ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.ಕೆ. ಶಿವಕುಮಾರ್ ಹೇಳಿದ ಸುಳ್ಳುಗಳು ಅಸಹ್ಯ ಹುಟ್ಟಿಸುತ್ತಿವೆ: ಕುಮಾರಸ್ವಾಮಿ

|
Google Oneindia Kannada News

ವಿಧಾನಸಭಾ ಉಪಚುನಾವಣೆಯ ಸಿಂಧಗಿ ಕ್ಷೇತ್ರದ ಅಭ್ಯರ್ಥಿ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿರುವ ಹಸಿ ಹಸಿ ಸುಳ್ಳುಗಳು ಅಸಹ್ಯ ಹುಟ್ಟಿಸುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಸಿಂಧಗಿ ಉಪಚುನಾವಣಾ ಪ್ರಚಾರ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಪಾಲ್ಗೊಂಡು ಅಶೋಕ ಮನಗೂಳಿ ಅವರ ಕುರಿತು ಕೆಲವು ಮಾತುಗಳನ್ನು ಆಡಿದ್ದರು. "ಮಾಜಿ ಸಚಿವ ಎಂ.ಸಿ. ಮನಗೂಳಿ ಅವರು ಸಾಯುವ 15 ದಿನ ಮುಂಚೆ ಪುತ್ರ ಅಶೋಕ್ ಅವರನ್ನು ನನ್ನ ಬಳಿ ಕರೆದುಕೊಂಡು ಬಂದು ನನಗೆ ವಯಸ್ಸಾಗಿದೆ, ಆರೋಗ್ಯ ಸರಿ ಇಲ್ಲ. ನನ್ನ ಮಗ ಅಶೋಕನನ್ನು ನಿಮ್ಮ ಹಾಗೂ ಸಿದ್ದರಾಮಯ್ಯ ಮಡಿಲಿಗೆ ಹಾಕುತ್ತಿದ್ದೇನೆ ಎಂದಿದ್ದರು'' ಎಂದು ಶಿವಕುಮಾರ್ ಹೇಳಿದ್ದರು. ಇದಕ್ಕೆ ಕೆಂಡಾಮಂಡಲ ಆಗಿರುವ ಕುಮಾರಸ್ವಾಮಿ ಅವರು ಸರಣಿ ಟ್ವೀಟ್‌ಗಳನ್ನು ಮಾಡಿ ಡಿ.ಕೆ. ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ಸುಳ್ಳು ಹೇಳುವುದಕ್ಕೂ ಮಿತಿ ಇರಬೇಕು. ಒಬ್ಬ ವ್ಯಕ್ತಿ ಇಲ್ಲವಾದ ಮೇಲೆ ಅವರ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವುದು ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಅನೈತಿಕ ಎಂಬುದು ನನ್ನ ಅಭಿಪ್ರಾಯ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅಪ್ಪಟ ಸುಳ್ಳು ಹೇಳುವ ಮೂಲಕ ದಿವಂಗತ ನಾಯಕ ಎಂ.ಸಿ. ಮನಗೂಳಿ ಅವರಿಗೆ ಅಪಚಾರ ಮಾಡಿದ್ದಾರೆ' ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

HD Kumaraswamy slams DK Shivakumar for His Statement on Sindagi By Election Candidate

ಮಾಜಿ ಸಚಿವ ಎಂ.ಸಿ. ಮನಗೂಳಿ ಅವರು ಸಾಯುವ 15 ದಿನ ಮುಂಚೆ ಪುತ್ರ ಅಶೋಕ್ ಅವರನ್ನು ನನ್ನ ಬಳಿ ಕರೆದುಕೊಂಡು ಬಂದು ನನಗೆ ವಯಸ್ಸಾಗಿದೆ, ಆರೋಗ್ಯ ಸರಿ ಇಲ್ಲ. ನನ್ನ ಮಗ ಅಶೋಕನನ್ನು ನಿಮ್ಮ ಹಾಗೂ ಸಿದ್ದರಾಮಯ್ಯ ಮಡಿಲಿಗೆ ಹಾಕುತ್ತಿದ್ದೇನೆ' ಎಂದಿದ್ದರಂತೆ. ಸುಳ್ಳುಗಳನ್ನು ಸೃಷ್ಟಿ ಮಾಡುವುದರಲ್ಲಿ ಕಾಂಗ್ರೆಸಿಗರು ನಿಸ್ಸೀಮರು ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇಲ್ಲ. ಸತ್ಯ ಏನೆಂದರೆ ಕೋವಿಡ್ ಸೋಂಕಿತರಾಗಿದ್ದ ಮನಗೂಳಿ ಅವರನ್ನು ಬೆಂಗಳೂರಿನ ಅಪೊಲೊ ಆಸ್ಪತ್ರೆಗೆ ನಾವೇ ಸೇರಿಸಿದ್ದೆವು. 19 ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದರು. ಜ.9 ರಂದು ಮನಗೂಳಿ ಅವರು ಆಸ್ಪತ್ರೆಗೆ ದಾಖಲಾಗಿ ಜ. 28 ರಂದು ಅಲ್ಲಿಯೇ ನಿಧನರಾದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮನಗೂಳಿ ಅವರನ್ನು ನಾನೂ ಸೇರಿದಂತೆ ಅವರ ಮಕ್ಕಳೂ ನೋಡಲಾಗಲಿಲ್ಲ. ಅದಕ್ಕೂ ಮೊದಲು ಅವರು ಒಂದೂವರೆ ತಿಂಗಳ ಕಾಲ ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಹಾಗಾದರೆ ಮನಗೂಳಿ ಅವರು ಡಿ.ಕೆ. ಶಿವಕುಮಾರ್ ಅವರ ಮನೆಗೆ ಹೋಗಿದ್ದು ಯಾವಾಗ? ಮಕ್ಕಳನ್ನು ಮಡಿಲಿಗೆ ಹಾಕಿಕೊಳ್ಳಿ ಎಂದಿದ್ದು ಎಂದು? ಅವರ ಹಸಿ ಸುಳ್ಳುಗಳು ಅಸಹ್ಯ ಹುಟ್ಟಿಸುವಂತಿವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಅಶೋಕ್ ಮನಗೂಳಿ ಅವರನ್ನು ಹೈಜಾಕ್ ಮಾಡಿದ್ದಲ್ಲದೆ, ಈಗ ಸುಳ್ಳುಗಳ ಸರಮಾಲೆ ಹೆಣೆಯುತ್ತಾ ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ. ಸಿಂಧಗಿ ಜನರಿಗೆ ಯಾಮಾರಿಸುವ ಪ್ರಯತ್ನ ಬೇಡ. ಅಭ್ಯರ್ಥಿಗೆ ದಿಕ್ಕಿಲ್ಲದ ಕಾಂಗ್ರೆಸ್ ನಾಯಕರು ಈಗ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ನಮ್ಮ ಪಕ್ಷ ಹಾಗೂ ಎಚ್.ಡಿ. ದೇವೇಗೌಡರ ಬಗ್ಗೆ ಅಚಲ ನಿಷ್ಠೆ ಹೊಂದಿದ್ದ ಎಂ.ಸಿ. ಮನಗೂಳಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಬೇಡ ಎಂದು ಟ್ವೀಟರ್ ಮೂಲಕ ಹೇಳಿದ್ದಾರೆ.

ಕುಮಾರಸ್ವಾಮಿ ನೋವಿನಲ್ಲಿದ್ದಾರೆ

"ತಮ್ಮ ಪಕ್ಷದ ಅಭ್ಯರ್ಥಿ ಆಗಬೇಕಿದ್ದ ಅಶೋಕ ಮನಗೂಳಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಈ ನೋವಿನಲ್ಲಿ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ'' ಎಂದು ಕುಮಾರಸ್ವಾಮಿ ಅವರ ಟ್ವೀಟ್‌ಗಳಿಗೆ ಡಿ.ಕೆ. ಶಿವಕುಮಾರ್ ಶನಿವಾರ ಪ್ರತಿಕ್ರಿಯಿಸಿದರು.

"ಕುಮಾರಣ್ಣ ಬಹಳ ಪರ್ಫೆಕ್ಟಾಗಿ ಕ್ಯಾಲೆಂಡರ್, ತಾರೀಖುಗಳನ್ನು ಪರಿಶೀಲಿಸಿ ಮಾತನಾಡುತ್ತಾರೆ. ಅದರ ಬಗ್ಗೆ ನನಗೆ ಬೇಜಾರಿಲ್ಲ. ಆದರೆ ಎಂ.ಸಿ. ಮನಗೂಳಿ ಅವರು ಏನು ಹೇಳಿದ್ದಾರೆ ಎಂಬುದು ಎಂ.ಸಿ. ಮನಗೂಳಿ ಅವರಿಗೆ, ಅವರ ಮಗ ಅಶೋಕ್ ಮನಗೂಳಿ ಹಾಗೂ ನನಗೆ ಮಾತ್ರ ಗೊತ್ತು. ಬಳಿಕ ಸಿದ್ದರಾಮಯ್ಯ ಅವರೊಂದಿಗೂ ಮಾತನಾಡಿದ್ದಾರೆ. ಈ ಕುರಿತು ಗೌಪ್ಯತೆ ಏನೂ ಇಲ್ಲ. ಬಹಿರಂಗವಾಗಿಯೇ ಎಲ್ಲವನ್ನೂ ಹೇಳಿದ್ದೇನೆ. ಸುಳ್ಳುಗಳು ಅಥವಾ ಇಲ್ಲದೇ ಇರೋ ವಿಚಾರಗಳನ್ನು ಸೃಷ್ಟಿ ಮಾಡಿ ಮಾತನಾಡುವ ಅವಶ್ಯಕತೆ ಇಲ್ಲ. ಕುಮಾರಸ್ವಾಮಿ ಅವರ ನೋವು ನಮಗೆ ಅರ್ಥವಾಗುತ್ತದೆ" ಎಂದು ಹೇಳಿದರು.

English summary
HD Kumaraswamy slams DK Shivakumar for His Statement on Sindagi By Election Candidate, says i feel ashamed about yourself on talking false about MC Managuli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X