ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗದಲ್ಲಿ ಉತ್ತಮ ಮಳೆ: 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

|
Google Oneindia Kannada News

ಬೆಂಗಳೂರು, ಆಗಸ್ಟ್ 13: ಶಿವಮೊಗ್ಗದಲ್ಲಿ ಉತ್ತಮ ಮಳೆಯಾಗಿದೆ. ಆಗುಂಬೆಯಲ್ಲಿ 15 ಸೆಂ.ಮೀ ಮಳೆಯಾಗಿದೆ. ಉಳಿದೆಡೆ ಸಾಧಾರಣ ಮಳೆಯಾಗಿದೆ. ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Recommended Video

MLA Akhanda Srinivasamurtyಯನ್ನು ತರಾಟೆಗೆ ತೆಗೆದುಕೊಂಡ ಜನ | Oneindia Kannada

ನೈಋತ್ಯ ಮುಂಗಾರಿ ಬಿರುಸುಗೊಂಡಿರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಯವರೆಗೆ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯಲ್ಲಿ 3.2 ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಮುಂಗಾರು ಆರಂಭದ ಬಳಿಕ ದೆಹಲಿಯಲ್ಲಿ ದಾಖಲೆಯ ಮಳೆ: ಟ್ರಾಫಿಕ್ ಜಾಮ್ಮುಂಗಾರು ಆರಂಭದ ಬಳಿಕ ದೆಹಲಿಯಲ್ಲಿ ದಾಖಲೆಯ ಮಳೆ: ಟ್ರಾಫಿಕ್ ಜಾಮ್

ಸಿದ್ದಾಪುರ, ಧರ್ಮಸ್ಥಳ, ಕಾರ್ಕಳ, ಬೆಳ್ತಂಗಡಿ, ಭಾಗಮಂಡಲ, ತೀರ್ಥಹಳ್ಳಿ, ಶೃಂಗೇರಿ, ಕಳಸ, ಕಮ್ಮರಡಿಯಲ್ಲಿ ಭಾರಿ ಮಳಯಾಗಿದೆ.

ಬ್ರಹ್ಮಾವರ, ನಾಪೊಕ್ಲು, ಮೂಡಬಿದಿರೆ, ಜಯಪುರ, ಉಡುಪಿ, ಭಟ್ಕಳ, ಮಡಿಕೇರಿ, ಸುಳ್ಯ, ತಾಳಗುಪ್ಪ, ಹುಂಚದಕಟ್ಟೆ, ಸೋಮವಾರಪೇಟೆ, ಬನವಾಸಿ, ಯಲ್ಲಾಪುರ, ಮಾಣಿ, ಮಾದಪುರ, ತ್ಯಾಗರ್ತಿ, ಆನವಟ್ಟಿ, ಮೂಡಿಗೆರೆ, ಹೊಸಕೋಟೆ, ದೇವನಹಳ್ಳಿ, ಅರಸಳು, ಕಾರವಾರ, ಕೃಷ್ಣರಾಜಸಾಗರ, ಕೊಟ್ಟೂರು, ಹರಪನಹಳ್ಳಿಯಲ್ಲಿ ಸಾಧಾರಣ ಮಳೆಯಾಗಿದೆ.

ಮುಂದಿನ 24 ಗಂಟೆಯಲ್ಲಿ ಕರಾವಳಿ ಭಾಗದಲ್ಲಿ ಮಳೆ

ಮುಂದಿನ 24 ಗಂಟೆಯಲ್ಲಿ ಕರಾವಳಿ ಭಾಗದಲ್ಲಿ ಮಳೆ

ಮುಂದಿನ 24 ಗಂಟೆಯಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಮಳೆಯಾಗಲಿದೆ.ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಸಾಧಾರಣ ಮಳೆಯಾಗಲಿದೆ.

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

ಆಗುಂಬೆಯಲ್ಲಿ 15 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಕೊಲ್ಲೂರು 11, ಧರ್ಮಸ್ಥಳ, ಕಾರ್ಕಳ 8, ಬೆಳ್ತಂಗಡಿ, ಭಾಗಮಂಡಲ, ತೀರ್ಥಹಳ್ಳಿ 7, ಹೊಸನಗರ, ಕೊಪ್ಪ 6, ಉಡುಪಿ, ಭಟ್ಕಳ, ಸಾಗರ, ಮಡಿಕೇರಿ 4, ಸುಳ್ಯ, ಕುಂದಾಪುರ, 3, ಮಂಗಳೂರು, ಪುತ್ತೂರು, ಮೂಡಿಗೆರೆ, ಕೋಲಾರ, ಹೊಸಕೋಟೆ, ದೇವನಹಳ್ಳಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಸತತ ಮಳೆ, ಅಣೆಕಟ್ಟಿನ ನೀರಿನ ಮಟ್ಟ ಎಷ್ಟು?ಶಿವಮೊಗ್ಗ ಜಿಲ್ಲೆಯಲ್ಲಿ ಸತತ ಮಳೆ, ಅಣೆಕಟ್ಟಿನ ನೀರಿನ ಮಟ್ಟ ಎಷ್ಟು?

10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ರಾಜ್ಯದ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಯಾದಗಿರಿ, ಕಲಬುರಗಿ, ಬೀದರ್, ಉತ್ತರಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆ.13ರಂದು ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ತಗ್ಗಲಿದ್ದು, ಕೆಲವೆಡೆ ಸಾಧಾರಣ ಮಳೆಯಾಗಬಹುದು.

ಬೆಟ್ಟ ಕುಸಿದ ಸ್ಥಳದಲ್ಲಿ ಶೋಧ ಚುರುಕು

ಬೆಟ್ಟ ಕುಸಿದ ಸ್ಥಳದಲ್ಲಿ ಶೋಧ ಚುರುಕು

ತಲಕಾವೇರಿಯಲ್ಲಿ ಬೆಟ್ಟ ಕುಸಿತದಿಂದ ಕಣ್ಮರೆಯಾಗಿರುವ ಉಳಿದ ಮೂವರಿಗಾಗಿ ಗುರುವಾರವೂ ಶೋಧ ಮುಂದುವರೆದಿದೆ. ಅರ್ಚಕ ನಾರಾಯಣ ಆಚಾರ್ ಪತ್ನಿಶಾಂತಾ, ಸಹಾಯಕ ಅರ್ಚಕರಾದ ರವಿ ಕಿರಣ ಭಟ್, ಶ್ರೀನಿವಾಸ್ ಅವರಿಗಾಗಿ ಎನ್‌ಡಿಆರ್‌ಎಫ್ ತಂಡ ಹಾಗೂ ಪೊಲೀಸರು ಶೋಧ ನಡೆಸಿದ್ದಾರೆ.

ಕಂಪ್ಲೀಟ್ ರಿಪೋರ್ಟ್; ಕೊಡಗಿನಲ್ಲಿ ತಗ್ಗಿದ ಮಳೆ: ಇದುವರೆಗೂ ಎಲ್ಲೆಲ್ಲಿ ಏನಾಯ್ತು?ಕಂಪ್ಲೀಟ್ ರಿಪೋರ್ಟ್; ಕೊಡಗಿನಲ್ಲಿ ತಗ್ಗಿದ ಮಳೆ: ಇದುವರೆಗೂ ಎಲ್ಲೆಲ್ಲಿ ಏನಾಯ್ತು?

English summary
Indian Meteorological Department issued Rain Yellow alert for 10 districts of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X