ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 8 ರಿಂದ ಜಂಗಲ್ ಲಾಡ್ಜ್, ರೆಸಾರ್ಟ್ ಆರಂಭಕ್ಕೆ ಮಾರ್ಗಸೂಚಿ

|
Google Oneindia Kannada News

ಬೆಂಗಳೂರು, ಜೂನ್ 4: ಕೊರೊನಾವೈರಸ್ ಹರಡದಂತೆ ವಿಧಿಸಲಾಗಿರುವ ಲಾಕ್ಡೌನ್ ಸದ್ಯ ಕಂಟೈನ್ಮೆಂಟ್ ವಲಯಕ್ಕೆ ಸೀಮಿತವಾಗಲಿದೆ. ಜೂನ್ 8ರಿಂದ ಬಹುತೇಕ ವಾಣಿಜ್ಯ ಉದ್ದೇಶಿತ ಕಾರ್ಯಚಟುವಟಿಕೆಗಳಿಗೆ ಕರ್ನಾಟಕ ತೆರೆದುಕೊಳ್ಳುತ್ತಿದೆ.

Recommended Video

ಕೊರೊನ ಕಾರಣ SP Road ಈಗ ಸಂಪೂರ್ಣ ಸೀಲ್ ಡೌನ್ | Oneindia Kannada

ಕೇಂದ್ರ ಆರೋಗ್ಯ ಇಲಾಖೆ ಗುರುವಾರದಂದು ನೀಡಿರುವ ಕಾರ್ಯ ನಿರ್ವಹಣಾ ಮಾರ್ಗಸೂಚಿಯಂತೆ ಕರ್ನಾಟಕದಲ್ಲಿ ಜೂನ್ 8ರಿಂದ ಹೋಟೆಲ್, ರೆಸ್ಟೋರೆಂಟ್,ಕಚೇರಿ, ಧಾರ್ಮಿಕ ಕೇಂದ್ರಗಳ ಕಾರ್ಯ ನಿರ್ವಹಿಸಲಿದ್ದು, ಇದಕ್ಕೆ ಬೇಕಾದ ಅಗತ್ಯ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.

ಭಾರತದಲ್ಲಿ ದೇವಸ್ಥಾನ, ಮಂದಿರ, ಚರ್ಚ್ ಪ್ರವೇಶಕ್ಕೆ ಹೊಸ ರೂಲ್ಸ್ಭಾರತದಲ್ಲಿ ದೇವಸ್ಥಾನ, ಮಂದಿರ, ಚರ್ಚ್ ಪ್ರವೇಶಕ್ಕೆ ಹೊಸ ರೂಲ್ಸ್

ಇದೇ ರೀತಿ ಅರಣ್ಯ ವಲಯದಲ್ಲಿರುವ ಸಫಾರಿ, ಚಾರಣ ಇತ್ಯಾದಿ ಚಟುವಟಿಕೆ, ರೆಸಾರ್ಟ್, ಜಂಗಲ್ ಲಾಡ್ಜ್ ಗಳ ಚಟುವಟಿಕೆಗಳು ಜೂನ್ 8ರಿಂದ ಆರಂಭವಾಗಲಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಟಿ.ಕೆ ಅನಿಲ್ ಕುಮಾರ್ ಅವರು ಸರ್ಕಾರದ ಆದೇಶದ ಪ್ರತಿಯಲ್ಲಿ ಹೇಳಿದ್ದಾರೆ.

ಕಂಟೈನ್ಮೆಂಟ್ ಜೋನ್ ಗಳಿಗೆ ಮಾತ್ರ ಲಾಕ್ಡೌನ್

ಕಂಟೈನ್ಮೆಂಟ್ ಜೋನ್ ಗಳಿಗೆ ಮಾತ್ರ ಲಾಕ್ಡೌನ್

ಮೇ 31ರ ಆದೇಶದಂತೆ ಕಂಟೈನ್ಮೆಂಟ್ ಜೋನ್ ಗಳಿಗೆ ಮಾತ್ರ ಲಾಕ್ಡೌನ್ ಮುಂದುವರೆಸಲಾಗುತ್ತದೆ ಹಾಗೂ ಜೂನ್ 30ರ ತನಕ ಈ ವಲಯಗಳಲ್ಲಿ ಈ ಹಿಂದಿನ ಮಾರ್ಗಸೂಚಿಗಳು ಜಾರಿಯಲ್ಲಿರಲಿವೆ. ಅರಣ್ಯ ಮತ್ತು ವಿಹಾರ ಧಾಮ ಸಂಸ್ಥೆಯವರು ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಅರಣ್ಯ ಪ್ರದೇಶಗಳಲ್ಲಿ ಸಫಾರಿ, ಚಾರಣ ಮತ್ತು ಇತರೆ ಚಟುವಟಿಕೆಗಳನ್ನು ಪುನಃ ತೆರೆಯಲು ಅನುಮತಿ ನೀಡಲಾಗಿದೆ.

ಜೂನ್ 8ರಿಂದ ಜಂಗಲ್ ಲಾಡ್ಜ್, ರೆಸಾರ್ಟ್ ಆರಂಭ

ಜೂನ್ 8ರಿಂದ ಜಂಗಲ್ ಲಾಡ್ಜ್, ರೆಸಾರ್ಟ್ ಆರಂಭ

ಜೂನ್ 8ರಿಂದ ಜಂಗಲ್ ಲಾಡ್ಜ್, ರೆಸಾರ್ಟ್ ಮತ್ತೆ ಆರಂಭಿಸಲು ಅನುಮತಿ ನೀಡಲಾಗಿದೆ. ಇದು ಸಫಾರಿ, ಚಾರಣ ಇತರೆ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿ ಹಂತದಲ್ಲೂ ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಪ್ರತಿಯೊಬ್ಬರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆರೋಗ್ಯ ಸೇತು, ಆಪ್ತಮಿತ್ರ ಆಪ್ ಬಳಕೆ ಕಡ್ಡಾಯವಾಗಿದೆ. ಕೊವಿಡ್ ರೋಗ ಲಕ್ಷಣ ಇಲ್ಲದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.

ಕೊರೊನಾ ವೈರಸ್ ಸೋಂಕು ಪತ್ತೆಯಾದರೆ?

ಕೊರೊನಾ ವೈರಸ್ ಸೋಂಕು ಪತ್ತೆಯಾದರೆ?

ಒಂದು ವೇಳೆ ರೆಸಾರ್ಟ್ ಅಥವಾ ಜಂಗಲ್ ಲಾಡ್ಜ್ ನಲ್ಲಿರುವ ಸಿಬ್ಬಂದಿ ಅಥವಾ ಪ್ರವಾಸಿಗರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದಲ್ಲಿ ಸ್ಥಳದಲ್ಲಿರುವ ಎಲ್ಲರನ್ನೂ ಐಸೋಲೇಷನ್ ನಲ್ಲಿ ಇರಿಸಲು ಸೂಚಿಸಲಾಗಿದೆ.
* ಮುಖಕ್ಕೆ ಬಟ್ಟೆ ಅಥವಾ ಮಾಸ್ಕ್ ಗಳನ್ನು ನೀಡುವುದು ಹಾಗೂ ವೈದ್ಯರಿಂದ ತಪಾಸಣೆಗೆ ಒಳಪಡಿಸುವುದು.
* ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಅಥವಾ ಜಿಲ್ಲಾ ಮತ್ತು ರಾಜ್ಯ ಸರ್ಕಾರದ ಸಹಾಯವಾಣಿಗೆ ಮಾಹಿತಿ ನೀಡಬೇಕಾಗುತ್ತದೆ.
* ಸೋಂಕಿತನ ಜೊತೆಗೆ ಸಂಪರ್ಕರದಲ್ಲಿದ್ದ ಜನರನ್ನೂ ಕೂಡಾ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ.
* ಸೋಂಕಿತನ ಜೊತೆಗೆ ಸಂಪರ್ಕ ಹೊಂದಿದ್ದಕ್ಕಾಗಿ ಸೋಂಕು ಇಲ್ಲದಿದ್ದರೂ ಶಂಕೆ ಮೇಲೆ ಐಸೋಲೇಷನ್ ನಲ್ಲಿ ಇರಿಸಲಾಗುತ್ತದೆ.

ಆರೋಗ್ಯ ಇಲಾಖೆ ಸಾಮಾನ್ಯ ಮಾರ್ಗಸೂಚಿ ಅನ್ವಯ

ಆರೋಗ್ಯ ಇಲಾಖೆ ಸಾಮಾನ್ಯ ಮಾರ್ಗಸೂಚಿ ಅನ್ವಯ

* ಪ್ರತಿಯೊಬ್ಬ ವ್ಯಕ್ತಿಯು ಸಾರ್ವಜನಿಕ ಪ್ರದೇಶಗಳಲ್ಲಿ ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಂಡಿರಬೇಕು. ಈ ನಿಯಮ ರೆಸಾರ್ಟ್ ನಲ್ಲಿರುವಾಗಲೂ ಅನ್ವಯವಾಗಲಿದೆ.
* ವಾಯು ವಿಹಾರ ಜಾಗಿಂಗ್, ರನ್ನಿಂಗ್ ಸಂದರ್ಭದ ಹೊರತು ಪಡಿಸಿ ಮಿಕ್ಕಂತೆ ಮುಖಕ್ಕೆ ಬಟ್ಟೆ ಅಥವಾ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
* ಆಗಾಗ ಸೋಪ್ ನಿಂದ ಕನಿಷ್ಠ 40-60 ಸೆಕೆಂಡ್ ಗಳ ಕಾಲ ಕೈತೊಳೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು.
* ಸಾಧ್ಯವಾದಲ್ಲಿ ಆಲ್ಕೋಹಾಲ್ ಅಂಶವುಳ್ಳ ಸ್ಯಾನಿಟೈಸರ್ ನಿಂದ 20 ಸೆಕೆಂಡ್ ಕೈಗಳನ್ನು ತೊಳೆಯಿರಿ.
* ಕೆಮ್ಮುವಾಗ, ಸೀನುವಾಗ ಬೇರೆಯವರಿಂದ ಅಂತರ ಕಾಯ್ದುಕೊಳ್ಳಿರಿ ಹಾಗೂ ಕೈ ಹಾಗೂ ಕರ್ಚಿಫ್ ಗಳನ್ನು ಹಿಡಿದುಕೊಳ್ಳಿರಿ.
* ಆರೋಗ್ಯದಲ್ಲಿ ಕೊಂಚ ಏರುಪೇರು ಆದರೂ ಜಿಲ್ಲಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿರಿ.
* ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದನ್ನು ನಿರ್ಬಂಧಿಸಲಾಗಿದೆ.
* ಎಲ್ಲರೂ ನಿಮ್ಮ ನಿಮ್ಮ ಮೊಬೈಲ್ ನಲ್ಲಿ ಆರೋಗ್ಯ ಸೇತು ಆ್ಯಪ್ ನ್ನು ಡೌನ್ ಲೋಡ್ ಮಾಡಿಕೊಂಡು ಬಳಸಿ.

English summary
The Health Ministry on Thursday released the standard operating procedure for Jungle lodges and resorts in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X