ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ವ್ಯಾಕ್ಸಿನ್ ಗೊಂದಲ; ಆರೋಗ್ಯ ಇಲಾಖೆ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಮೇ 23; ಕರ್ನಾಟಕದಲ್ಲಿ ಕೋವಿಡ್ 19 ಲಸಿಕಾಕರಣದ ಬಗ್ಗೆ ಜನರಲ್ಲಿ ಹಲವಾರು ಗೊಂದಲ ಉಂಟಾಗಿದೆ. ಯಾರಿಗೆ ಲಸಿಕೆ ಸಿಗಲಿದೆ?, 18-44 ವರ್ಷದವರಿಗೆ ಯಾವಾಗ ಸಿಗಲಿದೆ? ಎಂದು ಜನರು ಪಶ್ನೆಗಳನ್ನು ಕೇಳುತ್ತಿದ್ದಾರೆ.

Recommended Video

Karnatakaದಲ್ಲಿ ಈಗ ಎಲ್ಲೆಲ್ಲಿ , ಎಷ್ಟು ಲಸಿಕೆ ಉಳಿದಿದೆ ? | Oneindia Kannada

ಆರೋಗ್ಯ ಇಲಾಖೆ ಪತ್ರಿಕಾ ಪ್ರಕಟಣೆ ಮೂಲಕ ಜನರಲ್ಲಿನ ಗೊಂದಲಗಳನ್ನು ಬಗೆಹರಿಸಿದೆ. ಗೊಂದಲ ನಿವಾರಣೆಗಾಗಿ ಈ ಸ್ಪಷ್ಟನೆ ನೀಡಲಾಗಿದೆ ಎಂದು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದೆ. 45 ವರ್ಷ ಮೇಲ್ಪಟ್ಟವರು, ಕೋವಿಶೀಲ್ಡ್ 2ನೇ ಡೋಸ್, ಕೊವ್ಯಾಕ್ಸಿನ್ ಮೊದಲ ಡೋಸ್, 18-44 ವಯೋಮಿತಿಯವರಿಗೆ ಲಸಿಕೆ ಬಗ್ಗೆ ವಿವರಣೆಯನ್ನು ನೀಡಲಾಗಿದೆ.

ಭಾರತದಲ್ಲಿ ಕೇವಲ ಶೇ.49ರಷ್ಟು ಕೊರೊನಾ ಯೋಧರಿಗೆ ಲಸಿಕೆ ಭಾರತದಲ್ಲಿ ಕೇವಲ ಶೇ.49ರಷ್ಟು ಕೊರೊನಾ ಯೋಧರಿಗೆ ಲಸಿಕೆ

ಸರ್ಕಾರ 18-44 ವಯೋಮಿತಿಯ ಜನರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಣೆ ಮಾಡಿದೆ. ಇದಕ್ಕಾಗಿ ಲಸಿಕೆ ತಯಾರಿಕಾ ಕಂಪನಿಗಳಿಂದ ನೇರವಾಗಿ ಖರೀದಿ ಮಾಡಲಾಗುತ್ತಿದೆ. ಮೊದಲಿಗೆ ರಾಜ್ಯ ಸರ್ಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ಮುಂದಿನ ದಿನಗಳಲ್ಲಿ ಆದ್ಯತೆ ಗುಂಪುಗಳಿಗೆ ಲಸಿಕೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.

ಕರ್ನಾಟಕಕ್ಕೆ ಬರಲಿದೆ 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಕರ್ನಾಟಕಕ್ಕೆ ಬರಲಿದೆ 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ

ಆರೋಗ್ಯ ಇಲಾಖೆ ಮಾಹಿತಿಯಂತೆ ಇದುವರೆಗೂ ಕರ್ನಾಟಕಕ್ಕೆ 1,24,20,510 ಡೋಸ್ ಲಸಿಕೆ ಬಂದಿದೆ. 1,01,60,060 ಕೋವಿಶೀಲ್ಡ್, 11,66,280 ಕೊವ್ಯಾಕ್ಸಿನ್ ಲಸಿಕೆಯನ್ನು ಕೇಂದ್ರ ಸರ್ಕಾರದಿಂದ ಪಡೆಯಲಾಗಿದೆ. 9,50,000 ಕೋವಿಶೀಲ್ಡ್, 1,44,170 ಕೊವ್ಯಾಕ್ಸಿನ್ ಡೋಸ್ ಲಸಿಕೆಯನ್ನು ರಾಜ್ಯ ಸರ್ಕಾರ ಖರೀದಿ ಮಾಡಿದೆ.

ಭಾರತದಲ್ಲಿ 125 ದಿನ: ಕೊರೊನಾವೈರಸ್ ಲಸಿಕೆ ವಿತರಣೆ ಲೆಕ್ಕಾಚಾರಭಾರತದಲ್ಲಿ 125 ದಿನ: ಕೊರೊನಾವೈರಸ್ ಲಸಿಕೆ ವಿತರಣೆ ಲೆಕ್ಕಾಚಾರ

ಆರೋಗ್ಯ ಇಲಾಖೆ ಸ್ಪಷ್ಟನೆ -1

ಆರೋಗ್ಯ ಇಲಾಖೆ ಸ್ಪಷ್ಟನೆ -1

45 ವರ್ಷ ಮೇಲ್ಪಟ್ಟವರಿಗೆ ಲಸಿಕೆ. ಕೋವಿಶೀಲ್ಡ್ ಮೊದಲ ಡೋಸ್ ನಗರ ಪ್ರದೇಶದಲ್ಲಿ ಆನ್‌ಲೈನ್ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆನ್‌ ಸೈಟ್ ನೋಂದಣಿ ಮೂಲಕ ಲಸಿಕಾಕರಣ ನಡೆಸುವುದು.

ಕೋವಿಶೀಲ್ಡ್ 2ನೇ ಡೋಸ್. ಹತ್ತಿರದ ಕೋವಿಡ್ 18 ಲಸಿಕಾಕರಣ ಕೇಂದ್ರಕ್ಕೆ ನೇರವಾಗಿ ತೆರಳಬಹುದು (ವಾಕ್ ಇನ್).

ಇಲಾಖೆ ಸ್ಪಷ್ಟನೆ - 2

ಇಲಾಖೆ ಸ್ಪಷ್ಟನೆ - 2

ಕೊವ್ಯಾಕ್ಸಿನ್ ಮೊದಲ ಡೋಸ್ ಲಸಿಕೆ ಸದ್ಯಕ್ಕೆ ಲಭ್ಯವಿರುವುದಿಲ್ಲ.

2ನೇ ಡೋಸ್ ಪಡೆಯಬೇಕಾದ ಫಲಾನುಭವಿಗಳಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ. ಎಸ್‌ಎಂಎಸ್‌ನಲ್ಲಿ ತಿಳಿಸಲಾದ ಕೋವಿಡ್ ಲಸಿಕಾಕರಣ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ಹೋಗಿ ಲಸಿಕೆ ಪಡೆಯಬಹುದು.

ಆರೋಗ್ಯ ಇಲಾಖೆ ಸ್ಪಷ್ಟನೆ -3

ಆರೋಗ್ಯ ಇಲಾಖೆ ಸ್ಪಷ್ಟನೆ -3

18-44 ವಯೋಮಿತಿಯ ಜನರಿಗೆ ಸದ್ಯಕ್ಕೆ ಲಸಿಕೆ ಲಭ್ಯವಿರುವುದಿಲ್ಲ.
ಆದರೆ ರಾಜ್ಯ ಸರ್ಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ/ ದುರ್ಬಲ ಗುಂಪಿನವರಿಗೆ ಮತ್ತು ಆದ್ಯತೆ ಗುಂಪಿನವರಿಗೆ ನೋಡೆಲ್ ಅಧಿಕಾರಿಗಳು ಲಸಿಕಾಕರಣದ ದಿನಾಂಕ ಮತ್ತು ಸಮಯದ ಮಾಹಿತಿಯನ್ನು ನೀಡುವರು.

ಆರೋಗ್ಯ ಇಲಾಖೆ ಟ್ವೀಟ್

ಲಸಿಕಾಕರಣದ ಮಾಹಿತಿಯನ್ನು ಆರೋಗ್ಯ ಇಲಾಖೆ ಕನ್ನಡ ಮತ್ತು ಇಂಗ್ಲಿಶ್ ಭಾಷೆಯಲ್ಲಿ ಟ್ವೀಟ್ ಮಾಡಿದೆ.

English summary
Many questions raised on the vaccine drive. Karnataka health department clarification on Corona vaccine drive in state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X