ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಗಲಕ್ಷಣಗಳಿಲ್ಲದವರಲ್ಲಿ ಕೊರೊನಾ: ಆತಂಕ ಹೆಚ್ಚಿಸಿದ ಆರೋಗ್ಯ ಇಲಾಖೆ ಅಧ್ಯಯನ!

|
Google Oneindia Kannada News

ಬೆಂಗಳೂರು, ಮೇ 10: ಇಡೀ ರಾಜ್ಯಾದ್ಯಂತ ಕೊರೊನಾ ವೈರಸ್ ಅಟ್ಟಹಾಸದಿಂದ ಮುನ್ನುಗ್ಗುತ್ತಿದೆ. ಬೆಂಗಳೂರಿನಲ್ಲಂತೂ ಲಾಕ್‌ಡೌನ್‌ ಇದ್ದರೂ ಕೊರೊನಾ ವೈರಸ್‌ಗೆ ಕ್ಯಾರೆ ಎನ್ನದಂತೆ ಜನರು ಬೀದಿಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಂಕು ಹರಡುವ ಕುರಿತು ಬಿಡುಗಡೆ ಮಾಡಿರುವ ಅದ್ಯಯನ ವರದಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಶಂಕಿತ ಅಥವಾ ಸೋಂಕಿತರೊಂದಿಗೆ ಸಂಪರ್ಕ ಇಲ್ಲದವರಲ್ಲಿ ಸೋಂಕು ಪತ್ತೆಯಾಗುತ್ತಿವೆ. ಬಹಳಷ್ಟು ಸೋಂಕಿತರಲ್ಲಿ ಯಾವುದೇ ರೋಗಲಕ್ಷಣಗಳು ಕಂಡು ಬರುತ್ತಿಲ್ಲ. ಇದಲ್ಲದೆ ರಾಜ್ಯದಲ್ಲಿ ಈಗಾಗಲೇ 31 ಜನರು ಕೊರೊನಾ ವೈರಸ್ ಮಹಾಮಾರಿಗೆ ಬಲಿಯಾಗಿದ್ದಾರೆ. ಹಲವರಿಗೆ ಕೊನೆಯ ಹಂತದಲ್ಲಿ ರೋಗ ಪತ್ತೆಯಾಗಿದ್ದರೆ, ಕೆಲವು ಸೋಂಕಿತರು ಮೃತಪಟ್ಟ ಮೇಲೆ ಕೊರೊನಾ ಸೋಂಕು ಇರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಅದ್ಯಯನ ಮಾಡಿರುವ ರಾಜ್ಯ ಆರೋಗ್ಯ ಇಲಾಖೆ ಆತಂತಕಾರಿ ಮಾಹಿತಿಯನ್ನು ಬಹಿರಂಗೊಳಿಸಿದೆ.

ಸೋಂಕಿತರ ಸಂಪರ್ಕವಿಲ್ಲದಿದ್ದರೂ ಕೊರೊನಾ

ಸೋಂಕಿತರ ಸಂಪರ್ಕವಿಲ್ಲದಿದ್ದರೂ ಕೊರೊನಾ

ಮೂರನೇ ಹಂತದ ಲಾಕ್‌ಡೌನ್‌ ಸಂದರ್ಭದಲ್ಲಿ ಸೋಂಕಿತರ ಸಂಪರ್ಕವಿಲ್ಲದವರಲ್ಲಿ ಕೊರೊನಾ ವೈರಸ್ ದೃಢಪಡುತ್ತಿದೆ. ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ಬಹಳಷ್ಟು ಸಡಿಲಿಕೆಗಳನ್ನು ಕೊಟ್ಟಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಆದರೆ ಇದೀಗ ದೃಢಪಡುತ್ತಿರುವ ಪ್ರಕರಣಗಳಲ್ಲಿ ಬಹಳಷ್ಟು ಜನರು ಸೋಂಕಿತರ ಸಂಪರ್ಕಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧ್ಯಯನ ನಡೆಸಿದೆ. ಆಗ ಕಂಡು ಬಂದಿರುವುದು ರೋಗಲಕ್ಷಣಗಳಿಲ್ಲದ ಸೋಂಕಿತರು.

ರಾಜ್ಯದಲ್ಲಿಂದು 53 ಹೊಸ ಪ್ರಕರಣ, ಶಿವಮೊಗ್ಗಕ್ಕೆ ಕೊರೊನಾ ಎಂಟ್ರಿರಾಜ್ಯದಲ್ಲಿಂದು 53 ಹೊಸ ಪ್ರಕರಣ, ಶಿವಮೊಗ್ಗಕ್ಕೆ ಕೊರೊನಾ ಎಂಟ್ರಿ

596 ಸೋಂಕಿತರಲ್ಲಿಲ್ಲ ರೋಗಲಕ್ಷಣಗಳು!

596 ಸೋಂಕಿತರಲ್ಲಿಲ್ಲ ರೋಗಲಕ್ಷಣಗಳು!

ರಾಜ್ಯಾದ್ಯಂತ ರೋಗ ಲಕ್ಷಣಗಳನ್ನು (asymptomatic) ತೋರಿಸದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿವೆ. ರೋಗಲಕ್ಷಣಗಳಲ್ಲಿದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ಹುಟ್ಟಿಸುತ್ತಿದೆ. ಆರೋಗ್ಯವಂತರಾಗಿ ಕಾಣಿಸುವವರಲ್ಲಿ ಕೊರೊನಾ ವೈರಸ್ ಸೋಂಕು ದೃಢವಾಗುತ್ತಿದೆ. ಯಾವುದೇ ಲಕ್ಷಣಗಳು ಇಲ್ಲದ ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ದೃಢವಾಗುತ್ತಿರುವುದು ಆರೋಗ್ಯ ಇಲಾಖೆಗೆ ಕಳವಳವನ್ನುಂಟು ಮಾಡಿದೆ.

ರಾಜ್ಯದಲ್ಲಿ ಇದುವರೆಗೂ ಇದುವರೆಗೂ 794 ಕೊರೊನಾ ಸೋಂಕಿತ ರೋಗಿಗಳು ಪತ್ತೆಯಾಗಿದ್ದಾರೆ. ವಿಪರ್ಯಾಸ ಎಂದರೆ ಅವರಲ್ಲಿ ಸುಮಾರು 596 ಜನರಲ್ಲಿ ಯಾವುದೆ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಇದು ವರೆಗೆ ಪರೀಕ್ಷೆಗೆ ಒಳಗಾದ 198 ಸೋಂಕಿತರಲ್ಲಿ ಮಾತ್ರ ರೋಗಲಕ್ಷಣ ಇದ್ದವು. ಉಳಿದವರಲ್ಲಿ ಸೋಂಕು ಇದ್ದರೂ ಆರೋಗ್ಯವಾಗಿಯೆ ಇದ್ದರು. ಕೊರೊನಾ ವೈರಸ್ ಪರೀಕ್ಷೆ ಮಾಡಿದಾಗ ಮಾತ್ರ ಸೋಂಕಿರುವುದು ಕಂಡು ಬಂದಿದೆ.

ಆರೋಗ್ಯವಂತರಂತೆ ಕಾಣುತ್ತಾರೆ ಶೇ. 75 ಸೋಂಕಿತರು

ಆರೋಗ್ಯವಂತರಂತೆ ಕಾಣುತ್ತಾರೆ ಶೇ. 75 ಸೋಂಕಿತರು

ರಾಜ್ಯದಲ್ಲಿ ಶೇಕಡಾ 75 ರಷ್ಟು ಸೋಂಕಿತರಲ್ಲಿ ಜನರಲ್ಲಿ ಲಕ್ಷಣಗಳೇ ಕಂಡು ಬಂದಿಲ್ಲ ಎಂಬುದು ಆರೋಗ್ಯ ಇಲಾಖೆ ನಡೆಸಿದ್ದ ಅದ್ಯಯನದಲ್ಲಿ ಕಂಡು ಬಂದಿದೆ. ಕೇವಲ ಶೇಕಡಾ 25 ರೋಗಿಗಳಲ್ಲಿ ಮಾತ್ರ ಲಕ್ಷಣಗಳು ಗೋಚರವಾಗಿವೆ ಎಂಬ ಆತಂಕಕಾರಿ ವಿಷಯ ಬಹಿರಂಗವಾಗಿದೆ. ಹೀಗಾಗಿ ರಾಜ್ಯಾದ್ಯಂತ ಪರೀಕ್ಷೆ ಹೆಚ್ಚಿಸಿದರೆ ಮತ್ತಷ್ಟು ಸೋಂಕಿತ ಪ್ರಕರಣಗಳು ದೃಢಪಡುವ ಸಾಧ್ಯತೆಗಳು ಹೆಚ್ಚಿವೆ.

ನೂರರಲ್ಲಿ 75 ಸೋಂಕಿತರು ಮೇಲ್ನೋಟಕ್ಕೆ ಆರೋಗ್ಯವಂತರಂತೆಯೆ ಕಾಣುತ್ತಿದ್ದಾರೆ. ಕೊರೊನಾ ಸೋಂಕಿನ ಲಕ್ಷಣಗಳಾದ ಜ್ವರ, ಕೆಮ್ಮು ಅಥವಾ ಇನ್ಯಾವುದೆ ರೋಗ ಲಕ್ಷಣಗಳು ಕಂಡು ಬಂದಿಲ್ಲ ಎಂದು ಆರೋಗ್ಯ ಇಲಾಖೆಯ ಅದ್ಯಯನದಲ್ಲಿ ಬಹಿರಂಗವಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ.

ಪ್ರತಿದಿನ ಸರಾಸರಿ 30ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು

ಪ್ರತಿದಿನ ಸರಾಸರಿ 30ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು

ಈ ಅಧ್ಯಯನ ವರದಿ ಪ್ರಕಟವಾದ ಬೆನ್ನಲ್ಲಿಯೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಲ್ಲಿ ರಾಜ್ಯಾದ್ಯಂತ ಒಟ್ಟು 282 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಜೊತೆಗೆ ಪ್ರತಿದಿನ ಸರಾಸರಿ 30ಕ್ಕೂ ಹೆಚ್ಚು ಜನರಿಗೆ ಸೋಂಕು ತಗಲುತ್ತಿದೆ. ಜೊತೆಗೆ ಸೋಂಕು ದೃಢಪಟ್ಟ ಬಹುತೇಕರು ಯಾವುದೇ ಸೋಂಕಿತ ವ್ಯಕ್ತಿಯೊಂದಿಗೂ ನೇರ ಸಂಪರ್ಕ ಹೊಂದಿಲ್ಲ ಎಂಬುದು ಕಂಡು ಬಂದಿದೆ. ಹೀಗಾಗಿ ರೋಗ ಲಕ್ಷಗಳನ್ನು ತೋರಿಸದೇ, ಆರೋಗ್ಯವಂತರಂತೆ ಕಂಡು ಬರುವ ವ್ಯಕ್ತಿಗಳು ಸೋಂಕು ಹರಡುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತೀರ್ಮಾನಕ್ಕೆ ಬಂದಿದೆ. ಹೀಗಾಗಿ ಹಿಂದಿಗಿಂತಲೂ ಇದೀಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯ.

English summary
The Health Department report worries that the infection has been detected in those who do not have the coronavirus symptoms. The state health and family welfare department's report on the spread of the case is further alarming.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X