ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಣ್ಣಿನ ಮೊಮ್ಮಗ'ನ ರಕ್ಷಣಾತ್ಮಕ ಆಟ, ಪತ್ರಕರ್ತರಿಗೆ ಪೀಕಲಾಟ

By Manjunatha
|
Google Oneindia Kannada News

ಬೆಂಗಳೂರು, ಮೇ 26: ಕೆಲವು ರಾಜಕೀಯ ನಾಯಕರು 'ಪತ್ರಕರ್ತರ ಫ್ರೆಂಡ್ಲಿ' ಎನಿಸಿಕೊಂಡಿರುತ್ತಾರೆ ಅದಕ್ಕೆ ಕಾರಣ ಅವರ ನೇರವಾದ ಮಾತು, ಕೇಳಿದ ಪ್ರಶ್ನೆಗೆ ಕೊಡುವ ನೇರವಾದ ಉತ್ತರ. ಸುದ್ದಿ ಕೊಡುವ ರಾಜಕಾರಣಿಗಳು ಪತ್ರಕರ್ತರಿಗೆ ಸದಾ ಪ್ರಿಯವೇ.

ಆದರೆ ಇದೀಗ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿರುವುದು ಪತ್ರಕರ್ತರಿಗೆ ತಮ್ಮ ಕೆಲಸವನ್ನು ಶ್ರಮದಾಯಕ ಮಾಡಿಸಿದೆ. ಕಾರಣ ಅವರ ರಕ್ಷಣಾತ್ಮಕ ಮಾತುಗಾರಿಕೆ. ಅವರ ಮಾತು 'ಗೋಡೆ ಮೇಲೆ ದೀಪವಿಟ್ಟಂತೆ'.

ಪ್ರಕಾಶ್ ಅಮ್ಮಣ್ಣಾಯರಿಂದ ಸಿಎಂ ಕುಮಾರಸ್ವಾಮಿ ಜಾತಕ ವಿಶ್ಲೇಷಣೆಪ್ರಕಾಶ್ ಅಮ್ಮಣ್ಣಾಯರಿಂದ ಸಿಎಂ ಕುಮಾರಸ್ವಾಮಿ ಜಾತಕ ವಿಶ್ಲೇಷಣೆ

ಕುಮಾರಸ್ವಾಮಿ ಅವರದ್ದು ಸದಾ ರಕ್ಷಣಾತ್ಮಕ ಮಾತುಗಾರಿಕೆಯೇ, ತಮಗೆ ಆಗದಿದ್ದವರ ಮೇಲೆ ನೇರವಾಗಿ ಆರೋಪ ಮಾಡುತ್ತಾರಾದರೂ ಸ್ವಲ್ಪ ವಿವಾದಕ್ಕೆ ಎಡೆಮಾಡುವಂತ ಪ್ರಶ್ನೆಗಳನ್ನು ಕೇಳಿದರೆ ಸಾಕು ಆಮೆ ಚಿಪ್ಪಿನೊಳಗೆ ಸೇರಿಕೊಂಡು ಬಿಡುತ್ತಾರೆ. ಅಥವಾ ಪ್ರಸ್ತುತವಲ್ಲದ ವಿಷಯಗಳನ್ನು ಎಳೆದು ತರುತ್ತಾರೆ. ಇದು ಸುದ್ದಿಗಾಗಿ ಹುಡುಕುವ ಪತ್ರಕರ್ತರಿಗೆ ರೇಜಿಗೆ ಹುಟ್ಟಿಸಿಬಿಡುತ್ತದೆ.

'ಸಾಂದರ್ಭಿಕ ಶಿಶು ನಾನು', ಮೈತ್ರಿ ಹಿಂದಿನ ಗುಟ್ಟು ಬಿಟ್ಟುಕೊಟ್ಟ ಎಚ್‌ಡಿಕೆ'ಸಾಂದರ್ಭಿಕ ಶಿಶು ನಾನು', ಮೈತ್ರಿ ಹಿಂದಿನ ಗುಟ್ಟು ಬಿಟ್ಟುಕೊಟ್ಟ ಎಚ್‌ಡಿಕೆ

ಸುತ್ತಿ-ಬಳಸಿ ವಿಷಯ ಹೇಳುವ ಛಾಳಿ

ಸುತ್ತಿ-ಬಳಸಿ ವಿಷಯ ಹೇಳುವ ಛಾಳಿ

ಮುಖ್ಯಮಂತ್ರಿ ಆದ ಕೂಡಲೇ ಕುಮಾರಸ್ವಾಮಿ ಅವರು ಕರೆದಿದ್ದ ಸುದ್ದಿಗೋಷ್ಠಿಯನ್ನೇ ಗಮನಿಸುವುದಾದರೆ, ಅಂದು ಮೊದಲಿಗೇ ಸ್ವಾಮೀಜಿಯೊಬ್ಬರ ಮೇಲೆ ಹರಿಹಾಯ್ದರು ಆದರೆ ಅವರ ಹೆಸರು ಹೇಳಲಿಲ್ಲ. ಸಾಲಮನ್ನಾದ ಬಗ್ಗೆ ಕೇಳಲಾದ ಪ್ರಶ್ನೆಗೆ ರೈತರ ಮೇಲೆ ಪ್ರೀತಿ-ಕಕ್ಕುಲಾತಿಗಳನ್ನೆಲ್ಲಾ ಹೇಳಿ, ಮೈತ್ರಿ ಸರ್ಕಾರ ಕಷ್ಟ ನಷ್ಟಗಳ ಬಗ್ಗೆ ಮಾತನಾಡಿ, ತಾವು ಮುಖ್ಯಮಂತ್ರಿ ಆದ ಈ ಸಂದರ್ಣದ ಕತೆಯೆಲ್ಲಾ ಹೇಳಿ, ಸುತ್ತಿ-ಬಳಸಿ ಕೊನೆಗೆ ಸಾಲಮನ್ನಾಕ್ಕೆ ಸ್ವಲ್ಪ ಸಮಯ ಬೇಕೆಂದು ಹೇಳಿದರೇ ಹೊರತು. ಪ್ರಸ್ತುತ ಈಗಲೇ ಸಾಲ ಮನ್ನಾ ಏಕೆ ಮಾಡುತ್ತಿಲ್ಲವೆಂಬುದಕ್ಕೆ ನೇರ ಕಾರಣವನ್ನು ಹೇಳಲೇ ಇಲ್ಲ.

''ಸಂಧರ್ಭ', 'ಇರತಕ್ಕಂತಹಾ' ಎಚ್‌ಡಿಕೆ ಮೆಚ್ಚಿನ ಪದಗಳು

''ಸಂಧರ್ಭ', 'ಇರತಕ್ಕಂತಹಾ' ಎಚ್‌ಡಿಕೆ ಮೆಚ್ಚಿನ ಪದಗಳು

ಇನ್ನು ಕುಮಾರಸ್ವಾಮಿ ಅವರು ಬಳಸುವ 'ಸಂದರ್ಭ', 'ಇರತಕ್ಕಂತಹಾ', 'ನಾನೇನ್' ಇನ್ನೂ ಕೆಲವು ಪದಗಳ ಬಗ್ಗೆಯಂತೂ ಈಗಾಗಲೇ ಪತ್ರಕರ್ತರ ಮಧ್ಯೆ ಒಳ್ಳೆಳ್ಳೆ ಜೋಕುಗಳೇ ಓಡಾಡುತ್ತಿವೆ. 'ಆ ವ್ಯಕ್ತಿ ಏನು ಮಾಡಿದ್ದಾನೆಂದು ನನಗೆ ಗೊತ್ತಿದೆ (!?), ಸಂದರ್ಭ ಬಂದಾಗ ಬಹಿರಂಗ ಮಾಡುತ್ತೇನೆ' ಇದು ಸಾಮಾನ್ಯವಾಗಿ ಕುಮಾರಸ್ವಾಮಿ ಅವರು ಬಾಯಿಂದ ಉದುರುವ ಡೈಲಾಗು, ವಿಶೇಷವಾಗಿ ಯಾರಾದರೂ ಅವರ ವಿರುದ್ಧ ಆರೋಪ ಮಾಡಿದ್ದಾರೆಂದಾಗಂತೂ ಖಂಡಿತವಾಗಿ ಈ ಮೇಲಿನ ವಾಕ್ಯವನ್ನು ಅಂತಹವರ ವಿರುದ್ಧ ಬಳಸಿಯೇ ತೀರುತ್ತಾರೆ. ದೇವೇಗೌಡರು ಸಹ ಇದನ್ನು ಆಗಾಗ ಬಳಸುತ್ತಾರೆ. ಅಪ್ಪನಿಂದಲೇ ಬಂದ ಬಳುವಳಿ ಇರಬೇಕು.

ಪತ್ರಕರ್ತರಿಗೆ ಪ್ರಿಯವಲ್ಲ

ಪತ್ರಕರ್ತರಿಗೆ ಪ್ರಿಯವಲ್ಲ

ಆದರೆ ಈ ರೀತಿಯ ಖಚಿತವಲ್ಲದ ಮಾತುಗಳನ್ನು ಕೇಳುವುದು ಪತ್ರಕರ್ತರಿಗೆ ಪ್ರಿಯವಲ್ಲ, ಅವರಿಗೆ ನೇರ ಉತ್ತರಗಳು ಬೇಕಿರುತ್ತವೆ ಆದರೆ ಕುಮಾರಸ್ವಾಮಿ ಅವರು ಹಾವು ಸಾಯಬಾರದು, ಕೋಲೂ ಮುರಿಯಬಾರದು ಎಂಬಂತೆ ಮಾತನಾಡಿ ನಿರಾಸೆ ಮೂಡಿಸುತ್ತಾರೆ.

ಬೈಟ್ ಕೇಳಿದರೆ ಭಾಷಣ ಮಾಡ್ತಾರೆ

ಬೈಟ್ ಕೇಳಿದರೆ ಭಾಷಣ ಮಾಡ್ತಾರೆ

ಕುಮಾರಸ್ವಾಮಿ ಅವರ ಇನ್ನೊಂದು ಛಾಳಿ ಎಂದರೆ ಬೈಟ್‌ಗಾಗಿ ಮೈಕು ಮುಂದಿಟ್ಟರೆ ಭಾಷಣವನ್ನೇ ಪ್ರಾರಂಭಿಸಿಬಿಡುತ್ತಾರೆ. ಟಿವಿ ವಾಹಿನಿಯವರಿಗೆ ಇಂತಿಷ್ಟು ಸಮಯದ ವಿಡಿಯೋ ಮಾತ್ರವನ್ನೇ ಪ್ರಸಾರ ಮಾಡಬೇಕೆಂದಿರುತ್ತದೆ. ಆದರೆ ಕುಮಾರಸ್ವಾಮಿ ಅವರು ದೊಡ್ಡ ಭಾಷಣವನ್ನೇ ಮಾಡಿರುತ್ತಾರೆ, ಅವರ ಭಾಷಣದಲ್ಲಿ ಸುದ್ದಿಯನ್ನು ಹುಡುಕಿ ತೆಗೆಯುವುದರೊಳಗೆ ಪತ್ರಕರ್ತ ಹೈರಾಣಾಗಿರುತ್ತಾನೆ.

ಧನಾತ್ಮಕ ಅಂಶವೂ ಇದೆ

ಧನಾತ್ಮಕ ಅಂಶವೂ ಇದೆ

ಹಾಗೆಂದು ಕುಮಾರಸ್ವಾಮಿ ಅವರ ಮಾತುಗಳಲ್ಲಿ ಧನಾತ್ಮಕ ಅಂಶವೇ ಇಲ್ಲ ಎಂದಲ್ಲ. ಕುಮಾರಸ್ವಾಮಿ ಅವರು ಪತ್ರಕರ್ತರಿಗೆ ವೀಶೇಷ ಗೌರವ ನೀಡುತ್ತಾರೆ. ಇದನ್ನು ಸಾಕಷ್ಟು ಬಾರಿ ಅವರೇ ಹೇಳಿಕೊಂಡಿದ್ದಾರೆ. ಮಾತನಾಡುವಾಗಲೂ ಅವರು ನಿಧಾನವಾಗಿ ಅರ್ಥವಾಗುವಂತೆ ಮಾತನಾಡುತ್ತಾರೆ. ಪತ್ರಕರ್ತರನ್ನು ಕಂಡರೆ ಮಾರು ದೂರ ಓಡುವ ನಾಯಕರೂ ಕೆಲವರಿದ್ದಾರೆ. ಆದರೆ ಕುಮಾರಸ್ವಾಮಿ ಹಾಗಲ್ಲ. ಅವರು ಕ್ಯಾಮೆರಾ ಪ್ರೇಮಿ. ಪತ್ರಕರ್ತರ ಕೈಗೆ ಸುಲಭವಾಗಿ ಸಿಗುವ ಕೆಲವೇ ನಾಯಕರಲ್ಲಿ ಅವರೂ ಒಬ್ಬರು.

ಕುಮಾರಸ್ವಾಮಿ ಕುರಿತ ಈ ಜೋಕು ಓದಿ

ಕುಮಾರಸ್ವಾಮಿ ಕುರಿತ ಈ ಜೋಕು ಓದಿ

ಯಾರೋ ಪತ್ರಕರ್ತರೆ ಕಟ್ಟಿರುವ ಜೋಕಿರಬೇಕು ಇದು, ಇದನ್ನು ಓದಿದರೆ ಗೊತ್ತಾಗಿ ಬಿಡುತ್ತದೆ ಕುಮಾರಸ್ವಾಮಿ ಅವರ ರಕ್ಷಣಾತ್ಮಕ ಮಾತುಗಾರಿಕೆಯ ತಂತ್ರ. ನೀವೂ ಓದಿ ಆನಂದಿಸಿ.

ಪತ್ರಕರ್ತ: ಕುಮಾರಸ್ವಾಮಿಯವರೇ ನಿಮ್ಮ ಸರ್ಕಾರವನ್ನು ಈ ಯಾರಾದರೂ ಅಸ್ಥಿರಗೊಳಿಸಬಹುದು ಎಂಬ ಭಯ ಇದೆಯೇ?
ಸೋನಿಯಾ ಗಾಂಧಿ - ಇಲ್ಲ,
ರಾಹುಲ್ ಗಾಂಧಿ - ಹ್ಹ ಹ್ಹ ಹ್ಹ ಇಲ್ಲ,
ಖರ್ಗೆ, ಸಿದ್ದರಾಮಯ್ಯ - No Chance. ಇಬ್ರು ಕಾಲಾನೂ ಮುಗ್ದಿದೆ.
ಪರಮೇಶ್ವರ್ - ಇವಾಗ್ಲಾದ್ರೂ ಉಪಮುಖ್ಯಮಂತ್ರಿ ಆದ್ರಲ್ಲಾ. He is Happy.
ಆಜಾದ್, ವೇಣುಗೋಪಾಲ್ - ಅವರೆಲ್ಲಾ Scene ನಲ್ಲೇ ಇಲ್ಲಾ..
ಡಿ.ಕೆ ಶಿವಕುಮಾರ್ - ಈ ಸದ್ಯದ ಪರಿಸ್ಥಿತಿಯಲ್ಲಿ, ಗಂಭೀರ ರಾಜಕೀಯ ವಾತಾವರಣದಲ್ಲಿ, ಜನರ ಭಾವನೆಗಳನ್ನು ನಾನೇನ್ ಅರ್ಥ ಮಾಡ್ಕೊಂಡಿದಿನೀ, ಈ ಮೈತ್ರಿ ಅಂತಕ್ಕಂತ...

ಪತ್ರಕರ್ತ: ಗೊತ್ತಾಯ್ತು ಬಿಡಿ ಸರ್....

English summary
CM HD Kumaraswamy always talk securely. He rarely accuses straightly on his opponents, so news reporters always try hard to make him 'speak the news'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X