ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯ ಕರ್ನಾಟಕ ನಿರ್ಮಾಣಕ್ಕಾಗಿ ವಿಷನ್ ಗ್ರೂಪ್ ಸಭೆ

|
Google Oneindia Kannada News

ಬೆಂಗಳೂರು, ಜನವರಿ 1: ಆರೋಗ್ಯ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ ತರುವ ಉದ್ದೇಶದಿಂದ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ವರದಿ ರೂಪಿಸಲು ವಿಷನ್ ಗ್ರೂಪ್ ಗೆ ಸೂಚನೆ ನೀಡಿದ್ದು, ಆರು ತಿಂಗಳಲ್ಲಿ ವರದಿ ಸಿದ್ಧವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ವಿಧಾನಸೌಧದಲ್ಲಿ ವಿಷನ್ ಗ್ರೂಪ್ ನ ಮೊದಲ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಡಾ.ಗುರುರಾಜ್ ಅಧ್ಯಕ್ಷತೆಯಲ್ಲಿ ಗ್ರೂಪ್ ರಚನೆಯಾಗಿದ್ದು, ಆರೋಗ್ಯ ಕ್ಷೇತ್ರದ ಸಮಗ್ರ ಬದಲಾವಣೆ ಬಗ್ಗೆ ಚರ್ಚೆಯಾಗಿದೆ. 2017 ರ ಆರೋಗ್ಯ ನೀತಿ ನಮ್ಮಲ್ಲಿದೆ. ಇದರ ಜೊತೆಗೆ ರಾಜ್ಯದ ಜನರಿಗೆ ಸುಲಭವಾಗಿ ಪರಿಣಾಮಕಾರಿಯಾದ ಆರೋಗ್ಯ ಸೇವೆಗಳನ್ನು ಒದಗಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿಸಿದರು.

ಈ ಗ್ರೂಪ್ ನಲ್ಲಿ ಉಪ ಸಮಿತಿಗಳನ್ನು ಮಾಡಿಕೊಂಡು ತಜ್ಞರ ಸಲಹೆ ಪಡೆದು ವರದಿ ರೂಪಿಸಲಾಗುತ್ತದೆ. ಈ ಗ್ರೂಪ್ ನಲ್ಲಿ ಅಲೋಪತಿ ಹಾಗೂ ಆಯುಷ್ ತಜ್ಞರನ್ನು ಕೂಡ ಸೇರಿಸಲಾಗಿದೆ. ಅಂತಿಮ ವರದಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಲಾಗುವುದು ಎಂದರು.

ಆಯುಷ್ಮಾನ್ ಭಾರತ್ ಅಥವಾ ಮೋದಿಕೇರ್ ಎಂದರೇನು?ಆಯುಷ್ಮಾನ್ ಭಾರತ್ ಅಥವಾ ಮೋದಿಕೇರ್ ಎಂದರೇನು?

ರಾಜ್ಯದಲ್ಲಿ ಪ್ರಾಥಮಿಕ, ಸಮುದಾಯ ಹಾಗೂ ಜಿಲ್ಲಾ ಮಟ್ಟದ್ದು ಎಂಬ ಮೂರು ಹಂತಗಳ ಆರೋಗ್ಯ ಸೇವೆ ಲಭ್ಯವಿದೆ. ಜೊತೆಗೆ ವೈದ್ಯಕೀಯ ಕಾಲೇಜುಗಳಿವೆ. ಇವುಗಳನ್ನು ಒಂದಕ್ಕೊಂದು ಸಂಪರ್ಕ ಕಲ್ಪಿಸಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕಿದೆ. ರೋಗ ಬಾರದಂತೆ ತಡೆಯುವ ಪ್ರಿವೆನ್ಶನ್ ಕ್ರಮಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ವ್ಯಕ್ತಿಗೆ ಯಾವ ರೋಗ ಬರಬಹುದು ಎಂದು ಪತ್ತೆ ಮಾಡಿ ಔಷಧಿ ನೀಡುವುದು, 35 ವರ್ಷ ಮೇಲ್ಪಟ್ಟವರಿಗೆ ರಕ್ತ ಪರೀಕ್ಷೆ ಮಾಡಿಸುವುದು, ಅಸಾಂಕ್ರಮಿಕ ರೋಗಗಳನ್ನು ಆರಂಭದಲ್ಲೇ ಪತ್ತೆ ಮಾಡಿ ಚಿಕಿತ್ಸೆ ನೀಡುವುದು ಮೊದಲಾದವುಗಳ ಬಗ್ಗೆ ಚರ್ಚೆಯಾಗಿದೆ. ಇವೆಲ್ಲವೂ ಸೇರಿದಂತೆ ಆರೋಗ್ಯ ಕರ್ನಾಟಕ ನಿರ್ಮಿಸಲು ವರದಿ ರೂಪಿಸಲು ಆರು ತಿಂಗಳ ಸಮಯ ನೀಡಲಾಗಿದೆ ಎಂದರು.

ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ್‌ ಜೊತೆ ವಿಲೀನಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ್‌ ಜೊತೆ ವಿಲೀನ

ಕಾಲೇಜು ನಿರ್ಮಿಸುವಾಗ ಕೇಂದ್ರ ಸರ್ಕಾರ ಅನುದಾನ

ಕಾಲೇಜು ನಿರ್ಮಿಸುವಾಗ ಕೇಂದ್ರ ಸರ್ಕಾರ ಅನುದಾನ

* ಪ್ರತಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಲು ಗುಣಮಟ್ಟ ಪರಿಶೀಲನಾ ಕೋಶ ರೂಪಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
* ಹೊಸ ಆಸ್ಪತ್ರೆ, ವೈದ್ಯಕೀಯ ಕಾಲೇಜು ನಿರ್ಮಿಸುವಾಗ ಕೇಂದ್ರ ಸರ್ಕಾರ ಅನುದಾನ ನೀಡುತ್ತದೆ. ಮಾನವ ಸಂಪನ್ಮೂಲ ಲಭ್ಯ ಮಾಡಲು ಕೂಡ ಅನುದಾನ ನೀಡುವಂತೆ ಕೋರಲು ಚರ್ಚೆಯಾಗಿದೆ.
* ಪ್ರತಿ 50 ಕಿ.ಮೀ. ಒಂದರಂತೆ ಅಥವಾ ಜಿಲ್ಲಾ ಮಟ್ಟದಲ್ಲಿ ಒಂದು ಟ್ರಾಮಾ ಕೇರ್ ಕೇಂದ್ರ ನಿರ್ಮಿಸಬೇಕು ಎಂಬ ಅಭಿಪ್ರಾಯ ಬಂದಿದೆ. ಇದರಿಂದಾಗಿ ಅಪಘಾತಕ್ಕೊಳಗಾದವರ ಜೀವ ರಕ್ಷಣೆ ಮಾಡಬಹುದು.
* ಮಕ್ಕಳ ಆರೋಗ್ಯ ಕಾಪಾಡಲು ಟೆಲಿ ಮೆಡಿಸಿನ್, ಪ್ರತಿಯೊಬ್ಬರ ಆರೋಗ್ಯದ ಹಿನ್ನೆಲೆಯ ಡಿಜಿಟಲ್ ದಾಖಲಾತಿ, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಆಂಬ್ಯುಲೆನ್ಸ್ ಲಭ್ಯತೆ ಮೊದಲಾದವುಗಳ ಬಗ್ಗೆ ಚರ್ಚೆಯಾಗಿದೆ.
* ಹೊಣೆಗಾರಿಕೆ ನಿಗದಿಪಡಿಸಿದರೆ ಗುಣಮಟ್ಟ ಸುಧಾರಣೆ ಸಾಧ್ಯ. ಶುಚಿತ್ವ, ಕೈಗೆಟುಕುವ ದರದಲ್ಲಿ ಚಿಕಿತ್ಸೆ ಮೊದಲಾದವುಗಳಿಗೆ ಹೊಣೆಗಾರಿಕೆ ವಹಿಸುವ ಮೂಲಕ ಕ್ರಮ ಕೈಗೊಳ್ಳಲಾಗುವುದು.

ವಿಷನ್ ಗ್ರೂಪ್ ಸಭೆಯಲ್ಲಿ ಸದಸ್ಯರ ಸಲಹೆ

ವಿಷನ್ ಗ್ರೂಪ್ ಸಭೆಯಲ್ಲಿ ಸದಸ್ಯರ ಸಲಹೆ

* ವಿಶ್ವಸಂಸ್ಥೆಯು ಆರೋಗ್ಯ ಸುಧಾರಣೆಯಲ್ಲಿ ನಿಗದಿ ಮಾಡಿರುವ ಗುಣಮಟ್ಟ ಪಾಲನೆ ಮಾಡಬೇಕಾಗಿರುತ್ತದೆ.
* ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುವುದು, ಆರೋಗ್ಯ ಸೇವೆಗಳನ್ನು ಸದೃಢಗೊಳಿಸುವುದು, ಅವಶ್ಯ ಮಾನವ ಸಂಪನ್ಮೂಲಗಳಾದ ವೈದ್ಯರು, ನರ್ಸ್‍ಗಳು, ಆಯಾಗಳು, ಸ್ಟಾಫ್ ನರ್ಸ್‍ಗಳು ಇತರೆ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಳಗೊಳಿಸುವುದು.
* ತುರ್ತು ಸಂದರ್ಭಗಳ ನಿರ್ವಹಣೆ - ಹೃದಯಾಘಾತ, ಅಪಘಾತವುಂಟಾದ ಸಂದರ್ಭದಲ್ಲಿ ಪ್ರಾಥಮಿಕ ಹಂತದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲು ಉತ್ತಮ ತರಬೇತಿಯನ್ನು ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯರಿಗೆ ಹಾಗೂ ನರ್ಸ್‍ಗಳಿಗೆ ವಿಶೇಷ ತರಬೇತಿ ನೀಡುವುದು
* ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಆಯೂಷ್ ಕೇಂದ್ರಗಳನ್ನು ಪ್ರಾರಂಭಿಸುವುದು
* ಒಂದು ರೋಗದ ಚಿಕಿತ್ಸೆಗೆ ರೋಗಿಗಳು ಇರುವ ಸ್ಥಳದಲ್ಲಿಯೇ ಇರುವ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆಯನ್ನು ಪಡೆದು ಮುಂದುವರೆದ ಚಿಕಿತ್ಸೆಗೆ ವಿಶೇಷ ಆಸ್ಪತ್ರೆಗೆ (ಹಬ್)ಗೆ ಸಂಪರ್ಕಿಸಲು ಟೆಲಿ ಐಸಿಯು ಮಾದರಿಯನ್ನು ಅಳವಡಿಸುವುದು

ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಬ್ರ್ಯಾಡಿಂಗ್

ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಬ್ರ್ಯಾಡಿಂಗ್

ಜೀವ ರಕ್ಷಕ ಔಷಧಿಗಳ ನಿರಂತರ ಪೂರೈಕೆ, ಅಂಗಾಂಗ ಕಸಿ ಕಾಯ್ದೆಯ ಪರಿಷ್ಕರಣೆ, ಆರೋಗ್ಯ ಸೇವೆಗಳನ್ನು ಉತ್ತಮವಾಗಿ ಒದಗಿಸಲು ಪಿಪಿಪಿ ಮಾದರಿಯನ್ನು ಉನ್ನತೀಕರಿಸುವುದು, ಐಎಎಸ್ ಮಾದರಿಯಲ್ಲಿ ಐಎಂಎಸ್, ಕೆಎಂಸ್ ವೃಂದವನ್ನು ಸೃಜನೆ ಮಾಡುವುದು.
* ಪಾಶ್ಚಿಮಾತ್ಯ ದೇಶಗಳಲ್ಲಿರುವಂತೆ ನರ್ಸ್ ಪ್ರಾಕ್ಟಿಷನರ್ಸ್ ಹುದ್ದೆಗಳ ಸೃಜನೆ ವಿಶೇಷ ತರಬೇತಿ Physician Assistant ಹುದ್ದೆ ಮತ್ತು hospitalist ಹುದ್ದೆ.
* ವಿವಿಧ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಬರುವ ಹಿರಿಯ ನಾಗರೀಕರೊಂದಿಗೆ ಸಮಾಲೋಚನೆ ನಡೆಸಲು ಹಾಗೂ ನಿರ್ವಹಣೆ ಮಾಡಲು ಹುದ್ದೆಗಳ ಸೃಜನೆ ಹಾಗೂ ವಿಶೇಷ ತರಬೇತಿಯನ್ನು ನೀಡುವುದು
* ನಿವೃತ್ತಿಯಾದಂತಹ ಹಿರಿಯ ತಜ್ಞರ ಸೇವೆಯನ್ನು ಟೆಲಿ ಮೆಡಿಸಿನ್ ಸೇವೆಗೆ ಬಳಸಿಕೊಳ್ಳುವುದು
* ಅಂಗಾಗ ದಾನದ ಬಗ್ಗೆ ಪ್ರಚಾರ ಮಾಡುವುದು, ಅಪಘಾತವಾಗಿ ಬ್ರೈನ್ ಡೆಡ್ ಆದ ಸಂದರ್ಭಗಳಲ್ಲಿ Death Declaration Committee ಯು ಸರಿಯಾದ ಸಮಯದಲ್ಲಿ ಮಾಹಿತಿ ನೀಡಿ, ಅಂಗಾಗ ಪಡೆಯಲು ವ್ಯವಸ್ಥೆ ಮಾಡುವುದು
* ಸರ್ಕಾರಿ ಆಸ್ಪತ್ರೆಗಳಲ್ಲಿ Intensive Care ಅನ್ನು ಬಲಪಡಿಸುವುದು, Artificial Intelligence ನಿಂದ ಆರೋಗ್ಯ ಕ್ಷೇತ್ರದಲ್ಲಿ ಸೇವೆಗಳನ್ನು ಪಡೆಯುವುದು (ರೊಬೋಟಿಕ್ ಮಾದರಿ)

ಪ್ರಾಥಮಿಕ ಹಂತದಲ್ಲಿಯೇ ರೋಗ ಪತ್ತೆ, ಚಿಕಿತ್ಸೆ

ಪ್ರಾಥಮಿಕ ಹಂತದಲ್ಲಿಯೇ ರೋಗ ಪತ್ತೆ, ಚಿಕಿತ್ಸೆ

* ನಿರಂತರ ಆರೋಗ್ಯ ತಪಾಸಣಿ, ರೋಗ ನಿರೋಧಕಗಳು, ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ನಿರ್ವಾಹಕರಿಗೆ ನಿರಂತರ ತರಬೇತಿ ನೀಡುವುದು
* ಮಕ್ಕಳಿಗೆ ವರ್ಷಕ್ಕೊಮ್ಮೆ ಕಡ್ಡಾಯ ಆರೋಗ್ಯ ತಪಾಸಣೆ
* ಸುರಕ್ಷಾ ಹೆರಿಗೆ, ಆರೋಗ್ಯಯುತವಾದ ಮಗು ಜನನದ ಬಗ್ಗೆ ಅವಶ್ಯವಿರುವ ತರಬೇತಿ, ಹೆಲ್ತ್ ರಿಜಿಸ್ಟ್ರರ್‍ಗಳ ನಿರ್ವಹಣೆ
* ಕೋವಿಡ್ ಸಂದರ್ಭದಲ್ಲಿ ನಾನ್ ಕೋವಿಡ್ ಪ್ರಕರಣಗಳಲ್ಲಿ ಸರಿಯಾದ ಚಿಕಿತ್ಸೆ ಪಡೆಯದೆ ಅನೇಕರು ಮರಣ ಹೊಂದಿದ್ದು, ನಾನ್ ಕೋವಿಡ್ ಪ್ರಕರಣಗಳಿಗೂ ಉತ್ತಮ ಚಿಕಿತ್ಸೆ ನೀಡಲು ಚಿಕಿತ್ಸಾ ವ್ಯವಸ್ಥೆಗಳನ್ನು ಬಲಪಡಿಸುವುದು
* ರಸ್ತೆ ಅಪಘಾತವಾದ ಸಂದರ್ಭದಲ್ಲಿ ಚಿಕಿತ್ಸೆಗೆ ದೂರದ ನಗರಕ್ಕೆ ಬರಬೇಕಾಗಿದ್ದು, ಚಿಕಿತ್ಸೆ ತಡವಾಗುವುದರಿಂದ ಉಂಟಾಗುವ ಪರಿಣಾಮವನ್ನು ತಪ್ಪಿಸಲು ಹೆದ್ದಾರಿಗಳಲ್ಲಿ ಪ್ರತಿ 50 ಕಿ.ಮೀಗೆ ಅಥವಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಟ್ರಾಮಾ ಕೇರ್ ಸೆಂಟರ್ ಅನ್ನು ಸ್ಥಾಪನೆ ಮಾಡಿ ಸದೃಢಗೊಳಿಸುವುದು. ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮಾಹಿತಿ ನಿರ್ವಹಣೆ ಮಾಡುವುದು.

English summary
Vision Group has been directed to prepare a report on comprehensive development in Health sector in Karnataka. Report is likely to be finalized in six months said Health & Medical Education Minister Dr.K.Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X