ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಕೋರ್ ಕಮಿಟಿಗೆ ಹೈಫೈ ಟಚ್ ನೀಡಿದ ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ಜ 27: ಮುಂದಿನ ವರ್ಷ ನಡೆಯಲಿರುವ ಅಸೆಂಬ್ಲಿ ಚುನಾವಣೆಗೆ ಪೂರ್ವ ತಯಾರಿ ಆರಂಭಿಸಿರುವ ಜಾತ್ಯಾತೀತ ಜನತಾದಳ, ಕೋರ್ ಕಮಿಟಿಯಲ್ಲಿ ಹಲವು ಬದಲಾವಣೆಯನ್ನು ಮಾಡಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಎಲ್ಲಾ ಪ್ರಾಂತ್ಯ/ಜಾತಿ ಆಧಾರಿತವಾಗಿ ಕೋರ್ ಕಮಿಟಿಯಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ನೂತನ ಕಾರ್ಯಾಧ್ಯಕ್ಷರು ಮತ್ತು ಪರಿಶಿಷ್ಠ ಪಂಗಡಕ್ಕೆ ಹೊಸ ಅಧ್ಯಕ್ಷರನ್ನು ನೇಮಿಸಲಾಗಿದೆ. ಜೆಡಿಎಸ್ ರಾಜ್ಯಧ್ಯಕ್ಷರಾಗಿ ಎಚ್.ಕೆ.ಕುಮಾರಸ್ವಾಮಿಯವರೇ ಮುಂದುವರಿಯಲಿದ್ದಾರೆ.

ಗಣರಾಜ್ಯೋತ್ಸವದಂದು ಕಾಂಗ್ರೆಸ್ಸಿಗೆ ಕ್ಲಿಯರ್ ಕಟ್ ಹೊಸ ಸಂದೇಶ ರವಾನಿಸಿದ ಕುಮಾರಸ್ವಾಮಿಗಣರಾಜ್ಯೋತ್ಸವದಂದು ಕಾಂಗ್ರೆಸ್ಸಿಗೆ ಕ್ಲಿಯರ್ ಕಟ್ ಹೊಸ ಸಂದೇಶ ರವಾನಿಸಿದ ಕುಮಾರಸ್ವಾಮಿ

ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಅವರು ಮಾಧ್ಯಮಗೋಷ್ಠಿಯಲ್ಲಿ 20 ಸದಸ್ಯರ ಪಟ್ಟಿಯನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಇಬ್ಬರಿಗೆ ಮತ್ತು ನೂತನ ಕೋರ್ ಕಮಿಟಿ ಸದಸ್ಯರಿಗೆ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ. ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ದೇವೇಗೌಡ, ಎಚ್ದಿಕೆ ಮತ್ತು ಎಚ್.ಕೆ.ಕುಮಾರಸ್ವಾಮಿಯವರೂ ಇದ್ದಾರೆ.

ಇಪ್ಪತ್ತು ಸದಸ್ಯರ ನೂತನ ಕೋರ್ ಕಮಿಟಿ ಪಟ್ಟಿಯಲ್ಲಿ ಪ್ರಜ್ವಲ್ ರೇವಣ್ಣ ಹೊರತಾಗಿ, ಕುಟುಂಬದ ಇತರ ಯಾವ ಸದಸ್ಯರೂ ಸ್ಥಾನವನ್ನು ಪಡೆದಿಲ್ಲ. ಆ ಮೂಲಕ, ಕುಟುಂಬ ರಾಜಕಾರಣದಿಂದ ಕುಮಾರಸ್ವಾಮಿ ಹೊರ ಬರಲು ಪ್ರಯತ್ನಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ.

ಯಡಿಯೂರಪ್ಪ ಬಗ್ಗೆ'ಅಯ್ಯೋ ಪಾಪ' ಎಂದು ಬೇಸರ ವ್ಯಕ್ತ ಪಡಿಸಿದ ಯತ್ನಾಳ್ಯಡಿಯೂರಪ್ಪ ಬಗ್ಗೆ'ಅಯ್ಯೋ ಪಾಪ' ಎಂದು ಬೇಸರ ವ್ಯಕ್ತ ಪಡಿಸಿದ ಯತ್ನಾಳ್

 ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್‌ ನೇತೃತ್ವ

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್‌ ನೇತೃತ್ವ

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್‌ ನೇತೃತ್ವದಲ್ಲಿ ಜೆಡಿಎಸ್‌ ನೂತನ ಕೋರ್‌ ಕಮಿಟಿ ರಚನೆಯಾಗಿದೆ. ಜೆಡಿಎಸ್‌ ಪರಿಶಿಷ್ಠ ಪಂಗಡದ ರಾಜ್ಯಾಧ್ಯಕ್ಷರಾಗಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತು ಮಾಜಿ ಸಚಿವ ಎನ್.ಎಂ.ನಬಿ ಅವರನ್ನು ಜೆಡಿಎಸ್‌ ರಾಜ್ಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ನೇಮಕ ಮಾಡಿದ್ದಾರೆ. "ಜೆಡಿಎಸ್‌ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗಾಗಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್‌ ಅವರ ಅಧ್ಯಕ್ಷತೆಯಲ್ಲಿ ನೂತನ ಕೋರ್‌ ಕಮಿಟಿ ರಚನೆ ಮಾಡಲಾಗಿದೆ"ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಚಿತ್ರದಲ್ಲಿ ಬಂಡೆಪ್ಪ ಕಾಶೆಂಪೂರ್‌)

 ನೂತನ ಕೋರ್ ಕಮಿಟಿ ಸದಸ್ಯರ ಪಟ್ಟಿ - 1

ನೂತನ ಕೋರ್ ಕಮಿಟಿ ಸದಸ್ಯರ ಪಟ್ಟಿ - 1

ನೂತನ ಕೋರ್ ಕಮಿಟಿ ಸದಸ್ಯರ ಪಟ್ಟಿ ಇಂತಿದೆ:
1. ಬಂಡೆಪ್ಪ ಕಾಶೆಂಪೂರ್-‌ ಅಧ್ಯಕ್ಷರು
2. ವೆಂಕಟರಾವ್‌ ನಾಡಗೌಡ - ಸದಸ್ಯರು
3. ಸಿ.ಎಸ್.ಪುಟ್ಟರಾಜು - ಸದಸ್ಯರು
4. ಪ್ರಜ್ವಲ್‌ ರೇವಣ್ಣ - ಸದಸ್ಯರು
5. ಕುಪೇಂದ್ರ ರೆಡ್ಡಿ - ಸದಸ್ಯರು
6. ಮೊಹಮ್ಮದ್‌ ಝಫ್ರುಲ್ಲಾವ್ಖಾನ್ - ಸದಸ್ಯರು
7. ಎಂ.ಕೃಷ್ಣಾರೆಡ್ಡಿ- ಸದಸ್ಯರು
(ಚಿತ್ರದಲ್ಲಿ ಪ್ರಜ್ವಲ್ ರೇವಣ್ಣ)

 ನೂತನ ಕೋರ್ ಕಮಿಟಿ ಸದಸ್ಯರ ಪಟ್ಟಿ - 2

ನೂತನ ಕೋರ್ ಕಮಿಟಿ ಸದಸ್ಯರ ಪಟ್ಟಿ - 2

8. ರಾಜಾ ವೆಂಕಟಪ್ಪ ನಾಯಕ - ಸದಸ್ಯರು, ಕಾರ್ಯಾಧ್ಯಕ್ಷರು
9. ಬಿ. ಎಂ. ಫಾರೂಕ್ - ಸದಸ್ಯರು
10. ಕೆ.ಎ.ತಿಪ್ಪೇಸ್ವಾಮಿ - ಸದಸ್ಯರು & ಸಂಚಾಲಕರು
11. ವೈಎಸ್‌ವಿ ದತ್ತ - ಸದಸ್ಯರು
12. ಕೆ.ಎಂ.ತಿಮ್ಮರಾಯಪ್ಪ-ಸದಸ್ಯರು
13. ಟಿ.ಎ.ಶರವಣ-ಸದಸ್ಯರು
14. ಶಾರದಾ ಪೂರ್ಯನಾಯಕ್ - ಸದಸ್ಯರು
(ಚಿತ್ರದಲ್ಲಿ ಬಿ. ಎಂ. ಫಾರೂಕ್)

 ನೂತನ ಕೋರ್ ಕಮಿಟಿ ಸದಸ್ಯರ ಪಟ್ಟಿ - 3

ನೂತನ ಕೋರ್ ಕಮಿಟಿ ಸದಸ್ಯರ ಪಟ್ಟಿ - 3

15. ನಾಸೀರ್‌ ಭಗವಾನ್ - ಸದಸ್ಯರು‌
16. ಹನುಮಂತಪ್ಪ ಬಸಪ್ಪ ಮಾವಿನಮರದ - ಸದಸ್ಯರು
17. ರುತ್‌ ಮನೋರಮಾ - ಸದಸ್ಯರು
18. ಸುಧಾಕರ್‌ ಎಸ್.‌ ಶೆಟ್ಟಿ-ಸದಸ್ಯರು
19. ವಿ. ನಾರಾಯಣಸ್ವಾಮಿ - ಸದಸ್ಯರು
20. ಸಮೃದ್ಧಿ ಮಂಜುನಾಥ್-ಸದಸ್ಯರು‌
(ಚಿತ್ರದಲ್ಲಿ ಹನುಮಂತಪ್ಪ ಬಸಪ್ಪ ಮಾವಿನಮರದ)

Recommended Video

KL Rahul ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಆಡುತ್ತಿಲ್ಲ | Oneindia Kannada

English summary
H D Kumaraswamy Formed 20 Members New Core Committee Headed by Bandeppa Kashempur. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X