ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಯುಷ್ಮಾನ್ ಭಾರತ್ ಯೋಜನೆ: ವಾರದೊಳಗೆ ನೋಂದಣಿ ಆರಂಭ

|
Google Oneindia Kannada News

ಬೆಂಗಳೂರು, ಡಿಸೆಂಬರ್ 21: ಕರ್ನಾಟಕದ 44 ಇ ಆಸ್ಪತ್ರೆಗಳಿಗೆ ಆಯುಷ್ಮಾನ್‌ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಇನ್ನೊಂದು ವಾರದೊಳಗೆ ಆರಂಭವಾಗಲಿದೆ.

ಈಗಾಗಲೇ ಇ ಆಸ್ಪತ್ರೆ ಕಾರ್ಯಕ್ರಮದಡಿ ರಾಜ್ಯದ ನಾನಾ ಭಾಗಗಳ 44 ಆಸ್ಪತ್ರೆಗಳಿಗಳಿಗೆ ಕಂಪ್ಯೂಟರ್ ಹಾಗೂ ಅಗತ್ಯ ಉಪಕರಣ ಸರಬರಾಜು ಮಾಡಲಾಗಿದೆ. ಈ ಆಸ್ಪತ್ರೆಗಳು ಒಂದು ವಾರದೊಳಗೆ ನೋಂದಣಿ ಪ್ರಕ್ರಿಯೆ ಆರಂಭಿಸಲಿವೆ.

ಆಯುಷ್ಮಾನ್ ಭಾರತ- ‌ಆರೋಗ್ಯ ಕರ್ನಾಟಕ ಯೋಜನೆ ಅಡಿ 5 ಲಕ್ಷದ ತನಕ ಅನುಕೂಲ ಆಯುಷ್ಮಾನ್ ಭಾರತ- ‌ಆರೋಗ್ಯ ಕರ್ನಾಟಕ ಯೋಜನೆ ಅಡಿ 5 ಲಕ್ಷದ ತನಕ ಅನುಕೂಲ

ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ಸೇವೆ ಪಡೆಯುವ ರೋಗಿಗಳ ನೋಂದಣಿಗೆ ತಲಾ 10 ರೂ ಶುಲ್ಕ ಪಡೆದು, ಎ4 ಹಾಳೆಯ ಮೇಲೆ ನೋಂದಣಿ ಮಾಹಿತಿಯನ್ನು ಫಲಾನುಭವಿಗಳಿಗೆ ನೀಡಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ 4, ತಾಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೋಂದಣಿ ಪ್ರಕ್ರಿಯೆಗೆ ಒಂದು ಕೌಂಟರ್ ತೆರೆಯಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Health department instructed to start registration for Ayushman Bharat scheme

ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೊಜನೆಯ ಫಲಾನುಭವಿಗಳಿಗೆ ಡಿ.10ರಿಂದ ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಒನ್ ಕೇಂದ್ರದಲ್ಲಿ ಆರೋಗ್ಯ ಕಾರ್ಡ್ ವಿತರಣೆ ಪ್ರಕ್ರಿಯೆ ಆರಂಭವಾಗಿದೆ. ಡಿ.18ರವರೆಗೆ 85 ಕೇಂದ್ರಗಳಿಂದ 22,703 ಮಂದಿಗೆ ಕಾರ್ಡ್ ವಿತರಣೆ ಮಾಡಲಾಗಿದೆ.

English summary
Karnataka government instructed to officers to start registration process for Ayushman and arogya Karnataka scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X