ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಬ್ಬಾಳದಲ್ಲಿ ಸೋತರೂ ಕಾಂಗ್ರೆಸ್ಸಿಗೆ ಲಾಭ! ಹೇಗೆ?

By ಭಾಸ್ಕರ್ ಭಟ್
|
Google Oneindia Kannada News

ಬೆಂಗಳೂರು, ಫೆಬ್ರವರಿ 17 : ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನದಲ್ಲಿ ಜಯಗಳಿಸಿದರೂ ವಿಧಾನಪರಿಷತ್‌ನಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳಲು ಸಹಾಯವಾಗಿದೆ. ಹೆಬ್ಬಾಳದಲ್ಲಿ ವೈ.ಎ.ನಾರಾಯಣ ಸ್ವಾಮಿ ಅವರು ಗೆಲುವು ಸಾಧಿಸಿರುವುದರಿಂದ ಬಿಜೆಪಿಗೆ ಪರಿಷತ್‌ನಲ್ಲಿ ಒಂದು ಸ್ಥಾನ ಕೈತಪ್ಪಿದಂತಾಗಿದೆ.

ಕರ್ನಾಟಕ ವಿಧಾನಪರಿಷತ್‌ನಲ್ಲಿ ಬಿಜೆಪಿ 29 ಸ್ಥಾನಗಳನ್ನು ಹೊಂದಿತ್ತು. ಫೆಬ್ರವರಿ ಮೊದಲ ವಾರದಲ್ಲಿ ನಾಮ ನಿರ್ದೇಶಿತ ಸದಸ್ಯರಾದ ಜಗ್ಗೇಶ್ ಮತ್ತು ಕೃಷ್ಣಭಟ್ ಅವರ ಅವಧಿ ಪೂರ್ಣಗೊಂಡು ನಿವೃತ್ತರಾಗಿದ್ದು, ಬಿಜೆಪಿ ಬಲ 27ಕ್ಕೆ ಕುಸಿಯಿತು. [ಹೆಬ್ಬಾಳ ಚುನಾವಣೆ ಕಾಂಗ್ರೆಸ್ ನಾಯಕರಿಗೆ ಕಲಿಸಿದ್ದೇನು?]

narayana swamy

ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದ ವೈ.ಎ.ನಾರಾಯಣ ಸ್ವಾಮಿ ಅವರು ಹೆಬ್ಬಾಳ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದರಿಂದ ಅವರ ಸ್ಥಾನವು ತೆರವಾಗಲಿದೆ. ಆದ್ದರಿಂದ, ಬಿಜೆಪಿಯ ಬಲ 26ಕ್ಕೆ ಕುಸಿಯಲಿದೆ. ನಾರಾಯಣ ಸ್ವಾಮಿ ಅವರಿಂದ ತೆರವಾಗುವ ಸ್ಥಾನಕ್ಕೆ ಉಪ ಚುನಾವಣೆ ನಡೆಯಬೇಕಾಗಿದೆ. [ಹೆಬ್ಬಾಳದಲ್ಲಿ ಕಾಂಗ್ರೆಸ್ ಬೀಳಲು ಏಳೇ 7 ಕಾರಣಗಳು!]

ಕಾಂಗ್ರೆಸ್ ಬಲ ಹೆಚ್ಚುವುದು ಹೇಗೆ? : ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷ ಸದ್ಯ ವಿಧಾನಪರಿಷತ್ತಿನಲ್ಲಿ 29 ಸದಸ್ಯ ಬಲ ಹೊಂದಿದೆ. ಜಗ್ಗೇಶ್ ಮತ್ತು ಕೃಷ್ಣಭಟ್ ಅವರಿಂದ ತೆರವಾದ ಸ್ಥಾನಕ್ಕೆ ಇಬ್ಬರನ್ನು ನಾಮನಿರ್ದೇಶನ ಮಾಡಿದರೆ ಪಕ್ಷದ ಬಲ 31ಕ್ಕೆ ಏರಿಕೆಯಾಗಲಿದೆ. [ಪರಿಷತ್ತಿನ 24 ಮಂದಿ ಸದಸ್ಯರು ನಿವೃತ್ತಿ]

15 ಸ್ಥಾನಗಳು ತೆರವಾಗಲಿವೆ : ಫೆಬ್ರವರಿಯಿಂದ ಜೂನ್‌ವರೆಗೆ ಮೇಲ್ಮನೆಯ 14 ಸ್ಥಾನಗಳು ತೆರವಾಗಲಿವೆ. ವೈ.ಎ.ನಾರಾಯಣ ಸ್ವಾಮಿ ಅವರ ಕ್ಷೇತ್ರವೂ ಸೇರಿದಂತೆ ಒಟ್ಟು 15 ಸ್ಥಾನಗಳು ಖಾಲಿಯಾಗಲಿವೆ. ಇವುಗಳ ಪೈಕಿ ಬಿಜೆಪಿ 9, ಕಾಂಗ್ರೆಸ್ 3 ಮತ್ತು ಜೆಡಿಎಸ್ 2 ಸ್ಥಾನಗಳನ್ನು ಕಳೆದುಕೊಳ್ಳಲಿವೆ. [ಪರಿಷತ್ ಚುನಾವಣೆ : ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು?]

ಪರಿಷತ್ತಿನ ಒಟ್ಟು ಸದಸ್ಯ ಬಲ 75. 15 ಸ್ಥಾನಗಳು ತೆರವಾದ ಬಳಿಕ ಪರಿಷತ್ತಿನಲ್ಲಿ ಕಾಂಗ್ರೆಸ್ 26, ಬಿಜೆಪಿ 17, ಜೆಡಿಎಸ್ 10 ಸದಸ್ಯ ಬಲ ಹೊಂದಿರುತ್ತವೆ. ವಿಧಾನಸಭೆಯಿಂದ ಪರಿಷತ್ತಿನ 7 ಸದಸ್ಯರ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ 4ಸ್ಥಾನಗಳನ್ನು ಗೆಲ್ಲುವುದು ಖಚಿತ, ಜೊತೆಗೆ ಮೂರು ಸ್ಥಾನಗಳಿಗೆ ನಾಮ ನಿರ್ದೇಶನ ಮಾಡುವುದರಿಂದ ಕಾಂಗ್ರೆಸ್ ಏಳು ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲಿದೆ.

ಆಗ ಕಾಂಗ್ರೆಸ್ ಬಲ 33ಕ್ಕೆ ಹೆಚ್ಚಾಗುತ್ತದೆ. ಉಳಿದಂತೆ ಶಿಕ್ಷಕರ ಹಾಗೂ ಪದವೀಧರರ 4 ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗಳಿಸುವ ಸ್ಥಾನಗಳ ಆಧಾರದ ಮೇಲೆ ಸಂಖ್ಯಾಬಲ ಅಂತಿಮವಾಗಲಿದೆ. ವೈ.ಎ.ನಾರಾಯಣ ಸ್ವಾಮಿ ಅವರ ಗೆಲುವಿನಿಂದ ಕಾಂಗ್ರೆಸ್‌ಗೆ ಮೇಲ್ಮನೆಯಲ್ಲಿ ಲಾಭವಾಗುವುದಂತೂ ಖಚಿತ.

English summary
In Hebbal by election BJP candidate Y.A. Narayana Swamy defeated Congress candidate C.K. Abdul Rahman Shariff. But Congress defeat in Hebbal helps party to increase number in Karnataka legislative council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X