ಹಿರಿಯ ನಾಗರಿಕರಿಗೆ ಕುಮಾರಸ್ವಾಮಿಯಿಂದ ಉಚಿತ ಸೇವೆಗಳ ಭರವಸೆ

Posted By: ಗುರು ಕುಂಟವಳ್ಳಿ
Subscribe to Oneindia Kannada

ಬೆಂಗಳೂರು, ಜನವರಿ 03 : 'ಹಿರಿಯ ನಾಗರಿಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆಗೆ ಅವಕಾಶ. ಬಸ್, ಮೆಟ್ರೋ ರೈಲಿನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಶ್ರೀ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್, ಬೆಂಗಳೂರು ನಗರ ಜೆಡಿಎಸ್ ಘಟಕದ ವತಿಯಿಂದ ಬುಧವಾರ 'ಬೆಂಗಳೂರು ನಗರದ ಹಿರಿಯ ನಾಗರಿಕರೊಂದಿಗೆ ಸಂವಾದ' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಹಿರಿಯರ ವ್ಯಥೆ ಮತ್ತು ಒಂದಿಷ್ಟು ಸ್ವಾರಸ್ಯಕರ ಕಥೆ

ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಂಡಿದ್ದರು. ಹಿರಿಯ ನಾಗರಿಕರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ, ಪಕ್ಷ ಅಧಿಕಾರಕ್ಕೆ ಬಂದರೆ ಒದಗಿಸುವ ಸೌಲಭ್ಯಗಳ ಕುರಿತು ಮಾಹಿತಿ ಹಂಚಿಕೊಂಡರು.

ರಾಷ್ಟ್ರೀಯ ಪಿಂಚಣಿ ಯೋಜನೆ ವಯೋಮಿತಿ ಏರಿಕೆ

'ಸೇವೆಯಿಂದ ನಿವೃತ್ತರಾದ ನಿಮ್ಮ ಬಳಿ ಅಪಾರವಾದ ಅನುಭವವಿದೆ. ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ನಿಮ್ಮ ಅನುಭವಗಳನ್ನು ಬಳಸಿಕೊಂಡು ಆಡಳಿತ ಮಾಡುತ್ತೇನೆ. 60 ವರ್ಷಕ್ಕೆ ನಿಮ್ಮನ್ನು ಮನೆಗೆ ಕಳಿಸದೇ ಕೆಲಸ ನೀಡುತ್ತೇನೆ' ಎಂದರು ಹೇಳಿದರು.

ಹಿರಿಯರು ರಸ ಹೀರಿ ಬಿಸಾಡಿದ ಕಬ್ಬಿನ ಜಲ್ಲೆಯಲ್ಲ!

ಕನ್ನಡಿಗರ ಉದ್ಯೋಗ ವೇದಿಕೆಯ ವಿನುತಾ ಅವರು ಮಾತನಾಡಿ, 'ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬಂದರೆ ರಾಜ್ಯ ಅಭಿವೃದ್ಧಿಯಾಗುತ್ತದೆ. ನಾವು 3 ಲಕ್ಷ ಸದಸ್ಯರಿದ್ದೇವೆ. ಚುನಾವಣೆಯಲ್ಲಿ ನಿಮ್ಮ ಪರವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ' ಎಂದು ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದರು.

ಪ್ರಣಾಳಿಕೆಯಲ್ಲಿ ಸೇರಿಸುವೆ

ಪ್ರಣಾಳಿಕೆಯಲ್ಲಿ ಸೇರಿಸುವೆ

ಸಂವಾದದಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ಇದು ನಿಮ್ಮ ವೇದಿಕೆ, ನಾನು ಭಾಷಣ ಮಾಡಲು ಬಂದಿಲ್ಲ. ನಿಮ್ಮ ಸಮಸ್ಯೆಗಳ ಬಗ್ಗೆ ತಿಳಿಸಿ, ಅದನ್ನು ಹೇಗೆ ಬಗೆಹರಿಸಬಹುದು ಎಂದು ನಿಮ್ಮ ಅನುಭವದ ಮೂಲಕ ಹೇಳಿ ಅದನ್ನು ನಾನು ಪ್ರಣಾಳಿಕೆಯಲ್ಲಿ ಸೇರಿಸುವೆ' ಎಂದರು.

ಹಣಕಾಸು ವ್ಯವಸ್ಥೆ, ಭದ್ರತೆ ಒದಗಿಸಬೇಕು

ಹಣಕಾಸು ವ್ಯವಸ್ಥೆ, ಭದ್ರತೆ ಒದಗಿಸಬೇಕು

ನಿವೃತ್ತ ನ್ಯಾಯಮೂರ್ತಿ ಬ್ರಹ್ಮದೇವ್ ಅವರು ಹಿರಿಯ ನಾಗರಿಕರಿಗೆ ಹಣಕಾಸು ವ್ಯವಸ್ಥೆ, ಭದ್ರತೆಯ ವ್ಯವಸ್ಥೆ ಮಾಡಬೇಕು. ಹಳ್ಳಿಯಲ್ಲಿರುವವರಿಗೂ ಈ ವ್ಯವಸ್ಥೆ ಆಗಬೇಕು ಎಂದು ಮನವಿ ಮಾಡಿದರು.

ಉತ್ತರ ನೀಡಿದ ಕುಮಾರಸ್ವಾಮಿ, ‘ಹಿರಿಯ ನಾಗರಿಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ವೈದ್ಯಕೀಯ ತಪಾಸಣೆ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ. ಬಸ್, ನಮ್ಮ ಮೆಟ್ರೋದಲ್ಲಿ ಉಚಿತ ಪ್ರಯಾಣ ಮಾಡಲು ಪಾಸ್ ವಿತರಣೆ ಮಾಡುವ ಚಿಂತನೆ ನಮ್ಮ ಮುಂದಿದೆ' ಎಂದರು.

ಶಂಕರ ನಾರಾಯಣ ಅವರ ಸಲಹೆ

ಶಂಕರ ನಾರಾಯಣ ಅವರ ಸಲಹೆ

‘ಬೆಂಗಳೂರು ನಗರದ ಅಭಿವೃದ್ಧಿಗೆ ಬಿಬಿಎಂಪಿ, ಬಿಡಿಎ, ಜಲಮಂಡಳಿ ಎಲ್ಲವನ್ನೂ ಸೇರಿಸಿ ಒಂದೇ ವೇದಿಕೆ ನಿರ್ಮಾಣ ಮಾಡಬೇಕು. ಆಗ ಕೆಲಸ ತ್ವರಿತಗತಿಯಲ್ಲಿ ಆಗುತ್ತದೆ. ಪ್ರತಿ ವಾರ್ಡ್‌ನಲ್ಲಿ ಹಿರಿಯ ನಾಗರಿಕರನ್ನು ನೋಡಿಕೊಳ್ಳುವ ಡೇ ಕೇರ್ ಸೆಂಟರ್ ವಿದೇಶಗಳ ಮಾದರಿಯಲ್ಲಿ ಸ್ಥಾಪನೆಯಾಗಬೇಕು' ಎಂದರು.

ಸರ್ಕಾರಿ ಜಾಹೀರಾತಿಗೆ ಜನರ ಹಣ

ಸರ್ಕಾರಿ ಜಾಹೀರಾತಿಗೆ ಜನರ ಹಣ

‘ಕರ್ನಾಟಕ ಸರ್ಕಾರ ಜಾಹೀರಾತಿಗೆ ಕೋಟಿ-ಕೋಟಿ ವೆಚ್ಚ ಮಾಡುತ್ತಿದೆ. ಜನರ ಹಣವನ್ನು ಜಾಹೀರಾತಿನ ಮೇಲೆ ಸುರಿಯುತ್ತಿದೆ. ಇದರ ಬದಲು ಅದೇ ಹಣವನ್ನು ಯಾವುದಾದದರೂ ಯೋಜನೆಗೆ ಹಾಕಿದರೆ, ಜನರಿಗೆ ಅನುಕೂಲವಾಗುತ್ತದೆ. ಸುಮಾರು 1 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ' ಎಂದು ಕುಮಾರಸ್ವಾಮಿ ಆರೋಪಿಸಿದರು.

ಐಎಎಸ್ ಅಧಿಕಾರಿಗಳಿಂದ ಸಲಹೆ ಸಿಗಲ್ಲ

ಐಎಎಸ್ ಅಧಿಕಾರಿಗಳಿಂದ ಸಲಹೆ ಸಿಗಲ್ಲ

ಸಂವಾದದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು '60 ವರ್ಷಗಳು ಆದ ಮೇಲೆ ನಾನು ಹಿರಿಯ ನಾಗರಿಕರನ್ನು ಮನೆಗೆ ಕಳಿಸುವುದಿಲ್ಲ. ಅವರಿಗೆ ಕೆಲಸ ಕೊಡುತ್ತೇನೆ. ಐಎಎಸ್ ಅಧಿಕಾರಿಗಳಿಂದ ಸಲಹೆ ಸಿಗುವುದಿಲ್ಲ. ಆದರೆ, ಹಿರಿಯರಿಂದ ಸಿಗುತ್ತದೆ' ಎಂದರು.

5 ಲಕ್ಷ ಉದ್ಯೋಗ ಸೃಷ್ಟಿ

5 ಲಕ್ಷ ಉದ್ಯೋಗ ಸೃಷ್ಟಿ

‘ಅರಣ್ಯ ಇಲಾಖೆ ಪ್ರತಿವರ್ಷ 9 ಕೋಟಿ ಸಸಿ ನೆಟ್ಟೆವು ಎಂದು ಸರ್ಕಾರಕ್ಕೆ ಲೆಕ್ಕ ಕೊಡುತ್ತದೆ. ಆ ಸಸಿಗಳು ಕಾಗದದಲ್ಲಿಯೇ ಬೆಳೆದು ಮರವಾಗಿವೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಪ್ರತಿ ಹಳ್ಳಿಯಲ್ಲಿ ಗಿಡಗಳನ್ನು ನೆಡಲಾಗುತ್ತದೆ. ಹಳ್ಳಿಯ ಮಹಿಳೆಯರು, ಅವಿದ್ಯಾವಂತರಿಗೆ ಅದನ್ನು ಪೋಷಿಸುವ ಜವಾಬ್ದಾರಿ ನೀಡುತ್ತೇನೆ. 20 ವರ್ಷ ಅವರಿಗೆ ಕೆಲಸ ಕೊಟ್ಟು, ಮಾಸಿಕ 5 ಸಾವಿರ ರೂ. ನೀಡುವಂತೆ ವ್ಯವಸ್ಥೆ ಮಾಡುತ್ತೇನೆ. ಇದರಿಂದ ರಾಜ್ಯದಲ್ಲಿ ಸುಮಾರು 5 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ' ಎಂದು ಕುಮಾರಸ್ವಾಮಿ ಹೇಳಿದರು.

ವೆಂಕಟೇಶ ಶಾಸ್ತ್ರಿಗಳ ಸಲಹೆ

ವೆಂಕಟೇಶ ಶಾಸ್ತ್ರಿಗಳ ಸಲಹೆ

ಮಹಾಲಕ್ಷ್ಮೀ ಲೇಔಟ್‌ ನಿವಾಸಿ ವೆಂಕಟೇಶ ಶಾಸ್ತ್ರಿಗಳು, ‘ರೈತರಿಗೆ 24 ಗಂಟೆ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಿ. ಜಲವಿದ್ಯುತ್‌ ಜೊತೆಗೆ ಸೋಲಾರ್ ವಿದ್ಯುತ್ ಉತ್ಪಾದನೆಗೂ ಆದ್ಯತೆ ನೀಡಿ' ಎಂದು ಸಲಹೆ ನೀಡಿದರು.

ಕುಮಾರಸ್ವಾಮಿ ಅವರು ಮಾತನಾಡಿದ, ‘ರೈತರಿಗೆ ಮಾತ್ರವಲ್ಲ ಪ್ರತಿ ಮನೆಗೂ 24 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂಬುದು ನನ್ನ ಕನಸು. ರಾಜ್ಯದಲ್ಲಿ ಅಧಿಕಾರ ನಡೆಸುವ ಸರ್ಕಾರಗಳು ವಿದ್ಯುತ್ ಉತ್ಪಾದನೆಗಿಂತ ಖರೀದಿಗೆ ಹೆಚ್ಚು ಆಸಕ್ತಿ ಹೊಂದಿವೆ' ಎಂದು ದೂರಿದರು.

ಯಾವಾಗ ಬೇಕಾದರೂ ಬಂದು ಭೇಟಿ ಮಾಡಿ

ಯಾವಾಗ ಬೇಕಾದರೂ ಬಂದು ಭೇಟಿ ಮಾಡಿ

'ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ವಿಧಾನಸೌಧದ ಗೇಟ್‌ಗಳಿಗೆ ಹಾಕಿರುವ ಬ್ಯಾರಿಕೇಡ್ ತೆರವು ಮಾಡಲಾಗುತ್ತದೆ. ರಾಜ್ಯದ ಜನರು ಯಾವಾಗ ಬೇಕಾದರೂ ಬಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಬಹುದು. ವಿಧಾನಸೌಧ 24 ಗಂಟೆ ತೆರೆದಿರುತ್ತದೆ' ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former CM HD Kumaraswamy, leader of JD(S) had an interaction with senior Citizens of Bengluru. The purpose of the get-together was to take their suggestions, inputs for good governance. He also assured senior citizens of Free medical Check-ups in Government hospitals.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ