ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೂಟರ್ನ್‌ ಮೇಲೆ ಯೂಟರ್ನ್ ತೆಗೆದುಕೊಂಡ ಮಾಜಿ ಸಿಎಂ ಕುಮಾರಸ್ವಾಮಿ!

|
Google Oneindia Kannada News

ಬೆಂಗಳೂರು, ಡಿ. 09: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಯೂಟರ್ನ್‌ ಮೇಲೆ ಯೂಟರ್ನ್‌ ತೆಗೆದುಕೊಂಡಿದ್ದಾರೆ. ಭೂ ಸುಧಾರಣೆ ತಿದ್ದುಪಡಿ ವಿರೋಧಿಸಿ ಇಡೀ ದೇಶಾದ್ಯಂತ ರೈತರು ಹೋರಾಟ ನಡೆಸುತ್ತಿದ್ದಾರೆ. ಜೆಡಿಎಸ್ ಕೂಡ ರಾಜ್ಯದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಕೊಟ್ಟಿತ್ತು. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 2020 ವಿಧಾನಸಭೆಯಲ್ಲಿ ಅಂಗೀಕಾರಗೊಂಡು ವಿಧಾನ ಪರಿಷತ್‌ಗೆ ಬಂದಿತ್ತು. ನಿನ್ನೆ ಏಕಾಏಕಿ ಕಾಯ್ದೆಯನ್ನು ಒಪ್ಪಿಕೊಳ್ಳುವ ಮೂಲಕ ಜೆಡಿಎಸ್ ನಾಯಕರು ಯೂಟರ್ನ್ ಹೊಡೆದಿದ್ದರು.

ಇದೇ ವಿಚಾರ ಕುರಿತು ರೈತರ ಸಂಘಟನೆಗಳು ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ರೈತ ಸಂಘಟನೆಗಳ ನಾಯಕರು ಹಾಗೂ ಕಾಂಗ್ರೆಸ್ ನಾಯಕರ ಹೇಳಿಕೆಗಳಿಂದ ವಿಚಲಿತರಾದಂತೆ ಕಂಡುಬಂದ ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ಕೊಟ್ಟಿರುವ ಹೇಳಿಕೆ ಕುತೂಹಲ ಮೂಡಿಸಿದೆ.

ಕೋಲಾರದಲ್ಲಿ ರೈತಪರ ಕಾಯ್ದೆ!

ಕೋಲಾರದಲ್ಲಿ ರೈತಪರ ಕಾಯ್ದೆ!

ಜೆಡಿಎಸ್ ಪಕ್ಷ ರೈತರ ವಿರೋಧಿ ಪಕ್ಷವಲ್ಲ ಎಂದು ಕೋಲಾರದಲ್ಲಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಆ ಮೂಲಕ ನಿನ್ನೆ ಭೂ ಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ ವಿಧೇಯಕಕ್ಕೆ ಬೆಂಬಲ ಕೊಟ್ಟಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ತಿದ್ದುಪಡಿ ವಿಧೇಯಕದಲ್ಲಿ ವಿಧೇಯಮವನ್ನು ಮಂಡಿಸಿದಾಗ ಇದ್ದಿದ್ದ ಹಲವು ಸೆಕ್ಷನ್‌ಗಳನ್ನು ಕೈಬಿಟ್ಟಿದ್ದಾರೆ. ಪ್ರಮುಖವಾಗಿ 79 ಎ ಹಾಗೂ ಬಿ ಸೆಕ್ಷನ್‌ಗಳನ್ನು ವಿಧೇಯಕದಿಂದ ಕೈಬಿಟ್ಟಿದ್ದಾರೆ. ಹೀಗಾಗಿ ನಮ್ಮ ಪಕ್ಷ ಭೂ ಸುಧಾರಣಾ ತಿದ್ದುಪಡಿ ವಿಧೇಯಕವನ್ನು ಬೆಂಬಲಿಸಿದೆ ಎಂದಿದ್ದರು.

ನಾನು ಸಿದ್ದರಾಮಯ್ಯನವರಂತೆ ತಡರಾತ್ರಿ ಬಿಎಸ್ವೈ ಭೇಟಿಯಾಗಲಿಲ್ಲ, ನಮ್ಮದೇನಿದ್ದರೂ ಓಪನ್: ಕುಮಾರಸ್ವಾಮಿನಾನು ಸಿದ್ದರಾಮಯ್ಯನವರಂತೆ ತಡರಾತ್ರಿ ಬಿಎಸ್ವೈ ಭೇಟಿಯಾಗಲಿಲ್ಲ, ನಮ್ಮದೇನಿದ್ದರೂ ಓಪನ್: ಕುಮಾರಸ್ವಾಮಿ

ವಿಧಾನಸೌಧದಲ್ಲಿ ಯೂಟರ್ನ್!

ವಿಧಾನಸೌಧದಲ್ಲಿ ಯೂಟರ್ನ್!

ಆ ಮೂಲಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿರೋಧಿಸಿದ್ದ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಯೂಟರ್ನ್‌ ತೆಗೆದುಕೊಂಡಿದ್ದರು. ಅದಾದ ಬಳಿಕ ಕಾಂಗ್ರೆಸ್ ನಾಯಕರು ಹಾಗೂ ರೈತ ಸಂಘಟನೆಗಳು ಕುಮಾರಸ್ವಾಮಿ ಅವರ ಮೇಲೆ ಮುಗಿಬಿದ್ದಿದ್ದವು. ಹೀಗಾಗಿ ಕೋಲಾರದಿಂದ ವಿಧಾನಸಭೆ ಕಲಾಪದಲ್ಲಿ ಭಾಗವಹಿಸಲು ವಿಧಾನಸೌಧದಕ್ಕೆ ಆಗಮಿಸಿದ ಎಚ್.ಡಿ. ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟರು. ಆದರೆ ಕೋಲಾರದಲ್ಲಿ ಕೊಟ್ಟಿದ್ದ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ಕೊಡುವ ಮೂಲಕ ಮತ್ತೊಮ್ಮೆ ಯೂಟರ್ನ್ ತೆಗೆದುಕೊಂಡರು.

ಪರಿಷತ್ ವಿಚಾರ ನಂಗೆ ಗೊತ್ತಿಲ್ಲ

ಪರಿಷತ್ ವಿಚಾರ ನಂಗೆ ಗೊತ್ತಿಲ್ಲ

ವಿಧಾನಸೌಧದಲ್ಲಿ ಇದೇ ವಿಚಾರ ಕುರಿತು ಮತ್ತೊಮ್ಮೆ ಮಾತನಾಡಿದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ಯೂಟರ್ನ್ ಹೊಡೆದರು. ಈ ವಿಚಾರದಲ್ಲಿ ಧ್ವಂಧ್ವ ನಿಲುವಿದೆ ಎಂಬುದನ್ನು ನಾನೂ ಒಪ್ಪುತ್ತೇನೆ. ನಾನು ವಿಧಾನ ಪರಿಷತ್‌ ಸದಸ್ಯನಲ್ಲ. ಅಲ್ಲಿ ಏನಾಯ್ತು ಎಂಬುದು ನನ್ನ ಗಮನಕ್ಕೆ ಬರಲಿಲ್ಲ. ವಿಧೇಯಕಕ್ಕೆ ಬೆಂಬಲ ಕೊಡುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ. ಆದರೂ ನಮ್ಮ ಸದಸ್ಯರು ಆತ್ಮಸಾಕ್ಷಿಯಾಗಿ ಮತ ಹಾಕಿದ್ದಾರೆ ಎಂದು ಹೇಳಿದರು. ಕೋಲಾರದಲ್ಲಿ ಕಾನೂನು ಅರಿತೆ ಬೆಂಬಲಿಸಿದ್ದೇವೆ ಎಂದಿದ್ದ ಕುಮಾರಸ್ವಾಮಿ, ವಿಧಾನಸೌಧದಲ್ಲಿ ವಿಧಾನ ಪರಿಷತ್ ವಿಚಾರ ಗೊತ್ತೇ ಆಗಿಲ್ಲ ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಲೆಲ್ಲ ರೈತರಿಗೆ ಸಂಕಷ್ಟ!ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಲೆಲ್ಲ ರೈತರಿಗೆ ಸಂಕಷ್ಟ!

Recommended Video

ಕರ್ನಾಟಕ: ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಡಿ.31ಕ್ಕೆ ನಿವೃತ್ತಿ: ರವಿಕುಮಾರ್ ನೇಮಕ ಸಾಧ್ಯತೆ | Oneindia Kannada
ಚರ್ಚಿಸಿ ಮತ್ತೆ ಪ್ರತಿಕ್ರಿಯೆ ಕೊಡ್ತೇನೆ

ಚರ್ಚಿಸಿ ಮತ್ತೆ ಪ್ರತಿಕ್ರಿಯೆ ಕೊಡ್ತೇನೆ

ಮಾಜಿ ಸಿಎಂ ಕುಮಾರಸ್ವಾಮಿ ಅವರು ದೊಡ್ಡ ಡೀಲ್ ಮಾಸ್ಟರ್. ಹಣಕ್ಕೆ ಅವರು ಮಾರಿಕೊಳ್ಳುತ್ತಾರೆ ಎಂಬ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರ ಹೇಳಿಕೆಯನ್ನು ನಿರಾಕರಿಸಿದ ಕುಮಾರಸ್ವಾಮಿ ಅವರು, ಅಂತಹ ಆರೋಪವನ್ನು ನಾನು ಒಪ್ಪಲ್ಲ. ನಮ್ಮ ಶಾಸಕರು ವಿಧಾನ ಪರಿಷತ್‌ನಲ್ಲಿ ಆತ್ಮಸಾಕ್ಷಿಯಾಗಿ ಭೂ ಸುಧಾರಣಾ ಕಾಯ್ದೆಗೆ ಬೆಂಬಲ ಕೊಟ್ಟಿದ್ದಾರಾ? ಇಲ್ಲವಾ ಎಂಬುದು ನಮಗೆ ಗೊತ್ತಿಲ್ಲ. ಈ ಬಗ್ಗೆ ಚರ್ಚಿಸಿ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ಈ ವಿಚಾರದಲ್ಲಿ ಕುಮಾರಸ್ವಾಮಿ ಅವರು ನುಣುಚಿಕೊಂಡರು.

English summary
The JDS supports the land reform Amendment Act, which is being opposed by farmers across the country. Former Chief Minister H.D. Kumaraswamy has defended the Land Reform Amendment Act 2020. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X