ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಕರಾವಳಿ ಸೇರಿ ಒಟ್ಟು 7 ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

|
Google Oneindia Kannada News

ಬೆಂಗಳೂರು, ಮೇ 26: ಯಾಸ್ ಚಂಡಮಾರುತ ಪ್ರಭಾವ ರಾಜ್ಯದ ಕರಾವಳಿ ಜಿಲ್ಲೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದ್ದು, ಅದರ ಜತೆಗೆ ಹಲವು ಜಿಲ್ಲೆಗಳ ಮೇಲೂ ಕೂಡ ಪರಿಣಾಮ ಬೀರಲಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ 2 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆಮುಂದಿನ 2 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ

ಇನ್ನು ರಾಜ್ಯದ ವಿವಿಧೆಡೆ ಮೋಡಕವಿದ ವಾತಾವರಣವಿರಲಿದ್ದು, ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕಲಬುರಗಿಯಲ್ಲಿ 36.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಕರಾವಳಿಯಲ್ಲಿ ಮಂಗಳವಾರ ಬೆಳಗ್ಗೆಯಿಂದಲ್ಲೇ ಮೋಡ ಕವಿದ ವಾತಾವರಣದ ಜತೆಯಲ್ಲಿ ಸಾಧಾರಣವಾಗಿ ಮಳೆಯಾಗಿದೆ. ವಿಶೇಷ ಪೂರ್ವ ಮುಂಗಾರಿನ ಪ್ರಭಾವದಿಂದ ಈ ರೀತಿಯ ಮಳೆಯಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದರ ಜತೆಯಲ್ಲಿ ಬುಧವಾರ ಕೂಡ ಮಳೆಯಾಗುವ ನಿರೀಕ್ಷೆಯ ಆಧಾರದಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

 ಒಡಿಶಾದಲ್ಲಿ ಭಾರಿ ಮಳೆ

ಒಡಿಶಾದಲ್ಲಿ ಭಾರಿ ಮಳೆ

ಮೇ 26 ರಂದು ಉತ್ತರ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿಯಲ್ಲಿ ವ್ಯಾಪಕ ಹಾನಿಯನ್ನು ನಿರೀಕ್ಷಿಸಲಾಗಿದೆ. ಮನೆಗಳ ಸಂಪೂರ್ಣ ನಾಶ ಮತ್ತು ಮನೆಗಳಿಗೆ ವ್ಯಾಪಕ ಹಾನಿಯಾಗಬಹುದು.ಕೆಲವು ಮನೆಗಳಿಗೆ ಸ್ವಲ್ಪ ಹಾನಿ ಆಗಬಹುದು. ಹಾರುವ ವಸ್ತುಗಳಿಂದ ಸಂಭಾವ್ಯ ಬೆದರಿಕೆ, ವಿದ್ಯುತ್ ಮತ್ತು ಸಂವಹನ ವ್ಯತ್ಯಯ,ರೈಲ್ವೆ, ಓವರ್ಹೆಡ್ ವಿದ್ಯುತ್ ಮಾರ್ಗಗಳು ಮತ್ತು ಸಿಗ್ನಲಿಂಗ್ ವ್ಯವಸ್ಥೆಗಳ ಅಡ್ಡಿ, ಬೆಳೆಗಳು, ತೋಟಗಳು, ತೋಟಗಳಿಗೆ ವ್ಯಾಪಕ ಹಾನಿ, ಸಣ್ಣ ದೋಣಿಗಳು, ಹಳ್ಳಿಗಾಡಿನ ಕರಕುಶಲ ವಸ್ತುಗಳು ಗಳಿಗೆ ಹಾನಿಯಾಗುವ ನಿರೀಕ್ಷೆ ಇದೆ.

 ಎಲ್ಲೆಲ್ಲಿ ಎಷ್ಟು ಮಳೆ?

ಎಲ್ಲೆಲ್ಲಿ ಎಷ್ಟು ಮಳೆ?

ಈಗಾಗಲೇ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದಾವಣಗೆರೆ 7 ಸೆಂ.ಮೀ, ಉತ್ತರ ಕನ್ನಡ 6 ಸೆಂ.ಮೀ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 5.ಸೆಂ.ಮೀ ಮಳೆಯಾಗಿದೆ. ಮೇ 29ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಜತೆಗೆ ಕರ್ನಾಟಕದ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಯಾಸ್ ಚಂಡಮಾರುತ : 90 ರೈಲುಗಳ ಸಂಚಾರ ಸ್ಥಗಿತಯಾಸ್ ಚಂಡಮಾರುತ : 90 ರೈಲುಗಳ ಸಂಚಾರ ಸ್ಥಗಿತ

 ಬೆಂಗಳೂರು ಹವಾಮಾನ ವರದಿ

ಬೆಂಗಳೂರು ಹವಾಮಾನ ವರದಿ

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ, 31 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್‌ಎಎಲ್‌ನಲ್ಲಿ 32.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೆಂಗಳೂರು ನಗರದಲ್ಲಿ 31.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್‌ನಲ್ಲಿ 32.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

 ರಾಜ್ಯದ ಯಾವ್ಯಾವ ಪ್ರದೇಶಗಳಲ್ಲಿ ಮಳೆಯಾಗಿದೆ?

ರಾಜ್ಯದ ಯಾವ್ಯಾವ ಪ್ರದೇಶಗಳಲ್ಲಿ ಮಳೆಯಾಗಿದೆ?

ಯಲ್ಲಾಪುರ, ಪಂಚನಹಳ್ಳಿ, ದಾವಣಗೆರೆ, ಹಳಿಯಾಳ, ಭಟ್ಕಳ, ಶಿರಾಲಿ, ಶಿವಾನಿ, ಚಿತ್ರದುರ್ಗ, ಅಜ್ಜಂಪುರ, ಕದ್ರ, ಧರ್ಮಸ್ಥಳ, ಸಂತೇಬೆನ್ನೂರು, ಶಿರಹಟ್ಟಿ, ಕೋಟ, ಮುನಿರಾಬಾದ್, ಮಧುಗಿರಿ, ಸೋಮವಾರಪೇಟೆ ಮಂಗಳೂರಿನಲ್ಲಿ ಮಳೆಯಾಗಿದೆ.

Recommended Video

Yaas Cyclone ಕಾರಣದಿಂದ ಲಕ್ಷಾಂತರ ಜನಗಹ ಸ್ಥಳಾಂತರ | Oneindia Kannada

English summary
Meteorological department issued Yellow Alert For coastal Karnataka and other 4 districts till May 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X