ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಜಿ ಹಿಡಿದು ಸ್ನೇಹಿತನನ್ನು ಭೇಟಿ ಮಾಡಿದ ಎಚ್. ಡಿ. ರೇವಣ್ಣ!

|
Google Oneindia Kannada News

ಬೆಂಗಳೂರು, ಜೂನ್ 15; "ಬಸವರಾಜ ಬೊಮ್ಮಾಯಿ ನಮ್ಮ ಹಳೆಯ ಸ್ನೇಹಿತ. ನಮ್ಮ ಪಕ್ಷದಲ್ಲಿ ಇದ್ದವರು. ರಾಜಕೀಯದ ಬಗ್ಗೆ ಚರ್ಚೆ ನಡೆಸಿಲ್ಲ" ಎಂದು ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ ಹೇಳಿದರು.

ಬೆಂಗಳೂರಿನ ಆರ್. ಟಿ. ನಗರದಲ್ಲಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಮಂಗಳವಾರ ಎಚ್. ಡಿ. ರೇವಣ್ಣ ಆಗಮಿಸಿದ್ದರು. ರೇವಣ್ಣ ಕೈಯಲ್ಲಿ ಅರ್ಜಿ ಹಿಡಿದು ಗೃಹ ಸಚಿವರನ್ನು ಭೇಟಿಯಾಗಿದ್ದು ಕುತೂಹಲಕ್ಕೆ ಕಾರಣವಾಗಿತ್ತು.

 ಪ್ರಧಾನಿ ಮೋದಿಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ 'ಆಕ್ಸಿಜನ್' ಪತ್ರ! ಪ್ರಧಾನಿ ಮೋದಿಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ 'ಆಕ್ಸಿಜನ್' ಪತ್ರ!

"ಹೊಳೆನರಸೀಪುರದಲ್ಲಿ ಒಂದು ಪೊಲೀಸ್ ಠಾಣೆ ಆಗಬೇಕಿತ್ತು. ಅದಕ್ಕಾಗಿ ಬಂದಿದ್ದೆ ಅಷ್ಟೇ, ರಾಜಕೀಯದ ಬಗ್ಗೆ ಚರ್ಚೆ ನಡೆಸಿಲ್ಲ. ಯಡಿಯೂರಪ್ಪ ಬದಲಾವಣೆ ವಿಚಾರ, ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ" ಎಂದು ಎಚ್. ಡಿ. ರೇವಣ್ಣ ಸ್ಪಷ್ಟಪಡಿಸಿದರು.

ಕಾಳಿ ವಿಗ್ರಹಕ್ಕೆ ಹಾನಿ; ದೇವಾಲಯಕ್ಕೆ ಪ್ರಜ್ವಲ್ ರೇವಣ್ಣ ಭೇಟಿ ಕಾಳಿ ವಿಗ್ರಹಕ್ಕೆ ಹಾನಿ; ದೇವಾಲಯಕ್ಕೆ ಪ್ರಜ್ವಲ್ ರೇವಣ್ಣ ಭೇಟಿ

HD Revanna Meets Home Minister Basavaraj Bommai

ಎಚ್. ಡಿ. ರೇವಣ್ಣ ಹಾಸನ ಜಿಲ್ಲೆ ಹೊಳೆನರಸೀಪುರ ಕ್ಷೇತ್ರದ ಶಾಸಕರು. ವಿವಿಧ ಪಕ್ಷಗಳ ನಾಯಕರ ಜೊತೆ ಉತ್ತಮ ಸಂಬಂಧವನ್ನು ರೇವಣ್ಣ ಹೊಂದಿದ್ದಾರೆ. ಕಳೆದ ವಾರ ಮುಖ್ಯಮಂತ್ರಿ ಯಡಿಯೂರಪ್ಪ ಹಾಸನಕ್ಕೆ ಭೇಟಿ ಕೊಟ್ಟಾಗ ಶಿಷ್ಟಾಚಾರ ಬದಿಗೊತ್ತಿ, ರೇವಣ್ಣರನ್ನು ಪಕ್ಕದಲ್ಲಿ ಕೂರಿಸಿಕೊಂಡು ಅಧಿಕಾರಿಗಳ ಸಭೆ ಮಾಡಿದ್ದರು.

ಬಿಜೆಪಿ ಸೇರಿದ್ದ ನೆನಪು; ಬಸವರಾಜ ಬೊಮ್ಮಾಯಿ ಜನತಾ ಪರಿವಾರದಲ್ಲಿದ್ದರು. ಕಳೆದ ವಾರ ಹಾನಗಲ್ ಶಾಸಕ ಸಿ. ಎಂ. ಉದಾಸಿ ಮೃತಪಟ್ಟಾಗ ಬಸವರಾಜ ಬೊಮ್ಮಾಯಿ ಬಿಜೆಪಿ ಸೇರಿದ ಸಮಯವನ್ನು ನೆನಪು ಮಾಡಿಕೊಂಡಿದ್ದರು. ಈ ಕುರಿತು ಫೇಸ್ ಬುಕ್ ಪೋಸ್ಟ್ ಹಾಕಿದ್ದರು.

"ಆಗ ನಾನು ಜನತಾ ಪರಿವಾರದಲ್ಲಿ ಇದ್ದೆ. ಸಿಎಂ ಉದಾಸಿ ಅವರು ಒಂದು ದಿನ ನನ್ನನ್ನು ಹಾನಗಲ್ಲಿಗೆ ಕರೆಯಿಸಿಕೊಂಡರು. ಅಂದು ಅವರ ಹುಟ್ಟುಹಬ್ಬ. ಇಡೀ ದಿನ ಅವರು ನನ್ನನ್ನು ತಮ್ಮ ಜೊತೆ ಇರಿಸಿಕೊಂಡಿದ್ದರು. ಮರುದಿನ ಬೆಂಗಳೂರಿಗೆ ಕರೆದುಕೊಂಡು ಹೋದರು. ಬಿಜೆಪಿ ರಾಷ್ಟ್ರೀಯ ಮುಖಂಡ ರಾಜನಾಥ್ ಸಿಂಗ್ ಹಾಗೂ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿಸಿದರು.‌ ಭಾರತೀಯ ಜನತಾ ಪಕ್ಷ ಸೇರುವಂತೆ ಸಲಹೆ ನೀಡಿದರು" ಎಂದು ಬರೆದುಕೊಂಡಿದ್ದರು.

Recommended Video

ಯಡಿಯೂರಪ್ಪನವರ ಸಿಎಂ ಕುರ್ಚಿಗೆ ಕಂಟಕ ತರುತ್ತಾ ಹಳೇ ಕೇಸ್!! | Oneindia Kannada

"ಆದರೆ ಆಗ ಬಿಜೆಪಿ ಸೇರಲು ಮಾನಸಿಕವಾಗಿ ನಾನು ಅಷ್ಟು ಸಿದ್ಧವಿರಲಿಲ್ಲ. ಆದರೂ ಆಗ ಅವರು ಬಿಜೆಪಿಗೆ ಬರುವಂತೆ ನನ್ನ ಮನಸ್ಸು ಒಲಿಸಿದರು. ಹೀಗಾಗಿ ನಾನು ಬಿಜೆಪಿಗೆ ಬರಲು ಸಿಎಂ ಉದಾಸಿ ಅವರೇ ಕಾರಣೀಭೂತ ವ್ಯಕ್ತಿ ಆದರು. ನನ್ನ ತಂದೆ ಎಸ್. ಆರ್ . ಬೊಮ್ಮಾಯಿ ಅವರು ತೀರಿ ಕೊಂಡ ನಂತರ ಸಿಎಂ ಉದಾಸಿ ಅವರೇ ನನಗೆ ಗಾಡ್ ಫಾದರ್ ಆದರು!. ಸಿಎಂ ಉದಾಸಿ ಅವರು ಇಷ್ಟು ಬೇಗ ನಮ್ಮನ್ನು ಆಗಲುತ್ತಾರೆ ಅಂದುಕೊಂಡಿರಲಿಲ್ಲ" ಎಂದು ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದರು.

English summary
JD(S) leader and former minister H. D. Revanna met home minister of Karnataka Basavaraj Bommai in Bengalauru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X