• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪರಿಷತ್ ಚುನಾವಣೆ: ಎಚ್ಡಿಕೆ ಅಂದು ಹೇಳಿದ್ದು ಒಂದು, ಈಗ ಮಾಡಿದ್ದು ಮತ್ತೊಂದು

|

ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಬಿಜೆಪಿಯಿಂದ ನಾಲ್ವರು, ಕಾಂಗ್ರೆಸ್ಸಿನಿಂದ ಇಬ್ಬರು ಮತ್ತು ಜೆಡಿಎಸ್ ನಿಂದ ಒಬ್ಬರು ನಾಮಪತ್ರ ಸಲ್ಲಿಸಿದ್ದಾರೆ. 7 ಸ್ಥಾನಗಳಿಗೆ 7 ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿರುವುದರಿಂದ ಅಭ್ಯರ್ಥಿಗಳ ಆಯ್ಕೆ ಅವಿರೋಧವಾಗಲಿದೆ.

   Solar Eclipse June 21 2020 : Sunday darshan timing changed in Kukke Subramanya | Oneindia Kannada

   ಜೆಡಿಎಸ್ ಗೆಲ್ಲಬಹುದಾದ ಒಂದು ಸ್ಥಾನಗಳಿಗೆ ನಾಲ್ಕೈದು ಜನ ಆಕಾಂಕ್ಷಿಗಳಾಗಿದ್ದರು. ಅದರಲ್ಲಿ ವೈ.ಎಸ್.ವಿ ದತ್ತ, ಕೋನ ರೆಡ್ಡಿ, ಕುಪೇಂದ್ರ ರೆಡ್ಡಿ ಅವರ ಹೆಸರು ಮಂಚೂಣಿಯಲ್ಲಿ ಬರುತ್ತಿತ್ತು. ಆದರೆ, ಈ ಎಲ್ಲಾ ಹೆಸರನ್ನು ಪಕ್ಕಕ್ಕಿಟ್ಟು ಜೆಡಿಎಸ್ ಬೇರೊಬ್ಬ ಅಭ್ಯರ್ಥಿಯನ್ನು ಫೈನಲ್ ಮಾಡಿದೆ.

   ವಿಧಾನ ಪರಿಷತ್ ಚುನಾವಣೆ: ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಜೆಡಿಎಸ್!

   ಕೋಲಾರದ ಭಾಗದ ಕಾರ್ಯಕರ್ತ, ಜೊತೆಗೆ ಉದ್ಯಮಿಯೂ ಆಗಿರುವ ಇಂಚರ ಗೋವಿಂದರಾಜ್ ಜೆಡಿಎಸ್ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೂಡಾ ಹಾಜರಿದ್ದರು.

   "ಚಿಕ್ಕಬಳ್ಳಾಪುರ- ಕೋಲಾರ ಭಾಗದಲ್ಲಿ ಪಕ್ಷ ಸಂಘಟನೆಗೆ ಮತ್ತಷ್ಟು ಶಕ್ತಿ ಸಿಗುವಂತೆ ಮಾಡಲು ಆ ಭಾಗದ ಸಾಮಾನ್ಯ ಕಾರ್ಯಕರ್ತನಿಗೆ ಜೆಡಿಎಸ್ ಟಿಕೆಟ್ ಕೊಟ್ಟಿದ್ದೇವೆ" ಎಂದು ಕುಮಾರಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ. ಆದರೆ, ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ, ಬಿಜೆಪಿ ಬಗ್ಗೆ ಹೇಳಿದ್ದು ಹೀಗೆ..

   ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ

   ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ

   ರಾಜ್ಯಸಭಾ ಸ್ಥಾನಕ್ಕೆ ಪಕ್ಷದ ಕಾರ್ಯಕರ್ತರಾದ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿಯವರನ್ನು ತಮ್ಮ ಅಭ್ಯರ್ಥಿಯನ್ನಾಗಿ ಬಿಜೆಪಿ ಪ್ರಕಟಿಸಿತ್ತು. ಪ್ರಭಾಕರ ಕೋರೆ, ರಮೇಶ್ ಕತ್ತಿ ಸೇರಿದಂತೆ ಹಲವು ಹಿರಿಯ ಮುಖಂಡರು ಸ್ಥಾನವನ್ನು ಬಯಸಿದ್ದರು. ಆದರೆ, ಬಿಜೆಪಿ ವರಿಷ್ಠರು ಕಡಾಡಿ ಮತ್ತು ಗಸ್ತಿಗೆ ಟಿಕೆಟ್ ನೀಡಿ ತಮ್ಮದು ಕಾರ್ಯಕರ್ತರ ಪಕ್ಷ ಎಂದು ಹೇಳಿಕೊಂಡಿತ್ತು. ಈ ಬಗ್ಗೆ ಕುಮಾರಸ್ವಾಮಿ ಕಮೆಂಟ್ ಮಾಡಿದ್ದರು.

   ಕಾರ್ಯಕರ್ತರನ್ನು ನಿಲ್ಲಿಸಿದ ಮಾತ್ರಕ್ಕೆ ಸಮಸ್ಯೆಗೆ ಪರಿಹಾರ ದೊರೆಯುತ್ತದಾ

   ಕಾರ್ಯಕರ್ತರನ್ನು ನಿಲ್ಲಿಸಿದ ಮಾತ್ರಕ್ಕೆ ಸಮಸ್ಯೆಗೆ ಪರಿಹಾರ ದೊರೆಯುತ್ತದಾ

   "ರಾಜ್ಯಸಭೆಗೆ ತಮ್ಮ ಅಭ್ಯರ್ಥಿಯನ್ನಾಗಿ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿದ್ದೇವೆ ಎಂದು ಬಿಜೆಪಿ ಪಕ್ಷ ಹೇಳಿಕೊಳ್ಳುತ್ತಿದೆ. ಕಾರ್ಯಕರ್ತರನ್ನು ನಿಲ್ಲಿಸಿದ ಮಾತ್ರಕ್ಕೆ ಸಮಸ್ಯೆಗೆ ಪರಿಹಾರ ದೊರೆಯುತ್ತದಾ" ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು.

   ಪರಿಷತ್ ಚುನಾವಣೆ: ಇವರೇನಾದರೂ ಅಭ್ಯರ್ಥಿಯಾದರೆ, ಜೆಡಿಎಸ್ ಇಮೇಜಿಗೆ ಭರ್ಜರಿ ಟಾನಿಕ್

   ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ತಿಳಿಯಪಡಿಸಲು ಅನುಭವಸ್ಥರು ಬೇಕು

   ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ತಿಳಿಯಪಡಿಸಲು ಅನುಭವಸ್ಥರು ಬೇಕು

   "ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ತಿಳಿಯಪಡಿಸಲು ಅನುಭವಸ್ಥರು ಬೇಕು ಮತ್ತು ಹಿರಿತನವೂ ಬೇಕು. ಯುವ ಸಮುದಾಯಕ್ಕೆ, ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದೇವೆ ಎಂದು ಬಿಜೆಪಿ ಸುಮ್ಮನೆ ಪ್ರಚಾರ ಪಡೆಯುತ್ತಿದೆ"ಇದು ಕುಮಾರಸ್ವಾಮಿ ನೀಡಿದ್ದ ಹೇಳಿಕೆ.

   ವೈ.ಎಸ್.ವಿ.ದತ್ತ ಅವರಿಗೆ ಅನುಭವವಿಲ್ಲವೇ

   ವೈ.ಎಸ್.ವಿ.ದತ್ತ ಅವರಿಗೆ ಅನುಭವವಿಲ್ಲವೇ

   ಈಗ, ರಾಜ್ಯ ರಾಜಕೀಯದ ಬಗ್ಗೆ ಉತ್ತಮ ಅನುಭವವನ್ನು ಹೊಂದಿರುವ, ವಾಗ್ಮಿಯೂ ಆಗಿರುವ ವೈ.ಎಸ್.ವಿ.ದತ್ತ, ಉತ್ತರ ಕರ್ನಾಟಕ ಭಾಗದ ಕೋನ ರೆಡ್ಡಿ ಮುಂತಾದವರು ಅನುಭವಸ್ಥರಲ್ಲವೇ ಅಥವಾ ಹಿರಿಯರಲ್ಲವೇ, ಇಂತವರನ್ನು ಬಿಟ್ಟು ಜೆಡಿಎಸ್ ಯಾಕೆ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿತು ಎನ್ನುವ ಪ್ರಶ್ನೆ ಕಾಡುವುದು ಸಹಜ.

   English summary
   Dual Stand: HD Kumaraswamy Reaction During BJP Announced RS Candidate, And Now JDS Candidate For Legislative Council,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more