ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಆಡಳಿತ ಭಾಷೆಯಾಗಲು ಕುಮಾರಣ್ಣನ ದಿಟ್ಟ ಹೆಜ್ಜೆ

|
Google Oneindia Kannada News

Recommended Video

ಕನ್ನಡ ಭಾಷೆಗೆ ಪ್ರಾಮುಖ್ಯತೆ ಕೊಡುವ ಸಲುವಾಗಿ ಎಚ್ ಡಿ ಕೆ ಇಟ್ಟ ದಿಟ್ಟ ಹೆಜ್ಜೆ | Oneindia Kannada

ಬೆಂಗಳೂರು, ಅಕ್ಟೋಬರ್ 22 : ಆಡಳಿತದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಜಾರಿಗೆ ತರಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಿಟ್ಟ ಹೆಜ್ಜೆ ಇಡಲಿದ್ದಾರೆ. ಹೌದು, ಮುಖ್ಯಮಂತ್ರಿಗಳ ಮುಂದೆ ಬರುವ ಎಲ್ಲಾ ಆಡಳಿತಾತ್ಮಕ ಕಡತಗಳು ಕನ್ನಡದಲ್ಲಿ ಕಡ್ಡಾಯವಾಗಿ ಇರಬೇಕು.

ಕರ್ನಾಟಕದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಆಡಳಿತ ಭಾಷೆಯಾಗಿ ಮಾಡಲು ಹಲವು ಪ್ರಯತ್ನಗಳು ನಡೆದಿದ್ದವು. ಆದರೆ, ಯಾವುದೂ ಸಹ ಪರಿಣಾಮಕಾರಿಯಾಗಿ ಜಾರಿಗೆ ಬಂದಿರಲಿಲ್ಲ. ಹಲವು ಇಲಾಖೆಗಳ ಕಡತ ಈಗಲೂ ಇಂಗ್ಲಿಷ್‌ನಲ್ಲಿಯೇ ಇರುತ್ತವೆ.

ಕನ್ನಡದಲ್ಲೇ ನಾಮಫಲಕಕ್ಕೆ ಕೊನೆಗೂ ಕಾನೂನು ರೂಪಿಸಲು ನಿರ್ಧಾರಕನ್ನಡದಲ್ಲೇ ನಾಮಫಲಕಕ್ಕೆ ಕೊನೆಗೂ ಕಾನೂನು ರೂಪಿಸಲು ನಿರ್ಧಾರ

ಎಚ್.ಡಿ.ಕುಮಾರಸ್ವಾಮಿ ಅವರು ಈಗ ಕನ್ನಡವನ್ನು ಆಡಳಿತದಲ್ಲಿ ಕಡ್ಡಾಯಗೊಳಿಸಲು ಮುಂದಾಗಿದ್ದಾರೆ. ನವೆಂಬರ್ 1 ರಿಂದ ಮುಖ್ಯಮಂತ್ರಿಗಳ ಕಚೇರಿಗೆ ಬರುವ ಎಲ್ಲಾ ಕಡತಗಳು ಕನ್ನಡದಲ್ಲಿರಬೇಕು ಎಂದು ಸೂಚನೆ ನೀಡಲಾಗಿದೆ. ಈ ಕುರಿತು ಸುತ್ತೋಲೆ ಶೀಘ್ರದಲ್ಲೇ ಪ್ರಕಟವಾಗಲಿದೆ.

ಮುತ್ತು-ಹವಳಗಳ ನಾಡು ಬಹರೇನ್‌ನಲ್ಲಿ ಕನ್ನಡ ಡಿಂಡಿಮಮುತ್ತು-ಹವಳಗಳ ನಾಡು ಬಹರೇನ್‌ನಲ್ಲಿ ಕನ್ನಡ ಡಿಂಡಿಮ

ಆಡಳಿತದಲ್ಲಿ ಕನ್ನಡವನ್ನು ಕಡ್ಡಾಯ ಮಾಡಿದರೆ ಪ್ರಾದೇಶಿಕ ಭಾಷೆ ಬೆಳವಣಿಗೆಗೆ ಸಹಾಯಕವಾಗಲಿದೆ. ಶೀಘ್ರವಾಗಿ ಸರ್ಕಾರಿ ಕೆಲಸಗಳನ್ನು ಮಾಡಲು ಅನುಕೂಲವಾಗಲಿದೆ. ಆಂಗ್ಲ ಭಾಷೆಯ ಕಡತಗಳಿಂದ ಆಡಳಿತದಲ್ಲಿ ಹಲವು ಗೊಂದಲಗಳು ಉಂಟಾಗುತ್ತಿವೆ, ಇವುಗಳನ್ನು ತಡೆಯಲು ಸಹಾಕಯವಾಗಲಿದೆ.

84ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಕಂಬಾರ ಆಯ್ಕೆ84ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಕಂಬಾರ ಆಯ್ಕೆ

ನವೆಂಬರ್ 1ರಿಂದ ಕನ್ನಡ ಕಡ್ಡಾಯ

ನವೆಂಬರ್ 1ರಿಂದ ಕನ್ನಡ ಕಡ್ಡಾಯ

ನವೆಂಬರ್ 1ರಿಂದ ಮುಖ್ಯಮಂತ್ರಿಗಳ ಕಚೇರಿಗೆ ಬರುವ ಕಡತಗಳು ಕನ್ನಡದಲ್ಲಿಯೇ ಇರಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಆಂಗ್ಲ ಭಾಷೆಯಲ್ಲಿ ಕಡತಗಳನ್ನು ಕಳಿಸಿದರೆ ಅದನ್ನು ವಾಪಸ್ ಕಳಿಸಿ ಎಂದು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಇಲಾಖೆಗಳಿಗೆ ಈ ಕುರಿತು ಮಾಹಿತಿ ನೀಡುವ ಸುತ್ತೋಲೆ ಶೀಘ್ರದಲ್ಲೇ ಪ್ರಕಟವಾಗಲಿದೆ.

ಯಾವ ಕಡತಕ್ಕೆ ವಿನಾಯಿತಿ

ಯಾವ ಕಡತಕ್ಕೆ ವಿನಾಯಿತಿ

ಮುಖ್ಯಮಂತ್ರಿಗಳ ಕಚೇರಿಗೆ ಬರುವ ಎಲ್ಲಾ ಕಡತ ಕನ್ನಡದಲ್ಲಿ ಇರಬೇಕು ಎಂದು ಸೂಚಿಸಲಾಗಿದೆ. ಆದರೆ, ಕೆಲವು ಕಡತಗಳಿಗೆ ವಿನಾಯಿತಿ ನೀಡಲಾಗಿದೆ. ಅಂತರರಾಜ್ಯದ ಕಡತಗಳು, ಕೇಂದ್ರ ಸರ್ಕಾರಕ್ಕೆ ಕಳಿಸುವ ಪ್ರಸ್ತಾವನೆ, ಪತ್ರಗಳು ಮತ್ತು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ಗೆ ಹೋಗುವ ಕಡತಗಳು ಆಂಗ್ಲ ಭಾಷೆಯಲ್ಲಿರಲಿ ಎಂದು ಸೂಚಿಸಲಾಗಿದೆ.

ಹಲವು ಸುತ್ತೋಲೆಗಳು ಬಂದವು

ಹಲವು ಸುತ್ತೋಲೆಗಳು ಬಂದವು

ಕರ್ನಾಟಕ ಆಡಳಿತ ಭಾಷೆ ಕನ್ನಡವಾಗಿರಬೇಕು ಎಂದು ಹಲವು ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಹಿಂದಿನ ಸರ್ಕಾರವೂ ಈ ಬಗ್ಗೆ ಪ್ರಯತ್ನ ನಡೆಸಿತ್ತು. ಆದರೆ, ಅವುಗಳ ಜಾರಿ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಆದ್ದರಿಂದ, ಕಡತದಲ್ಲಿ ಇಂಗ್ಲಿಶ್ ಸೇರಿಕೊಂಡಿದೆ. ಆದ್ದರಿಂದ, ಈಗ ಎಲ್ಲಾ ಇಲಾಖೆಗಳಿಗೆ ಮತ್ತೊಂದು ಸುತ್ತೋಲೆ ಕಳಿಸಿ ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಸೂಚನೆ ನೀಡಲಾಗುತ್ತದೆ. ಇಂಗ್ಲಿಶ್‌ನಲ್ಲಿ ಕಡತ ಕಳಿಸಿದರೆ ಅದನ್ನು ಇಲಾಖೆಗೆ ವಾಪಸ್ ಕಳಿಸಲಾಗುತ್ತದೆ.

ಕಾನೂನಿನ ಮಾನ್ಯತೆ ಬೇಕು

ಕಾನೂನಿನ ಮಾನ್ಯತೆ ಬೇಕು

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿರ್ಧಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ನಟ ಮುಖ್ಯಮಂತ್ರಿ ಚಂದ್ರು ಸ್ವಾಗತಿಸಿದ್ದಾರೆ. 'ಹಿಂದೆಯೂ ಈ ರೀತಿಯ ಹಲವು ಸುತ್ತೋಲೆ ಬಂದಿತ್ತು. ಆದರೆ, ಪರಿಣಾಮಕಾರಿಯಾಗಿ ಜಾರಿ ಅಗಲಿಲ್ಲ. ಕಾನೂನಿನ ಮೂಲಕ ಬದಲಾವಣೆ ತಂದರೆ ಆಡಳಿತದಲ್ಲಿ ಕನ್ನಡ ಕಡ್ಡಾಯ ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

English summary
From November 1, 2018 all administrative files that come to the Chief Minister H.D.Kumaraswamy office should be in Kannada. If file is in English they will be returned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X