ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲಿ ಮಳೆ ರೌದ್ರಾವತಾರ, ಸಂರಕ್ಷಣೆ ಕಾರ್ಯ ವಿಳಂಬ

By Manjunatha
|
Google Oneindia Kannada News

ಕೊಡಗು, ಆಗಸ್ಟ್ 17: ಕೊಡಗು ಜಿಲ್ಲೆಯಾದ್ಯಂತ ಮಳೆ ಭಾರಿ ಅನಾಹುತ ಸೃಷ್ಠಿಸುತ್ತಿದ್ದು, ಮಳೆಯಿಂದಾಗಿ ಕೊಡಗು ದ್ವೀಪದಂತಾಗಿದೆ. ಭಾರಿ ಮಳೆಯ ಕಾರಣ ಪರಿಹಾರ ಕಾರ್ಯಗಳೂ ನಿಧಾನವಾಗುತ್ತಿವೆ.

ಕೊಡಗಿನ ಹಲವು ಕಡೆ ಭೂ ಕುಸಿತ, ಗುಡ್ಡ ಕುಸಿತಗಳು ಉಂಟಾಗಿವೆ. ರಾಷ್ಟ್ರೀಯ ವಿಪತ್ತು ದಳ ಕಾರ್ಯಾಚರಣೆ ನಡೆಸುತ್ತಿದೆಯಾದರೂ, ಅತಿಯಾದ ಮಳೆಯಿಂದಾಗಿ ರಸ್ತೆಗಳು ಬಂದ್ ಆಗಿ ಪರಿಹಾರ ತಂಡ ಜಿಲ್ಲೆಯಲ್ಲಿ ಸಂಚರಿಸಲು ಕೂಡಾ ಕಷ್ಟವಾಗಿದೆ.

ಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯವಾಣಿ ಆರಂಭಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯವಾಣಿ ಆರಂಭ

ಈಗಾಗಲೇ ಹಲವು ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆಯಾದರೂ, ಸತತ ಮಳೆ ರಕ್ಷಣಾ ಕಾರ್ಯಗಳಿಗೆ ಅಡ್ಡಿ ಮಾಡುತ್ತಿದೆ. ರಾಷ್ಟ್ರೀಯ ವಿಪತ್ತು ದಳ, ಅಗ್ನಿಶಾಮಕ ದಳ, ಪೊಲೀಸರು ಸತತ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ವಿದ್ಯುತ್ ಕಂಬಗಳು ಧರೆಗೆ

ವಿದ್ಯುತ್ ಕಂಬಗಳು ಧರೆಗೆ

ಭಾರಿ ಮಳೆಯಿಂದಾಗಿ ಹಲವು ಕಡೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ, ಹಲವು ಗ್ರಾಮಗಳು ನಗರಗಳು ಕತ್ತಲೆಯಲ್ಲಿ ಮುಳುಗಿವೆ. ಹಲವರು ಆಶ್ರಯ ಕಳೆದುಕೊಂಡು, ಗಂಜಿ ಕೇಂದ್ರಕ್ಕೆ ಹುಡುಕುತಿದ್ದಾರೆ.

ವಿದ್ಯುತ್ ಇಲ್ಲ, ಮೊಬೈಲ್ ನೆಟ್‌ವರ್ಕ್‌ ಇಲ್ಲ

ವಿದ್ಯುತ್ ಇಲ್ಲ, ಮೊಬೈಲ್ ನೆಟ್‌ವರ್ಕ್‌ ಇಲ್ಲ

ಸಂಕಷ್ಟಕ್ಕೆ ಸಿಲುಕಿರುವ ಹಲವು ಗ್ರಾಮಗಳಿಗೆ ರಕ್ಷಣಾ ತಂಡಗಳು ಹೋಗಲು ಕೂಡ ಮಳೆ ಮತ್ತು ನೆರೆ ಅವಕಾಶ ಮಾಡಿಕೊಟ್ಟಿಲ್ಲ. ಮೊಬೈಲ್ ಟವರ್‌ಗಳು ಉರುಳಿ ನೆಟ್‌ವರ್ಕ್‌ ಸಿಗದೆ ತಮ್ಮ ಸಂಕಷ್ಟ ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿಯೂ ಜನರಿಲ್ಲ.

ಧಾರಾಕಾರ ಮಳೆ: ವರುಣನ ಆರ್ಭಟ 'ಸಾಕಪ್ಪಾ ಸಾಕು' ಎಂದ ಕೊಡಗು ಜನತೆಧಾರಾಕಾರ ಮಳೆ: ವರುಣನ ಆರ್ಭಟ 'ಸಾಕಪ್ಪಾ ಸಾಕು' ಎಂದ ಕೊಡಗು ಜನತೆ

ಕೊಡಗು ಉಳಿಸಲು ಅಭಿಯಾನ

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ 'ಎಸ್‌ಓಎಸ್‌ ಕೊಡಗು' ಎಂಬ ಹೆಸರಿನಲ್ಲಿ ಕೊಡಗು ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಎನ್‌ಡಿಆರ್‌ಎಫ್ ತಂಡದ ಮೊಬೈಲ್ ಸಂಖ್ಯೆ, ರಕ್ಷಣಾ ಹೆಲಿಕಾಪ್ಟರ್‌ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳಲಾಗುತ್ತಿದೆ.

Array

ಮೊಬೈಲ್ ಸಂಖ್ಯೆ ಹಂಚಿಕೊಳ್ಳಿ

ಎನ್‌ಡಿಆರ್‌ಎಫ್‌ ಮಾಹಿತಿಗೆ 9446568222, ರಕ್ಷಣಾ ಹೆಲಿಕಾಪ್ಟರ್ ಸಂಪರ್ಕಿಸಲು 8281292702 ಕರೆ ಮಾಡಬಹುದು. ಶನಿವಾರ ಸಂತೆ ಯಲ್ಲಿ ಪ್ರವಾಹ ಪರಿಸ್ಥಿತಿಯ ಮಾಹಿತಿಗೆ ಪೊಲೀಸ್-ಮರಿಸ್ವಾಮಿ-9480804953, ಸೋಮವಾರಪೇಟೆಯ ಮಾಹಿತಿಗೆ ಪೊಲೀಸ್-ಶಿವಣ್ಣ-9480804952 ಕರೆ ಮಾಡಬಹುದಾಗಿದೆ.

ಮಳೆ ಪೀಡಿತ ಜಿಲ್ಲೆಗಳಿಗೆ 200 ಕೋಟಿ ಬಿಡುಗಡೆ ಮಾಡಿದ ಸಿಎಂಮಳೆ ಪೀಡಿತ ಜಿಲ್ಲೆಗಳಿಗೆ 200 ಕೋಟಿ ಬಿಡುಗಡೆ ಮಾಡಿದ ಸಿಎಂ

English summary
Heavy rain Kodagu district, many people lost shelter, NDRF and fire brigade team working on rescue mission. but due to heavy rain mission was very slow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X