• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇ-ಸಿಗರೇಟ್, ಇ-ಹುಕ್ಕಾ ನಿಷೇಧಕ್ಕೆ ಕೇಂದ್ರದಿಂದ ಎಲ್ಲ ರಾಜ್ಯಗಳಿಗೆ ಸೂಚನೆ

By Nayana
|

ಬೆಂಗಳೂರು, ಆಗಸ್ಟ್ 30: ಯುವಪೀಳಿಗೆ ಸಿಗರೇಟ್, ಮದ್ಯಪಾನ, ಡ್ರಗ್ಸ್ ಕಡೆಗೆ ಆಕರ್ಷಿತರಾಗಿ ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇವುಗಳ ಸಾಲಿಗೆ ಎಲೆಕ್ಟ್ರಾನಿಕ್ ಸಿಗರೇಟ್ ಕೂಡ ಸೇರ್ಪಡೆಯಾಗಿತ್ತು.

ಇದೀಗ ಕೇಂದ್ರ ಸರ್ಕಾರವು ಎಲೆಕ್ಟ್ರಾನಿಕ್ ಸಿಗರೇಟ್, ವೇಪ್, ಇ-ಶೀಶಾ, ಇ-ಹುಕ್ಕಾಗಳನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ. ಇ-ಸಿಗರೇಟ್ ಸೇವನೆಯಿಂದ ಗರ್ಭಿಣಿಯರು, ಅಪ್ರಾಪ್ತರು, ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

ಧೂಮಪಾನಿಗಳ ಸಂಖ್ಯೆ: ಚೀನಾದ ಹಿಂದೆಯೇ ಇದೆ ಭಾರತ!

ಇ-ಸಿಗರೇಟ್ ಗಳ ಬೆದರಿಕೆಗೆ ತಡೆಯೊಡ್ಡುವ ಕ್ರಮ ಕೈಗೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಳಂಬ ತೋರುತ್ತಿದೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇ-ಸಿಗರೇಟ್ ನಿಷೇಧಿಸುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆಯನ್ನು ರವಾನಿಸಿದೆ.

ತಂಬಾಕು ಬದುಕು ತಂಬಿಸುವ ಮುನ್ನ ಜಾಗೃತರಾಗಿ...

ಅತಿಯಾದ ಹೊಗೆ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ದೃಷ್ಟಿಯಿಂದ ಮಾರುಕಟ್ಟೆಗೆ ಇ- ಸಿಗರೇಟ್ ಬಂದಿದೆ. ಆದರೆ ಇ-ಸಿಗರೇಟ್ ಉಪಕಾರದ ಬದಲು ಅಪಕಾರವೇ ಹೆಚ್ಚು. ಧೂಮಪಾನದ ಚಟದಿಂದ ಪಾರಾಗಲು ಇ- ಸಿಗರೇಟ್ ಸೇದಲು ಆರಂಭಿಸಿದ್ದ ಎಷ್ಟೋ ಜನರು ಈಗ ಅದಕ್ಕೆ ದಾಸರಾಗಿಬಿಟ್ಟಿದ್ದಾರೆ.

ಹಾನಿಕಾರಕ ನಿಕೋಟಿನ್ ಇ-ಸಿಗರೇಟ್ ಮೂಲಕ ಜನರನ್ನು ತಲುಪುತ್ತಿದೆ

ಹಾನಿಕಾರಕ ನಿಕೋಟಿನ್ ಇ-ಸಿಗರೇಟ್ ಮೂಲಕ ಜನರನ್ನು ತಲುಪುತ್ತಿದೆ

ಆಕರ್ಷಕವಾಗಿ ನಿಕೊಟಿನ್ ಅನ್ನು ಇ-ಸಿಗರೇಟ್ ಗಳ ಮೂಲಕ ಕಂಪನಿಗಳು ಜನರಿಗೆ ತಲುಪಿಸುತ್ತಿವೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ತಂಬಾಕು ಸಲಕರಣೆಗಳ ಫಿಲಿಪ್ ಮೋರಿಸ್‌ನಂಥ ಅಂತಾರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಬರಲು ಯೋಜನೆ ರೂಪಿಸುತ್ತಿದೆ.

ಇ-ಸಿಗರೇಟ್ ಭಾರಿ ಡೆಂಜರ್

ಇ-ಸಿಗರೇಟ್ ಭಾರಿ ಡೆಂಜರ್

ಇ-ಸಿಗರೇಟ್ ನಲ್ಲಿ ದ್ರವರೂಪದ ನಿಕೋಟಿನ್ ಇರುತ್ತದೆ. ಹೀಗಾಗಿ ಸಾಮಾನ್ಯ ಸಿಗರೇಟಿಗಿಂತಲೂ ಇ-ಸಿಗರೇಟುಗಳ ಬಳಕೆಯಿಂದ ಅಪಾಯ ದೊಡ್ಡ ಮಟ್ಟದ್ದಾಗಿರುತ್ತದೆ. ಕ್ಯಾನ್ಸರ್ ನ ಅಪಾಯವೂ ಇದೆ, ದೀರ್ಘಕಾಲದಲ್ಲಿ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹೋಟೆಲ್, ಬಾರ್‌ನಲ್ಲಿ ಧಮ್ ಹೊಡೆಯಂಗಿಲ್ಲ: ಸ್ಮೋಕ್ ಝೋನ್ ಕಡ್ಡಾಯ

ಧೂಮಪಾನ ಚಟದಿಂದ ಮುಕ್ತಿ ನೀಡಲು ಇ-ಸಿಗರೇಟ್ ಕಂಡುಹಿಡಿಯಲಾಗಿತ್ತು

ಧೂಮಪಾನ ಚಟದಿಂದ ಮುಕ್ತಿ ನೀಡಲು ಇ-ಸಿಗರೇಟ್ ಕಂಡುಹಿಡಿಯಲಾಗಿತ್ತು

ಇ-ಸಿಗರೇಟ್ನ ಅತ್ಯಂತ ದೊಡ್ಡ ವಿಪರ್ಯಾಸವೆಂದರೆ ಧೂಮ್ರಪಾನದ ಚಟದಿಂದ ಮುಕ್ತಿ ನೀಡಲು ಅದನ್ನು ಪರಿಚಯಿಸಲಾಗಿತ್ತಾದರೂ ಹೆಚ್ಚಿನ ಪ್ರಕರಣಗಳಲ್ಲಿ ಅದು ವ್ಯಕ್ತಿಯನ್ನು ತಂಬಾಕಿನ ದಾಸನನ್ನಾಗಿಸಿದೆ. ಇ-ಸಿಗರೇಟ್ ಬಳಸುವ ಹದಿಹರೆಯದವರಲ್ಲಿ ತಂಬಾಕಿನ ಚಟ ಉಂಟಾಗುವ ಸಾಧ್ಯತೆ ನಾಲ್ಕು ಪಟ್ಟು ಹೆಚ್ಚಿದೆ ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ಬೆಳಕಿಗೆ ತಂದಿದೆ.

ಏನಿದು ಇ-ಸಿಗರೇಟ್?

ಏನಿದು ಇ-ಸಿಗರೇಟ್?

ಇ-ಮಯ ಎಂಬುದು ಸಿಗರೇಟ್ ನ್ನು ಸಹ ಬಿಟ್ಟಿಲ್ಲ. ತಂಬಾಕಿನ ಸಿಗರೇಟ್ ಗಿಂತ ಇ- ಸಿಗರೇಟ್ ಭಿನ್ನವಾಗಿರುತ್ತದೆ. ಬ್ಯಾಟರಿ ಚಾಲಿತ ಇ-ಸಿಗರೇಟ್ ನಲ್ಲಿ ತಂಬಾಕು ಇರೋದಿಲ್ಲ. ನಿಕೋಟಿನ್ ಮೊದಲಾದ ರಾಸಾಯನಿಕ ವಸ್ತುಗಳನ್ನು ಒಳಗೊಂಡಿರುವ ದ್ರವದ ಕಾರ್ಟಿಜ್ ಅನ್ನು ಬಿಸಿ ಮಾಡಿ ಅದರಿಂದ ಬರುವ ಹಬೆಯನ್ನು ಉಸಿರಾಡುವ ಮೂಲಕ ಎಲೆಕ್ಟ್ರಾನಿಕ್ ಸಿಗರೇಟ್ ಅನ್ನು ಸೇದಬಹುದಾಗಿದೆ.

2003ರಲ್ಲಿ ಚೀನಾ ಔಷಧ ವ್ಯಾಪಾರಿ ಹೋನ್ ಲಿಕ್ ಎಂಬಾತ ಈ ಆಧುನಿಕ ಇ-ಸಿಗರೇಟ್ ಅನ್ನು ಆವಿಷ್ಕರಿಸಿದ್ದ. ಇ-ಸಿಗರೇಟ್ ಆ್ಯಪಲ್, ಮ್ಯಾಂಗೋ, ಚೆರಿ ಹೀಗೆ ವಿವಿಧ ಫ್ಲೇವರ್ ಗಳು ದೊರೆಯುತ್ತದೆ. ಇ-ಸಿಗರೇಟ್ ಅನ್ನು ಜೇಬಲ್ಲಿ ಸುಲಭವಾಗಿ ಇಟ್ಟುಕೊಳ್ಳಬಹುದಾಗಿದೆ. ಈ ಸಾಧನ 300ರಿಂದ 3,500 ರುಪಾಯಿಯವರೆಗೂ ದೊರೆಯುತ್ತದೆ.

ಬೆಂಗಳೂರಿನ ಬಾರ್, ಹೋಟೆಲ್ ಗಳಲ್ಲಿ ಧೂಮಪಾನ ನಿಷೇಧ

ಬೆಂಗಳೂರಿನ ಬಾರ್, ಹೋಟೆಲ್ ಗಳಲ್ಲಿ ಧೂಮಪಾನ ನಿಷೇಧ

ಬೆಂಗಳೂರಿನ ಬಾರ್‌, ಹೋಟೆಲ್, ಕ್ಲಬ್ ಗಳನ್ನು ಸಾರ್ವಜನಿಕವಾಗಿ ಧೂಮಪಾನವನ್ನು ನಿಷೇಧಿಸಲಾಗಿದೆ. ಒಂದೊಮ್ಮೆ ಧೂಮಪಾನಕ್ಕೆ ಅವಕಾಶ ನೀಡುವುದಾದರೆ ಪ್ರತ್ಯೇಕ ಸ್ಮೋಕಿಂಗ್ ಝೋನ್ ತೆರೆಯಲೇ ಬೇಕಾಗಿದೆ. ಒಂದಮ್ಮೆ ಆ ರೀತಿ ಮಾಡದಿದ್ದಲ್ಲಿ ಉದ್ದಿಮೆ ಪರವಾನಗಿ ರದ್ದು ಮಾಡಲಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.

English summary
According to Delhi high court order, union health ministry has directed all the state governments to impose strictly prohibition on e- cigarette and related drugs which are harmful to health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more