ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಣಬಿಸಿಲಿಗೆ ಸುಡುತ್ತಿದೆ ಕರ್ನಾಟಕ: 2 ದಿನದಲ್ಲಿ ಮಳೆ

|
Google Oneindia Kannada News

ಬೆಂಗಳೂರು, ಮೇ 26: ರಾಜ್ಯದಲ್ಲೂ ಬಿಸಿಲಿನ ಧಗೆ ತನ್ನ ಪ್ರತಾಪ ಮುಂದುವರಿಸಿದೆ. ಹೈದ್ರಾಬಾದ್ ಕರ್ನಾಟಕ ಭಾಗವಲ್ಲದೇ ಮಲೆನಾಡು ಮತ್ತು ದಕ್ಷಿಣ ಒಳನಾಡು ಭಾಗಗಳೂ ಬಿಸಿಯಾಗಿವೆ.

ಕಲಬುರಗಿ, ಬೀದರ್, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕಳೆದ 3-4 ದಿನಗಳಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಸರಾಸರಿ 42 ರಿಂದ 46 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ 38 ರಿಂದ 39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.[ರಾಜ್ಯಕ್ಕೆ ಮಾನ್ಸೂನ್ ಪ್ರವೇಶ ಕೊಂಚ ವಿಳಂಬ]

heat

ಹೈದ್ರಾಬಾದ್ ಕರ್ನಾಟಕದ ಹಲವು ಭಾಗದಲ್ಲಿ ಬಿಸಿಲಿನ ವೇಳೆ ಅಘೋಷಿತ ಬಂದ್ ನಿರ್ಮಾಣವಾಗುತ್ತಿದೆ. ಕುಡಿಯುವ ನೀರಿಗೆ ಸಮಸ್ಯೆ ಕಂಡುಬರುತ್ತಿದ್ದು ಜನ ದ್ರವಾಹಾರಕ್ಕೆ ಮೊರೆ ಹೋಗುತ್ತಿದ್ದಾರೆ.

ಮೇ 27 ರಿಂದ ಮಳೆ ಆರಂಭವಾಗುವ ನಿರೀಕ್ಷೆ ಇದ್ದು ಮೂರು ದಿಗಳ ಕಾಲ ಮುಂದುವರಿಯಲಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.[ದೇಶದ ಮಾನ್ಸೂನ್ ಮೇಲೆ 'ಎಲ್ ನಿನೋ' ಕರಾಳ ಛಾಯೆ]

ಬೆಂಗಳೂರಿನಲ್ಲಿ ಸೋಮವಾರ 33 ಡಿಗ್ರಿ ಸೆಲ್ಸಿಯಸ್ ಉಷ್ಠಾಂಶ ದಾಖಲಾಗಿತ್ತು. ಬೆಂಗಳೂರಿನಲ್ಲಿ ಬಿಸಿಲಿನ ತಾಪ ಕೊಂಚ ಕಡಿಮೆ ಇದೆ ಎಂದೇ ಹೇಳಬಹುದು. ಆಗಾಗ ಸುರಿಯುತ್ತಿರುವ ಮಳೆ ತಾಪ ಏರಿಕೆಯಾಗದಿರಲು ಕಾರಣವಾಗಿದೆ.

* ಬಿಸಿಲಿನ ತಾಪ
ಬೀದರ್- 42.2 ಡಿಗ್ರಿ ಸೆ.
ಕಲಬುರಗಿ- 42 ಡಿಗ್ರಿ ಸೆ.
ಬಾಗಲಕೋಟೆ- 40 ಡಿಗ್ರಿ ಸೆ.
ಧಾರವಾಡ- 38 ಡಿಗ್ರಿ ಸೆ.
ಗದಗ - 38 ಡಿಗ್ರಿ ಸೆ.
ಶಿವಮೊಗ್ಗ- 38 ಡಿಗ್ರಿ ಸೆ.
ಮಂಗಳೂರು -34 ಡಿಗ್ರಿ ಸೆ.
ಹಾವೇರಿ-34 ಡಿಗ್ರಿ ಸೆ.
ಮೈಸೂರು-32 ಡಿಗ್ರಿ ಸೆ. [ಬಿಸಿಲಿನ ಹೊಡೆತಕ್ಕೆ 600ಕ್ಕೂ ಅಧಿಕ ಮಂದಿ ಬಲಿ]

ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಸಿಲಿನ ಝಳಕ್ಕೆ ಮತ್ತೆ 700 ಮಂದಿ ಬಲಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಭಾನುವಾರ ಅತಿ ಹೆಚ್ಚು ತಾಪಮಾನ ದಾಖಲಾಗಿದ್ದು, ಐದು ವರ್ಷಗಳ ಅವಧಿಯಲ್ಲಿ ಹೆಚ್ಚಿನ ಉಷ್ಣಾಂಶ ದಾಖಲಾಗಿತ್ತು. ಲಖನೌದಲ್ಲಿ 44.7 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಒಡಿಶಾದ 9 ನಗರಗಳ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು.

English summary
Extreme heat wave conditions prevailed in Hyderabad Karnataka and parts of Bombay Karnataka with Bidar for the first time in the season recording a maximum temperature of 45 degrees Celsius, as per the observations recorded by the India Meteorological Department.The maximum temperature recorded in Bidar [42.2] was also the highest in the recent years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X