ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಜ್ ವೆಸ್ಟ್‌ಎಂಡ್ ನಲ್ಲಿ ರೂಂ ಪಡೆದಿದ್ದಕ್ಕೆ ಕಾರಣ ಕೊಟ್ಟ ಎಚ್‌ಡಿಕೆ

|
Google Oneindia Kannada News

ಬೆಂಗಳೂರು, ಜುಲೈ 23: ಕುಮಾರಸ್ವಾಮಿ ಅವರು ಸಿಎಂ ಆದಾಗಿನಿಂದಲೂ ತಾಜ್ ವೆಸ್ಟ್‌ಎಂಡ್ ಹೊಟೆಲ್‌ನಲ್ಲಿ ರೂಂ ಒಂದನ್ನು ಪಡೆದಿರುವುದು ಈ ಹಿಂದೆ ಚರ್ಚೆಗೆ ಬಂದಿತ್ತು. ರೂಂ ಪಡೆದಿರುವುದಕ್ಕೆ ಕಾರಣವನ್ನು ಕುಮಾರಸ್ವಾಮಿ ಅವರು ಸದನದ ಮುಂದೆ ಬಿಚ್ಚಿಟ್ಟಿದ್ದಾರೆ.

ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಕೊನೆಯದಾಗಿ ಮಾತನಾಡಿದ ಕುಮಾರಸ್ವಾಮಿ ಅವರು, ತಾಜ್ ವೆಸ್ಟ್‌ ಎಂಡ್‌ನಲ್ಲಿ ರೂಂ ಪಡೆದಿದ್ದು ಏಕೆ ಎಂದು ಹೇಳಿದರು.

Live Updates ನಾನು ಕದ್ದು ಪಲಾಯನವಾದ ಮಾಡೊಲ್ಲ: ಕುಮಾರಸ್ವಾಮಿLive Updates ನಾನು ಕದ್ದು ಪಲಾಯನವಾದ ಮಾಡೊಲ್ಲ: ಕುಮಾರಸ್ವಾಮಿ

ವಿಧಾನಸಭೆ ಚುನಾವಣೆ ಫಲಿತಾಂಶವನ್ನು ತಾಜ್ ವೆಸ್ಟ್‌ ಎಂಡ್‌ ನ ಅದೇ ರೂಂ ನಲ್ಲಿ ಕೂತು ನೋಡುತ್ತಿದ್ದೆ. ಆಗಲೇ ನನಗೆ ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್ ಅವರ ಕರೆ ಬಂತು ಸರ್ಕಾರ ರಚನೆಗೆ ಆಹ್ವಾನ ಬಂತು ಹಾಗಾಗಿ ಅದನ್ನು ಅದೃಷ್ಟದ ರೂಂ ಎಂಬ ಕಾರಣಕ್ಕೆ ಆ ರೂಂ ಅನ್ನು ನಾನು ಪಡೆದಿದ್ದೆ ಎಂದು ಕುಮಾರಸ್ವಾಮಿ ಹೇಳಿದರು.

HD Kumaraswamy said why he booked room in Taj west end hotel

ಆದರೆ ಆ ರೂಂ ನಲ್ಲಿ ನಾನೂ ಸರ್ಕಾರಕ್ಕೆ ಸಂಬಂಧಿಸಿದ ಯಾರನ್ನೂ ಭೇಟಿ ಮಾಡಿಲ್ಲ, ಯಾವ ಅಧಿಕಾರಿಯನ್ನೂ ಅಲ್ಲಿಗೆ ಕರೆದಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

5 ಗಂಟೆ ತಡವಾಗಿ ಸದನಕ್ಕೆ ಬಂದ ಸಿಎಂ ಎಚ್.ಡಿ.ಕುಮಾರಸ್ವಾಮಿ! 5 ಗಂಟೆ ತಡವಾಗಿ ಸದನಕ್ಕೆ ಬಂದ ಸಿಎಂ ಎಚ್.ಡಿ.ಕುಮಾರಸ್ವಾಮಿ!

ಸ್ಟಾರ್ ಹೊಟೆಲ್‌ನಲ್ಲಿ ಕುಳಿತು ತೆರಿಗೆದಾರರ ಹಣ ವ್ಯಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಆಕ್ಷೇಪ ಮಾಡಿದ್ದ ಬಗ್ಗೆ ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ, ನಾನು ಇಲ್ಲಿಯವರೆಗೆ ಟಿಎ, ಡಿಎ ಪಡೆದಿಲ್ಲ. ಸರ್ಕಾರಿ ವಾಹನ ಬಳಸಿಲ್ಲ, ಸ್ವಂತ ವಾಹನದಲ್ಲಿ ಓಡಾಡಿದ್ದೇನೆ, ಸರ್ಕಾರಿ ಬಂಗ್ಲೆಯನ್ನೂ ಪಡೆದಿಲ್ಲ, ಪೆಟ್ರೋಲ್ ಹಣವನ್ನೂ ಪಡೆದಿಲ್ಲ ಎಂದು ಕುಮಾರಸ್ವಾಮಿ ಸದನಕ್ಕೆ ಮಾಹಿತಿ ನೀಡಿದರು.

ನಾನು ಗುಡಿಸಿಲಿನಲ್ಲೂ ಬದುಕಿದ್ದೇನೆ ಎಂದ ಕುಮಾರಸ್ವಾಮಿ, ನಾನು ತೆರಿಗೆದಾರರ ಹಣ ಹಾಳು ಮಾಡಿದ್ದರೆ ದಾಖಲೆ ತನ್ನಿ ಒಪ್ಪಿಕೊಳ್ಳುತ್ತೇನೆ ಎಂದು ಸವಾಲು ಹಾಕಿದರು. ಕುಮಾರಸ್ವಾಮಿ ಅವರು ಈಗ ತಾಜ್‌ವೆಸ್ಟ್‌ಎಂಡ್‌ನ ಆ ರೂಂ ಅನ್ನು ಖಾಲಿ ಮಾಡಿದ್ದಾರೆ.

English summary
CM Kumaraswamy today said in assembly that why he booked a particular room in Taj West End hotel. He said that was his lucky room.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X