ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನುಡಿದಂತೆ ನಡೆದ ಕುಮಾರಣ್ಣ, ಸರ್ಕಾರಿ ಕಾರು ಬಳಸಲೇ ಇಲ್ಲ

|
Google Oneindia Kannada News

ಬೆಂಗಳೂರು, ಜುಲೈ 24 : ಕರ್ನಾಟಕದ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡು ಪತನವಾಗಿದೆ. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಧಿಕಾರವಹಿಸಿಕೊಂಡ ದಿನ ನೀಡಿದ್ದ ಮಾತಿಗೆ ತಕ್ಕಂತೆ ಕುಮಾರಸ್ವಾಮಿ ನಡೆದುಕೊಂಡಿದ್ದಾರೆ.

ವಿಶ್ವಾಸಮತದ ನಿರ್ಣಯದ ಮೇಲೆ ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡುವಾಗ ಎಚ್. ಡಿ. ಕುಮಾರಸ್ವಾಮಿ ಕಾರಿನ ವಿಚಾರವನ್ನು ಪ್ರಸ್ತಾಪ ಮಾಡಿದರು. ಪ್ರಮಾಣ ವಚನ ಸ್ವೀಕರಿಸಿದಾಗಲೂ ಅವರು ಇದೇ ವಿಚಾರವನ್ನು ಹೇಳಿದ್ದರು.

ಸರ್ಕಾರಿ ಕಾರು ಬೇಡವೆಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ!ಸರ್ಕಾರಿ ಕಾರು ಬೇಡವೆಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ!

ಸದನದಲ್ಲಿ ಭಾಷಣ ಮಾಡುವಾಗ ಎಚ್. ಡಿ. ಕುಮಾರಸ್ವಾಮಿ, "ಸರ್ಕಾರಿ ಕಾರನ್ನೂ ನಾನು ಬಳಸುತ್ತಿಲ್ಲ. ಸರ್ಕಾರದ ಬಂಗ್ಲೆಯನ್ನೂ ಪಡೆದಿಲ್ಲ" ಎಂದು ಹೇಳಿದರು. 14 ತಿಂಗಳ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಸರ್ಕಾರಿ ಕಾರು ಬೇಡ ಎಂದು ತಿಳಿಸಿದ್ದರು.

ಜೆ.ಪಿ.ನಗರಕ್ಕೆ ರಾಜ್ಯದ ಆಡಳಿತ ಶಕ್ತಿಕೇಂದ್ರ ಸ್ಥಳಾಂತರ!ಜೆ.ಪಿ.ನಗರಕ್ಕೆ ರಾಜ್ಯದ ಆಡಳಿತ ಶಕ್ತಿಕೇಂದ್ರ ಸ್ಥಳಾಂತರ!

ಜಿಲ್ಲಾ ಕೇಂದ್ರಗಳಲ್ಲಿ ಸಂಚಾರ ಮಾಡುವಾಗ ಜಿಲ್ಲಾಡಳಿತ ನಿಗದಿಪಡಿಸಿದ ಕಾರಿನಲ್ಲಿ ಕುಮಾರಸ್ವಾಮಿ ಸಂಚಾರ ನಡೆಸುತ್ತಿದ್ದರು. ಆದರೆ, ಬೆಂಗಳೂರು ಮತ್ತು ಸುತ್ತ-ಮುತ್ತಲಿನ ಜಿಲ್ಲೆಗಳಲ್ಲಿ ಸಂಚಾರ ನಡೆಸುವಾಗ ಅವರು ಎಂದೂ ಸರ್ಕಾರಿ ಕಾರು ಬಳಕೆ ಮಾಡಲಿಲ್ಲ.

ವಚನ ಭ್ರಷ್ಟನಲ್ಲ, ವಚನ ಭ್ರಷ್ಟನಲ್ಲ, ವಚನ ಭ್ರಷ್ಟನಲ್ಲ : ಎಚ್ಡಿ ಕುಮಾರಸ್ವಾಮಿವಚನ ಭ್ರಷ್ಟನಲ್ಲ, ವಚನ ಭ್ರಷ್ಟನಲ್ಲ, ವಚನ ಭ್ರಷ್ಟನಲ್ಲ : ಎಚ್ಡಿ ಕುಮಾರಸ್ವಾಮಿ

ಸರ್ಕಾರಿ ಕಾರು ಬೇಡ ಎಂದು ಹೇಳಿದ್ದರು

ಸರ್ಕಾರಿ ಕಾರು ಬೇಡ ಎಂದು ಹೇಳಿದ್ದರು

ಮುಖ್ಯಮಂತ್ರಿಯಾಗಿ ಎಚ್. ಡಿ. ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಸರ್ಕಾರಿ ಕಾರನ್ನು ಬಳಕೆ ಮಾಡಲಿಲ್ಲ. ಮುಖ್ಯಮಂತ್ರಿಯಾದ ದಿನವೇ ಅವರು ಸರ್ಕಾರಿ ಕಾರು ಬೇಡ ಎಂದು ಹೇಳಿದ್ದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅವರಿಗೆ ಟೊಯೋಟಾ ಫಾರ್ಚುನರ್ ಕಾರನ್ನು ನೀಡಿತ್ತು.

ರೇಂಜ್ ರೋವರ್ ಕಾರಿನಲ್ಲಿ ಸಂಚಾರ

ರೇಂಜ್ ರೋವರ್ ಕಾರಿನಲ್ಲಿ ಸಂಚಾರ

ಎಚ್. ಡಿ. ಕುಮಾರಸ್ವಾಮಿ 2018ರ ಚುನಾವಣಾ ಫಲಿತಾಂಶ ಬಂದ ಬಳಿಕ ಕಪ್ಪು ಬಣ್ಣದ ರೇಂಜ್ ರೋವರ್ ಕಾರಿನಲ್ಲಿ ಸಂಚಾರ ನಡೆಸುತ್ತಿದ್ದರು. ಕೆಎ 42 ಪಿ 0002 ನಂಬರ್‌ನ ಕಾರನ್ನು ಸದಾ ಅವರು ಬಳಕೆ ಮಾಡುತ್ತಿದ್ದರು. ಜಿಲ್ಲಾ ಕೇಂದ್ರಗಳಿಗೆ ತೆರಳಿದಾಗ ಮಾತ್ರ ಜಿಲ್ಲಾಡಳಿತ ನಿಗದಿ ಮಾಡಿದ ಕಾರನ್ನು ಬಳಕೆ ಮಾಡುತ್ತಿದ್ದರು.

ಅದೃಷ್ಟದ ಕಾರು ಎಂದು ಭಾವಿಸಿದ್ದರು

ಅದೃಷ್ಟದ ಕಾರು ಎಂದು ಭಾವಿಸಿದ್ದರು

2018ರ ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ಬಳಿಕ ಕುಮಾರಸ್ವಾಮಿ ಕಪ್ಪು ಬಣ್ಣದ ರೇಂಜ್ ರೋವರ್ ಕಾರು ಬಳಸುತ್ತಿದ್ದರು. ಇದನ್ನು ಅವರು ಅದೃಷ್ಟದ ಕಾರು ಎಂದು ನಂಬಿದ್ದರು. ಆದ್ದರಿಂದ, ಸರ್ಕಾರ ನೀಡಿದ ಕಾರನ್ನು ಅವರು ಬೇಡ ಎಂದು ಹೇಳಿ ಖಾಸಗಿ ಕಾರಿನಲ್ಲಿಯೇ ಸಂಚಾರ ನಡೆಸುತ್ತಿದ್ದರು.

ಕಪ್ಪು ಕಾರು ಕೈ ಕೊಟ್ಟಿತ್ತು

ಕಪ್ಪು ಕಾರು ಕೈ ಕೊಟ್ಟಿತ್ತು

ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕುಮಾರಸ್ವಾಮಿ ಸಂಚಾರ ನಡೆಸುತ್ತಿದ್ದ ರೇಂಜ್ ರೋವರ್ ಕಾರಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆಗ ಕೆಲವು ದಿನಗಳ ಕಾಲ ಅವರು ಬಿಳಿ ಬಣ್ಣದ ಖಾಸಗಿ ಕಾರಿನಲ್ಲಿ ಸಂಚಾರ ನಡೆಸುತ್ತಿದ್ದರು. ಉಳಿದಂತೆ ಕಪ್ಪು ರೇಂಜ್ ರೋವರ್ ಕಾರನ್ನು ಅವರು ಇಷ್ಟ ಪಡುತ್ತಿದ್ದರು.

English summary
H.D.Kumaraswamy not used government car when he was Chief Minister. Govt allotted Toyota Fortuner car for him after he take oath as CM. But, He used his private Range Rover car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X