ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬುರಗಿ, ಬೀದರ್‌ನಲ್ಲಿ ಧಾರಾಕಾರ ಮಳೆ; ವ್ಯಕ್ತಿ ಸಾವು

|
Google Oneindia Kannada News

ಬೀದರ್, ಸೆಪ್ಟೆಂಬರ್ 17 : ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ವ್ಯಕ್ತಿಯೊಬ್ಬ ಬೈಕ್‌ ಸಮೇತ ಕೊಚ್ಚಿ ಹೋಗಿದ್ದಾನೆ.

ಮೂರು ಜಿಲ್ಲೆಗಳಲ್ಲಿ ಬುಧವಾರ ಭಾರಿ ಮಳೆಯಾಗಿದೆ. ಬೆಳೆದು ನಿಂತಿದ್ದ ಬೆಳೆಗಳಿಗೆ ಹಾನಿಯಾಗಿದ್ದು, ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ಹಳ್ಳಗಳು ತುಂಬಿ ಹರಿಯುತ್ತಿದ್ದು, ಹಲವು ಗ್ರಾಮಗಳ ನಡುವಿನ ಸಂಪರ್ಕ ಕಡಿತವಾಗಿದೆ.

ಕಲಬುರಗಿ, ಬೀದರ್ ಜಿಲ್ಲೆ ಮಳೆ ಅಬ್ಬರ, ಜಲಾಶಯ ವರದಿ ಕಲಬುರಗಿ, ಬೀದರ್ ಜಿಲ್ಲೆ ಮಳೆ ಅಬ್ಬರ, ಜಲಾಶಯ ವರದಿ

ಕಲಬುರಗಿ ನಗರ, ಚಿಂಚೋಳಿ, ಕಾಳಗಿ, ಚಿತ್ತಾಪುರ, ಜೇವರ್ಗಿ, ಕಮಲಾಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಯಾಗಿದೆ. ಕಾಗಿಣಾ ನದಿ ಉಕ್ಕಿ ಹರಿದಿದ್ದು, ಇಂಗಳಗಿ-ಶಹಬಾದ್ ರಸ್ತೆ ಸಂಪರ್ಕ ಕಡಿತವಾಗಿತ್ತು.

ಶಿವಮೊಗ್ಗ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕವಾಗಿ ಸುರಿದ ಮಳೆ ಶಿವಮೊಗ್ಗ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕವಾಗಿ ಸುರಿದ ಮಳೆ

ಬೀದರ್ ಜಿಲ್ಲಾಧಿಕಾರಿಗ ರಾಮಚಂದ್ರನ್ ಬುಧವಾರ ಕಮಲನಗರ ತಾಲೂಕಿನಲ್ಲಿ ಸಂಚಾರ ನಡೆಸಿದರು. ಮಳೆಯಿಂದ ಹಾನಿಯಾದ ಖುದ್ದು ವೀಕ್ಷಣೆ ನಡೆಸಿದರು. ಬಿಸಿಎಂ ಹಾಸ್ಟೆಲ್‌ನಲ್ಲಿನ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದರು.

 ಸೆಪ್ಟೆಂಬರ್ 19ರವರೆಗೂ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ ಸೆಪ್ಟೆಂಬರ್ 19ರವರೆಗೂ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ

ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸಾಯಿಗಾಂವ ಹತ್ತಿರದ ಹಳ್ಳದ ಸೇತುವೆಯನ್ನು ದಾಟುವಾಗ ಬೋಳೆಗಾಂವ ಗ್ರಾಮದ ಮನೋಜ ಗುಂಡಾಜಿ (31) ಎಂಬುವವರು ಕೊಚ್ಚಿ ಹೋಗಿದ್ದಾರೆ. ಭಾಲ್ಕಿ, ಕಮಲನಗರ, ಔರಾದ್‌ ತಾಲೂಕಿನಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.

ಜಿಲ್ಲಾಧಿಕಾರಿಗಳ ಭೇಟಿ

ಜಿಲ್ಲಾಧಿಕಾರಿಗಳ ಭೇಟಿ

ಬೀದರ್ ಜಿಲ್ಲೆಯಲ್ಲಿ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಿಗೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಭೇಟಿ ನೀಡಿ ಹಾನಿಯ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದಾರೆ.

ಕರಾವಳಿಯಲ್ಲಿ ಸಾಧಾರಣ ಮಳೆ

ಕರಾವಳಿಯಲ್ಲಿ ಸಾಧಾರಣ ಮಳೆ

ಶಿವಮೊಗ್ಗ, ದಾವಣಗೆರೆ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ಹೆಚ್ಚು ಮಳೆಯಾಗಿದೆ. ಮಲ್ಪೆ ಬಂದರಿನಿಂದ ಹೊರಟಿದ್ದ 'ಹನುಮತೀರ್ಥ' ಬೋಟ್ ಸೆಂಟ್ ಮೇರಿಸ್ ದ್ವೀಪದ ಬಳಿ ಮುಳುಗಿದೆ. ಬೋಟ್‌ನಲ್ಲಿದ್ದ 29 ಜನರನ್ನು ರಕ್ಷಣೆ ಮಾಡಲಾಗಿದೆ.

Recommended Video

122 ಉಗ್ರರ ಬಂಧನ, ರಾಜ್ಯದಲ್ಲಿ ರಕ್ಕಸರ ಹಾವಳಿ | Oneindia Kannada
ಅಗತ್ಯ ವ್ಯವಸ್ಥೆ ಮಾಡಲು ಸೂಚನೆ

ಅಗತ್ಯ ವ್ಯವಸ್ಥೆ ಮಾಡಲು ಸೂಚನೆ

ಬೀದರ್‌ನ ಕಮಲನಗರ ತಾಲೂಕಿನಲ್ಲಿ ಜಿಲ್ಲಾಧಿಕಾರಿಗಳು ಅತಿವೃಷ್ಠಿಯಿಂದಾದ ಹಾನಿಯನ್ನು ವೀಕ್ಷಣೆ ಮಾಡಿದರು. ಬಿಸಿಎಂ ಹಾಸ್ಟೆಲ್‌ನ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. ಕೇಂದ್ರದಲ್ಲಿರುವ ಜನರಿಗೆ ಸರಿಯಾದ ಊಟ ಮತ್ತು ಇತರ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

English summary
Heavy rain lashed various parts of Bidar district on September 16, One dead. Deputy Commissioner Ramachandran R. visited rain affected areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X