ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನುಮುಂದೆ ಕಾಲೇಜುಗಳಲ್ಲೇ ಸಿಗುತ್ತೆ ಆಧಾರ್ ಕಾರ್ಡ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 21: ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಕಾಲೇಜುಗಳಿಗೆ ಚೆಕ್ಕರ್ ಹಾಕಿ ಹೋಗಬೇಕಿಲ್ಲ, ಇನ್ನುಮುಂದೆ ಕಾಲೇಜಿನಲ್ಲಿಯೇ ಆಧಾರ್ ಅಪ್‌ಡೇಟ್ ಹಾಗೂ ನೋಂದಣಿ ಕ್ಯಾಂಪ್ ಗಳನ್ನು ನಡೆಸುವಂತೆ ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ರಾಜ್ಯದ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಹಾಗೂ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಆಧಾರ್ ನೋಂದಣಿ ಕ್ಯಾಂಪ್ ಗಳನ್ನು ಆಯೋಜಿಸಲಾಗುತ್ತದೆ. ಹೊಸ ಮೊಬೈಲ್ ಸಂಪರ್ಕ, ಬ್ಯಾಂಕ್ ಖಾತೆ, ಚಾಲನಾ ಪರವಾನಗಿ, ವಿದ್ಯಾರ್ಥಿ ವೇತನ, ಫೆಲೋಶಿಪ್, ಬೋರ್ಡ್ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು, ಪಾಸ್‌ಪೋರ್ಟ್ ಸೇರಿದಂತೆ ಅನೇಕ ಕಾರ್ಯಗಳಿಗೆ ಎಲ್ಲರಿಗೂ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ.

ಮೊಬೈಲ್ ಸಿಮ್ ಬೇಕಾದ್ರೆ, ಆಧಾರ್ ಜತೆಗೆ ಮುಖ ತೋರಿಸ್ಬೇಕಾಗುತ್ತೆ! ಮೊಬೈಲ್ ಸಿಮ್ ಬೇಕಾದ್ರೆ, ಆಧಾರ್ ಜತೆಗೆ ಮುಖ ತೋರಿಸ್ಬೇಕಾಗುತ್ತೆ!

ಆಧಾರ್ ಕಾರ್ಡ್ ನೋಂದಣಿ ಅಥವಾ ಅಪ್ ಡೇಟ್ ಮಾಡಿಕೊಳ್ಳಲು ಪ್ರೋತ್ಸಾಹಿಸುವಂತೆ ಸೂಚಿಸಲಾಗಿದೆ. ಆಧಾರ್ ನೋಂದಣಿ ಮಾಡಿಸದ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ನಿರಾಕರಿಸುವಂತಿಲ್ಲ ಎಂದು ಇಲಾಖೆ ತಿಳಿಸಿದೆ.

HE dept to install AADHAAR centers in degree colleges

ನಿಮ್ಮ ಫೋನಿನಲ್ಲೂ ಆಧಾರ್ ಟೋಲ್ ಫ್ರಿ ನಂಬರ್ ಸೇವ್ ಆಗಿದ್ಯಾ? ನಿಮ್ಮ ಫೋನಿನಲ್ಲೂ ಆಧಾರ್ ಟೋಲ್ ಫ್ರಿ ನಂಬರ್ ಸೇವ್ ಆಗಿದ್ಯಾ?

ಹತ್ತಿರದಲ್ಲಿ ಲಭ್ಯವಿರುವ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಂತಹ ಆಧಾರ್ ನೋಂದಣಿ ಕೇಂದ್ರಗಳ ಮೂಲಕ ನೋಂದಣಿಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಾಲೇಜುಗಳಲ್ಲಿ ಆಧಾರ್ ಕ್ಯಾಂಪ್ ಏರ್ಪಡಿಸಬೇಕು ಎಂದು ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

English summary
Higher education department has issued a circular stating that every degree colleges in the state should have open AADHAAR counter and UID cards should issued to the students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X