• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಘೋಷಿತ ಲಾಕ್‌ಡೌನ್‌ ಯಾಕೆ ಅಂದರೆ, ಸಚಿವ ಸುಧಾಕರ್ ಉತ್ತರ ಕೊಟ್ಟಿದ್ದು ಹೀಗೆ!

|

ಬೆಂಗಳೂರು, ಏಪ್ರಿಲ್ 23: ಅಗತ್ಯ ವಸ್ತು, ಸೇವೆ ಹೊರತು ಪಡಿಸಿ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಿದ ಸರಕಾರದ ನಿರ್ಧಾರ ವ್ಯಾಪಕ ಟೀಕೆಗೆಗೊಳಗಾಗಿದೆ. ಈ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರನ್ನು ಕೇಳಿದಾಗ, ಪ್ರಾಣಾಯಾಮ ಮಾಡಿ ಎನ್ನುವ ಉತ್ತರವನ್ನು ನೀಡಿದ್ದಾರೆ.

   Lockdown ವಿಚಾರವಾಗಿ ಸ್ಪಷ್ಟನೆ ನೀಡಿದ Dr. Sudhakar | Oneindia Kannada

   "ಕೆಲವರು ಮಾರ್ಗಸೂಚಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ತಪ್ಪು ಸಂದೇಶವನ್ನು ರವಾನಿಸುತ್ತಿದ್ದಾರೆ. ಯಾರೂ ಹೆದರಿಕೊಳ್ಳಬೇಡಿ, ಆತಂಕಕ್ಕೆ ಒಳಗಾಗದಿರಿ. ಅದರಿಂದ ನಮಗೆ ಕಾಯಿಲೆಗಳು ಹೆಚ್ಚಾಗುತ್ತದೆ. ಆತ್ಮವಿಶ್ವಾಸದಿಂದ ಇದ್ದು, ದಿನನಿತ್ಯ ಬೆಳಗ್ಗೆ ಪ್ರಾಣಾಯಾಮವನ್ನು ಮಾಡಿ"ಎನ್ನುವ ಸಲಹೆಯನ್ನು ಸಚಿವರು ನೀಡಿದ್ದಾರೆ.

   ಸ್ಪಷ್ಟತೆಯಿಲ್ಲದ ಪರಿಷ್ಕೃತ ದಿಢೀರ್ ಮಾರ್ಗಸೂಚಿ: ಶೇ.90 ಲಾಕ್‌ಡೌನ್‌ನತ್ತ ರಾಜ್ಯ

   "ಯಾವ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎನ್ನುವುದನ್ನು ಮೊದಲ ದಿನವೇ ನೀಡಲಾಗಿತ್ತು. ಆ ಮಾರ್ಗಸೂಚಿಯಲ್ಲಿ ಎಲ್ಲವೂ ಅಡಕವಾಗಿದೆ. ಕೆಲವರು ಈ ಬಗ್ಗೆ ಸಂದೇಹ ವ್ಯಕ್ತ ಪಡಿಸಿದಾಗ, ಅದರ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದೇವೆ"ಎಂದು ಸುಧಾಕರ್ ಹೇಳಿದ್ದಾರೆ.

   "ನಮ್ಮ ಶ್ವಾಸಕೋಶಗಳು ಉತ್ತಮವಾಗಿ ಕೆಲಸ ಮಾಡಬೇಕು ಅಂದರೆ, ಪ್ರಾಣಾಯಾಮ ಬಹಳ ಮುಖ್ಯ. ಉತ್ತಮ ಆಕ್ಸಿಜನ್ ಅವನ್ನು ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡಿ. ರೋಗ ನಿರೋಧಕ ಶಕ್ತಿ ನಮ್ಮಲ್ಲಿ ಹೆಚ್ಚಾದಾಗ ಯಾವ ವೈರಾಣು ಕೂಡಾ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ"ಎಂದು ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

   "ವೀಕೆಂಡ್ ಕರ್ಫ್ಯೂ ಇರುವುದರಿಂದ ಎಲ್ಲರೂ ಇದನ್ನು ಪಾಲಿಸಬೇಕಾಗುತ್ತದೆ. ನಮಗೆ ಜನರ ಸಹಕಾರ ಅಗತ್ಯ, ಕೆಲವರು ನಮ್ಮ ನಿಲುವನ್ನು ಟೀಕಿಸುತ್ತಾರೆ. ಕೆಲವು ದೇಶಗಳು ತಿಂಗಾಳುನುಗಟ್ಟಲೆ ಲಾಕ್ ಡೌನ್ ಮಾಡಿವೆ. ಜನರಿಗೆ ತಪ್ಪು ಸಂದೇಶವನ್ನು ಕಳುಹಿಸುದನ್ನು ನಿಲ್ಲಿಸಲಿ"ಎಂದು ಸುಧಾಕರ್, ವಿರೋಧ ಪಕ್ಷದವರನ್ನು ಟೀಕೆ ಮಾಡಿದ್ದಾರೆ.

   ಯೋಗ್ಯತೆ ಇಲ್ಲದ ಸರಕಾರ: ಸಿಎಂ ಬಿಎಸ್ವೈಗೆ ಕುಮಾರಸ್ವಾಮಿ ನೀಡಿದ ಎಚ್ಚರಿಕೆ

   "ವೈದ್ಯಕೀಯ ಜಗತ್ತಿಗೆ ಸವಾಲಾಗಿರುವ ಈ ಸಂದರ್ಭದಲ್ಲಿ, ಜನರನ್ನು ಇನ್ನಷ್ಟು ಭಯ ಪಡಿಸುವ ಕೆಲಸ ಯಾರಿಂದಲೂ ಆಗಬಾರದು. ಈ ಎಮರ್ಜೆನ್ಸಿಯ ವೇಳೆ ಎಲ್ಲಾ ಸಹಕಾರ ಕೇಂದ್ರದಿಂದ ಬಂದಿದೆ, ಜೊತೆಜೊತೆಗೆ ಕಾಲಕಾಲಕ್ಕೆ ನಮಗೆ ಸೂಕ್ತ ಸಲಹೆಯನ್ನು ಪ್ರಧಾನಿ ಮೋದಿ ನೀಡುತ್ತಿದ್ದಾರೆ.

   English summary
   Karnataka Health Minister Dr. Sudhakar Said, No Confusion In Corona Guidelines.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X