ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಬ್ ಅರ್ಬನ್ ರೈಲಿಗೆ ಒಪ್ಪಿಗೆ ಸೇರಿದಂತೆ ಸಂಪುಟ ಸಭೆ ನಿರ್ಣಯಗಳು

|
Google Oneindia Kannada News

ಬೆಂಗಳೂರು, ಜನವರಿ 11: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರವು ಹತ್ತು ಹಲವು ಸಾರಿಗೆ ಸಂಪರ್ಕ ಸೌಲಭ್ಯಗಳನ್ನು ಕುರಿತಂತೆ ಚರ್ಚಿಸಿ, ಅನೇಕ ಯೋಜನೆಗಳಿಗೆ ಅಸ್ತು ಎಂದಿದೆ.

ಗುರುವಾರದಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಮೆಟ್ರೋ ನಿಲ್ದಾಣ, ಕೆಐಎಎಲ್ ಹಾಗೂ ಮೆಟ್ರೋ ಸಂಪರ್ಕ, ಸಬ್ ಅರ್ಬನ್ ರೈಲ್ವೆ ಯೋಜನೆ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಸಚಿವ ಸಂಪುಟ ಸಭೆ ಮುಕ್ತಾಯವಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕಾಶೆಂಪೂರ ಅವರು ನೀಡಿದ ವಿವರಗಳ ಮುಖ್ಯಾಂಶಗಳು ಹೀಗಿವೆ:

ವಿಮಾನ ನಿಲ್ದಾಣಕ್ಕೆ ಮೆಟ್ರೋ: ಭಾರಿ ಮೊತ್ತದ ಕಾಮಗಾರಿಗೆ ಸಂಪುಟ ಅಸ್ತುವಿಮಾನ ನಿಲ್ದಾಣಕ್ಕೆ ಮೆಟ್ರೋ: ಭಾರಿ ಮೊತ್ತದ ಕಾಮಗಾರಿಗೆ ಸಂಪುಟ ಅಸ್ತು

* ಕೆಪಿಎಸ್​​ಸಿ ಹಂಗಾಮಿ ಅಧ್ಯಕ್ಷರಾಗಿ ಷಡಕ್ಷರಿ ಸ್ವಾಮಿಯನ್ನು ನೇಮಿಸಲು ಸಂಪುಟ ಸಭೆಯಲ್ಲಿ ನಿರ್ಧಾರ.
* ನಗರದ 4 ಮಾರ್ಗಗಳಲ್ಲಿ ಸಬ್​ ಅರ್ಬನ್ ರೈಲ್ವೆ ಯೋಜನೆಗೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ.
- ಈ ಯೋಜನೆಯ ಒಟ್ಟು ವೆಚ್ಚ 29,908 ಕೋಟಿ, ಇದರಲ್ಲಿ ಶೇ. 20ರಷ್ಟು ರಾಜ್ಯ, ಶೇ. 20 ರಷ್ಟು ಕೇಂದ್ರ ಸರ್ಕಾರ ಹಾಗೂ ಶೇ. 60ರಷ್ಟು ವೆಚ್ಚವನ್ನು ಸಾಲದ ಮೂಲಕ ಭರಿಸಲಾಗುತ್ತದೆ.

ಮೊದಲ ಮಾರ್ಗ

ಮೊದಲ ಮಾರ್ಗ

1) ಕೆಂಗೇರಿ-ಮೆಜೆಸ್ಟಿಕ್- ಕಂಟೋನ್ಮೆಂಟ್- ಕೆಆರ್ ಪುರಂ- ಬೈಯಪ್ಪನಹಳ್ಳಿ ಮಾರ್ಗ
- 2) ಮೆಜೆಸ್ಟಿಕ್- ಯಶವಂತಪುರ- ಯಲಹಂಕ- ರಾಜಾನುಕುಂಟೆ ಮಾರ್ಗ
- 3) ನೆಲಮಂಗಲ-ಚಿಕ್ಕಬಾಣಾವಾರ -ಬೈಯಪ್ಪನಹಳ್ಳಿ ಮಾರ್ಗ ಮತ್ತು *
- 4) ಬೈಯಪ್ಪನಹಳ್ಳಿ- ದೇವನಹಳ್ಳಿ- ಯಲಹಂಕ ಮಾರ್ಗದಲ್ಲಿ ಸಬರ್ಬನ್ ರೈಲ್ವೆ ಯೋಜನೆ ನಿರ್ಮಿಸಲು ಚಿಂತನೆ.

ಕಂಟೋನ್ಮೆಂಟ್-ವೈಟ್‌ಫೀಲ್ಡ್ ಜೋಡಿ ರೈಲ್ವೆ ಹಳಿಗೆ ಸಮ್ಮತಿ ಕಂಟೋನ್ಮೆಂಟ್-ವೈಟ್‌ಫೀಲ್ಡ್ ಜೋಡಿ ರೈಲ್ವೆ ಹಳಿಗೆ ಸಮ್ಮತಿ

ವಿಜಯಪುರ ಜಿಲ್ಲೆ, ಕಲಬುರಗಿ ನಗರಾಭಿವೃದ್ಧಿ

ವಿಜಯಪುರ ಜಿಲ್ಲೆ, ಕಲಬುರಗಿ ನಗರಾಭಿವೃದ್ಧಿ

* ಚಿಕ್ಕಮಗಳೂರಿನಲ್ಲಿ ಕುವೆಂಪು ವಿವಿಗೆ ನೀಡಲಾಗಿದ್ದ 600 ಎಕರೆ ಜಮೀನನ್ನು ವಾಪಸ್ ಅರಣ್ಯ ಇಲಾಖೆಗೆ ಪಡೆಯಲು ಒಪ್ಪಿಗೆ.

* ವಿಜಯಪುರ ಜಿಲ್ಲೆಯ ತಿಕೋಟಾ ಮತ್ತು ಇತರೆ 23 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ 73.62 ಕೋಟಿ ಪರಿಷ್ಕೃತ ಅಂದಾಜಿಗೆ ಅನುಮೋದನೆ.

* ಬೆಟ್ಟ ಕುರುಬ ಜಾತಿಯನ್ನು ಪರಿಶಿಷ್ಟ ಪಂಗಡ ಪಟ್ಟಿಯ ಸಂಖ್ಯೆ 16ರಲ್ಲಿ ಕಾಡು ಕುರುಬ ಜಾತಿಗೆ ಸಮಾನಾಂತರವಾಗಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಧಾರ.

* ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಪ್ರಸ್ತಾಪಿಸಿರುವ 88 ಎಕರೆಯಲ್ಲಿ 95 ಕೋಟಿ ಅಂದಾಜು ವೆಚ್ಚದಲ್ಲಿ ವಸತಿ ಯೋಜನೆ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ

ಸಂಪುಟ ಸಭೆ ನಿರ್ಣಯಗಳು: ಉ.ಕರ್ನಾಟಕ ಮತ್ತು ಸಿದ್ದರಾಮಯ್ಯಗೆ ಆದ್ಯತೆ! ಸಂಪುಟ ಸಭೆ ನಿರ್ಣಯಗಳು: ಉ.ಕರ್ನಾಟಕ ಮತ್ತು ಸಿದ್ದರಾಮಯ್ಯಗೆ ಆದ್ಯತೆ!

ಆಲಮಟ್ಟಿ ಅಣೆಕಟ್ಟು

ಆಲಮಟ್ಟಿ ಅಣೆಕಟ್ಟು

* ಆಲಮಟ್ಟಿ ಅಣೆಕಟ್ಟು ಪ್ಯಾಕೇಜ್ 1ರ ಹೆಚ್ಚುವರಿ ಆರ್ಥಿಕ ಹೊಣೆಯ 766 ಲಕ್ಷ ಮೊತ್ತಕ್ಕೆ ಅನುಮೋದನೆ

* 2018-19ನೇ ಸಾಲಿನ ಐಸಿಡಿಎಸ್ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಔಷಧಿ ಕಿಟ್ 9.63 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಅನುಮೋದನೆ

* 2018-19ನೇ ಸಾಲಿನ ಐಸಿಡಿಎಸ್ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಶಾಲಾ ಪೂರ್ವ ಶಿಕ್ಷಣ ಕಿಟ್ 19.77 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಅನುಮೋದನೆ

* 500 ರೈತ ಉತ್ಪಾದಕ ಕೇಂದ್ರಗಳ ಸ್ಥಾಪನೆಗೆ 300 ಕೋಟಿ ರೂ. ಬಿಡುಗಡೆಗೆ ಅಸ್ತು

ಬೇಲೂರು-ಹಾಸನ-ಸಕಲೇಶಪುರ

ಬೇಲೂರು-ಹಾಸನ-ಸಕಲೇಶಪುರ

* ಬೇಲೂರು-ಹಾಸನ-ಸಕಲೇಶಪುರ ರೈಲ್ವೆ ಯೋಜನೆ ಪರಿವರ್ತನೆ ಮಾಡಿ, ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ರೈಲ್ವೆ ಮಾರ್ಗ ಯೋಜನೆ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಸಮ್ಮತಿ. ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ. 50:50 ವೆಚ್ಚ ಹಂಚಿಕೆಗೆ ಸಚಿವ ಸಂಪುಟ ಅನುಮೋದನೆ

* ಸರ್ಕಾರಿ ಪ್ರಾಥಮಿಕ‌ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಂಚಿಕೆಗೆ 77.67 ಕೋಟಿ ರೂ. ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ.
* ಚಲ್ಲಘಟ್ಟದಲ್ಲಿ 140 ಕೋಟಿ ರೂ.‌ ವೆಚ್ಚದಲ್ಲಿ ಮೆಟ್ರೋ‌ ನಿಲ್ದಾಣ ನಿರ್ಮಾಣಕ್ಕೆ ಅನುಮೋದನೆ.

ಸೆಂಟ್ರಲ್‌ ಸಿಲ್ಕ್ ಬೋರ್ಡ್ ಜಂಕ್ಷನ

ಸೆಂಟ್ರಲ್‌ ಸಿಲ್ಕ್ ಬೋರ್ಡ್ ಜಂಕ್ಷನ

* ಸೆಂಟ್ರಲ್‌ ಸಿಲ್ಕ್ ಬೋರ್ಡ್ ಜಂಕ್ಷನ್​ನಿಂದ ಕೆ.ಆರ್.ಪುರವರೆಗಿನ ಫೇಸ್-2 ಮೆಟ್ರೋ ಯೋಜನೆಯ ಪರಿಷ್ಕೃತ ವೆಚ್ಚ 5,994 ಕೋಟಿ ರೂ.ಗೆ ಸಂಪುಟ ಅನುಮೋದನೆ.
* ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಈ ಮುಂಚಿನ 29.1 ಕಿ.ಮೀ. ಉದ್ದದ ನಾಗವಾರ-ಏರ್​​​​​​​​​​​ಪೋರ್ಟ್ ಮೆಟ್ರೋ ಮಾರ್ಗವನ್ನು ಬದಲಾವಣೆ.
* ನಾಗವಾರ-ಹೆಬ್ಬಾಳ-ಜಕ್ಕೂರು ಮೂಲಕ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 38 ಕಿ.ಮೀ. ಉದ್ದದ ಪರಿಷ್ಕೃತ ಮೆಟ್ರೋ ಯೋಜನೆಗೆ ಅನುಮೋದನೆ.

ನಿಧಾನಗತಿಯ ಮೆಟ್ರೋ ಕಾಮಗಾರಿ ಚುರುಕುಗೊಳಿಸಲು ಹೊಸ ವಿಧಾನನಿಧಾನಗತಿಯ ಮೆಟ್ರೋ ಕಾಮಗಾರಿ ಚುರುಕುಗೊಳಿಸಲು ಹೊಸ ವಿಧಾನ

English summary
Karnataka Cabinet Meeting on Jan 10, 2018 and minister Bandeppa Kashempur briefed the press about the major decision taken during the meeting which includes accepting Sub Urban Railway project DPR, Namma Metro link..etc
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X