ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಆ ಹೇಳಿಕೆ ಸಿ. ಪಿ. ಯೋಗೇಶ್ವರ್‌ಗೆ ಲಾಭವಾಗುತ್ತಾ?

By ರಾಮನಗರ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಫೆಬ್ರವರಿ 17; ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ನೀಡಿರುವ ಹೇಳಿಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದಿಗಿಲೆಬ್ಬಿಸಿದರೆ, ಇತ್ತ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ನಲ್ಲಿ ತಲ್ಲಣವನ್ನುಂಟು ಮಾಡಿದೆ. ಇದರ ಸದುಪಯೋಗಕ್ಕೆ ಮಾಜಿ ಸಚಿವ ಸಿ. ಪಿ. ಯೋಗೇಶ್ವರ್ ರೆಡಿಯಾಗಿದ್ದಾರೆ.

ಒಂದಷ್ಟು ವರ್ಷಗಳ ಕಾಲ ಮೌನವಾಗಿದ್ದ ಮಾಜಿ ಸಚಿವ ಸಿ. ಪಿ. ಯೋಗೇಶ್ವರ್ ಸಂಕ್ರಾಂತಿ ಬಳಿಕ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದು, ತಮ್ಮ ಕಾರ್ಯಕ್ಷೇತ್ರದಲ್ಲಿ ನಿಧಾನವಾಗಿ ಒಂದೊಂದೇ ತಂತ್ರವನ್ನು ಆರಂಭಿಸುವುದರೊಂದಿಗೆ ಮುಂದಿನ ಚುನಾವಣೆಯಲ್ಲಿ ಗೆಲುವಿನ ಕನಸು ಕಾಣುತ್ತಿದ್ದಾರೆ. ಹೀಗಿರುವಾಗಲೇ ಕುಮಾರಸ್ವಾಮಿ ಹೇಳಿಕೆ ಯೋಗೇಶ್ವರ್‌ಗೆ ವರದಾನವಾಗಿದೆ.

ವರ್ಷಕ್ಕೂ ಮೊದಲು ಅಭ್ಯರ್ಥಿಗಳ ಪಟ್ಟಿ; ಏನಿದು ಎಚ್‌ಡಿಕೆ ಲೆಕ್ಕಾಚಾರ! ವರ್ಷಕ್ಕೂ ಮೊದಲು ಅಭ್ಯರ್ಥಿಗಳ ಪಟ್ಟಿ; ಏನಿದು ಎಚ್‌ಡಿಕೆ ಲೆಕ್ಕಾಚಾರ!

2018ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಸೋಲನ್ನು ಕಂಡಿದ್ದರು ಯೋಗೇಶ್ವರ್. ಆದರೆ ಈ ಬಾರಿ ಗೆದ್ದೇ ಗೆಲ್ಲಲೇಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ 87,995 ಮತ ಪಡೆದಿದ್ದರೆ, ಬಿಜೆಪಿಯ ಸಿ. ಪಿ. ಯೋಗೇಶ್ವರ್ 66,465 ಮತ್ತು ಕಾಂಗ್ರೆಸ್‍ ನ ಎಚ್. ಎಂ. ರೇವಣ್ಣ 30,208 ಮತ ಪಡೆದಿದ್ದರು.

ಸಿಪಿ ಯೋಗೇಶ್ವರ್‌ಗೆ ಕುಮಾರಸ್ವಾಮಿ ಕೊಟ್ಟ ಸಲಹೆ ಏನು? ಸಿಪಿ ಯೋಗೇಶ್ವರ್‌ಗೆ ಕುಮಾರಸ್ವಾಮಿ ಕೊಟ್ಟ ಸಲಹೆ ಏನು?

2018ರ ವಿಧಾನಸಭೆ ಚುನಾವಣೆ ತನಕವೂ ಯೋಗೇಶ್ವರ್ ಯಾವುದೇ ಪಕ್ಷಕ್ಕೆ ಹೋದರೂ ಅವರನ್ನು ಗೆಲ್ಲಿಸುವ ಮತದಾರರಿದ್ದರು. ಆದರೆ ಕುಮಾರಸ್ವಾಮಿ ಸ್ಪರ್ಧಿಸಿದ್ದರಿಂದ ಯೋಗೇಶ್ವರ್ ಸೋಲುವಂತಾಯಿತು. ರಾಮನಗರದಲ್ಲಿಯೂ ಕಣಕ್ಕಿಳಿದಿದ್ದ ಕುಮಾರಸ್ವಾಮಿ ಅಲ್ಲಿಯೂ ಗೆಲುವು ಕಂಡಿದ್ದರು. ಆದರೆ ಚನ್ನಪಟ್ಟಣ ಉಳಿಸಿಕೊಂಡು ರಾಮನಗರ ಕ್ಷೇತ್ರದಲ್ಲಿ ರಾಜೀನಾಮೆ ನೀಡಿದರು.

ಮಂಡ್ಯ; ಜೆಡಿಎಸ್ ಭದ್ರಕೋಟೆಯಲ್ಲೀಗ ರಾಜಕೀಯ ಬಿರುಗಾಳಿ! ಮಂಡ್ಯ; ಜೆಡಿಎಸ್ ಭದ್ರಕೋಟೆಯಲ್ಲೀಗ ರಾಜಕೀಯ ಬಿರುಗಾಳಿ!

ಯೋಗೇಶ್ವರ್ ವರ್ಚಸ್ಸು ಕೆಲಸ ಮಾಡುತ್ತದೆ

ಯೋಗೇಶ್ವರ್ ವರ್ಚಸ್ಸು ಕೆಲಸ ಮಾಡುತ್ತದೆ

ಹಾಗೆ ನೋಡಿದರೆ ಚನ್ನಪಟ್ಟಣ ಕ್ಷೇತ್ರದಲ್ಲಿ ಪಕ್ಷಕ್ಕಿಂತ ಹೆಚ್ಚಾಗಿ ಯೋಗೇಶ್ವರ್ ವರ್ಚಸ್ಸು ಕೆಲಸ ಮಾಡುತ್ತಿದೆ. ಆದರೆ ಕುಮಾರಸ್ವಾಮಿ ಈ ಬಾರಿ ಮತ್ತೆ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಭಾರೀ ಪೈಪೋಟಿ ಏರ್ಪಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿಯೇ ವರ್ಷಕ್ಕೂ ಮೊದಲೇ ಸಂಘಟನೆಗೆ ಒತ್ತು ನೀಡಿರುವ ಸೈನಿಕ ಯೋಗೇಶ್ವರ್ ಚುನಾವಣೆ ಎಂಬ ಮಹಾಯುದ್ಧಕ್ಕೆ ಬೇಕಾದ ತಂತ್ರಗಳನ್ನು ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಕುಮಾರಸ್ವಾಮಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಒಂದು ವೇಳೆ ಅದು ನಿಜವೇ ಆದರೆ ಸಿ. ಪಿ. ಯೋಗೇಶ್ವರ್ ನಿರಾಯಾಸವಾಗಿ ಗೆಲುವು ಕಾಣುವುದಂತು ಸತ್ಯ.

ಚರ್ಚೆಗೆ ಗ್ರಾಸವಾದ ಕುಮಾರಸ್ವಾಮಿ ಹೇಳಿಕೆ

ಚರ್ಚೆಗೆ ಗ್ರಾಸವಾದ ಕುಮಾರಸ್ವಾಮಿ ಹೇಳಿಕೆ

ರಾಮನಗರದಲ್ಲಿ ಯೋಗೇಶ್ವರ್ ಮತ್ತು ಕುಮಾರಸ್ವಾಮಿ ಒಂದಾಗಿ ಕಾಂಗ್ರೆಸ್ ವಿರುದ್ಧ ತಂತ್ರ ರೂಪಿಸುತ್ತಿದ್ದಾರೆಂಬ ಅನುಮಾನವನ್ನು ಕಾಂಗ್ರೆಸ್‌ನವರು ಹೊರಹಾಕಿದ್ದರು. ಅದಕ್ಕೆ ತುಪ್ಪ ಸುರಿಯುವಂತೆ ಈಗ ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದಾರೆ. ಸದ್ಯ ಇದು ರಾಜಕೀಯ ವಲಯದಲ್ಲಿ ಹಲವು ರೀತಿಯ ಚರ್ಚೆಯನ್ನು ಹುಟ್ಟು ಹಾಕಿದೆ. ಆದರೆ ಈ ಬಾರಿ ಗೆದ್ದೇ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿರುವ ಯೋಗೇಶ್ವರ್ ಮಾತ್ರ ಚುನಾವಣೆಗೆ ವರ್ಷವಿರುವಾಗಲೇ ಗೆಲುವಿಗೆ ಅಗತ್ಯವಿರುವ ತಂತ್ರಗಳನ್ನು ಶುರು ಮಾಡಿದ್ದಾರೆ.

ಪಕ್ಷ ಸಂಘಟನೆ ಪ್ರಯತ್ನ

ಪಕ್ಷ ಸಂಘಟನೆ ಪ್ರಯತ್ನ

ತಳಮಟ್ಟದಿಂದ ಅರ್ಥಾತ್ ಗ್ರಾಮ ಮಟ್ಟದಿಂದ ಬಿಜೆಪಿ ಪಕ್ಷವನ್ನು ಸಂಘಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಸಿ. ಪಿ. ಯೋಗೇಶ್ವರ್. ಈ ಹಿಂದೆ ಕೆಲವು ದಲಿತ ಸಂಘಟನೆಗಳೊಂದಿಗೆ ಮಾತುಕತೆ ನಡೆಸುವ ಮೂಲಕ ಸಹಕಾರ ಕೋರಿದ್ದರು. ಇದಾದ ಬಳಿಕ ಗ್ರಾಮಮಟ್ಟಕ್ಕೆ ಇಳಿದಿರುವ ಅವರು ಅಲ್ಲಿ ಪಕ್ಷದ ಸಂಘಟನೆಗೆ ಮುಂದಾಗಿದ್ದಾರೆ. ಅದರಲ್ಲೂ ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆಂಬ ಹೇಳಿಕೆ ನೀಡಿದ ಬಳಿಕ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸಿದ್ದು ಜೆಡಿಎಸ್‌ನ ಕೆಲವರು ಬಿಜೆಪಿ ಕಡೆಗೆ ವಾಲುತ್ತಿದ್ದಾರೆ. ಇದನ್ನೇ ಉಪಯೋಗಿಸಿಕೊಳ್ಳುತ್ತಿರುವ ಯೋಗೇಶ್ವರ್ ಬಿಜೆಪಿಗೆ ಸೆಳೆದುಕೊಳ್ಳುವ ಮೂಲಕ ಆಪರೇಷನ್ ಕಮಲಕ್ಕೆ ಚಾಲನೆ ನೀಡಿದ್ದು ಅದರಲ್ಲಿ ಯಶಸ್ಸು ಕಾಣುತ್ತಿದ್ದಾರೆ.

ಯೋಗೇಶ್ವರ್‌ಗೆ ಫ್ಲಸ್ ಪಾಯಿಂಟ್

ಯೋಗೇಶ್ವರ್‌ಗೆ ಫ್ಲಸ್ ಪಾಯಿಂಟ್

ಕೆಲವು ದಿನಗಳ ಹಿಂದೆ ಕೊಲೂರು ಗ್ರಾಮದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ 50ಕ್ಕೂ ಹೆಚ್ಚು ಮಂದಿ ಮುಖಂಡರು ಹಾಗೂ ಕಾರ್ಯಕರ್ತರು ಯೋಗೇಶ್ವರ್ ನಾಯಕತ್ವ ಹಾಗೂ ಅವರ ಅಭಿವೃದ್ಧಿ ಪರ ಕಾಳಜಿಯನ್ನು ಮೆಚ್ಚಿ ಬಿಜೆಪಿ ಶಾಲು ಹೊದ್ದು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇದರಲ್ಲಿ ದಲಿತ ಮುಖಂಡರು ಇರುವುದು ಯೋಗೇಶ್ವರ್‌ಗೆ ಫ್ಲಸ್ ಪಾಯಿಂಟ್ ಆಗಿದೆ. ಮುಂದಿನ ಚುನಾವಣೆ ವೇಳೆಗೆ ಕುಮಾರಸ್ವಾಮಿ ತಮ್ಮ ಕ್ಷೇತ್ರವನ್ನು ಬಿಟ್ಟು ಹೋಗುತ್ತಾರೆ ಎಂಬ ಭಯವೂ ಜೆಡಿಎಸ್‌ನ ತಳಮಟ್ಟದ ನಾಯಕರನ್ನು ಕಾಡುತ್ತಿದೆ. ಹೀಗಾಗಿ ನಿಧಾನವಾಗಿ ಕೆಲವು ನಾಯಕರು, ಕಾರ್ಯಕರ್ತರು ಬಿಜೆಪಿ ಕಡೆಗೆ ಒಲವು ತೋರುತ್ತಿದ್ದಾರೆ.

ಅಭಿವೃದ್ಧಿಗೆ ಶ್ರಮಿಸೋಣ ಎಂದು ಕರೆ

ಅಭಿವೃದ್ಧಿಗೆ ಶ್ರಮಿಸೋಣ ಎಂದು ಕರೆ

ಇದೀಗ ಪಕ್ಷಕ್ಕೆ ಸೇರಿರುವ ಮುಖಂಡರನ್ನು ಆತ್ಮೀಯವಾಗಿ ಬರಮಾಡಿಕೊಂಡಿರುವ ಸಿ. ಪಿ. ಯೋಗೇಶ್ವರ್ ಗೌರವದಿಂದ ನಡೆಸಿಕೊಳ್ಳುವ ಭರವಸೆ ನೀಡಿದ್ದಾರೆ. ಜತೆಗೆ ನೀವೆಲ್ಲರೂ ಸೇರಿ ಪಕ್ಷವನ್ನು ತಾಲೂಕಿನಲ್ಲಿ ಅಧಿಕಾರಕ್ಕೆ ತಂದರೆ ಮುಂದಿನ ದಿನಗಳಲ್ಲಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ದೊರೆಯುತ್ತದೆ. ನಿಮ್ಮ ಸಹಕಾರ ಸದಾಕಾಲ ಇರಲಿ, ನಾವೆಲ್ಲರೂ ಒಗ್ಗೂಡಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸೋಣ ಎಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಚುನಾವಣೆಗೆ ವರ್ಷ ಬಾಕಿ ಇರುವುದರಿಂದ ಕ್ಷೇತ್ರದಲ್ಲಿ ಇನ್ನಷ್ಟು ಬೆಳವಣಿಗೆಗಳು ನಡೆಯುವುದಂತು ಖಚಿತ.

Recommended Video

ಅಯ್ಯೋ...! ರೇಣುಕಾಚಾರ್ಯ ಬುದ್ದಿ ಕಲಿಯೋದು ಯಾವಾಗ | Oneindia Kannada

English summary
Former chief minister and Chennapatna MLA H. D. Kumaraswamy statement may held BJP leader C. P. Yogeshwar in assembly seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X