ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಾಡಿ ಘಾಟ್ ಬಂದ್: ಕೈಕೊಟ್ಟ ಸಚಿವ ರೇವಣ್ಣನವರ ವಾಸ್ತುಶಾಸ್ರ!

|
Google Oneindia Kannada News

Recommended Video

ಶಿರಾಡಿಘಾಟ್ ರಸ್ತೆ ಸಂಚಾರ ಮತ್ತೆ ಬಂದ್‌! ರೇವಣ್ಣ ಏನಾಯ್ತು ನಿಮ್ಮ ವಾಸ್ತುಶಾಸ್ತ್ರ !!

ರಾಜಧಾನಿಯಿಂದ ಕರಾವಳಿಗೆ ಪ್ರಮುಖ ಕೊಂಡಿಯಾಗಿರುವ ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತವಾದ ಒಂದೇ ತಿಂಗಳಲ್ಲಿ ಮತ್ತೆ ಬಂದ್ ಆಗಿದೆ. ಮುಂಗಾರು ಮಳೆಯ ಆರ್ಭಟ ಮತ್ತು ಭೂಕುಸಿತಕ್ಕೆ ನಲುಗಿರುವ ಈ ಘಾಟ್ ಅನ್ನು ಸದ್ಯ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ಹಾಸನ ಜಿಲ್ಲಾಡಳಿತ ನಿಷೇಧ ಹೇರಿದೆ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ಕೋಟ್ಯಾಂತರ ರೂಪಾಯಿ ವ್ಯಯಿಸಿ, ಮೂವತ್ತು ವರ್ಷ ಬಾಳಿಕೆ ಬರುತ್ತೆ ಎಂದು ಹೇಳಲಾಗಿದ್ದ ಈ ಘಾಟ್ ಮತ್ತೆ ಕೈಕೊಡಲು ಕಾರಣವೇನು? ಕಳಪೆ ಕಾಮಗಾರಿಯಾ, ಇದರ ಹಿಂದೆ ಏನಾದರೂ ಲಾಬಿ ಇರಬಹುದೇ ಅಥವಾ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣನವರ ಕೈಕೊಟ್ಟ ವಾಸ್ತುಶಾಸ್ತನಾ?

ಶಿರಾಡಿ ಘಾಟ್‌ನಲ್ಲಿ ಮತ್ತೆ ವಾಹನ ಸಂಚಾರ ಬಂದ್?ಶಿರಾಡಿ ಘಾಟ್‌ನಲ್ಲಿ ಮತ್ತೆ ವಾಹನ ಸಂಚಾರ ಬಂದ್?

ಆಗಮಶಾಸ್ತ್ರದ ಪಂಡಿತರು, ಜ್ಯೋತಿಷಿಗಳು, ವಾಸ್ತು ಶಾಸ್ತಜ್ಞರು ನಾಚಿನೀರಾಗುವಂತೆ ಈ ಎಲ್ಲಾ ಪದ್ದತಿಗಳನ್ನು ಸ್ವಲ್ಪ ಮಟ್ಟಿಗೆ ಸಿದ್ದಿಸಿಕೊಂಡಿರುವ ರೇವಣ್ಣ, ಉತ್ತರ ಬಾಗಿಲು, ನಂದಿ ಬಾಗಿಲು, ಈಶಾನ್ಯ ಮೂಲೆ, ವಾಯುವ್ಯ ಮೂಲೆ, ವಾಸ್ತು ಪ್ರಕಾರ ಹೇಗಿರಬೇಕೆಂದು ಕರಾರುವಕ್ಕಾಗಿ ಹೇಳುವಷ್ಟು ಶಾಸ್ತ್ರವನ್ನು ಕರಗತ ಮಾಡಿಕೊಂಡಿದ್ದಾರೆ.

ಕುಮಾರಸ್ವಾಮಿಯವರ ಪ್ರಮಾಣವಚನ, ಸಚಿವ ಸಂಪುಟ ವಿಸ್ತರಣೆ, ತಮ್ಮ ಅಧಿಕೃತ ಸರಕಾರೀ ಬಂಗಲೆಯ ಗೃಹಪ್ರವೇಶದ ಮಹೂರ್ತವನ್ನು ಖುದ್ದು ರೇವಣ್ಣನವರೇ ಅಂತಿಮಗೊಳಿಸಿರುವುದು ಎನ್ನುವ ವಿಚಾರ ಹೊಸದೇನಲ್ಲ. ಮೊನ್ನೆಮೊನ್ನೆ ಗುದ್ದಲಿಪೂಜೆಯ ಕಾರ್ಯಕ್ರಮದಲ್ಲಿ ಪುರೋಹಿತರಿಗೇ ರೇವಣ್ಣ ಪಾಠ ಮಾಡಿದ ವಿಡಿಯೋ ವೈರಲ್ ಆಗಿದ್ದೂ ಗೊತ್ತೇ ಇದೆ..

ಶಿರಾಡಿ ಘಾಟ್ ರಸ್ತೆ : 45ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತಶಿರಾಡಿ ಘಾಟ್ ರಸ್ತೆ : 45ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತ

74 ಕೋಟಿ ರೂ. ವೆಚ್ಚ, 12.38 ಕಿಮೀ ಉದ್ದದ ಕಾಂಕ್ರೀಟ್ ರಸ್ತೆ ಕಾಮಗಾರಿ, ಆರು ತಿಂಗಳಿನಿಂದ ಕುಂಟುತ್ತಾ, ತೆವಳುತ್ತಾ ಜುಲೈ 15ಕ್ಕೆ ಸಂಚಾರಕ್ಕೆ ಮುಕ್ತವಾಗಿತ್ತು. ಸಂಚಾರಕ್ಕೇನೋ ಮುಕ್ತವಾಯಿತು, ತಡೆಗೋಡೆ ನಿರ್ಮಿಸಿಲ್ಲ ಎನ್ನುವ ಕೂಗಿನ ನಡುವೆ, ರಾಜ್ಯ ಸಚಿವರು ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಶಿರಾಡಿ ಘಾಟ್ ಅನ್ನು ಉದ್ಘಾಟನೆ ಮಾಡಲಾಯಿತು. ಆ ವೇಳೆ, ವಾಸ್ತು ಸರಿಯಿಲ್ಲ ಎಂದು ಸಚಿವ ರೇವಣ್ಣ ಉದ್ಘಾಟನೆಯ ದಿಕ್ಕನ್ನೇ ಬದಲಿಸಿದ್ದರು, ಮುಂದೆ ಓದಿ

ಸದಾ ಕಡೆಗಣಿಸಲ್ಪಡುತ್ತಿರುವ ಶಿರಾಡಿ ಘಾಟ್

ಸದಾ ಕಡೆಗಣಿಸಲ್ಪಡುತ್ತಿರುವ ಶಿರಾಡಿ ಘಾಟ್

ಸದಾ ಕಡೆಗಣಿಸಲ್ಪಡುತ್ತಿರುವ ಶಿರಾಡಿ ಘಾಟ್ ಬಹುತೇಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಗೆ ಬರುತ್ತದೆ, ಇನ್ನು ಸ್ವಲ್ಪ PWD ಖಾತೆಯಡಿಗೆ. ಕೇಂದ್ರದಲ್ಲಿ ಯಾವುದೇ ಸರಕಾರವಿರಲಿ, ಪ್ರತೀ ಮಳೆಗಾಲದಲ್ಲಿ ಕೈಕೊಡುವ ಈ ಹೆದ್ದಾರಿಗೆ ಒಂದು ಪರ್ಮನೆಂಟ್ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಉದ್ದೇಶ ಜನಪ್ರತಿನಿಧಿಗಳಿಗೆ ಇಲ್ಲದೇ ಇರುವುದೇ ಇದಕ್ಕೆ ಸಮಸ್ಯೆ. ವರ್ಷವರ್ಷ ಕುಲಗೆಡುವ ಈ ಘಾಟಿಯ ಕಾಮಗಾರಿಯ ಹಿಂದೆ, ಅದ್ಯಾವ ಕಮಿಷನ್ ದಂಧೆ ಅಡಗಿದೆಯೋ ಎಂದು ಜನಸಾಮಾನ್ಯರು ಸಂಶಯ ಪಡುವಂತಾಗಿದೆ.

ಜುಲೈ 15ರಂದು ಉದ್ಘಾಟನೆಗೆ ದಿನ ನಿಗದಿಯಾಗಿತ್ತು

ಜುಲೈ 15ರಂದು ಉದ್ಘಾಟನೆಗೆ ದಿನ ನಿಗದಿಯಾಗಿತ್ತು

ಭಾನುವಾರ (ಜುಲೈ 15) ಶಿರಾಡಿ ಘಾಟ್ ಉದ್ಘಾಟನೆಗೆ ದಿನ ನಿಗದಿಯಾಗಿತ್ತು. ಅದರಂತೇ, ಲೋಕೋಪಯೋಗಿ ಸಚಿವಾಲಯ ಇದಕ್ಕೆ ಸಿದ್ದತೆಯನ್ನೂ ನಡೆಸಿತ್ತು. ಜಿಲ್ಲೆಯ ಸ್ಥಳೀಯ ಸಂಸದರು, ಸಚಿವರು, ಶಾಸಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮಾಧ್ಯಮದವರೂ ಪೂರ್ವಾಭಿಮುಖವಾಗಿ ಕ್ಯಾಮರಾದೊಂದಿಗೆ ಸಜ್ಜಾಗಿದ್ದಾರು.

ನೆರೆ ಪೀಡಿತ, ಭೂ ಕುಸಿತ ಪ್ರದೇಶಗಳಿಗೆ ಎಚ್ ಡಿ ರೇವಣ್ಣ ಭೇಟಿನೆರೆ ಪೀಡಿತ, ಭೂ ಕುಸಿತ ಪ್ರದೇಶಗಳಿಗೆ ಎಚ್ ಡಿ ರೇವಣ್ಣ ಭೇಟಿ

ಪೂರ್ವಾಭಿಮುಖವಾಗಿ ಬರುವಂತೆ ಸೂಚನೆ

ಪೂರ್ವಾಭಿಮುಖವಾಗಿ ಬರುವಂತೆ ಸೂಚನೆ

ಸ್ಥಳಕ್ಕೆ ಆಗಮಿಸಿದ ಸಚಿವ ರೇವಣ್ಣ ಒಂದು ಬಾರಿ ಉದ್ಘಾಟನೆ ಮಾಡುವ (ರಿಬ್ಬನ್ ಕಟ್ಟುಮಾಡುವ ಜಾಗ) ಜಾಗವನ್ನೊಮ್ಮೆ ಪರಿಶೀಲಿಸಿ, ಒಂದೊಳ್ಳೆ ಕೆಲಸವನ್ನು ಪಶ್ಚಿಮಾಭಿಮುಖವಾಗಿ ಯಾರಾದರೂ ಶುರು ಮಾಡುತ್ತಾರಾ? ಪಶ್ಚಿಮ ಎಂದರೆ ಸೂರ್ಯ ಮುಳುಗುವ ದಿಕ್ಕಲ್ಲವೇ ಎಂದು, ಎಲ್ಲಾ ಜನಪ್ರತಿನಿಧಿಗಳನ್ನು ಪೂರ್ವಾಭಿಮುಖವಾಗಿ ಬರುವಂತೆ ಸೂಚಿಸಿದರು. ರೆಡಿಯಾಗಿದ್ದ ಮಾಧ್ಯಮದವರು ತರಾತುರಿಯಲ್ಲಿ ತಮ್ಮ ದಿಕ್ಕನ್ನೂ ಬದಲಾಯಿಸಿದರು.

ಕೇಂದ್ರ ಭೂಸಾರಿಗೆ ಇಲಾಖೆ, ಉತ್ತಮವಾಗಿ ಸ್ಪಂದಿಸುತ್ತಿದೆ

ಕೇಂದ್ರ ಭೂಸಾರಿಗೆ ಇಲಾಖೆ, ಉತ್ತಮವಾಗಿ ಸ್ಪಂದಿಸುತ್ತಿದೆ

ಯು ಟಿ ಖಾದರ್, ರಮಾನಾಥ ರೈ ಸೇರಿದಂತೆ ಅಲ್ಲಿದ್ದ ಎಲ್ಲಾ ಜನಪ್ರತಿನಿಧಿಗಳು ರೇವಣ್ಣ ದಿಕ್ಕು ಬದಲಿಸಿದ್ದಕ್ಕೆ ಏನೂ ತಕರಾರು ಎತ್ತದೇ ನಗುನಗುತ್ತಲೇ ರೇವಣ್ಣನವರ ಮಾತನ್ನು ಆಲಿಸುತ್ತಿದ್ದರು. ನಂತರ ಸಂಸದ ನಳಿನ್ ಕುಮಾರ್ ಕಟೀಲ್ ಟೇಪ್ ಕಟ್ಟು ಮಾಡಿ ಶಿರಾಡಿ ಘಾಟ್ ಅನ್ನು ಉದ್ಘಾಟಿಸಿದರು. ಕೇಂದ್ರ ಭೂಸಾರಿಗೆ ಇಲಾಖೆ, ಉತ್ತಮವಾಗಿ ರಾಜ್ಯದ ಹೆದ್ದಾರಿಗಳ ಅಭಿವೃದ್ದಿಗೆ ಸ್ಪಂದಿಸುತ್ತಿದೆ ಎಂದು ರೇವಣ್ಣ ಹೇಳೋದನ್ನು ಮರೆಯಲಿಲ್ಲ.

ಅಲ್ಲಿಗೆ ರೇವಣ್ಣ ನಂಬಿದ ವಾಸ್ತುಶಾಸ್ತ್ರ ಕಥೆಯೇನು?

ಅಲ್ಲಿಗೆ ರೇವಣ್ಣ ನಂಬಿದ ವಾಸ್ತುಶಾಸ್ತ್ರ ಕಥೆಯೇನು?

ಉದ್ಘಾಟನೆಗೊಂಡ ಒಂದು ತಿಂಗಳಲ್ಲೇ ಶಿರಾಡಿ ಘಾಟ್ ಮತ್ತೆ ಸಂಚಾರಕ್ಕೆ ಬಂದ್ ಆಗಿದೆ. ಅಲ್ಲಲ್ಲಿ ಭೂಕುಸಿತದಿಂದಾಗಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. 74 ಕೋಟಿ ರೂ. ವೆಚ್ಚ, 12.38 ಕಿಮೀ ಉದ್ದದ ಕಾಂಕ್ರೀಟ್ ರಸ್ತೆಯನ್ನು ಮತ್ತೆ ರೆಡಿಮಾಡಲು ಮೂರು ತಿಂಗಳು ಬೇಕಾಗಬಹುದು ಎನ್ನುವ ಸುದ್ದಿಯಿದೆ. ಆದರೆ, ಕೆಲವೊಂದು ಮಾಹಿತಿಗಳ ಪ್ರಕಾರ ಭಾರೀ ವಾಹನಗಳನ್ನು ಬಿಟ್ಟು, ಮಿಕ್ಕ ವಾಹನಗಳಿಗೆ ಸದ್ಯದಲ್ಲೇ ಅನುವು ಮಾಡಿಕೊಡುವ ಸಾಧ್ಯತೆಯಿದೆ. ಆದರೆ, ರೇವಣ್ಣ ಇಷ್ಟೊಂದು ವಾಸ್ತು ನಂಬಿ, ದಿಕ್ಕು ಬದಲಿಸಿ ಉದ್ಘಾಟನೆ ಮಾಡಿದರೂ, ಶಿರಾಡಿ ಘಾಟ್ ಮತ್ತೆ ಕೈಕೊಟ್ಟಿತ್ತಲ್ಲವೇ? ಅಲ್ಲಿಗೆ ರೇವಣ್ಣ ನಂಬಿದ ವಾಸ್ತುಶಾಸ್ತ್ರದ ಕಥೆಯೇನು?

ಜಾತಕ ವಿಮರ್ಶೆ: ಎಚ್.ಡಿ.ರೇವಣ್ಣ ರಾಜಕೀಯ ಔನ್ನತ್ಯಕ್ಕೆ ಕಾಲ ಸನ್ನಿಹಿತಜಾತಕ ವಿಮರ್ಶೆ: ಎಚ್.ಡಿ.ರೇವಣ್ಣ ರಾಜಕೀಯ ಔನ್ನತ್ಯಕ್ಕೆ ಕಾಲ ಸನ್ನಿಹಿತ

English summary
Heavy rain, landslide in several part of the Shiradi Ghat and again ghat closed for traffic: What happened to PWD Minister Revanna's Vastu Shastra? During the inauguration of ghat, Revanna changed the direction of inauguration spot from west to east as per Vastu Shastra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X