ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮ ವಾಸ್ತವ್ಯ:ಬೆಂಗಳೂರಿಂದ ಯಾದಗಿರಿಗೆ ರೈಲು ಹತ್ತಿದ ಕುಮಾರಸ್ವಾಮಿ

|
Google Oneindia Kannada News

Recommended Video

ಗ್ರಾಮ ವಾಸ್ತವ್ಯ ಮಾಡಲು ಯಾದಗಿರಿಗೆ ರೈಲಿನಲ್ಲಿ ಪ್ರಯಾಣ | Oneindia Kannada

ಬೆಂಗಳೂರು, ಜೂನ್ 20: ಸಿಎಂ ಕುಮಾರಸ್ವಾಮಿ ಅವರು ಈ ಅವಧಿಯ ಮೊದಲ ಗ್ರಾಮ ವಾಸ್ತವ್ಯ ಮಾಡಲು ಯಾದಗಿರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಇಂದು ಸಂಜೆ 7 ಗಂಟೆ ವೇಳೆಗೆ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಯಾದಗಿರಿಗೆ ಕರ್ನಾಟಕ ರೈಲ್ವೆ ಎಕ್ಸ್‌ಪ್ರೆಸ್‌ ನಲ್ಲಿ ಅಧಿಕಾರಿಗಳ ಜೊತೆ ಕುಮಾರಸ್ವಾಮಿ ಪ್ರಯಾಣ ಆರಂಭಿಸಿದ್ದಾರೆ. ರೈಲು ಬೆಳಗಿನ ಜಾವ 3 ಗಂಟೆ ವೇಳೆಗೆ ಯಾದಗಿರಿ ತಲುಪುವ ಸಾಧ್ಯತೆ ಇದೆ.

ಹಲವು ಅಧಿಕಾರಿಗಳು, ಬೆಂಗಳೂರು ಪೊಲೀಸ್ ಹೊಸ ಕಮಿಷನರ್ ಅಲೋಕ್ ಕುಮಾರ್, ಪಕ್ಷದ ಮುಖಂಡರು, ಹಿತೈಷಿಗಳು ಕುಮಾರಸ್ವಾಮಿ ಅವರನ್ನು ಬೀಳ್ಕೊಡಲು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು.

ಚಂಡರಕಿ ಗ್ರಾಮದಲ್ಲಿ ಶುಕ್ರವಾರ ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಚಂಡರಕಿ ಗ್ರಾಮದಲ್ಲಿ ಶುಕ್ರವಾರ ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ

ಕುಮಾರಸ್ವಾಮಿ ಅವರು ನಾಳೆ ಬೆಳಿಗ್ಗೆ ಯಾದಗಿರಿ ಜಿಲ್ಲೆಯ ಗುರುಮಿಟ್‌ಕಲ್ ತಾಲ್ಲೂಕಿನ ಚಂಡರಕಿ ಗ್ರಾಮದಲ್ಲಿ ಕುಮಾರಸ್ವಾಮಿ ಅವರು ಈ ಅವಧಿಯ ಮೊದಲ ಗ್ರಾಮ ವಾಸ್ತವ್ಯ ಆರಂಭವಾಗಲಿದೆ.

ಬೆಳಿಗ್ಗೆ 10 ಗಂಟೆಯಿಂದ ಅವಹಾಲು ಸ್ವೀಕಾರ

ಬೆಳಿಗ್ಗೆ 10 ಗಂಟೆಯಿಂದ ಅವಹಾಲು ಸ್ವೀಕಾರ

ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ನಾಳೆ ಬೆಳಿಗ್ಗೆ 10 ಗಂಟೆ ವೇಳೆಗೆ ಪ್ರಾರಂಭವಾಗಲಿದೆ. ಚಂಡರಕಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕುಮಾರಸ್ವಾಮಿ ವಾಸ್ತವ್ಯ ಹೂಡಲಿದ್ದಾರೆ.

ಕಲಬುರಗಿಯಲ್ಲಿ ಜೂನ್ 22ಕ್ಕೆ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕಲಬುರಗಿಯಲ್ಲಿ ಜೂನ್ 22ಕ್ಕೆ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ

ಎಲ್ಲ ವ್ಯವಸ್ಥೆಯೂ ಮಾಡಿದೆ ಜಿಲ್ಲಾಡಳಿತ

ಎಲ್ಲ ವ್ಯವಸ್ಥೆಯೂ ಮಾಡಿದೆ ಜಿಲ್ಲಾಡಳಿತ

ಶಾಲೆಯ ಬಳಿ ಈಗಾಗಲೇ ಸಕಲ ತಯಾರಿ ನಡೆದಿದ್ದು, ಭಾರಿ ಪೆಂಡಾಲು, ಊಟದ ವ್ಯವಸ್ಥೆ, ಅವಹಾಲು ಸ್ವೀಕರಿಸಲು ಕೌಂಟರುಗಳು, ವೇದಿಕೆ ಎಲ್ಲವೂ ಅಚ್ಚುಕಟ್ಟಾಗಿ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಜಿಲ್ಲೆಯ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ ಅವರು ಇಂದು ವ್ಯವಸ್ಥೆಯ ಪರಿಶೀಲನೆ ನಡೆಸಿದ್ದಾರೆ.

ಜನತಾ ದರ್ಶನ, ಅವಹಾಲು ಸ್ವೀಕಾರ ನಡೆಯಲಿದೆ

ಜನತಾ ದರ್ಶನ, ಅವಹಾಲು ಸ್ವೀಕಾರ ನಡೆಯಲಿದೆ

ನಾಳೆ ಬೆಳಿಗ್ಗೆ ಚಂಡರಕಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 6 ಗಂಟೆ ವರೆಗೆ ಕುಮಾರಸ್ವಾಮಿ ಅವರು ಜನತಾ ದರ್ಶನ ನಡೆಸಲಿದ್ದಾರೆ. ಜನರ ಅವಹಾಲುಗಳನ್ನು ಪಡೆಯಲಿದ್ದಾರೆ. ಹಾಗೂ ಸಮಸ್ಯೆ ಪರಿಹಾರಕ್ಕೆ ಸೂಚನೆಗಳನ್ನು ನೀಡಲಿದ್ದಾರೆ.

ಯಾದಗಿರಿ : ಕುಮಾರಸ್ವಾಮಿ ಗ್ರಾಮ ವಾಸ್ತವ್ಯ, ಕಾರ್ಯಕ್ರಮ ಪಟ್ಟಿ ಯಾದಗಿರಿ : ಕುಮಾರಸ್ವಾಮಿ ಗ್ರಾಮ ವಾಸ್ತವ್ಯ, ಕಾರ್ಯಕ್ರಮ ಪಟ್ಟಿ

ರೈತರೊಂದಿಗೆ ಸಂವಾದ, ಮಕ್ಕಳೊಂದಿಗೆ ಊಟ

ರೈತರೊಂದಿಗೆ ಸಂವಾದ, ಮಕ್ಕಳೊಂದಿಗೆ ಊಟ

ಸಂಜೆ 6:30 ರ ನಂತರ ರೈತರೊಂದಿಗೆ ಕುಮಾರಸ್ವಾಮಿ ಅವರು ಸಂವಾದ ನಡೆಸಲಿದ್ದಾರೆ. ಆ ನಂತರ ಮಕ್ಕಳ ಸಾಂಕಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿ, ಮಕ್ಕಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಆ ನಂತರ ಶಾಲೆಯಲ್ಲಿಯೇ ಶಿಕ್ಷಕರು ಮತ್ತು ಮಕ್ಕಳೊಂದಿಗೆ ಊಟ ಮಾಡಲಿದ್ದಾರೆ. ನಂತರ ಶಾಲೆಯಲ್ಲಿಯೇ ನಿದ್ರಿಸಲಿದ್ದಾರೆ.

ಚಂಡರಿಕೆ ಗ್ರಾಮದಿಂದ ಹೆರೂರು ಗ್ರಾಮಕ್ಕೆ ಪ್ರಯಾಣ

ಚಂಡರಿಕೆ ಗ್ರಾಮದಿಂದ ಹೆರೂರು ಗ್ರಾಮಕ್ಕೆ ಪ್ರಯಾಣ

ಮಾರನೇಯ ದಿನ (ಶನಿವಾರ) ಬೆಳಿಗ್ಗೆ 7:30 ಕ್ಕೆ ಚಂಡರಕಿ ಗ್ರಾಮದಿಂದ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕು ಹೆರೂರು ಗ್ರಾಮಕ್ಕೆ ಪ್ರಯಾಣ ಬೆಳೆಸಲಿದ್ದು, ಅಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

English summary
HD Kumaraswamy today evening catch train to Yadgiri. He is going to stay in Yadgiri's Chandaraki village. It is his first village stay in this government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X