ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಪೋಲಿಯೋ ಲಸಿಕೆಯಲ್ಲಿ ವೈರಸ್ ಇಲ್ಲ: ಸರ್ಕಾರ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 5: ಪೋಲಿಯೋ ಲಸಿಕೆಯಲ್ಲೇ ಪೋಲಿಯೋ ವೈರಸ್ ಇದೆ ಎಂಬ ಸುದ್ದಿ ರಾಜ್ಯದಲ್ಲಿ ಆತಂಕವನ್ನು ಸೃಷ್ಟಿ ಮಾಡಿತ್ತು.

ಇದೆಕ್ಕೆಲ್ಲಾ ಕಾರಣವೆಂದರೆ ಉತ್ತರ ಪ್ರದೇಶದಲ್ಲಿ ಪೋಲಿಯೋ ರೋಗ ನಿವಾರಣೆಗಾಗಿ ಮಕ್ಕಳಿಗೆ ನೀಡಲಾಗುವ ಪೋಲಿಯೋ ಲಸಿಕೆಯಲ್ಲಿ ಟೈಪ್ 2 ಪೋಲಿಯೋ ವೈರಾಣು ಪತ್ತೆಯಾಗಿತ್ತು.

ಬೆಂಗಳೂರು: ಜನವರಿ 18 ಮತ್ತು 22 ಪೋಲಿಯೋ ದಿನ ಬೆಂಗಳೂರು: ಜನವರಿ 18 ಮತ್ತು 22 ಪೋಲಿಯೋ ದಿನ

ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಬಯೋಮೆಡ್ ಕಂಪನಿ ಉತ್ಪಾದಿಸಿರುವ ಲಸಿಕೆಯಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ನಿರ್ಮೂಲನೆಯಾಗಿರುವ ಪೋಲಿಯೋ ಟೈಪ್ 2 ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪೋಲಿಯೋ ಲಸಿ ವೈರಾಣು ಪತ್ತೆಯಾಗಿದೆ ಎಂದು ಪೋಲಿಯೋ ಲಸಿಕೆ ಹಾಕಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಸರ್ಕಾರ ಅಭಯ ನೀಡಿದ್ದು ಕರ್ನಾಟಕದಲ್ಲಿ ಅಂತಹ ವೈರಸ್ ಪತ್ತೆಯಾಗಿಲ್ಲ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ.

ಉತ್ತರ ಪ್ರದೇಶದಲ್ಲಿ ಪೋಲಿಯೋ ಲಸಿಕೆಯಲ್ಲಿ ವೈರಸ್

ಉತ್ತರ ಪ್ರದೇಶದಲ್ಲಿ ಪೋಲಿಯೋ ಲಸಿಕೆಯಲ್ಲಿ ವೈರಸ್

ಉತ್ತರ ಪ್ರದೇಶದಲ್ಲಿ ಪೊಲೀಯೋ ಲಸಿಕೆಯಲ್ಲಿ ಪೋಲಿಯೋ ವೈರಸ್ ಕಂಡುಬಂದಿದ್ದು, ಜನರಲ್ಲಿ ಆತಂಕ ಉದ್ಭವಿಸಿದೆ, ಅಷ್ಟೇ ಅಲ್ಲದೇ ಉಳಿದ ರಾಜ್ಯಗಳಲ್ಲೂ ಕೂಡ ಇಂತಹ ತೊಂದರೆ ಕಾಣಿಸಿಕೊಳ್ಳಬಹುದು ಎನ್ನುವ ಆತಂಕ ಎದುರಾಗಿದೆ ಹಾಗಾಗಿ ಕರ್ನಾಟಕದಲ್ಲೂ ಕೂಡ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ಪೋಷಕರು ಹಿಂಜರಿಯುತ್ತಿದ್ದಾರೆ.

ಟೈಪ್-2 ವೈರಾಣು ಇರುವ ಲಸಿಕೆ ಕರ್ನಾಟಕದ ಮಕ್ಕಳಿಗೆ ಹಾಕಿಲ್ಲ

ಟೈಪ್-2 ವೈರಾಣು ಇರುವ ಲಸಿಕೆ ಕರ್ನಾಟಕದ ಮಕ್ಕಳಿಗೆ ಹಾಕಿಲ್ಲ

ಟೈಪ್ 2 ವೈರಾಣು ಇರುವ ಲಸಿಕೆಯನ್ನು ಕರ್ನಾಟಕದ ಮಕ್ಕಳಿಗೆ ಹಾಕಿಲ್ಲ, ಹೀಗಾಗಿ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

ನಿಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ತಯಾರಾಗಿ ನಿಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ತಯಾರಾಗಿ

ಭಾರತದಲ್ಲಿ 2016ರಲ್ಲೇ ಹೊಸ ಲಸಿಕೆ ಆರಂಭ

ಭಾರತದಲ್ಲಿ 2016ರಲ್ಲೇ ಹೊಸ ಲಸಿಕೆ ಆರಂಭ

ಸಮರ್ಪಕವಾಗಿ ತೊಲಗದ ಟೈಪ್ 2 ಪೋಲಿಯೋ ನಿವಾರಣೆಗಾಗಿ 2016ರ ಏಪ್ರಿಲ್ ನಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ಹೊಸ ಲಸಿಕೆ ಪ್ರಾರಂಭಿಸಲಾಗಿತ್ತು.

ಪೋಲಿಯೋ ಹನಿಯಲ್ಲಿ ಎರಡು ವಿಧ

ಪೋಲಿಯೋ ಹನಿಯಲ್ಲಿ ಎರಡು ವಿಧ

ಪೋಲಿಯೋ ಹನಿಗಳಲ್ಲಿ ಎರಡು ವಿಧಗಳಿವೆ ಟ್ರಿವಲೆಂಟ್ ಹಾಗೂ ಬಿವಲೆಂಟ್ ಒಪಿವಿ ಎಂದು ಅದನ್ನು ಕರೆಯಲಾಗುತ್ತದೆ. ಬ್ರಿವಲೆಂಟ್ ಲಸಿಕೆಯನ್ನು 2016ರ ಏಪ್ರಿಲ್ ನಲ್ಲಿ ಭಾರತಕ್ಕೆ ಪೂರೈಸಿದ್ದು, ಈ ಬ್ಯಾಚ್ ನ ಒಪಿವಿ ಉತ್ತರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಪೂರೈಕೆಯಾಗಿದೆ. ಈ ಬ್ಯಾಚ್ ನ ಔಷಧ ಕರ್ನಾಟಕ ರಾಜ್ಯಕ್ಕೆ ಬಂದಿಲ್ಲ, ಹಾಗಾಗಿ ಕರ್ನಾಟಕ ಸುರಕ್ಷಿತವಾಗಿದೆ ಎಂದು ಆರೋಗ್ಯಾಧಿಕಾರಿ ರಜನಿ ನಾಗೇಶ್ ರಾವ್ ತಿಳಿಸಿದ್ದಾರೆ.

ವ್ಯವಹಾರ ವೃದ್ಧಿಗೆ ಕಂಪನಿ ಯತ್ನ

ವ್ಯವಹಾರ ವೃದ್ಧಿಗೆ ಕಂಪನಿ ಯತ್ನ

ಪೋಲಿಯೋ ಲಸಿಕೆಯಲ್ಲಿ ಪೋಲಿಯೋಕಾರಕ ವೈರಾಣು ಪತ್ತೆಯಾದ ಪ್ರಕರಣದ ಹಿಂದೆ ಗಾಜಿಯಾಬಾದ್ ಮೂಲದ ಬಯೋಮೆಡ್ ಕಂಪನಿಯ ದುರುದ್ದೇಶ ಅಡಗಿರುವಂತಿದೆ. ಪೋಲಿಯೋ ನಿರ್ಮೂಲನೆಯಾದರೆ ಕಂಪನಿ ವ್ಯವಹಾರ ಕಡಿಮೆಯಾಗುತ್ತದೆ. ಪೋಲಿಯೋ ಹೆಚ್ಚಾದರೆ ಉದ್ಯಮ ಬೆಳೆಯುತ್ತದೆ ಎನ್ನುವ ಕಲ್ಪನೆಯಲ್ಲಿ ಕಂಪನಿಗಳು ಇದ್ದಂತಿದೆ.

English summary
Department of Health and family welfare has clarified that no virus found in polio vaccine in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X