• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೀವ ಮುಖ್ಯ ಅನಿಸಿದರೆ ಹೀಗೆ ಮಾಡಿ: ಎಚ್.ಡಿ. ಕುಮಾರಸ್ವಾಮಿ!

|

ಬೆಂಗಳೂರು, ಅ. 09: ರಾಜ್ಯ ಸರ್ಕಾರ ಶಾಲೆಗಳ ಪುನರಾರಂಭಕ್ಕೆ ಮುಂದಾಗಿರುವ ಸಂದರ್ಭದಲ್ಲಿ ವಠಾರ ಶಾಲೆಗೂ ಕೊರೋನಾ ವಕ್ಕರಿಸಿ ಆತಂಕ ಸೃಷ್ಟಿಸಿದೆ. ಈ ಎಲ್ಲ ಕಾರಣಗಳಿಂದ ಪೋಷಕರ ದುಗುಡ ಮತ್ತಷ್ಟು ಹೆಚ್ಚಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಿದ್ಯಾಗಮ ಹಾಗೂ ಶಾಲೆ ಆರಂಭಿಸುವ ಸರ್ಕಾರದ ಪ್ರಯತ್ನದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ವಠಾರ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ನಾಲ್ವರು ಮಕ್ಕಳಿಗೆ ಕೊರೋನಾ ಪಾಸಿಟಿವ್ ಬಂದಿರುವ ಘಟನೆ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದಿದೆ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಜೀವ ಮುಖ್ಯ ಅನ್ನೋ ಮಾತು ನಿಜವಾಗಿಸಬೇಕಾದರೆ ಈ ವರ್ಷ ಯಾವುದೇ ಕಾರಣಕ್ಕೂ ಶಾಲೆ ಆರಂಭಿಸಬೇಡಿ ಎಂದು ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಪಠ್ಯಕ್ರಮದ ಹನ್ನೆರಡನೆಯ ತರಗತಿವರಗೆ ಎಲ್ಲ ಮಕ್ಕಳಿಗೂ ಮುಂದಿನ‌ ತರಗತಿಗೆ ಅವರ ಹಿಂದಿನ ಫಲಿತಾಂಶ ಹಾಗೂ ಅವರ ಕಾರ್ಯಕ್ಷಮತೆ ಪರಿಗಣಿಸಿ ಮುಂದಿನ ತರಗತಿಗೆ ಬಡ್ತಿ ನೀಡಿ.

ಮಕ್ಕಳ ಓದುವಿಕೆ ಆಧಾರದಲ್ಲಿ ಎಲ್ಲ ಮಕ್ಕಳಿಗೂ A,B,C,D, ಎಂಬ ದರ್ಜೆಯನ್ನು ಸಂಬಂಧಿಸಿದ ಶಾಲೆಗಳೆ ನಿರ್ಧರಿಸಿ ನೀಡಲಿ. 10 ಮತ್ತು 12ನೇ ತರಗತಿಗೆ ಇದು ಸಂಪೂರ್ಣವಾಗಿ ಅನ್ವಯವಾಗಲಿ. 1 ರಿಂದ 9ನೇ ತರಗತಿಯವರಿಗೆ ಸಮಾನ ದರ್ಜೆ ನೀಡಿ ಬಡ್ತಿ ನೀಡಲಿ. 2021ರ ಶೈಕ್ಷಣಿಕ ವರ್ಷದಿಂದ ಹೊಸದಾಗಿ ಶಾಲಾ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸಿ. ಕೊರೋನಾ ನಿಯಂತ್ರಣಕ್ಕೆ ಬಾರದೆ ಸೋಂಕು ವಿಪರೀತ ವಾಗುತ್ತಿರುವ ಈ ಸಂದರ್ಭದಲ್ಲಿ ಶಾಲೆಗಳ ಆರಂಭ ದೊಡ್ಡ ಅನಾಹುತಕ್ಕೆ ದಾರಿಯಾಗಲಿದೆ ಎಂಬುದನ್ನು ಸರಕಾರ ಮನಗಾಣಬೇಕು ಎಂದು ಟ್ವಿಟ್ಟರ್‌ನಲ್ಲಿ ಎಚ್ಚರಿಸಿದ್ದಾರೆ.

English summary
The state government preparations to reopen schools created anxiety on parent. So Former CM HDK has raised objections to the government's attempt to reopen schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X