾಂಗ್ರೆಸ್‌ - ರಹೀಂಖಾನ್
ಬಿಜೆಪಿ - ಪ್ರಕಾಶ್ ಖಂಡ್ರೆ
ಜೆಡಿಎಸ್‌ - ಎಂ.ಡಿ.ಅಯಾಜ್ ಖಾನ್

* ಹೆಬ್ಬಾಳ
ಕಾಂಗ್ರೆಸ್‌ - ಸಿ.ಕೆ.ಅಬ್ದುಲ್ ರೆಹಮಾನ್ ಷರೀಫ್
ಬಿಜೆಪಿ - ವೈ.ಎ.ನಾರಾಯಣಸ್ವಾಮಿ
ಜೆಡಿಎಸ್‌ - ಇಸ್ಮಾಯಿಲ್ ಷರೀಫ್

* ದೇವದುರ್ಗ
ಕಾಂಗ್ರೆಸ್‌ - ಎ.ರಾಜಶೇಖರ ನಾಯಕ್
ಬಿಜೆಪಿ - ಶಿವನಗೌಡ ನಾಯಕ್
ಜೆಡಿಎಸ್‌ - ಕರಿಯಮ್ಮ

English summary
Hebbala, Bidar and Devadurga : Election Results for the three assembly elections of Karnataka will start 8 AM on Tuesday 16th Feb 2016. Follow leads, trends, party positions and results, LIVE on Oneindia Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X