ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡರ ಕುಟುಂಬ ಗಾಜಿನ ಮನೆಯಲ್ಲಿಲ್ಲ, ಬೀದಿಯಲ್ಲಿದೆ!

|
Google Oneindia Kannada News

ಹಾಸನ, ಅ.24: 'ದೇವೇಗೌಡರ ಕುಟುಂಬ ಗಾಜಿನ ಮನೆಲ್ಲಿಲ್ಲ, ಬೀದಿಯಲ್ಲಿದೆ, ಕಲ್ಲೇಟು ಬಿದ್ದರೆ ಅದು ಗಾಜಿನ ಮನೆಯಲ್ಲಿರುವ ಡಿಕೆಶಿ ಅಂಥವರಿಗೆ' ಇದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ ಪರಿ.

ಡಿಕೆಶಿ ಆರೋಪಗಳಿಗೆ ಹಾಸನದಲ್ಲಿ ಶುಕ್ರವಾರ ಉತ್ತರ ನೀಡಿದ ಕುಮಾರಸ್ವಾಮಿ ಇಂಧನ ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಈ ಬಾರಿ ಉತ್ತಮ ಮಳೆಯಾಗಿದ್ದು ಸಾಕಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಆದರೆ ರಾಜ್ಯ ಸರ್ಕಾರದ ಇಂಧನ ಸಚಿವರು ಬೇಕಂತಲೇ ಕೃತಕ ವಿದ್ಯುತ್ ಅಭಾವ ಸೃಷ್ಟಿಸಿದ್ದಾರೆ. ಹಿಂದಿನ ಸರ್ಕಾರಗಳಂತೆ ಇತರ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಿಕೊಳ್ಳಬೇಕೆಂದಿದ್ದಾರೆ. ಖರೀದಿ ಹೆಸರಲ್ಲಿ ಹಣ ನುಂಗುವುವುದೇ ಇದರ ಹಿಂದಿರುವ ಉದ್ದೇಶ ಎಂದು ಆರೋಪಿಸಿದ್ದಾರೆ.[ಗೌಡ್ರು ನೀಡಿದ ಶಾಕ್ : ಪಟ್ಟಿಯಲ್ಲಿ ಎಚ್ಡಿಕೆ, ಜಮೀರ್ ಇಬ್ರೂ ಇಲ್ಲ]

kumaraswamy

ಕುಮಾರಸ್ವಾಮಿ ಗಾಜಿನ ಮನೆಲ್ಲಿದ್ದು ಇತರರ ಮೇಲೆ ಕಲ್ಲು ಎಸೆಯಬಾರದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬುಧವಾರ ಹೇಳಿದ್ದರು. ಅದಕ್ಕೆ ಕುಮಾರಸ್ವಾಮಿ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.[ವಿದ್ಯುತ್ ಕಡಿತದ ಹಿಂದೆ ಡಿಕೆಶಿ ಕೈವಾಡವಿದೆ : ಜೋಶಿ]

ಲೋಡ್ ಶೆಡ್ಡಿಂಗ್ ಬಗ್ಗೆ ಇಂಧನ ಸಚಿವರು ಮಾಹಿತಿ ನೀಡಲಿ ಅಥವಾ ಅಗತ್ಯವಿದ್ದರೆ ಪಡೆದುಕೊಳ್ಳಲಿ, ರೈತರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಸ್ಪಂದಿಸಿ ವಿದ್ಯುತ್ ನೀಡುವ ಬದಲು ರಾಜ್ಯ ಸರ್ಕಾರದ ಸಚಿವರು ತಮ್ಮ ಸೀಟು ಗಟ್ಟಿ ಮಾಡಿಕೊಳ್ಳುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.[ಡಿಕೆಶಿ ವಿರುದ್ಧದ ಕೇಸ್, ವಿಶೇಷ ಪೀಠದಲ್ಲಿ ವಿಚಾರಣೆ]

ರಾಜ್ಯ ಸರ್ಕಾರ ರೈತರ ಹಿತವನ್ನು ಸಂಪೂರ್ಣ ಕಡೆಗಣಿಸಿದ್ದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವುದರಿಂದಲೂ ಹಿಂದೆ ಸರಿದಿದೆ. ಹಿರಿಯ ರಾಜಕಾರಣಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಮಾತಿಗೂ ಯಾವ ಸಚಿವರು ಬೆಲೆ ನೀಡುತ್ತಿಲ್ಲ ಎಂದು ದೂರಿದ್ದಾರೆ.

English summary
JD(S) leader and Former Chief Minister H.D.Kumaraswamy react harshly about Karnataka Energy Minister D.K. Shivakumar word 'glass house'. Our family is not in Glass House, D.K. Shivakumar in glass house. Karnataka state government forgot people's wealth, he claimed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X