ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾಮಾನ ವರದಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸಾಧ್ಯತೆ

|
Google Oneindia Kannada News

ಬೆಂಗಳೂರು, ಮೇ 9: ರಾಜ್ಯದ ವಿವಿಧೆಡೆ ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಅಂತೆಯೇ ಎಲ್ಲೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು ಶನಿವಾರ ಸಂಜೆಯೂ ಕೂಡ ಮಳೆಯಾಗುವ ಸಾಧ್ಯತೆ ಇದೆ.

Recommended Video

ನಮ್ಮ ರಾಜ್ಯದಲ್ಲಿ ಎಷ್ಟು ಜನ ಬಿಹಾರದ ವಲಸೆ ಕಾರ್ಮಿಕರಿದ್ದಾರೆ ನೀವೇ ನೋಡಿ | Bihar | Oneindia Kannada

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೊಡ್ಡಕಿಟ್ಟದಹಳ್ಳಿಯಲ್ಲಿ ಬುಧವಾರ , ಹೊಳಲ್ಕೆರೆ ತಾಲೂಕಿನ ಗುಡ್ಡದ ಸಾಂತೇನಹಳ್ಳಿ, ತಿರುಮಲಾಪುರ, ಆವಿನಹಟ್ಟಿ ಸುತ್ತಮುತ್ತ ಗುರುವಾರ,ಶುಕ್ರವಾರ ಮಳೆಯಾಗಿದೆ.

ಕರ್ನಾಟಕದ ಒಳನಾಡು ಹಾಗೂ ಕೇರಳದಲ್ಲಿ ಭಾರಿ ಮಳೆಯ ಮುನ್ಸೂಚನೆ ಕರ್ನಾಟಕದ ಒಳನಾಡು ಹಾಗೂ ಕೇರಳದಲ್ಲಿ ಭಾರಿ ಮಳೆಯ ಮುನ್ಸೂಚನೆ

ಮೇ ತಿಂಗಳ ಆರಂಭದಲ್ಲೇ ಉತ್ತರ ಒಳನಾಡಿನಲ್ಲಿ ಸೆಕೆ ಜೋರಾಗಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ ಗೆ ತಲುಪಿದೆ. ವಿಜಯಪುರದಲ್ಲಿ 41 ಡಿಗ್ರಿ ಸೆ., ರಾಯಚೂರು, ಬೀದರ್‌ನಲ್ಲಿ 40 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ.

Weather Report Heavy Rainfall Is Expected In Various Districts Of The State Today

ಅಂಡಮಾನ್‌ ಬಳಿ ಹಾಗೂ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಿದಿದೆ. ಈ ನಡುವೆ ಕಲಬುರಗಿಯಲ್ಲಿ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ ಗೆ ತಲುಪಿದೆ.ವಾಯುಭಾರ ಕುಸಿತದ ಪರಿಣಾಮದಿಂದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಮಳೆ ಸುರಿಯುತ್ತಿದೆ.

ಚಿತ್ರದುರ್ಗದಲ್ಲಿ ಗುಡುಗು ಸಿಡಿಲು ಸಹಿತ ಸುರಿದ ಮಳೆಚಿತ್ರದುರ್ಗದಲ್ಲಿ ಗುಡುಗು ಸಿಡಿಲು ಸಹಿತ ಸುರಿದ ಮಳೆ

ಇನ್ನು ಕಾಫಿನಾಡು ಚಿಕ್ಕಮಳೂರಿನಲ್ಲಿ ಧಾರಾಕಾರ ಮಳೆ ಸುರಿದಿದೆ. ಇನ್ನು ಎನ್‌ಆರ್‌ಪುರದ ಇಂದಿರಾ ನಗರದಲ್ಲಿ 2 ಟನ್ ಒಣಕೊಬ್ಬರಿ ಮಳೆ ನೀರು ಮತ್ತು ಮಣ್ಣಿಗೆ ಸಂಪೂರ್ಣ ಹಾಳಾಗಿದ್ದು, ಲಕ್ಷಾಂತರ ರೂ ನಷ್ಟ ಸಂಭವಿಸಿದೆ.

ವಿಜಯಪುರ ಜಿಲ್ಲೆಯಲ್ಲಿ ನಾಲತವಾಡ ಪಟ್ಟಣ ಸೇರಿದಂತೆ ಹೋಬಳಿಯಲ್ಲಿ ಹಲವು ಮರಗಳು ಉರುಳಿವೆ . ಹತ್ತಾರು ಎಕರೆಯಲ್ಲಿ ಬೆಳದಿದ್ದ ಬಾಳೆ, ನುಗ್ಗೆ ಗಿಡಗಳು ಮುರಿದು, ಬೆಳೆ ಸಂಪೂರ್ಣ ಹಾಳಾಗಿವೆ.

English summary
Torrential rains were reported across the state on Friday night. Similarly, cloudy weather Rain is likely to occur on Saturday evenings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X