ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭವಾನಿ ರೇವಣ್ಣ ಹಾಸನದಲ್ಲಿ ಸ್ಪರ್ಧೆಯ ಆಸೆಗೆ ಹೆಚ್.ಡಿ.ಕುಮಾರಸ್ವಾಮಿ ತಣ್ಣೀರು.! ಭವಾನಿ ರೇವಣ್ಣರವರ ಮುಂದಿನ ನಡೆ ಏನು..?

ಹಾಸನದಲ್ಲಿ ಸಮರ್ಥವಾದ ಅಭ್ಯರ್ಥಿ ಇದ್ದಾರೆ ಎಂದು ಹೇಳುವ ಮೂಲಕ ಭವಾನಿ ರೇವಣ್ಣ ಹಾಸನದಲ್ಲಿ ಸ್ಪರ್ಧೆಯ ಆಸೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಣ್ಣೀರು ಎರಚಿದ್ದಾರೆ.

|
Google Oneindia Kannada News

ರಾಯಚೂರು,ಜನವರಿ25: ಎಲ್ಲಾರಿಗೂ ಚುನಾವಣೆಯಲ್ಲಿ ನಿಲ್ಲಬೇಕು ಎಂಬ ಆಸೆ ಇರುತ್ತದೆ. ಹಾಸನದಲ್ಲಿ ಅನಿವಾರ್ಯ ಇದ್ದಿದ್ದರೇ ನಾನೇ ನಿಲ್ಲಿಸುತ್ತಿದ್ದೆ, ಆದರೆ ಅಲ್ಲಿ ಸಮರ್ಥವಾದ ಅಭ್ಯರ್ಥಿ ಇದ್ದಾರೆ ಎಂದು ಹೇಳುವ ಮೂಲಕ ಭವಾನಿ ರೇವಣ್ಣ ಹಾಸನದಲ್ಲಿ ಸ್ಪರ್ಧೆಯ ಆಸೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಣ್ಣೀರು ಎರಚಿದ್ದಾರೆ.

ಬುಧವಾರ ದೇವದುರ್ಗದಲ್ಲಿ ಪಂಚರತ್ನ ರಥಯಾತ್ರೆ ನಡೆಸುತ್ತಿರುವ ಸಂಧರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಈಗ ಬೇರೊಬ್ಬ ಅಭ್ಯರ್ಥಿ ಸ್ಪರ್ಧೆ ಬಗ್ಗೆ ಅನಿವಾರ್ಯತೆ ಇಲ್ಲ. ಈ ಹಿಂದೆ ಅನಿತಾ ಕುಮಾರಸ್ವಾಮಿ ಅವರನ್ನ ಮಧುಗಿರಿಯಲ್ಲಿ ನಿಲ್ಲಿಸಲು ಕಾರಣ ಇತ್ತು. ವೀರಭದ್ರಯ್ಯ ಅವರನ್ನ ಅಭ್ಯರ್ಥಿ ಎಂದು ತೀರ್ಮಾನ ಮಾಡಲಾಗಿತ್ತು. ಆದರೆ, ಅವರು ಸರ್ಕಾರಿ ಅಧಿಕಾರಿ ಆಗಿದ್ದು, ಅವರ ರಾಜೀನಾಮೆಯನ್ನು ಸರ್ಕಾರ ಇನ್ನೂ ತೀರ್ಮಾನಿಸಿರಲಿಲ್ಲ. ಹೀಗಾಗಿ, ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಲಾಗಿತ್ತು ಎಂದು ತಿಳಿಸಿದ್ದಾರೆ.

ನನಗೆ ಕಾರ್ಯಕರ್ತರೆ ಕುಟುಂಬಸ್ಥರು ಆಗಿದ್ದಾರೆ. ಈಗಾಗಲೇ ಹಾಸನದಲ್ಲಿ ಸಮರ್ಥವಾದ ಅಭ್ಯರ್ಥಿ ಇದ್ದಾರೆ. ಇಲ್ಲದಿದ್ದರೇ ಅವರನ್ನ ನಾನೇ ನಿಲ್ಲಿಸುತ್ತಿದ್ದೆ. ನಮ್ಮ ಕುಟುಂಬದಲ್ಲಿ ಯಾವುದೇ ಸಂಘರ್ಷಗಳು ಸಹ ಇಲ್ಲ. ಪಕ್ಷದ ಲಕ್ಷಾಂತರ ಜನರಿಗೆ ಬೆಲೆ ಕೊಡುವ ಜವಾಬ್ದಾರಿ ನನ್ನದು ಎಂದು ಹೇಳಿದರು.

HD kumaraswamy Hits Back At Bhavani Revanna Says Party Has Capable Candidate In Hassan

ನಮ್ಮ ತಂದೆ ಹಾಗೂ ನಾನು ಅಭಿವೃದ್ಧಿ ಮಾಡಿದ ರಾಮನಗರ ಜಿಲ್ಲೆಯ ಅವಳಿ ನಗರದಂತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 20 ವರ್ಷದಿಂದ ಗೆಲ್ಲಲು ಆಗಿರಲಿಲ್ಲ. ಆದರೆ ಮಧುಗಿರಿಯಲ್ಲಿ ಅನಿತಾ ಕುಮಾರಸ್ವಾಮಿ ಬೇಡ ಎಂದು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಚನ್ನಪಟ್ಟಣದಲ್ಲಿ ಅಭ್ಯರ್ಥಿ ಇಲ್ಲವೆಂದು ಒತ್ತಡ ಹಾಕಿದರು. ಹೀಗಾಗಿ, ನಾನು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಕ್ಷೇತ್ರದಲ್ಲಿ ಗೆಲ್ಲಬೇಕಾಯಿತು. ನಂತರ, ಮನೆಯ ಕ್ಷೇತ್ರವಾಗಿರುವ ರಾಮನಗರದಲ್ಲಿ ಅನಿವಾರ್ಯವಾಗಿ ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಲಾಗಿತ್ತು. ಈಗಾಗಲೇ ಹಾಸನದಲ್ಲಿ ಸೋತಿರುವ ಕಾರಣಕ್ಕೆ ಗೆಲ್ಲುವ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ತಲೆ ಕೊಡಿಸಿದ್ದೇವೆ. ಇಲ್ಲಿ ಇರುವ ವ್ಯತ್ಯಾಸಗಳ ಸ್ಪಷ್ಟವಾದ ಹೇಳುವೆ. ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ ಎಂದರು.

ಇನ್ನೂ ನಮ್ಮ‌ ಜೆಡಿಎಸ್ ಪಕ್ಷ ಅಲಿಬಾಬ್ ಗ್ಯಾಂಗ್ ಆದರೆ ಅವರು ಯಾವ ಗ್ಯಾಂಗ್ ನವರು ಸಿದ್ದರಾಮಯ್ಯ ನವರ ಟೀಮ್ ಚಂಬಲ್ ಕಣಿವೆ ದರೋಡಕೊರರ ಸಂಸ್ಕೃತಿಯಲ್ಲಿ ಬಂದವರು ಎಂದು ತಿರುಗೇಟು ನೀಡಿದರು.

ಒಂದಕಡೆ ರಾಮಲಿಂಗರೆಡ್ಡಿಯವರು ಹೇಳುತ್ತಾರೆ ಬೆಳೆದು ಬಂದ ಪಕ್ಷದ ಬಗ್ಗೆ ಟೀಕೆ ಮಾಡಬಾರದು ಅಂತ ಸುಧಾಕರಗೆ ಹೇಳುತ್ತಾರೆ. ಈ ಮನುಷ್ಯನ ಯಾವ ಪಕ್ಷದಿಂದ ಬೆಳೆದು ಬದಿದ್ದಾರೆ. ಡಿನೋಟಿಪೀಕೇಷನ ಮಾಡಿ 600-700ಕೋಟಿ ಹಣವನ್ನು ಕೆಂಪಯ್ಯನ ಆಯೋಗ ರಚನೆ ಮಾಡಿ ಮುಚ್ಚಿಹಾಕಿಕೊಂಡಿದ್ರಿ ನಿಮ್ಮ ತರ ಕೆಲಸ ನಾನು ಮಾಡಿಲ್ಲ.

HD kumaraswamy Hits Back At Bhavani Revanna Says Party Has Capable Candidate In Hassan

ನೀವು ಬಿಜೆಪಿ ಯವರು ಆಲಿಬಾಬ 40 ಮಂದಿ ಕಳ್ಳರು ಎಂದರೆ ಒಪ್ಪಿಕೊಳ್ಳುತ್ತೆನೆ. ಆದರೆ ಕಾಂಗ್ರೆಸ್ ಪಕ್ಷ ಚಂಬಲ್ ಕಣಿವೆ ದರೋಡಕೊರರಾ ಎಂದು ಪ್ರಶ್ನಿಸಿದವರು, ಸಿದ್ದರಾಮಯ್ಯ ನವರ ಟೀಂ ಚಂಬಲ್ ಕಣಿವೆ ದರೋಡೆ ಕೊರರ ಸಂಸ್ಕೃತಿಯಿಂದ ಬಂದವರು ಎಂದು ಹೇಳಬೇಕಾಗುತ್ತದೆ ಎಂದರು. ಮಾತನಾಡಬೇಕಾದರೆ ಎಚ್ಚರಿಕೆಯಿಂದ ಮಾತನಾಡಬೇಕು. ಪದ ಬಳಕೆ ಮಾಡಲು ನಮಗು ಚೆನ್ನಾಗಿ ಬರುತ್ತೆ ನಾವು ಒಳ್ಳೆಮಕ್ಕಳೆ ಎಂದರು.

ಇನ್ನೂ ಹಾಸನದಲ್ಲಿ ಸ್ಪರ್ಧೆಯ ಮಾಡುವುದಾಗಿ ಹೇಳಿದ್ದ ಭಾವನಿ ರೇವಣ್ಣನವರ ಆಸೆಗೆ ಕುಮಾರಸ್ವಾಮಿ ತಣ್ಣೀರು ಎರಚ್ಚಿದ್ದು, ನಮ್ಮ ಪಕ್ಷದಿಂದ ಸಮರ್ಥ ಅಭ್ಯರ್ಥಿ ಇದ್ದಾರೆ ಎಂದು ಹೇಳಿದ್ದಾರೆ. ಆದರೇ ಹಾಸನದಲ್ಲಿ ಸ್ಪರ್ಧೆಯ ಆಸೆ ಇಟ್ಟುಕೊಂಡಿದ್ದ ಭಾವನಿ ರೇವಣ್ಣನವರ ಮುಂದಿನ ನಡೆ ಏನು ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

English summary
karnataka Assembly elections 2023; kd Kumaraswamyhits back at bhavani revanna says party has capable candidate in hassan,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X