ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಇಬ್ರಾಹಿಂ ಅವರೇ ಮೊದಲ ರಾತ್ರಿ ಯಾವಾಗ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 08 : 'ಬಿಜೆಪಿಯವರು ನಿಶ್ಚಿತಾರ್ಥ ಮಾಡಿಕೊಂಡು ಸುಮ್ಮನಾದರು. ಬುದ್ಧಿವಂತರು ಹೋಗಿ ತಾಳಿ ಕಟ್ಟಿ ಬಂದರು. ತಾಳಿ ಕಟ್ಟಿ ಮುಂದಿನ ಮಾತನಾಡಬೇಕು' ಕುಮಾರಸ್ವಾಮಿ ಅವರ ಭೇಟಿಯ ಬಳಿಕ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ ಮಾತುಗಳಿವು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಬೆನ್ಸನ್‌ ಟೌನ್‌ನಲ್ಲಿರುವ ಸಿ.ಎಂ.ಇಬ್ರಾಹಿಂ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಇಬ್ರಾಹಿಂ ನಿವಾಸದಿಂದ ಹೊರಬಂದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ ಅವರು 'ನಾವು ಯಾವುದೇ ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿಲ್ಲ' ಎಂದು ಹೇಳಿದರು. ['ಮನಸ್ಸು ಮಾಡಿದ್ದರೆ ಯಡಿಯೂರಪ್ಪ ದಾರಿ ತಪ್ಪಿಸಬಹುದಿತ್ತು']

cm ibrahim

'ನಮ್ಮದು ಸೌಜನ್ಯದ ಭೇಟಿ, ಇಬ್ರಾಹಿಂ ಅವರು ನಮ್ಮ ಕುಟುಂಬದ ಹಿರಿಯಣ್ಣ ಇದ್ದ ಹಾಗೆ. ಹೀಗಾಗಿ ಅಣ್ಣನನ್ನು ಮಾತನಾಡಿಸಿಕೊಂಡು ಹೋಗಲು ಬಂದಿದ್ದೆ. ಬಿಬಿಎಂಪಿಯಲ್ಲಿ ನಮ್ಮದು ಪವಿತ್ರ ಮೈತ್ರಿ. ಬಿಜೆಪಿ ಜೊತೆ ಹೋದರೆ ಪವಿತ್ರವಾಗುವ ಮೈತ್ರಿ, ಕಾಂಗ್ರೆಸ್ ಜೊತೆ ಹೋದರೆ ಅಪವಿತ್ರವಾಗುವುದು ಹೇಗೆ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಬುದ್ಧಿವಂತರು ತಾಳಿ ಕಟ್ಟಿ ಬಂದರು : 'ಕುಮಾರಸ್ವಾಮಿ ಅವರ ಜೊತೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಎಂ.ಇಬ್ರಾಹಿಂ ಅವರು, 'ಬಿಜೆಪಿಯವರು ನಿಶ್ಚಿತಾರ್ಥ ಮಾಡಿಕೊಂಡು ಸುಮ್ಮನಾದರು. ಬುದ್ಧಿವಂತರು ತಾಳಿ ಕಟ್ಟಿ ಬಂದರು, ಯಾರೂ ನಿಶ್ಚಿತಾರ್ಥ ಮಾಡಿಕೊಂಡು ಸುಮ್ಮನಾಗುವುದಿಲ್ಲ' ಎಂದು ತಮ್ಮ ಎಂದಿನ ಶೈಲಿಯಲ್ಲಿ ಹೇಳಿದರು.

'ನಾನು ಎರಡು ತಿಂಗಳಿಗೊಮ್ಮೆ ದೇವೇಗೌಡರ ಆರೋಗ್ಯ ವಿಚಾರಿಸಲು ಅವರ ಮನೆಗೆ ಹೋಗುತ್ತೇನೆ. ಅದು ಮಾಧ್ಯಮಗಳಿಗೆ ಗೊತ್ತಿಲ್ಲ. ಆದರೆ, ಇವತ್ತು ಕುಮಾರಸ್ವಾಮಿ ಅವರು ನಮ್ಮ ಮನೆಗೆ ಬಂದಿದ್ದು ಗೊತ್ತಾಗಿದೆ. ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ನಾವು ರಾಜಕೀಯ ಮಾತನಾಡಿಲ್ಲ' ಎಂದು ಸ್ಪಷ್ಟಪಡಿಸಿದರು.

English summary
In political development in Karnataka JDS state president HD Kumaraswamy met CM Ibrahim deputy chairman of Karnataka planning commission in his house Benson town, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X