• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?

By Mahesh
|

ಬೆಂಗಳೂರು, ಜೂನ್ 08: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಖಾತೆ ಹಂಚಿಕೆ ಗೊಂದಲಕ್ಕೆ ಮುಕ್ತಾಯ ಹಾಡಲಾಗಿದೆ.

ಸಚಿವ ಸಂಪುಟ ಸೇರಿರುವ ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಿರುವ ಪಟ್ಟಿಯನ್ನು ಶುಕ್ರವಾರದಂದು ರಾಜ್ಯಪಾಲರಿಗೆ ಕಳಿಸಿ, ಸಂಜೆ ವೇಳೆಗೆ ಒಪ್ಪಿಗೆ ಪಡೆದುಕೊಳ್ಳಲಾಗಿದೆ.

ಕಾಂಗ್ರೆಸ್-ಮೈತ್ರಿ ಸರ್ಕಾರ ಸಚಿವರ ಸಂಕ್ಷಿಪ್ತ ವ್ಯಕ್ತಿ ಚಿತ್ರಣ

ಸಚಿವ ಸಂಪುಟದಲ್ಲಿ ಹಳೆ ಮೈಸೂರು ಭಾಗಕ್ಕೆ ಹೆಚ್ಚಿನ ಆದ್ಯತೆ, ಒಕ್ಕಲಿಗರಿಗೆ ಪ್ರಾತಿನಿಧ್ಯ ಸಿಕ್ಕಿದೆ. ಮುಖ್ಯವಾಗಿ ಹೈದರಾಬಾದ್ ಕರ್ನಾಟಕದ ಭಾಗದ ಮೂರು ಜಿಲ್ಲೆಗಳು ಸೇರಿದಂತೆ 14 ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ.

ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ಸಿನಿಂದ 15 ಹಾಗೂ ಜೆಡಿಎಸ್ ನಿಂದ 8 ಮತ್ತು ಕೆಪಿಜೆಪಿ 1 ಹಾಗೂ ಬಹುಜನ ಸಮಾಜವಾದಿ ಪಕ್ಷದಿಂದ 1 ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ನೂತನ ಸಚಿವರು, ಅವರ ಕ್ಷೇತ್ರ ಹಾಗೂ ಖಾತೆ ವಿವರ

ಸಚಿವರ ಹೆಸರು ಕ್ಷೇತ್ರ ಖಾತೆ
ಎಚ್ ಡಿ ಕುಮಾರಸ್ವಾಮಿ ಚನ್ನಪಟ್ಟಣ ಮುಖ್ಯಮಂತ್ರಿ, ಹಣಕಾಸು, ಡಿಪಿಎಆರ್, ಇಂಧನ,ಅಬಕಾರಿ, ಜವಳಿ, ವಾರ್ತಾ ಮತ್ತು ಪ್ರಸಾರ, ಯೋಜನೆ ಮತ್ತು ಸಾಂಖ್ಯಿಕ, ಮೂಲ ಸೌಕರ್ಯ ಅಭಿವೃದ್ಧಿ, ಸಾರ್ವಜನಿಕ ಉದ್ದಿಮೆ ಹಾಗೂ ಬಾಕಿ ಉಳಿದ ಎಲ್ಲಾ ಖಾತೆಗಳು
ಜಿ ಪರಮೇಶ್ವರ ಕೊರಟಗೆರೆ ಗೃಹ, ಗುಪ್ತಚರ, ಕ್ರೀಡೆ ಮತ್ತು ಯುವಜನ ಖಾತೆ, ಬೆಂಗಳೂರು ಅಭಿವೃದ್ಧಿ ಖಾತೆ
ಎಚ್ ಡಿ ರೇವಣ್ಣ ಹೊಳೆನರಸೀಪುರ ಲೋಕೋಪಯೋಗಿ (ಬಂದರು ಖಾತೆ ಹೊರತುಪಡಿಸಿ)
ಬಂಡೆಪ್ಪ ಕಾಶೆಂಪುರ ಬೀದರ್ (ದಕ್ಷಿಣ) ಸಹಕಾರ
ಜಿ.ಟಿ ದೇವೇಗೌಡ ಚಾಮುಂಡೇಶ್ವರಿ ಉನ್ನತ ಶಿಕ್ಷಣ
ಸಿ.ಎಸ್ ಪುಟ್ಟರಾಜು ಮೇಲುಕೋಟೆ ಸಣ್ಣ ನೀರಾವರಿ
ಎಂ. ಸಿ ಮನಗೂಳಿ ಸಿಂಧಗಿ ತೋಟಗಾರಿಕೆ(ರೇಷ್ಮೆ ಹೊರತುಪಡಿಸಿ)
ಗುಬ್ಬಿ ಶ್ರೀನಿವಾಸ್ ಗುಬ್ಬಿ ಸಣ್ಣ ಕೈಗಾರಿಕೆ
ವೆಂಕಟರಾವ್ ನಾಡಗೌಡ ಸಿಂಧನೂರು ಪಶು ಸಂಗೋಪನೆ ಮತ್ತು ಮೀನುಗಾರಿಕೆ
ಸಾ.ರ ಮಹೇಶ್ ಕೆ.ಆರ್ ನಗರ ಪ್ರವಾಸೋದ್ಯಮ, ರೇಷ್ಮೆ
ಡಿ.ಸಿ ತಮ್ಮಣ್ಣ ಮದ್ದೂರು ಸಾರಿಗೆ
ಎನ್ ಮಹೇಶ್ ಕೊಳ್ಳೇಗಾಲ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಆರ್ ವಿ ದೇಶಪಾಂಡೆ ಹಳಿಯಾಳ ಕಂದಾಯ, ಕೌಶಲ್ಯ ಅಭಿವೃದ್ಧಿ
ಕೆ.ಜೆ ಜಾರ್ಜ್ ಸರ್ವಜ್ಞ ನಗರ ಬೃಹತ್ ಕೈಗಾರಿಕೆ, ಸಕ್ಕರೆ, ಐಟಿ ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ
ಡಿ.ಕೆ ಶಿವಕುಮಾರ್ ಕನಕಪುರ ಜಲಸಂಪನ್ಮೂಲ ಖಾತೆ, ವೈದ್ಯಕೀಯ ಶಿಕ್ಷಣ
ಕೃಷ್ಣ ಭೈರೇಗೌಡ ಬ್ಯಾಟರಾಯನಪುರ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರ, ಮಾನವ ಸಂಪನ್ಮೂಲ
ಶಿವಶಂಕರ ರೆಡ್ಡಿ ಗೌರಿಬಿದನೂರು ಕೃಷಿ
ಪ್ರಿಯಾಂಕ್ ಖರ್ಗೆ ಚಿತ್ತಾಪೂರ ಸಮಾಜ ಕಲ್ಯಾಣ
ಯು.ಟಿ ಖಾದರ್ ಮಂಗಳೂರು ನಗರಾಭಿವೃದ್ಧಿ(ಬಿಬಿಎಂಪಿ ಹೊರತುಪಡಿಸಿ) ಹಾಗೂ ವಸತಿ
ಜಮೀರ್ ಅಹ್ಮದ್ ಖಾನ್ ಚಾಮರಾಜಪೇಟೆ ಆಹಾರ ಮತ್ತು ನಾಗರಿಕ ಸೌಲಭ್ಯ, ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್
ಶಿವಾನಂದ ಪಾಟೀಲ್ ಬಸವನ ಬಾಗೇವಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ವೆಂಕಟರಮಣಪ್ಪ ಪಾವಗಡ ಕಾರ್ಮಿಕ
ರಾಜಶೇಖರ ಪಾಟೀಲ್ ಹುಮ್ನಾಬಾದ್ ಗಣಿ ಮತ್ತು ಭೂವಿಜ್ಞಾನ/ ಮುಜರಾಯಿ
ಪುಟ್ಟರಂಗಶೆಟ್ಟಿ ಚಾಮರಾಜನಗರ ಹಿಂದುಳಿದ ವರ್ಗಗಳ ಕಲ್ಯಾಣ
ಜಯಮಾಲಾ ಎಂಎಲ್ಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಎಂಬಿ ಪಾಟೀಲ್ ಬಬಲೇಶ್ವರ ಇನ್ನೂ ಪ್ರಕಟವಾಗಿಲ್ಲ
ಆರ್ ಬಿ ತಿಮ್ಮಾಪುರ ವಿಧಾನಪರಿಷತ್ ಸದಸ್ಯ (ಬಾಗಲಕೋಟೆ)> ಇನ್ನೂ ಪ್ರಕಟವಾಗಿಲ್ಲ
ಸತೀಶ್ ಜಾರಕಿಹೊಳಿ ಯಮಕನಮರಡಿ ಇನ್ನೂ ಪ್ರಕಟವಾಗಿಲ್ಲ
ಎಂಟಿಬಿ ನಾಗರಾಜ್ ಹೊಸಕೋಟೆ ಇನ್ನೂ ಪ್ರಕಟವಾಗಿಲ್ಲ
ಸಿ.ಎಸ್. ಶಿವಳ್ಳಿ ಕುಂದಗೋಳ ಇನ್ನೂ ಪ್ರಕಟವಾಗಿಲ್ಲ
ಪರಮೇಶ್ವರ್ ನಾಯ್ಕ್ ಹೂವಿನ ಹಡಗಲಿ ಇನ್ನೂ ಪ್ರಕಟವಾಗಿಲ್ಲ
ರಹೀಂ ಖಾನ್ ಬೀದರ್ ಉತ್ತರ ಇನ್ನೂ ಪ್ರಕಟವಾಗಿಲ್ಲ
ಇ. ತುಕಾರಾಂ ಸಂಡೂರು ಇನ್ನೂ ಪ್ರಕಟವಾಗಿಲ್ಲ

English summary
Karnataka Chief Minister HD Kumaraswamy has inducted 25 ministers in to his cabinet. Here is the list of Cabinet ministers their constituency and portfolio allotted
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X