ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಾದ್ಯಂತ ಧಾರಾಕಾರ ಮಳೆ, ಬೆಂಗಳೂರು ತತ್ತರ

|
Google Oneindia Kannada News

ಬೆಂಗಳೂರು, ಮೇ 29: ಹವಾಮಾನ ಇಲಾಖೆ ಹೇಳಿದಂತೆ ರಾಜ್ಯಾದ್ಯಂತ ಧಾರಾಕಾರ ಮಳೆ ಯಾಗುತ್ತಿದೆ.ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಹಾವೇರಿ, ಬೆಂಗಳೂರು, ಚಿಕ್ಕಮಗಳೂರು, ಕೊಡಗು, ಕೋಲಾರ ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಿದೆ.

ಮುಂಗಾರು ಪೂರ್ವ ಮಳೆ ಇನ್ನೂ ಎರಡು ದಿನ ಮುಂದುವರಿಯಲಿದೆ. ರಾವಳಿ ಮತ್ತು ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಬುಧವಾರ ರಾತ್ರಿಯಿಂದ ಗುರುವಾರದವರೆಗೂ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ 6 ಸೆಂಮೀ ಮಳೆಯಾಗಿದೆ.[ಹವಾಮಾನ ಇಲಾಖೆ ವರದಿ: ಹತ್ತು ಜಿಲ್ಲೆಗಳಲ್ಲಿ ಮಳೆ]

rain

ಬೆಳೆದು ನಿಂತ ಫಸಲುಗಳು ನೀರು ಪಾಲಾಗಿದ್ದು, ಹಿಂಗಾರಿನ ಯಾವ ಬೆಳೆಯೂ ಸರಿಯಾಗಿ ಕೈಗೆ ಸಿಗುವ ಲಕ್ಷಣ ಕಾಣುತ್ತಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಕಣ್ಣಾ ಮುಚ್ಚಾಲೆ ಆಡುತ್ತಿದೆ.

ವಿಂಡ್ ಶೇರ್ ಪರಿಣಾಮ
ದೇಶದ ಪೂರ್ವದಿಂದ ಪಶ್ಚಿಮ ಭಾಗದ ಕಡೆಗೆ ತೇವಾಂಶದ ಗಾಳಿ ಹೆಚ್ಚಾಗುತ್ತಿದ್ದು, ಇದರಿಂದ ಸಮುದ್ರ ಮಟ್ಟದಿಂದ 3.1 ಕಿಮೀನಿಂದ 5.8 ಕಿಮೀ ಎತ್ತರದಲ್ಲಿದೆ. ಸಮುದ್ರದ ಮೇಲ್ಮೈನಲ್ಲಿರುವ ಗಾಳಿ ಒತ್ತಡದ ಈ ಅಂತರದಲ್ಲಿ ಪೂರ್ವದಿಂದ ಉತ್ತರಕ್ಕೆ ಶೀತ ಮಾರುತ ಬೀಸುತ್ತಿದೆ. ಇದರ ಪರಿಣಾಮ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡೂ ಕಡೆಯಿಂದ ತೇವಾಂಶ ಹೆಚ್ಚುತ್ತಿದೆ. ಇದು ಕರಾವಳಿ ಮತು ದಕ್ಷಿಣ ಒಳನಾಡಿಗೆ ಹೆಚ್ಚು ಮಳೆ ಸುರಿಯುವಂತೆ ಮಾಡಿದೆ.[ರಣಬಿಸಿಲಿಗೆ ಸುಡುತ್ತಿದೆ ಕರ್ನಾಟಕ: 2 ದಿನದಲ್ಲಿ ಮಳೆ]

ಜೂನ್ 4ಕ್ಕೆ ಮುಂಗಾರು
ನಿರೀಕ್ಷೆಯಂತೆ ಜೂನ್ 4ಕ್ಕೆ ಮುಂಗಾರು ರಾಜ್ಯವನ್ನು ಪ್ರವೇಶ ಮಾಡಬೇಕಿದೆ. ಮೇ 30 ಕ್ಕೆ ಮಾರುತ ಕೇರಳ ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಧಾರಾಕಾರ ಮಳೆಗೆ ಬೆಂಗಳೂರು ತತ್ತರ
ಹವಾಮಾನ ಇಲಾಖೆ ವರದಿಯಂತೆ ಶುಕ್ರವಾರ ಸಂಜೆ ಬೆಂಗಳೂರು ಮಹಾನಗರದಲ್ಲಿ ಮಳೆ ಆರಂಭವಾಗಿದೆ. ನಗರದ ವಿವಿಧ ಭಾಗದಲ್ಲಿ ಸಂಜೆ ಆರು ಗಂಟೆಗೆ ಆರಂಭವಾದ ಮಳೆ ಮುಂದುವರಿದಿದೆ.[ಮಳೆ ಶುರುವಾದರೆ ಬೆಂಗಳೂರಲ್ಲಿ ಆತಂಕದ ಹೊಳೆ]

rain

ಬೆಂಗಳೂರು ಆಡುಗೋಡಿ ಸಮೀಪದ ಆನೆಪಾಳ್ಯದಲ್ಲಿ ಬೃಹತ್ ಗಾತ್ರದ ಮರವೊಂದು ಧರೆಗುರುಳಿದ್ದು ನಾಲ್ವರು ಮೃತಪಟ್ಟಿದ್ದಾರೆ. ಎರಡು ಕಾರು ಮತ್ತು ದ್ವಿಚಕ್ರ ವಾಹನ ಜಖಂ ಗೊಂಡಿದೆ. ಪಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಬಸವನಗುಡಿ, ಜಯನಗರ, ಮೆಜೆಸ್ಟಿಕ್ , ಕೆಆರ್ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಕೆಲಸ ಮುಗಿಸಿ ಮನೆಗೆ ಹಿಂದಿರುಗಬೇಕಾಗಿದ್ದವರು ಮಧ್ಯ ದಾರಿಯಲ್ಲಿ ಸಿಕ್ಕಿಕೊಂಡಿದ್ದಾರೆ.

ಗಾಂಧಿ ನಗರ, ಶಿವಾಜಿನಗರ, ಜಯನಗರ, ಮಾರತ್ ಹಳ್ಳಿ, ವಿಜಯನಗರ, ಬಸವನಗುಡಿ, ಜಯನಗರ ಸೇರಿದಂತೆ ಹಲವೆಡೆ ಮರಗಳು ಧರೆಗುರುಳಿವೆ. ರಿಂಗ್ ರಸ್ತೆ ಯಲ್ಲಿ ಟ್ರಾಫಿಕ್ ಜಾಮ್ ಅನುಭವಿಸುತ್ತಿದ್ದಾರೆ.

ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದು ಬೆಂಗಳೂರು ಪ್ರೆಸ್ ಕ್ಲಬ್ ಬಳಿ ಮರಗಳೆರಡು ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕಾರು ಜಖಂ ಗೊಂಡಿದೆ. ಹವಾಮಾನ ಇಲಾಳೆ ಮೂರು ದಿನಗಳ ಕಾಲ ಮಳೆ ಬೀಳಲಿದೆ ಎಂದು ತಿಳಿಸಿತ್ತು. ನಿನ್ನೆ ರಾಜ್ಯದ ವಿವಿಧೆಡೆ ಗುಡುಗಿದ್ದ ವರುಣ ಶುಕ್ರವಾರ ಸಂಜೆ ಬೆಂಗಳೂರಿಗೆ ಕಾಲಿಟ್ಟಿದ್ದಾನೆ.

English summary
The unseasonal rain and thundershowers continued in several parts of Karnataka, Friday may 29. Many parts of Bengaluru have receiving heavy rainfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X