ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಸಿಎಂ ಕುಮಾರಸ್ವಾಮಿ ಅವರ ಓದುವ ಆಸಕ್ತಿ ನಿಮಗೆ ಗೊತ್ತಾ?

|
Google Oneindia Kannada News

ಬೆಂಗಳೂರು, ಏ. 23: ಕೊರೊನಾ ವೈರಸ್ ತಂದಿಟ್ಟಿರುವ ಸಂಕಷ್ಟದಿಂದ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ದಿ. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಬರೆದಿರುವ "ಎ ಲೈಫ್ ಆಫ್ ಟ್ರುಥ್ ಇನ್ ಪಾಲಿಟಿಕ್ಸ್' ಉಸ್ತಕವನ್ನು ಓದುತ್ತಿರುವುದಾಗಿ ಹೇಳಿದ್ದಾರೆ.

Recommended Video

ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತನ ಮನೆಗೆ ಭೇಟಿ ನೀಡಿದ ಕುಮಾರಸ್ವಾಮಿ | HD Kumaraswamy

ವಿಶ್ವ ಪುಸ್ತಕ ದಿನದ ಹಿನ್ನೆಲೆಯಲ್ಲಿ ಪುಸ್ತಕ ಪ್ರೇಮಿಗಳಿಗೆ ಶುಭಾಶಯಗಳನ್ನು ಮಾಜಿ ಸಿಎಂ ಎಚ್‌ಡಿಕೆ ತಿಳಿಸಿದ್ದಾರೆ. ನನ್ನ ಮನೆಯಲ್ಲಿ ನನ್ನದೇ ಆದ ಪುಟ್ಟ ಖಾಸಗಿ ಲೈಬ್ರರಿ ಇದೆ. ನೂರಾರು ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳ ಸಂಗ್ರಹವಿದೆ. ಈಗ ನಾನು ಓದುತ್ತಿರುವುದು ದಿ. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ A Life of Truth in Politics ಪುಸ್ತಕ. ಈ ಸಂದರ್ಭದಲ್ಲಿ ಎಲ್ಲಾ ಪುಸ್ತಕ ಪ್ರೇಮಿಗಳಿಗೆ ವಿಶ್ವ ಪುಸ್ತಕ ದಿನದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

HD Kumaraswamy Tweet On World Book Day 2020

ಪುಸ್ತಕ ಮೇಳಗಳಿಗೆ ಹೋಗಿ ನನಗಿಷ್ಟವಾದ ಪುಸ್ತಕಗಳನ್ನು ಖರೀದಿಸುವ ಅಭ್ಯಾಸವೂ ಇದೆ. ಪುಸ್ತಕ ಓದಿದ ನಂತರ ಇಷ್ಟದ ಲೇಖಕರೊಂದಿಗೆ ಚರ್ಚಿಸುವ ಅಭ್ಯಾಸವೂ ಇದೆ. ಬೋಳುವಾರು ಮಹಮದ್ ಅವರ "ಸ್ವಾತಂತ್ರ್ಯದ ಓಟ' ಕಾದಂಬರಿ ಓದಿದ ನಂತರ ಅವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದ್ದೆ. ಆರಂಭದಲ್ಲಿ ಅವರು ನಂಬಲು ಸಿದ್ಧರಿರಲಿಲ್ಲ ಎಂದು ತಮ್ಮ ಓದುವ ಆಸಕ್ತಿಯ ಕುರಿತು ಕುಮಾರಸ್ವಾಮಿ ಅವರು ಹೇಳಿಕೊಂಡಿದ್ದಾರೆ.

English summary
Former CM HDK tweeted about his reading habits. Kumaraswamy said he was reading the book A Life of Truth in Politics written by former Prime Minister Lal Bahadur Shastri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X