• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರೋಗ್ಯ ಸಚಿವರ ವೈಯಕ್ತಿಕ ಭೇಟಿಗೆ ಕೈಗಡಿಯಾರ ಕಟ್ಟಿಕೊಂಡವರಿಗೆ ನೋ ಎಂಟ್ರಿ !

|
Google Oneindia Kannada News

ಬೆಂಗಳೂರು, ಜು. 09: ಆರೋಗ್ಯ ಇಲಾಖೆಯ ಅಧಿಕಾರಿಗಳು ಆರೋಗ್ಯ ಸಚಿವ ಡಾ ಕೆ. ಸುಧಾಕರ್ ಅವರನ್ನು ವೈಯಕ್ತಿಕ ಭೇಟಿ ಮಾಡುವಂತಿದ್ದರೆ, ಇನ್ನು ಮುಂದೆ ಕೈ ಗಡಿಯಾರ, ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ!

ಕೈ ಗಡಿಯಾರ ಕಟ್ಟಿಕೊಂಡು, ಮೊಬೈಲ್ ಜೇಬಲ್ಲಿ ಇಟ್ಟುಕೊಂಡು ಆರೋಗ್ಯ ಸಚಿವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಹೋದರೆ ಭೇಟಿಗೆ ಅವಕಾಶ ಕೊಡುವುದಿಲ್ಲ. ವಾಚ್ ಮತ್ತು ಮೊಬೈಲ್ ಕಡ್ಡಾಯವಾಗಿ ಹೊರಗಿಟ್ಟೇ ಸಚಿವರು ಇರುವ ಜಾಗಕ್ಕೆ ಹೋಗಬೇಕು. ಇತ್ತೀಚೆಗೆ ಮಂಗಳೂರಿಗೆ ಪ್ರವಾಸ ತೆರಳಿದ್ದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತೆರಳಿದ್ದಾರೆ. ಈ ವೇಳೆ ಆ ಆಧಿಕಾರಿಯ ವೈಯಕ್ತಿಕ ಭೇಟಿಗೆ ಸಚಿವರು ಅವಕಾಶ ಕೊಟ್ಟಿಲ್ಲ ಎನ್ನಲಾಗಿದೆ. .

 75 ಸಣ್ಣ ಉಪಗ್ರಹಗಳ ಅಭಿವೃದ್ಧಿ ಪಡಿಸಿದ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿಗಳು 75 ಸಣ್ಣ ಉಪಗ್ರಹಗಳ ಅಭಿವೃದ್ಧಿ ಪಡಿಸಿದ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿಗಳು

ಈ ವೇಳೆ ಕೈ ಗಡಿಯಾರ ಮತ್ತು ಮೊಬೈಲ್ ಹೊರಗೆ ಇಟ್ಟು ಬರುವಂತೆ ತಿಳಿಸಿದ್ದಾರೆ. ಸಚಿವರ ಸೂಚನೆ ಮೇರೆಗೆ ಮೊಬೈಲ್ ಹಾಗೂ ಕೈ ಗಡಿಯಾರ ಹೊರಗಿಟ್ಟು ಆರೋಗ್ಯ ಇಲಾಖೆ ಅಧಿಕಾರಿಗಳು ವೈಯಕ್ತಿಕ ಭೇಟಿ ಮಾಡಿ ಮಾತುಕತೆ ನಡೆಸಿ ಹೊರ ಬಂದಿದ್ದಾರೆ. ಈ ರೀತಿಯ ಅನುಭವ ಅನೇಕ ಅಧಿಕಾರಿಗಳಿಗೆ ಆಗಿದೆ. ಆರೋಗ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಈ ಫರ್ಮಾನು ಇದೀಗ ಆರೋಗ್ಯ ಇಲಾಖೆಯ ಅಧಿಕಾರಿ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.

ಸಚಿವರ ಈ ನಡೆ ಮರ್ಮ ಅರಿಯದೇ ಆರೋಗ್ಯ ಇಲಾಖೆ ಅಧಾರಿಗಳು ಒದ್ದಾಡುತ್ತಿದ್ದಾರೆ. ಕೈ ಗಡಿಯಾರ ಕಟ್ಟಿಕೊಂಡು ಭೇಟಿ ಮಾಡುವುದರಲ್ಲಿ ತಪ್ಪೇನಿದೆ ? ಇನ್ನು ವೈಯಕ್ತಿಕ ಮಾತುಕತೆ ವೇಳೆ, ಯಾವುದಾದರೂ ಸಂಪರ್ಕ ಸಂಖ್ಯೆ, ಅಧಿಕಾರಿಗಳ ವಿವರ ಕೊಡಬೇಕಾದರೂ ಮೊಬೈಲ್ ಕೈಯಲ್ಲಿ ಇರುವುದು ಕ್ಷೇಮ. ಆದರೆ ಸಚಿವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಹೋದಾಗ ಮೊಬೈಲ್ ಇಟ್ಟುಕೊಳ್ಳುವಂತಿಲ್ಲ, ಕೈ ಗಡಿಯಾರವೂ ಕಟ್ಟಿಕೊಳ್ಳುವಂತಿಲ್ಲ ಎಂದು ಸೂಚಿಸುತ್ತಿರುವುದು ಭಾರೀ ಚರ್ಚೆಗೆ ನಾಂದಿ ಹಾಡಿದೆ.

ರಹಸ್ಯ ಕಾರ್ಯಾಚರಣೆ ಭಯ ?: ರಾಜ್ಯ ರಾಜಕಾರಣದಲ್ಲಿ ಇತ್ತೀಚೆಗೆ ಸದ್ದು ಮಾಡುತ್ತಿರುವುದು ರಹಸ್ಯ ಕಾರ್ಯಾಚರಣೆಯ ಅಡಿಯೋ ಹಾಗೂ ವಿಡಿಯೋಗಳು. ಹೀಗಾಗಿ ವೈಯಕ್ತಿಕ ಭೇಟಿ ವೇಳೆ ನಡೆಯುವ ಮಾತುಕತೆ ರೆಕಾರ್ಡ್ ಮಾಡಿಕೊಂಡು ಹೊರಗೆ ಬಿಟ್ಟರೆ ದೊಡ್ಡ ಆಪತ್ತು ಎದುರಾಗಲಿದೆ. ಇನ್ನೂ ಈಗಿನ ಪರಿಸ್ಥಿತಿಯಲ್ಲಿ ಹೊರಗಿನವರು ಇರಲಿ ಅಧಿಕಾರಿಗಳನ್ನು ಕೂಡ ನಂಬಲಿಕ್ಕೆ ಅಸಾಧ್ಯ. ಯಾವ ಹುತ್ತದಲ್ಲಿ ಯಾವ ಯಾವ ಇರುತ್ತೋ ಯಾರಿಗೆ ಗೊತ್ತು ಅಲ್ಲವೇ ? ಹೀಗಾಗಿ ರಹಸ್ಯ ಕಾರ್ಯಾಚರಣೆ ಭಯದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಮ್ಮ ವೈಯಕ್ತಿಕ ಭೇಟಿ ಮಾಡುವ ವೇಳೆ ವಾಚ್ ಕಟ್ಟಿಕೊಂಡು ಹೋಗಲು ಅವಕಾಶ ನೀಡುತ್ತಿಲ್ಲ ಎಂದೇ ಹೇಳಲಾಗುತ್ತಿದೆ. ಇತ್ತೀಚೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಹಸ್ಯ ಕಾರ್ಯಾಚರಣೆ ವಿಡಿಯೋ ಹೊರ ಬಿದ್ದು ಸಚಿವ ಸ್ಥಾನ ಕಳೆದುಕೊಂಡಿದ್ದರು. ಆನಂತರ ಆರು ಸಚಿವರು ಎದ್ದೋ ಬಿದ್ದೋ ತಡೆಯಾಜ್ಞೆ ತಂದಿದ್ದರು. ಇತ್ತೀಚೆಗೆ ಕೇಂದ್ರ ಸಚಿವರೊಬ್ಬರ ರಹಸ್ಯ ಕಾರ್ಯಾಚರಣೆ ವಿಡಿಯೋ ಸದ್ದು ಮಾಡುವ ಮುನ್ನವೇ ಸಚಿವರು ನ್ಯಾಯಾಲಯದ ತಡೆಯಾಜ್ಞೆ ತಂದಿದ್ದರು. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಎಚ್ಚರಿಕೆ ಭಾಗವಾಗಿ ಈ ಆದೇಶ ಹೊರಡಿಸಿದರೇ ಎಂಬ ಅನುಮಾನ ಮೂಡಿಸಿದೆ.

Health Minister D.K .Sudhakar Secrete Order about Officials Individual Visit

ರಹಸ್ಯ ಕಾರ್ಯಾಚರಣೆ ಉಪಕರಣ ಯುಗ:

ರಹಸ್ಯ ಗೆಜೆಟ್ ಗಳು : ಇತ್ತೀಚೆಗೆ ನಾನಾ ತರಹದ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಡೈರಿಯಲ್ಲಿ ರಹಸ್ಯ ಕ್ಯಾಮರಾ ಇರುತ್ತದೆ. ಮಾಸ್ಕ್ ನಲ್ಲೂ ರಹಸ್ಯ ಕ್ಯಾಮರಾ ಇರುತ್ತದೆ, ಇನ್ನು ಪೆನ್ , ವಾಚ್, ಕನ್ನಡಕ, ಬ್ಯಾಗ್, ಗುಂಡಿ ರೂಪದ ಸಾಕಷ್ಟು ಕ್ಯಾಮರಾಗಳು ಆನ್‌ಲೈನ್ ನಲ್ಲಿಯೇ ಲಭ್ಯವಿದೆ. ಇದ್ಯಾವುದರ ಬಗ್ಗೆ ಆಲೋನಚಿಸದ ಆರೋಗ್ಯ ಸಚಿವರು ಕೇವಲ ವಾಚ್ ಮೇಲೆ ಮಾತ್ರ ನಿಗಾ ಇಡುತ್ತಿರುವುದು ಮತ್ರ ಎಲ್ಲರಿಗೂ ಕುತೂಹಲ ಮೂಡಿಸಿದೆ.

   Rockline Venkatesh : ಅಂಬರೀಶ್ ಬಗ್ಗೆ ಮಾತನಾಡೋದಕ್ಕೆ ಅವರು ಯಾರು? | Oneindia Kannada
   English summary
   Health Minister Dr. K. Sudhakar Secrate Order about officials Individual visit
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X